Flash News

ಫರಂಗಿಪೇಟೆ: ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ

ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ತೇವು ಎಂಬಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇಂದು ಉದ್ಘಾಟನೆಯಾಯಿತು.


ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತ್ಯಾಜ್ಯ ವಿಲೇವಾರಿ ಘಟಕದ ಉದ್ಘಾಟನೆಯನ್ನು ನೇರವೇರಿಸಿದರು.


ಬಳಿಕ ಮಾತನಾಡಿದ ರಮ್ಲಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದು ಹಲವು ದಿನದ ಬೇಡಿಕೆ ಯಾಗಿತ್ತು. ಫರಂಗಿಪೇಟೆ ಪಟ್ಟಣದಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಅತ್ಯಂತ ಅಗತ್ಯವಾಗಿದೆ. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದರಿಂದ ಪರಿಸರ ಸಂರಕ್ಷಣೆಗೂ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವುದಕ್ಕೂ ಸಹಕಾರಿಯಾಗುತ್ತದೆ ಎಂದು ತಿಳಿಸಿದರು. ಮುಂದೆ ಇಲ್ಲಿ ಉದ್ಯಾನವನವನ್ನು ಮಾಡಲಿದ್ದೇವೆ. ಗ್ರಾಮದ ಹಾಗೂ ಊರಿನ ಎಲ್ಲ ನಾಗರಿಕರು ಇದಕ್ಕೆ ಸಹಕಾರ ನೀಡಬೇಕು ಎಂದು ತಿಳಿಸಿದರು.


ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಮಾತನಾಡಿ, ಸ್ವಚ್ಛ ಹಾಗೂ ಪರಿಸರ ಸ್ನೇಹಿ ಗ್ರಾಮ ನಿರ್ಮಾಣಕ್ಕೆ ಇದು ಮಹತ್ವದ ಹೆಜ್ಜೆಯಾಗಲಿದೆ ಎಂದು ತಿಳಿಸಿದರು.


ಈ ಸಂದರ್ಭ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಡಾ. ಸ್ಮೃತಿ.ಯು, ಕಾರ್ಯದರ್ಶಿ ಶ್ರೀಮತಿ ಕವಿತ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಅಸೀಫ್ ಇಕ್ಬಾಲ್, ಅರಫಾ ಜುಮ್ಮಾ ಮಸೀದಿ ಅಧ್ಯಕ್ಷ ಬುಕಾರಿ ಕುಂಪನ ಮಜಲು, ಸಲೀಂ ಕುಂಪನ ಮಜಲು, ಗ್ರಾಮ ಪಂಚಾಯತ್ ಸದಸ್ಯ ರಿಯಾಝ್ ಕುಂಪನ ಮಜಲು, ಮನೋಜ್ ಆಚಾರಿ, ರಝಾಕ್ ಅಮ್ಮೆಮಾರ್, ಇಶಾಮ್ ಫರಂಗಿಪೇಟೆ, ರಶೀದಾ ಭಾನು, ಮುಮ್ತಾಝ್, ರುಕ್ಷಾನಾ ಕುಂಪನ ಮಜಲು, ನವೀನ್ ಸಲ್ಧಾನ, ನವೀನ್ ಸಲ್ಧಾನ, ವ್ಯವಸ್ಥಾಪಕರು ಧನುಷ್, ಫಯಾಜ್ ಕಾನ, ಹಸಿರು ದಳ ವ್ಯವಸ್ಥಾಪಕರು ಲಕ್ಷ್ಮಿಕಾಂತ್, ಸಿಬ್ಬದ್ದಿ ಧನುಷ್, ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿನಯ, ರೇಷ್ಮ, ಮಮತ, ಸ್ವಚ್ಚತ ಸಿಬ್ಬದ್ದಿ ಕೈಸು, ಸಲಾಂ ಸಜೀರು, ಶರೀಫ್ ಮಲ್ಲಿ, ತೇವು ನಾಗರಿಕರು ಈ ವೇಳೆ ಉಪಸ್ಥಿತರಿದ್ದರು.