Flash News

ಸರ್‌.. ನಿಮ್ಮ ಸ್ಕಿನ್‌ಕೇರ್‌ ಗುಟ್ಟೇನು?: ಕ್ರಿಕೆಟ್‌ ಆಟಗಾರ್ತಿ ಪ್ರಶ್ನೆಗೆ ಮೋದಿ ಹೇಳಿದ್ದೇನು?

ನವದೆಹಲಿ: ಐಸಿಸಿ ವಿಶ್ವಕಪ್‌ ಗೆದ್ದ ಮಹಿಳಾ ತಂಡದ ಜೊತೆ ಸಂವಾದದ ವೇಳೆ ಆಟಗಾರ್ತಿಯರು ಪ್ರಧಾನಿ ಮೋದಿ ಅವರಿಗೆ ಕೇಳಿದ ಪ್ರಶ್ನೆ ಗಮನ ಸೆಳೆದಿದೆ. ಅಗ್ರ ಕ್ರಮಾಂಕದ ಬ್ಯಾಟ್ಸ್‌ಮನ್ ಹರ್ಲೀನ್ ಡಿಯೋಲ್, ‘ಸರ್‌.. ನೀವು ತುಂಬಾ ಹೊಳೆಯುತ್ತೀರಿ. ನಿಮ್ಮ ತ್ವಚೆ ಆರೈಕೆಯ ದಿನಚರಿಯೇನು’ ಮೋದಿಗೆ ಪ್ರಶ್ನೆಯೊಂದನ್ನು ಕೇಳಿದ್ದಾರೆ. ಆಕೆಯ ಅನಿರೀಕ್ಷಿತ ಪ್ರಶ್ನೆ ಪ್ರಧಾನಿ ಸೇರಿದಂತೆ ಎಲ್ಲರನ್ನೂ ನಗೆಗಡಲಲ್ಲಿ ತೇಲಿಸಿತು. ಮೋದಿ ಇನ್ನೂ ಖುಷಿಯಿಂದ, ‘ನಾನು ಅದೆಲ್ಲದರ ಬಗ್ಗೆ ಯೋಚಿಸುವುದಿಲ್ಲ’ ಎಂದು ಉತ್ತರಿಸಿದರು. ತಂಡದ ಮತ್ತೊಬ್ಬ ಆಟಗಾರ್ತಿ, ‘ಸರ್, ದೇಶವಾಸಿಗಳ […]

ಇದು ರಾಜಕೀಯ ನಾಟಕದಂತೆ ಕಾಣುತ್ತಿದೆ: ರಾಹುಲ್‌ ಗಾಂಧಿ ಆರೋಪ ಸುಳ್ಳು ಎಂದ ಬ್ರೆಜಿಲ್ ಮಾಡೆಲ್‌

ನವದೆಹಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಮತಗಳ್ಳತನ ಆರೋಪ ಮಾಡಿದ್ದ ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಆರೋಪವನ್ನು ಸ್ವತಃ ಬ್ರೆಜಿಲಿಯನ್‌ ಮಾಡೆಲ್‌ ಅಲ್ಲಗಳೆದಿದ್ದಾರೆ. ಹರಿಯಾಣ ಚುನಾವಣೆಯಲ್ಲಿ ಭಾರೀ ಅಕ್ರಮ ನಡೆದಿದೆ. ಬ್ರೆಜಿಲ್‌ ರೂಪದರ್ಶಿ 22 ಕಡೆ ಮತ ಚಲಾಯಿಸಿದ್ದಾರೆ ಎಂದು ಸುದ್ದಿಗೋಷ್ಠಿ ನಡೆಸಿ ರಾಹುಲ್‌ ಗಾಂಧಿ ಗಂಭೀರ ಆರೋಪ ಮಾಡಿದ್ದರು. ಆರೋಪದ ಬಗ್ಗೆ ಬ್ರೆಜಿಲ್‌ ಮಾಡೆಲ್‌ ಲಾರಿಸಾ ಪ್ರತಿಕ್ರಿಯೆ ನೀಡಿದ್ದಾರೆ. ಅವರು ನನ್ನ ಹಳೆಯ ಫೋಟೊ ಬಳಸಿ ಸೀಮಾ ಮತ್ತು ಸರಸ್ವತಿ ಎಂದು ಕರೆಯುತ್ತಿದ್ದಾರೆ. ನಾನು ಬ್ರೆಜಿಲಿಯನ್.. […]

‘ಗ್ಯಾರೆಂಟಿ ಯೋಜನೆಗಳ’ ಭರವಸೆ ನೀಡಿ ನ್ಯೂಯಾರ್ಕ್‌ ಮೇಯರ್‌ ಚುನಾವಣೆ ಗೆದ್ದ ಜೊಹ್ರಾನ್ ಮಮ್ದಾನಿ

ನ್ಯೂಯಾರ್ಕ್‌ ನಗರದ ಮೇಯರ್ ಚುನಾವಣೆಯಲ್ಲಿ ಗೆಲವು ಸಾಧಿಸುವ ಮೂಲಕ ಜೊಹ್ರಾನ್ ಮಮ್ದಾನಿ ಅವರು ಹೊಸ ಇತಿಹಾಸ ರಚಿಸಿದ್ದಾರೆ. ಅನೇಕ ವಿರೋಧಗಳ ನಡುವೆಯೂ, ವಿಶ್ವದ ಅತ್ಯಂತ ಪ್ರತಿಷ್ಠಿತ ನಗರದ ಮೊದಲ ಮುಸ್ಲಿಂ, ವಲಸಿಗ ಅಭ್ಯರ್ಥಿಯಾಗಿ ಮಮ್ದಾನಿ ಜಯ ಸಾಧಿಸಿದ್ದಾರೆ. ಆದರೆ, ಅವರ ಗೆಲುವಿನಲ್ಲಿ ವಿಶೇಷವಾಗಿ ಎದ್ದು ಕಾಣುವ ಅಂಶವೆಂದರೆ, ಈ ಡೆಮಾಕ್ರಟಿಕ್ ಸಮಾಜವಾದಿ ನಾಯಕ ದೆಹಲಿಯ ಮುಖ್ಯಮಂತ್ರಿ ಮತ್ತು ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರಿವಾಲ್ ಅವರ ‘ಮಾದರಿ’ಯನ್ನು ಅಳವಡಿಸಿಕೊಂಡಿರುವುದು. ಹೌದು, ಅಮೆರಿಕದಂತಹ ಶ್ರೀಮಂತ ದೇಶದಲ್ಲೂ ಬಡವರ […]

ತಿಂಗಳಿನಿಂದ ಪೊಲೀಸ್​ ಠಾಣೆಯಲ್ಲೇ ನಿಂತಿದ್ದ ಕಾರಲ್ಲಿತ್ತು ಚಿನ್ನ, ಬೆಳ್ಳಿ ಮತ್ತು ಕಂತೆ ಕಂತೆ ಹಣ!

ಚಿಕ್ಕಮಗಳೂರು: ಪೊಲೀಸರು ಸೀಜ್​ ಮಾಡಿದ್ದ ಕಾರಣ​ ಒಂದು ತಿಂಗಳಿನಿಂದ ಪೊಲೀಸ್​ ಠಾಣೆಯಲ್ಲಿ ನಿಂತಿದ್ದ ಕಾರಿನಲ್ಲಿ ಲಕ್ಷಾಂತರ ರೂಪಾಯಿ ಹಣ, ಚಿನ್ನ ಮತ್ತು ಬೆಳ್ಳಿ ಪತ್ತೆಯಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿ ನಡೆದಿದೆ. ಮಾಜಿ ಶಿಕ್ಷಣ ‌ಸಚಿವ ದಿ .ಗೋವಿಂದೇಗೌಡರ ಮನೆಯಲ್ಲಿ ನಡೆದಿದ್ದ ಕಳ್ಳತನ ಪ್ರಕರಣ ಸಂಬಂಧ ನೇಪಾಳಿ ಗ್ಯಾಂಗ್​ನ ಸಾಂಗ್ಲಿ ಪೊಲೀಸರ ನೆರವು ಪಡೆದು ಬಂಧಿಸಲಾಗಿತ್ತು. ಈ ವೇಳೆ ಆರೋಪಿಗಳು ಎಸ್ಕೇಪ್​ ಆಗಲು ಬಳಸಿದ್ದ ಕಾರನ್ನು ಸೀಜ್​ ಮಾಡಲಾಗಿತ್ತು. ಆದರೆ, ಈಗ ನ್ಯಾಯಾಲಯ ಕಾರನ್ನ ರಿಲೀಸ್​ ಮಾಡುವಂತೆ […]

‘ಜನಗಣಮನ ಬ್ರಿಟಿಷರ ಸ್ವಾಗತಕ್ಕೆ ರಚಿಸಿದ ಗೀತೆ’: ರಾಷ್ಟ್ರಗೀತೆಗೆ ಅವಮಾನ ಸಂಸದ ಕಾಗೇರಿ

ಹೊನ್ನಾವರ: ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ದೇಶದ ರಾಷ್ಟ್ರಗೀತೆ ಕುರಿತು ವಿಶ್ವೇಶ್ವರ ಹೆಗಡೆ ಕಾಗೇರಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಈಗ ಇರುವ ರಾಷ್ಟ್ರಗೀತೆ ಜನಗಣಮನ ಮೂಲತಃ ಬ್ರಿಟಿಷರ ಸ್ವಾಗತಕ್ಕೆ ರಚಿಸಿದ್ದ ಗೀತೆ ಎಂದು ಕಾಗೇರಿ ಹೇಳಿದ್ದಾರೆ. ಹೊನ್ನಾವರದಲ್ಲಿ ನಡೆದ ಆತ್ಮನಿರ್ಭರ ಭಾರತಕ್ಕಾಗಿ ರಾಷ್ಟ್ರೀಯ ಏಕತಾ ನಡಿಗೆ ಕಾರ್ಯಕ್ರಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಂದೇ ಮಾತರಂ ದೇಶದ ರಾಷ್ಟ್ರಗೀತೆಯಾಗಬೇಕಾಗಿತ್ತು. ಜನಗಣಮನಕ್ಕೆ ಸರಿಸಮಾನವಾದ ಗೀತೆ ವಂದೇ ಮಾತರಂ. ಸ್ವಾತಂತ್ರ್ಯ ಹೋರಾಟಕ್ಕೆ ವಂದೇ ಮಾತರಂ […]

ಪುತ್ತೂರು | ಕೋಮು ದ್ವೇಷ ಭಾಷಣ: ಮೊದಲ ಬಾರಿಗೆ ಠಾಣೆ ಮೆಟ್ಟಿಲೇರಿದ ಕಲ್ಲಡ್ಕ ಪ್ರಭಾಕರ ಭಟ್

ಪುತ್ತೂರು: ಕೋಮು ದ್ವೇಷ ಭಾಷಣ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪುತ್ತೂರು ಗ್ರಾಮಾಂತರ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಿದ್ದಾರೆ. ಪುತ್ತೂರು ಗ್ರಾಮಾಂತರ ಠಾಣೆಯ ತನಿಖಾಧಿಕಾರಿ‌ಯ ನೊಟೀಸ್ ಹಿನ್ನೆಲೆ ಪ್ರಭಾಕರ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ. ಉಪ್ಪಳಿಗೆಯಲ್ಲಿ ನಡೆದ ‘ದೀಪೋತ್ಸವ’ ಕಾರ್ಯಕ್ರಮದಲ್ಲಿ ಕಲ್ಲಡ್ಕ ಪ್ರಭಾಕರ ಭಟ್ ಮಾಡಿದ ಭಾಷಣ ಧಾರ್ಮಿಕ ದ್ವೇಷ ಪ್ರಚೋದಿಸುವ, ಮಹಿಳೆಯರ ಘನತೆಗೆ ಧಕ್ಕೆ ಉಂಟು ಮಾಡುವ ಹಾಗೂ ಸಾರ್ವಜನಿಕ ಶಾಂತಿಗೆ ಅಪಾಯ ಉಂಟು ಮಾಡುವಂತಿತ್ತು ಎಂದು ಆರೋಪಿಸಿ ಮಹಿಳಾ ಪರ ಹೋರಾಟಗಾರ್ತಿ ಈಶ್ವರಿ […]

ಭಾರತದಲ್ಲಿ ಯುವ ಜನರು ಅತೀ ಹೆಚ್ಚು ಸಾಲ ಪಡೆಯೋದು ಯಾವುದಕ್ಕೆ ಗೊತ್ತಾ?

ಮುಂಬೈ: ಭಾರತೀಯ ಯುವಕರಲ್ಲಿ ಸಾಲ ಮಾಡುವ ಪ್ರಮಾಣ ಹೆಚ್ಚಾಗಿದೆ. ಅದರಲ್ಲೂ ಕೌಶಲ್ಯಗಳನ್ನು ಅಭಿವೃದ್ದಿ ಪಡಿಸಿಕೊಳ್ಳಲು, ವೃತ್ತಿ ಜೀವನದಲ್ಲಿ ಬೆಳವಣಿಗೆ ಹೊಂದಲು ಹಾಗೂ ಉದ್ಯಮವನ್ನು ಆರಂಭಿಸಲು ಹೆಚ್ಚಿನ ಸಾಲ ಮಾಡುತ್ತಿದ್ದಾರೆ ಎಂದು ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಡಿಜಿಟಲ್‌ ಸಾಲ ನೀಡುವ ಎಂ ಪಾಕೇಟ್‌ ಈ ಸಮೀಕ್ಷೆ ಮಾಡಿದೆ. 3000 ಭಾರತೀಯ ಯುವಕರು ಈ ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಸಾಲ ಪಡೆದ ಶೇ 63 ರಷ್ಟು ಯುವ ಜನರು ಆರ್ಥಿಕವಾಗಿ ಅಭಿವೃದ್ದಿ ಹೊಂದಿದ್ದಾರೆ. ಶೇ 40 ರಷ್ಟು ಜನರು ಜೀವನದಲ್ಲಿ ಮುಂದೆ ಬರಲು […]

EPFO ಸ್ಟಾಫ್ ಕೊ-ಅಪರೇಟೀವ್ ಸೊಸೈಟಿಯಲ್ಲಿ ಭಾರಿ ಗೋಲ್ಮಾಲ್: 70 ಕೋಟಿ ಹಣ ಗುಳುಂ ಮಾಡಿದ್ದ ಸಿಬ್ಬಂದಿ!

ಬೆಂಗಳೂರು: ಕಷ್ಟಪಟ್ಟು ಜೀವನವೆಲ್ಲಾ ದುಡಿದು ಕೂಡಿಟ್ಟ ಹಣ ಬ್ಯಾಂಕ್ ಗಳಲ್ಲಿ ಸೇಫಾ ಅನ್ನೊ ಪ್ರಶ್ನೆಗೆ ಉತ್ತರವಿಲ್ಲದಂತಾಗಿದೆ. 300 ಖಾತೆದಾರರ 70 ಕೋಟಿ ಹಣವನ್ನ ಕೊ-ಆಪರೇಟೀವ್ ಬ್ಯಾಂಕ್ ಸಿಬ್ಬಂದಿಗಳೇ ನುಂಗಿ ನೀರು ಕುಡಿದಿದ್ದಾರೆ. ಇಪಿಎಫ್‌ಒ ಸಿಬ್ಬಂದಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿಯಲ್ಲಿ ನಡೆದ 70 ಕೋಟಿ ರೂ. ವಂಚನೆ ಪ್ರಕರಣ ಸಂಬಂಧ ಸಿಇಒ ಸೇರಿ ಇಬ್ಬರು ಪ್ರಮುಖ ಆರೋಪಿಗಳನ್ನ ಕಬ್ಬನ್ ಪಾರ್ಕ್ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಸೊಸೈಟಿಯ ಸಿಇಒ ಗೋಪಿನಾಥ್ ಹಾಗೂ ಸಿಬ್ಬಂದಿ ಲಕ್ಷ್ಮಿ ಜಗದೀಶ್ ಅರೆಸ್ಟ್ ಆಗಿದ್ದಾರೆ. ಇಪಿಎಫ್‌ಒ […]

ವೋಟ್‌ಚೋರಿ ಬಗ್ಗೆ ಮಾತಾಡೋ ರಾಹುಲ್ ಗಾಂಧಿಯದ್ದು ಚೈಲ್ಡೀಶ್ ಹೇಳಿಕೆ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ವೋಟ್‌ಚೋರಿ ಬಗ್ಗೆ ಮಾತಾಡೋ ರಾಹುಲ್ ಗಾಂಧಿಯದ್ದು ಚೈಲ್ಡೀಶ್ ಹೇಳಿಕೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು. ರಾಹುಲ್ ಗಾಂಧಿಯಿಂದ ಮತ್ತೆ ವೋಟ್‌ಚೋರಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಯದ್ದು ಚೈಲ್ಡೀಶ್ ಹೇಳಿಕೆ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ವೋಟ್‌ಚೋರಿ ಆಗಿದೆ ಅಂತ ಆರೋಪ ಮಾಡಿದ್ದರು. ಬಿ.ಆರ್ ಪಾಟೀಲ್ ಆಯ್ಕೆ ಮಾಡಿರುವ ಆಳಂದ ಕ್ಷೇತ್ರದ ಬಗ್ಗೆ ಮಾತಾಡಿದ್ದರು. ರಾಹುಲ್ […]

ಮಂಗಳೂರು: ಅಕ್ರಮ ಗೋ ಸಾಗಾಟದ ವಿರುದ್ಧ ಪೊಲೀಸರ ಸಮರ; ಮನೆ ಮುಟ್ಟುಗೋಲು

ಬೆಳ್ತಂಗಡಿ : ಗೋಮಾಂಸ ಮಾಡಲು ಮೂರು ದನಗಳನ್ನು ಅಕ್ರಮವಾಗಿ ಕಾರಿನಲ್ಲಿ ಸಾಗಾಟ ಮಾಡಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದ ಇಬ್ಬರು ಆರೋಪಿಗಳಲ್ಲಿ ಒಬ್ಬನ ಮನೆಯನ್ನು ಧರ್ಮಸ್ಥಳ ಪೊಲೀಸರು ಮುಟ್ಟುಗೋಲು ಹಾಕಿ ಜಪ್ತಿ ಮಾಡಿದ್ದಾರೆ. ಧರ್ಮಸ್ಥಳ ಪೊಲೀಸರು ‌ನ.2 ರಂದು ಪಟ್ರಮೆ ಗ್ರಾಮದ ಪಟ್ಟೂರು ರಸ್ತೆಯಲ್ಲಿ ಗೋ ಮಾಂಸ ಮಾಡಲು ಅಕ್ರಮವಾಗಿ ಮೂರು ದನಗಳನ್ನು KA-19-MC-5862 ನಂಬರಿನ ರಿಟ್ಝ್ ಕಾರಿನಲ್ಲಿ ಸಾಗಾಟ ಮಾಡುವಾಗ ಉಳ್ಳಾಲ ತಾಲೂಕಿನ ಮಹಮ್ಮದ್ ಖಲೀಲ್‌ ಯಾನೆ ತೌಸೀಫ್ (38) ಮತ್ತು ಮಹಮ್ಮದ್ ಸಿನಾನ್(25) ಸಿಕ್ಕಿ ಬಿದ್ದಿದ್ದರು. ದನ […]