Flash News

ಸಮುದಾಯದ ಪರ ನಿಂತಿದ್ದಕ್ಕೆ ಪಕ್ಷದಲ್ಲಿ ಕಡೆಗಣಿಸುವ ಪ್ರಯತ್ನಗಳು ನಡೆಯುತ್ತಿದೆ: ಕಾಂಗ್ರೆಸ್ ಮುಸ್ಲಿಂ ಮುಖಂಡರ ಸಭೆಯಲ್ಲಿ ಆಕ್ರೋಶ

ಮಂಗಳೂರು: ಸಮುದಾಯದ ಪರ ನಿಲ್ಲುವ ಮುಸ್ಲಿಂ ಮುಖಂಡರನ್ನು ಭಿನ್ನಮತೀಯರು ಅಂತ ಹಣೆಪಟ್ಟಿ ಕಟ್ಟುತ್ತಿದ್ದಾರೆ ಎಂದು ದ.ಕ ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಸಭೆಯಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ. ದ.ಕ ಜಿಲ್ಲೆಯಲ್ಲಿ ಇತ್ತೀಚೆಗೆ ಜಾನುವಾರು ಸಾಗಾಟಕ್ಕೆ ಸಂಬಂಧಿಸಿ ನಡೆದಿರುವ ಅನಪೇಕ್ಷಿತ ಘಟನೆಗಳಿಗೆ ಸಂಬಂಧಿಸಿ ನಗರದ ಕಾಂಗ್ರೆಸ್ ಭವನದಲ್ಲಿ ಅಲ್ಪಸಂಖ್ಯಾತ ಘಟಕದ ನಾಯಕರು ಮತ್ತು ಮುಸ್ಲಿಂ ಮುಖಂಡರು ಕೆ.ಕೆ‌ ಶಾಹುಲ್ ಹಮೀದ್ ನೇತೃತ್ವದಲ್ಲಿ ಸಭೆ ನಡೆಸಿದರು.‌ ಈ ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಮತ್ತು ಅಲ್ಪಸಂಖ್ಯಾತ ಘಟಕದ ಪ್ರಮುಖರು […]

ಇಸ್ಲಾಮಾಬಾದ್‌ ಕೋರ್ಟ್‌ ಕಾಂಪ್ಲೆಕ್ಸ್‌ನಲ್ಲಿ ಕಾರು ಬಾಂಬ್‌ ಸ್ಫೋಟ; 12 ಮಂದಿ ಸಾವು

ಇಸ್ಲಾಮಾಬಾದ್: ಇಲ್ಲಿನ ಕೋರ್ಟ್‌ ಸಂಕೀರ್ಣದಲ್ಲಿ ಸ್ಫೋಟ ಸಂಭವಿಸಿದ್ದು, 12 ಮಂದಿ ಸಾವನ್ನಪ್ಪಿದ್ದಾರೆ. 27 ಮಂದಿ ಗಾಯಗೊಂಡಿದ್ದಾರೆ. ಇದು ಆತ್ಮಾಹುತಿ ದಾಳಿ ಎಂದು ವರದಿಯಾಗಿದೆ. ಪಾಕಿಸ್ತಾನದ ಆಂತರಿಕ ಸಚಿವ ಮೊಹ್ಸಿನ್ ನಖ್ವಿ ಅವರು, ಆತ್ಮಾಹುತಿ ಬಾಂಬ್ ದಾಳಿ ಮಧ್ಯಾಹ್ನ 12:39 ಕ್ಕೆ ನಡೆದಿದೆ. ಬಾಂಬರ್ ನ್ಯಾಯಾಲಯ ಸಂಕೀರ್ಣ ಪ್ರವೇಶಿಸಲು ಪ್ರಯತ್ನಿಸಿದ್ದ. ಆದರೆ, 10 ರಿಂದ 15 ನಿಮಿಷಗಳ ಕಾಲ ಅಲ್ಲಿಯೇ ಕಾದ ನಂತರ ಹೊರಗೆ, ಪೊಲೀಸ್ ವಾಹನದ ಬಳಿ ಸಾಧನವನ್ನು ಸ್ಫೋಟಿಸಿದ್ದಾನೆಂದು ತಿಳಿಸಿದ್ದಾರೆ. ಅದು ಕಾರ್ ಬಾಂಬ್ ಎಂದು […]

ದೆಹಲಿ ಸ್ಫೋಟಕ್ಕೆ ಛಿದ್ರಗೊಂಡ ಕುಟುಂಬಗಳ ಕನಸು: ಮೃತಪಟ್ಟ ಅನ್ಸಾರಿ, ಮೌಸಿನ್‌ ಅಶೋಕ್ ಮನೆಯ ಕಣ್ಣೀರ ಕತೆ

ನವದೆಹಲಿ: ದೆಹಲಿಯ ಐತಿಹಾಸಿಕ ಕೆಂಪು ಕೋಟೆಯ ಬಳಿ ನಡೆದ ಸ್ಫೋಟದಿಂದ ದೇಶವೇ ಬೆಚ್ಚಿಬಿದ್ದಿದೆ. ಸ್ಫೋಟದಲ್ಲಿ 12 ಜನ ಸಾವನ್ನಪ್ಪಿದ್ದು, ಕುಟುಂಬದ ಸದಸ್ಯರನ್ನು ಕಳೆದುಕೊಂಡ ಕುಟುಂಬಸ್ಥರ ಕನಸು ಛಿದ್ರವಾಗಿದೆ. ಬಿಹಾರದ ಪಂಕಜ್ ಸೈನಿ (22), ಕ್ಯಾಬ್ ಚಾಲಕನಾಗಿದ್ದು, ಚಾಂದನಿ ಚೌಕ್‌ನಲ್ಲಿ ಒಬ್ಬ ಪ್ರಯಾಣಿಕನನ್ನು ಇಳಿಸಿದ್ದ. ಉತ್ತರ ಪ್ರದೇಶದ ಶಾಮ್ಲಿಯ ನೋಮನ್ ಅನ್ಸಾರಿ ತನ್ನ ಸೌಂದರ್ಯವರ್ಧಕ ಅಂಗಡಿಗೆ ಸಾಮಗ್ರಿಗಳನ್ನು ತೆಗೆದುಕೊಳ್ಳಲು ಅಲ್ಲಿಗೆ ಬಂದಿದ್ದ. ಮತ್ತೊಬ್ಬ ದೆಹಲಿ ಸಾರಿಗೆ ನಿಗಮದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದ ಅಶೋಕ್ ಕುಮಾರ್, ಘಟನೆಯಲ್ಲಿ ವ್ಯಕ್ತಿಯೊಬ್ಬನನ್ನು […]

ದೆಹಲಿ ಸ್ಪೋಟ | ‘ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ದೊಡ್ಡ ಪಾಪ; ಆರೋಪಿಗಳು ಮುಸ್ಲಿಮರಾಗಲು ಸಾಧ್ಯವಿಲ್ಲ’: ಶಿಯಾ ಧರ್ಮಗುರು

ಲಕ್ನೋ: ಸೋಮವಾರ ಸಂಜೆ ದೆಹಲಿಯಲ್ಲಿ ಸಂಭವಿಸಿದ ಮಾರಣಾಂತಿಕ ಸ್ಫೋಟದಲ್ಲಿ 12 ಜನರು ಸಾವಿಗೀಡಾಗಿದ್ದು, ಶಿಯಾ ಧರ್ಮಗುರು ಮೌಲಾನಾ ಸೈಯದ್ ಕಲ್ಬೆ ಜವಾದ್, ಅಮಾಯಕರನ್ನು ಕೊಲ್ಲುವುದು ಇಸ್ಲಾಂನಲ್ಲಿ ‘ಅತಿದೊಡ್ಡ ಪಾಪ’ ಎಂದು ಮಂಗಳವಾರ ಹೇಳಿದ್ದಾರೆ. ದೆಹಲಿ ಸ್ಫೋಟದಲ್ಲಿ ಪಾಕಿಸ್ತಾನದ ಕೈವಾಡವಿದೆ ಎಂದು ಆರೋಪಿಸಿದ ಅವರು, ನೆರೆಯ ದೇಶವನ್ನು ಸಂಪೂರ್ಣವಾಗಿ ಬಹಿಷ್ಕರಿಸಬೇಕೆಂದು ಅವರು ಕರೆ ನೀಡಿದರು. ANI ಜೊತೆ ಮಾತನಾಡಿದ ಅವರು, ‘ಇಸ್ಲಾಂನಲ್ಲಿ ಇದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ಅಮಾಯಕನನ್ನು ಕೊಲ್ಲುವುದು ಅತ್ಯಂತ ದೊಡ್ಡ ಪಾಪ. ದೆಹಲಿ ಸ್ಫೋಟದಲ್ಲಿ ಅಮಾಯಕರು ಕೊಲ್ಲಲ್ಪಟ್ಟರು; […]

ಅಮಿತ್ ಶಾ ಅಸಮರ್ಥ ಗೃಹ ಸಚಿವ: ಪ್ರಿಯಾಂಕ್ ಖರ್ಗೆ ಕಿಡಿ!

ಬೆಂಗಳೂರು: ನಿನ್ನೆ ಇಡೀ ದೇಶವನ್ನೇ ಬೆಚ್ಚಿಬೀಳಿಸಿದ ದೆಹಲಿ ಸ್ಫೋಟದ ಘಟನೆಯ ನಂತರ ರಾಜಕೀಯದ ಕಾವು ಹೆಚ್ಚಾಗಿದೆ. ಈ ಘಟನೆಯ ಹಿನ್ನೆಲೆಯಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ವಿರುದ್ಧ ತೀವ್ರ ಟೀಕಾ ಪ್ರಹಾರ ನಡೆಸಿದ್ದಾರೆ. ಪ್ರಿಯಾಂಕ್ ಖರ್ಗೆ ತಮ್ಮ ಹೇಳಿಕೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿ, “ಅಸಮರ್ಥ ಗೃಹ ಸಚಿವರೂ ಯಾರಾದರೂ ಇದ್ದರೆ, ಅದು ಅಮಿತ್ ಶಾ. ದೆಹಲಿ, ಮಣಿಪುರ್, ಪೆಹಲ್ಗಾಮ್ ಎಲ್ಲ ಕಡೆ ಭದ್ರತಾ ವೈಫಲ್ಯ, […]

ದೆಹಲಿ ಸ್ಫೋಟ: i20 ಕಾರಿನ ಬಗ್ಗೆ ಶಾಕಿಂಗ್ ಮಾಹಿತಿ ಬಯಲು

ನವದೆಹಲಿ: ರಾಷ್ಟ್ರರಾಜಧಾನಿ ನವದೆಹಲಿ ಕೆಂಪು ಕೋಟೆ ಬಳಿ ಐ20 ಕಾರು ಸ್ಫೋಟಗೊಂಡಿದ್ದು, ಘಟನೆಯಲ್ಲಿ ಸಾವಿನ ಸಂಖ್ಯೆ 12ಕ್ಕೆ ಏರಿಯಾಗಿದೆ. ಇನ್ನು ಯಾವ ಕಾರಣಕ್ಕೆ ಸ್ಫೋಟ ಸಂಭವಿಸಿತು? ಕಾರಿನ ಹಿಂದುಗಡೆ ಅಳವಡಿಸಿದ್ದ ಸಿಎನ್‌ಜಿಯಿಂದ ಸ್ಫೋಟ ಸಂಭವಿಸಿತ್ತಾ? ಹೀಗೆ ನಾನಾ ರೀತಿಯ ವರದಿಗಳು ಆರಂಭದಲ್ಲಿ ಪ್ರಕಟವಾಗಿದ್ದವು. ಆದರೆ ಸ್ಫೋಟ ಸಂಭವಿಸಿದ ಕೆಲವೇ ಗಂಟೆಗಳಲ್ಲಿ ಯಾವ ಕಾರಿನಿಂದ ಈ ಕೃತ್ಯ ಸಂಭವಿಸಿದೆ ಎನ್ನುವುದನ್ನು ಪೊಲೀಸರು ನಿಖರವಾಗಿ ಪತ್ತೆ ಹೆಚ್ಚಿದ್ದಾರೆ. ಸ್ಫೋಟ ನಡೆದ ಬೆನ್ನಲ್ಲೇ ಅಲರ್ಟ್‌ ಆದ ಪೊಲೀಸರು ಮೊದಲು ರಸ್ತೆಯಲ್ಲಿರುವ 100ಕ್ಕೂ […]

ಮಂಗಳೂರಿನ ಹುಡುಗಿ ಮಹಾನಟಿ ವಿನ್ನರ್: ಗೆಲುವಿನ ಮುಂಚೇನೆ ಸಿಕ್ತು ಸಿನಿಮಾ ಚಾನ್ಸ್!

ಮಂಗಳೂರಿನ ವಂಶಿ ಈ ಸಲದ ಮಹಾನಟಿ ವಿನ್ನರ್ ಆಗಿದ್ದಾರೆ. ಫಸ್ಟ್ ರನ್ನರ್‌ ಅಪ್‌ ಬೆಳಗಾವಿಯ ವರ್ಷಾ ಡಿಗ್ರಜೆ ಆಗಿದ್ದಾರೆ. ಮಹಾನಟಿ ಸೀಸನ್ ಎರಡರ ವಿನ್ನರ್ ಆದ ವಂಶಿ ಪ್ರತಿಭಾವಂತ ನಟಿನೇ ಆಗಿದ್ದಾರೆ. ನಟಿ ಆಗ್ಬೇಕು ಅಂತ ಬಂದು ಈ ಗೆಲುವಿನ ಮೂಲಕ ಮೊದಲ ಹೆಜ್ಜೆ ಇಟ್ಟಿದ್ದೇನೆ ಅಂತ ತಮ್ಮ ವಿನ್ನಿಂಗ್ ಸ್ಪೀಚ್ ಅಲ್ಲೂ ಹೇಳಿಕೊಂಡಿದ್ದಾರೆ. ಬಿ.ಸರೋಜಾ ದೇವಿ ಅವರನ್ನೂ ಈ ಸಮಯದಲ್ಲಿ ನೆನಪಿಸಿಕೊಂಡಿದ್ದಾರೆ. ಇವರ ಮಾತು ಮತ್ತು ವಿನ್ನರ್ ವಂಶಿ ಬಗೆಗಿನ ಇನ್ನಷ್ಟು ವಿವರ ಇಲ್ಲಿದೆ ಓದಿ. […]

ದೆಹಲಿ ಸ್ಫೋಟ: ಪ್ರಧಾನಿ ಮೋದಿ ಫಸ್ಟ್ ರಿಯಾಕ್ಷನ್

ಥಿಂಪು: ‘ದೆಹಲಿ ಕೆಂಪು ಕೋಟೆ ಬಳಿ ಸೋಮವಾರ ಸಂಜೆ ಸಂಭವಿಸಿದ ಬಾಂಬ್ ಸ್ಫೋಟ ಕುರಿತು ಪ್ರತಿಕ್ರಿಯಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ನಮ್ಮ ತನಿಖಾ ಸಂಸ್ಥೆಗಳು ಈ ಪ್ರಕರಣದ ಆಳಕ್ಕಿಳಿದು, ಇದರ ಹಿಂದಿರುವವರನ್ನು ಪತ್ತೆ ಮಾಡಲಿವೆ’ ಎಂದಿದ್ದಾರೆ. ಭೂತಾನ್ ಪ್ರವಾಸದಲ್ಲಿರುವ ಅವರು ಘಟನೆ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ‘ದೆಹಲಿಯಲ್ಲಿ ಸಂಭವಿಸಿದ ಬಾಂಬ್ ಸ್ಫೋಟ ಘಟನೆ ಪ್ರತಿಯೊಬ್ಬರಿಗೂ ಆಘಾತವನ್ನುಂಟು ಮಾಡಿದೆ. ಇದಕ್ಕೆ ಕಾರಣರಾದ ಪ್ರತಿಯೊಬ್ಬರನ್ನೂ ಕಾನೂನು ಎದುರು ನಿಲ್ಲಿಸಲಾಗುವುದು’ ಎಂದಿದ್ದಾರೆ. ‘ಸ್ಫೋಟದಲ್ಲಿ ಮೃತಪಟ್ಟ ಹಾಗೂ ಗಾಯಗೊಂಡವರ ಕುಟುಂಬದವರೊಂದಿಗೆ ಇಡೀ […]

RSS ಬೆಳೆಯಲು ಕಾಂಗ್ರೆಸ್‌ ಕಾರ್ಯಕರ್ತರೆ ಕಾರಣ : ದಲಿತ ಸಂಘರ್ಷ ಸಮಿತಿ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಉಡುಪಿ ಜಿಲ್ಲಾ ಸಮಿತಿ ವತಿಯಿಂದ ಉಡುಪಿ ಜಿಲ್ಲಾಧಿಕಾರಿ ಕಛೇರಿ ಮುಂಭಾಗದಲ್ಲಿ ಇಂದು ಆರ್‌ಎಸ್‌ಎಸ್‌ ವಿರುದ್ಧ ಪ್ರತಿಭಟನಾ ಸಭೆ ನಡೆಯಿತು. ಸಭೆಯನ್ನು ಉದ್ದೇಶಿಸಿ ಮಾತನಾಡಿದ ದಸಂಸ ಅಂಬೇಡ್ಕರ್ ಉಡುಪಿ ಜಿಲ್ಲಾ ಸಂಚಾಲಕ ಅಡ್ವಕೇಟ್‌ ಮಂಜುನಾಥ್‌ ಗಿಳಿಯಾರ್‌, ದೇಶದಲ್ಲಿ ಆರ್‌ಎಸ್‌ಎಸ್‌ ಬೆಳೆಯಲು ಕಾರಣವೇ ಕಾಂಗ್ರೆಸ್‌ ಪಕ್ಷದ ಕಾರ್ಯಕರ್ತರು. ಕಾಂಗ್ರೆಸ್‌ ಆಡಳಿತದಲ್ಲಿದ್ದರೂ ಆರ್‌ಎಸ್‌ಎಸ್‌ ನಿಷೇಧಿಸಲು ಸಾಧ್ಯವಾಗಲಿಲ್ಲ. ಇದರ ಹೊಣೆಗಾರರು ಸ್ವತಃ ಕಾಂಗ್ರೆಸ್‌ ನಾಯಕರೇ ಎಂದು ಹೇಳಿದರು. ಆರ್‌ಎಸ್‌ಎಸ್‌ ಸಮಾನತೆಯ ವಿರುದ್ಧವಾಗಿ ಕೆಲಸ ಮಾಡುತ್ತಿದೆ. ಮೀಸಲಾತಿ […]

ಧರ್ಮೇಂದ್ರ ಸಾವಿನ ಸುದ್ದಿ ಸುಳ್ಳು : ಹೇಮಾಮಾಲಿನಿ ಆಕ್ರೋಶ

ಬಾಲಿವುಡ್‌ನ ಹಿರಿಯ ನಟ ಧರ್ಮೇಂದ್ರ ಆಸ್ಪತ್ರೆಗೆ ದಾಖಲಾಗಿದ್ದು, ಅವರನ್ನು ತೀವ್ರ ನಿಗಾ ಘಟಕದಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಕೆಲವು ಮಾಧ್ಯಮಗಳು, ಸಾಮಾಜಿಕ ಜಾಲತಾಣಗಳಲ್ಲಿ ಧರ್ಮೇಂದ್ರ ನಿಧನದ ಸುದ್ದಿ ಪ್ರಸಾರ ಮಾಡಿದ ಬೆನ್ನಲ್ಲೇ ಧರ್ಮೇಂದ್ರ ಪತ್ನಿ ನಟಿ, ಸಂಸದೆ ಹೇಮಾಮಾಲಿನಿ ಟ್ವೀಟ್ ಮಾಡಿ ಬೇಸರ ಹೊರಹಾಕಿದ್ದಾರೆ. ನಟ ಧರ್ಮೇಂದ್ರ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ವೆಂಟಿಲೇಟರ್ ಸಹಾಯದಿಂದ ಉಸಿರಾಡುತ್ತಿರುವ ಧರ್ಮೇಂದ್ರ ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಮುಂದುವರೆದಿದೆ. ಆದರೆ ಕೆಲ ಮಾಧ್ಯಮಗಳು ಧರ್ಮೇಂದ್ರ ನಿಧನ ಹೊಂದಿದ್ದಾರೆ ಎಂದು […]