Flash News

ಮಾರಿಪಳ್ಳ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಮಂಗಳೂರು: ಮಾರಿಪಳ್ಳ ಬದ್ರಿಯಾ ಜುಮಾ ಮಸೀದಿಯಲ್ಲಿ ಇಂದು ಸಂಭ್ರಮದ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಣೆ ಮಾಡಲಾಯಿತು.

ಪ್ರವಾದಿ ಮುಹಮ್ಮದ್(ಸ) ಜನ್ಮ ದಿನದ ಅಂಗವಾಗಿ ಇಂದು ಈದ್ ಮಿಲಾದ್ ಹಬ್ಬವನ್ನು ಊರಿನ ಮಕ್ಕಳು, ಹಿರಿಯರು ಸಂಭ್ರಮ, ಸಡಗರದಿಂದ ಆಚರಿಸಿದರು.

ಬೆಳಗ್ಗೆ 8.30ಕ್ಕೆ ಧ್ವಜಾರೋಹಣದ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಧ್ವಜಾರೋಹಣವನ್ನು ಮಸೀದಿ ಉಪಾಧ್ಯಕ್ಷ ರಮ್ಲಾನ್ ಮಾರಿಪಳ್ಳ, ಖತೀಬಾರಾದ ಖಲಂದರ್ ಬಖವಿ, ಪ್ರಧಾನ ಕಾರ್ಯದರ್ಶಿಯಾದ ಅಬುಬಕ್ಕರ್ ಪಿ, skssf ಕಮಿಟಿ ಸದಸ್ಯರು ಮಸೀದಿ ಕಮಿಟಿ ಸದಸ್ಯರು, ಉಸ್ತದರು, ವಿದ್ಯಾರ್ಥಿಗಳು ಹಾಗೂ ಊರಿನ ಎಲ್ಲರೂ ಭಾಗವಹಿಸಿದ್ದರು. ಊರಿನ ಯುವಕರು ಸಿಹಿತಿಂಡಿಯನ್ನು ವಿತರಿಸಿದರು.

ಮಧ್ಯಾಹ್ನ ಮೌಲೂದು ಅನ್ನು ಪಠಿಸಲಾಯಿತು. ಬಳಿಕ ಊರಿನ ಮನೆಗಳಿಗೆ ಊಟವನ್ನು ನೀಡಿಲಾಯಿತು.