ಮಾಜಿ ಡಿಜಿಪಿಗೆ ಸೊಸೆ ಜೊತೆ ಅಕ್ರಮ ಸಂಬಂಧ?: ಮಗನ ಕೊಲೆ ಆರೋಪದಡಿ ಎಫ್‌ಐಆರ್

ನವದೆಹಲಿ: ಮಗನ ಅನುಮಾನಾಸ್ಪದ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ, ಪತ್ನಿ ರಾಜಿಯಾ ಸುಲ್ತಾನಾ ವಿರುದ್ಧ ಸಿಬಿಐ ಎಫ್‌ಐಆರ್ ದಾಖಲಿಸಿದೆ. ಮಾಜಿ ಡಿಜಿಪಿ ಮೊಹಮ್ಮದ್ ಮುಸ್ತಫಾ ಅವರ ಮಗ ಅಖಿಲ್ ಅಖ್ತರ್(35) ಅಕ್ಟೋಬರ್ 16ರಂದು ಹರಿಯಾಣದ ಪಂಚಕುಲದಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದರು. ಶುಕ್ರವಾರ ದಾಖಲಾಗಿರುವ ಎಫ್‌ಐಆರ್ ಪ್ರಕಾರ, ಮೃತ ವ್ಯಕ್ತಿ ಮತ್ತು ಅವರ ಕುಟುಂಬದ ನಡುವೆ ಅಸಮಾಧಾನವಿತ್ತು. ‘ಈ ಸಂಬಂಧ ಕೇಂದ್ರ ತನಿಖಾ ದಳವು(ಸಿಬಿಐ) ನವೆಂಬರ್ 6ರಂದು ಎಫ್‌ಐಆರ್ ದಾಖಲಿಸಿದೆ.ಪಂಚಕುಲದ ಮಾನಸಾ ದೇವಿ […]
ಉಡುಪಿ: ಅಪ್ರಾಪ್ತ ಬಾಲಕಿ ಜೊತೆ ಲಾಡ್ಜ್‌ನಲ್ಲಿ ಸಿಕ್ಕಿಬಿದ್ದ ಬಿಜೆಪಿ ಮುಖಂಡನ ಪುತ್ರ

ಉಡುಪಿ: ಮಣಿಪಾಲದ ಲಾಡ್ಜ್‌ನಲ್ಲಿ ಅಪ್ರಾಪ್ತೆಯ ಜೊತೆ ಬಿಜೆಪಿ ಮುಖಂಡನ ಪುತ್ರನೋರ್ವ ಸಿಕ್ಕಿಬಿದ್ದಿದ್ದು, ಈ ಬಗ್ಗೆ ಉಡುಪಿ ಮಹಿಳಾ ಪೊಲೀಸ್ ಠಾಣೆಯಲ್ಲಿ ಪೊಕ್ಸೋ ಪ್ರಕರಣ ದಾಖಲಾಗಿದೆ. ಆರೋಪಿ ಕಟಪಾಡಿ ಮಣಿಪುರದ ನಿವಾಸಿ ಶ್ರೀಶಾಂತ್ ಪೂಜಾರಿ(20) ಎಂಬಾತನನ್ನು ಪೊಲೀಸರು ಬಂಧಿಸಿ, ಗುರುವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಸ್ಥಳೀಯ ಬಿಜೆಪಿ ಮುಖಂಡರೊಬ್ಬರ ಪುತ್ರನಾಗಿರುವ ಈತ, ಅಪ್ರಾಪ್ತ ಬಾಲಕಿಯನ್ನು ಮದುವೆ ಆಗುವುದಾಗಿ ನಂಬಿಸಿ ಮಣಿಪಾಲದ ಲಾಡ್ಜ್‌ಗ್ಗೆ ಕರೆದುಕೊಂಡು ಹೋಗಿದ್ದ ಎನ್ನಲಾಗಿದೆ. ಇದರ ಮಾಹಿತಿ ತಿಳಿದು ಬಾಲಕಿಯ […]
ಕಂಬಳ ಸಂಘಟಕ, ಉದ್ಯಮಿ ಅಭಿಷೇಕ್ ಆಳ್ವ ಶಾಂಭವಿ ನದಿಯಲ್ಲಿ ಶವ ಪತ್ತೆ

ಪಡುಬಿದ್ರೆ: ಉದ್ಯಮಿ, ಕಂಬಳ ಸಂಘಟಕ ವಾಮಂಜೂರು ತಿರುವೈಲುಗುತ್ತು ನವೀನ್ ಚಂದ್ರ ಆಳ್ವ ಅವರ ಪುತ್ರ ಅಭಿಷೇಕ್ ಆಳ್ವ (29 ವ) ಮೃತದೇಹ ಕಾಪು ತಾಲೂಕಿನ ಹೆಜಮಾಡಿ ಗ್ರಾಮದ ಶಾಂಭವಿ ನದಿ ಕಿನಾರೆಯಲ್ಲಿ ಶುಕ್ರವಾರ (ನ.07) ಮುಂಜಾನೆ ಪತ್ತೆಯಾಗಿದೆ. ಆತ್ಮಹತ್ಯೆ ಶಂಕೆ ವ್ಯಕ್ತವಾಗಿದೆ. ಕಂಬಳ ಪ್ರೇಮಿಯಾಗಿದ್ದ ಅಭಿಷೇಕ್ ಆಳ್ವ ತಂದೆಯ ಉದ್ಯಮವನ್ನು ನೋಡಿಕೊಳ್ಳುತ್ತಿದ್ದರು. ವಾಮಂಜೂರು ತಿರುವೈಲುಗುತ್ತು ಕಂಬಳವನ್ನು ಅತ್ಯಂತ ಶಿಸ್ತುಬದ್ಧ ಕಂಬಳ ಎಂದು ಹೆಸರು ಮಾಡುವಲ್ಲಿ ಪ್ರಮುಖ ಕಾರಣರಾಗಿದ್ದರು.
ಒಡಹುಟ್ಟಿದ ಸಹೋದರಿಗೆ ಮಗು ಕರುಣಿಸಿದ ಪಾಪಿ ಅಣ್ಣ ಅರೆಸ್ಟ್

ಕೊಪ್ಪಳ: ಇಲ್ಲಿನ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 17 ವರ್ಷದ ಅಪ್ರಾಪ್ತ ಬಾಲಕಿಯೊಬ್ಬಳಿಗೆ ಆಕೆಯ ಸಹೋದರನೇ ಮಗು ಕರಣಿಸಿದ್ದಾನೆ. ಕಳೆದ ವಾರ ತೀವ್ರ ಹೊಟ್ಟೆನೋವು ಎಂದು ಆಸ್ಪತ್ರೆಗೆ ದಾಖಲಾಗಿದ್ದ ಬಾಲಕಿಗೆ ವೈದ್ಯಕೀಯ ಪರೀಕ್ಷೆ ನಡೆಸಿದಾಗ, ಆಕೆ ಗರ್ಭಿಣಿಯಾಗಿರುವುದು ತಿಳಿದು ಬಂದಿತ್ತು. ಬಳಿಕ ಆಕೆ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಇಡೀ ಕುಟುಂಬಕ್ಕೆ, ಆ ಬಾಲಕಿ ತಾಯಿ ಆಗಿದ್ದಾಳೆ ಎಂಬ ವಿಷಯದಿಂದ ಆಘಾತವಾಗಿದೆ. ಆದರೆ, ಮಗುವಿಗೆ ಜನ್ಮ ನೀಡಿದ ನಂತರ, ಆ ಬಾಲಕಿ ನೀಡಿದ ಹೇಳಿಕೆಯು ಮತ್ತೊಂದು […]
ಬೆಳ್ತಂಗಡಿ: ಪಟ್ಟಣ ಪಂಚಾಯತ್ ನಾಮನಿರ್ದೇಶಕ ಸದಸ್ಯ ಬಶೀರ್ ನೇಣು ಬಿಗಿದು ಆತ್ಮಹತ್ಯೆ

ಬೆಳ್ತಂಗಡಿ: ರೆಂಕೆದಗುತ್ತು ನಿವಾಸಿ, ಪಟ್ಟಣ ಪಂಚಾಯತ್ ನಾಮನಿರ್ದೇಶನ ಸದಸ್ಯ. ಅಬ್ದುಲ್ ಬಶೀರ್ ರವರು ಅ6ರಂದು ಬೆಳಗ್ಗೆ ತಮ್ಮ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣು ಬಿಗಿದ ಸ್ಥಿತಿಯಲ್ಲಿ ಇವರ ಮೃತದೇಹ ಮನೆಯಲ್ಲಿ ಪತ್ತೆಯಾಗಿದೆ. ವೃತ್ತಿಯಲ್ಲಿ ಆಟೋ ಚಾಲಕರಾಗಿರುವ ಇವರು ಪತ್ನಿ, ಮೂರು ಮಕ್ಕಳನ್ನು ಅಗಲಿದ್ದಾರೆ. ಇವರ ಆತ್ಮಹತ್ಯೆಗೆ ಕಾರಣವೇನು ಎಂದು ತಿಳಿದು ಬಂದಿಲ್ಲ.
ಮಂಗಳೂರು: ಮದರಸದಿಂದ ಮನೆಗೆ ಹಿಂದಿರುಗುತ್ತಿದ್ದ ಬಾಲಕನ ಮೇಲೆ ಬೀದಿ ನಾಯಿ ದಾಳಿ

ಬಜ್ಪೆ: ಮದರಸಕ್ಕೆ ಹೋಗಿ ಮನೆಗೆ ಹಿಂದಿರುಗುತ್ತಿದ್ದ 6 ವರ್ಷದ ಬಾಲಕನ ಮೇಲೆ ಬೀದಿ ನಾಯಿಗಳು ದಾಳಿ ನಡೆಸಿದ ಘಟನೆ ಬಜ್ಪೆ ಕಂದಾವರ ಗ್ರಾಮ ಪಂಚಾಯತ್ ವ್ಯಾಪ್ತಿಯ ಸೌಹಾರ್ದ ನಗರದಲ್ಲಿ ಇಂದು ನಡೆದಿದೆ. ಸೌಹಾರ್ದ ನಗರದ ನಿವಾಸಿ ಮುಹಮ್ಮದ್ ಅಝರ್ ಅವರ ಪುತ್ರ ಅಹಿಲ್ ಗಾಯಗೊಂಡ ಬಾಲಕ ಎಂದು ತಿಳಿದು ಬಂದಿದೆ. ಬೆಳಗ್ಗೆ ಮನೆಯ ಸಮೀಪದ ಮದರಸಕ್ಕೆ ತೆರಳಿ ವಾಪಸ್ ಮನೆಗೆ ಮರಳುವ ವೇಳೆ ಏಕಾಏಕಿ ಸುತ್ತುವರಿದ ಬೀದಿ ನಾಯಿಗಳು ಮಗುವಿನ ಕೆನ್ನೆ, ಕೈಗೆ ಕಚ್ಚಿ ಗಂಭೀರ ಗಾಯಗೊಳಿಸಿದೆ […]
ಕ್ರಾಂತಿ ಏನಿದ್ದರೂ 2028ಕ್ಕೆ; ನಾನು ಪಕ್ಷ ಹಾಕಿದ ಗೆರೆ ದಾಟುವುದಿಲ್ಲ: ಡಿಕೆಶಿ ಮಹತ್ವದ ಹೇಳಿಕೆ

ನವದೆಹಲಿ: ರಾಜ್ಯ ರಾಜಕೀಯದಲ್ಲಿ “ನವೆಂಬರ್ ಕ್ರಾಂತಿ” ಭಾರಿ ಸದ್ದು ಮಾಡುತ್ತಿದೆ. ಆದರೆ ನಾಯಕತ್ವ ಬದಲಾವಣೆಯ ಈ ಕ್ರಾಂತಿಯನ್ನು ಸ್ಪಷ್ಟವಾಗಿ ತಳ್ಳಿಹಾಕಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು, 2028 ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಮರಳಿದಾಗ ಮಾತ್ರ ಕ್ರಾಂತಿ ಎಂದು ಗುರುವಾರ ಹೇಳಿದ್ದಾರೆ. ತಾವು ಪಕ್ಷದ “ಶಿಸ್ತಿನ ಸಿಪಾಯಿ” ಎಂದು ಹೇಳಿಕೊಂಡಿರುವ ರಾಜ್ಯ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ಡಿಕೆ ಶಿವಕುಮಾರ್, ತಾವು ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗಿದ್ದೇವೆ ಎಂದು ಹೇಳಿದರು. ಈ ತಿಂಗಳು […]
ಪುತ್ತೂರು | ಜಾನುವಾರು ಖರೀದಿಸಿದ ರಶೀದಿ ಎಂದು ಸುಳ್ಳು ದಾಖಲೆ ಪ್ರಸಾರ ಆರೋಪ: ಪ್ರಕರಣ ದಾಖಲು

ಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣಾ ಅ.ಕ್ರ: 115/2025. ಕಲಂ 132, 109, 303(2) r/w 3(5) ಭಾರತೀಯ ನ್ಯಾಯ ಸಂಹಿತೆ 2023. ಮತ್ತು ಕಲಂ 4, 5, 6, 12 ಕರ್ನಾಟಕ ಜಾನುವಾರು ಹತ್ಯೆ ಪ್ರತಿ ಬಂಧಕ ಕಾಯ್ದೆ & ಸಂರಕ್ಷಣಾ ಕಾಯ್ದೆ 2020 ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸದ್ರಿ ವಾಹನದಲ್ಲಿ ಸಾಗಿಸಲಾಗುತ್ತಿದ್ದ ಜಾನುವಾರುಗಳನ್ನು ಖರೀದಿ ಮಾಡಿರುವ ರಶೀದಿಗಳೆಂದು ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾಗುತ್ತಿದ್ದ ದಾಖಲೆಗಳ ಬಗ್ಗೆ ವಿಚಾರಿಸಲಾಗಿ, ಚನ್ನರಾಯಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಕಾರ್ಯದರ್ಶಿರವರು […]
ಕೆಜಿಎಫ್ ಚಾಚಾ ಇನ್ನಿಲ್ಲ: ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದ ಹರೀಶ್ ರಾಯ್ ನಿಧನ!
ಕನ್ನಡ ಚಿತ್ರರಂಗದ ಬ್ಲಾಕ್ಬಸ್ಟರ್ ‘ಕೆಜಿಎಫ್’ ಮೂಲಕ ‘ಕೆಜಿಎಫ್ ಚಾಚಾ’ ಎಂದೇ ಜನಪ್ರಿಯತೆ ಹೆಚ್ಚಿಸಿಕೊಂಡಿದ್ದ ನಟ ಹರೀಶ್ ರಾಯ್ (Harish Rai) ಕೊನೆಯುಸಿರೆಳೆದಿದ್ದಾರೆ. 2022ರಲ್ಲಿ ತಗುಲಿದ್ದ ಕ್ಯಾನ್ಸರ್ ಇತ್ತೀಚೆಗೆ ಉಲ್ಭಣಗೊಂಡಿತ್ತು. ನೆರವಿಗೆ ಕೋರಿದ್ದ ನಟನಿಗೆ ಸಹಾಯ ಹಸ್ತವೂ ಸಿಕ್ಕಿತ್ತು. ಆದ್ರಿಂದು ಬೆಳಗ್ಗೆ ಸುಮಾರು 11 ಗಂಟೆ ಹೊತ್ತಿಗೆ ಕೊನೆಯುಸಿರೆಳೆದಿದ್ದು, ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಸಂಭವಿಸಿದೆ. ಸ್ಯಾಂಡಲ್ವುಡ್ನ ಸೂಪರ್ ಹಿಟ್ ‘ಓಂ’ ಸಿನಿಮಾದಿಂದ ಲೈಮ್ಲೈಟ್ಗೆ ಬಂದ ನಟರುಗಳಲ್ಲಿ ಹರೀಶ್ ರಾಯ್ ಕೂಡಾ ಓರ್ವರು. ಈ ಸಿನಿಮಾ ಸಕ್ಸಸ್ ಬಳಿಕ […]
ಬೆಳಗಾವಿ: MES ಮುಖಂಡನ ಜೊತೆಗಿನ ಸೆಲ್ಫಿ ಸಂಕಷ್ಟ; CPI ಜೆ.ಎಂ ಕಾಲೆಮಿರ್ಚಿ ಎತ್ತಂಗಡಿ!

ಬೆಳಗಾವಿ: ನಿಷೇಧದ ನಡುವೆಯೂ ಕನ್ನಡ ರಾಜ್ಯೋತ್ಸವ ದಿನದಂದು ಬೆಳಗಾವಿಯಲ್ಲಿ ಎಂಇಎಸ್ ಪುಂಡರು ಕರಾಳ ದಿನ ಎಂದು ಮೆರವಣಿಗೆ ಮಾಡಿದ್ದರು. ಈ ವೇಳೆ ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದ CPI ಅನ್ನು ಎತ್ತಂಗಡಿ ಮಾಡಲಾಗಿದೆ. ಎಂಇಎಸ್ ಮುಖಂಡ ಶುಭಂ ಸೆಳಕೆ ಜೊತೆ ಮಾಳಮಾರುತಿ ಠಾಣೆ ಸಿಪಿಐ ಜೆ.ಎಂ.ಕಾಲೆಮಿರ್ಚಿ ಸೆಲ್ಫಿ ಫೋಟೋ ತೆಗೆದುಕೊಂಡಿದ್ದರು. ಇದಕ್ಕೆ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಅಲ್ಲೆ ಸಿಪಿಐ ವಿರುದ್ಧ ಕಠಿಣ ಕ್ರಮ ಜರಗಿಸುವಂತೆ ಆಗ್ರಹಗಳು ಕೇಳಿಬಂದಿದ್ದವು. ಇದೀಗ ಸಿಪಿಐ ಕಾಲೇಮಿರ್ಚಿಯನ್ನು ವರ್ಗಾವಣೆ […]