Flash News

ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ನೂತನ ಅಧ್ಯಕ್ಷರಾಗಿ ಗಫೂರ್ ಕೆಂಟ್, ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೋಕೇಟ್ ಕಲಂದರ್ ಕೊಯಿಲ ಆಯ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಭಾಗದ ಬ್ಯಾರಿ ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಸಂಘಟನೆಯಾಗಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ವಾರ್ಷಿಕ ಮಹಾಸಭೆಯು ಮೆಜೆಸ್ಟಿಕ್‌ನ ಗಾಂಧಿನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆಯಿತು.

2026-26ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಗಫೂರ್ ಕೆಂಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ಕಲಂದರ್ ಕೊಯಿಲ ಆಯ್ಕೆಯಾಗಿದ್ದಾರೆ.

ಕೋಶಾಧಿಕಾರಿಯಾಗಿ ರಿಫಾಯಿ ವಸಂತ ನಗರ, ಉಪಾಧ್ಯಕ್ಷರುಗಳಾಗಿ ನಾಸಿರ್ ಕೆಂಪಿ, ಇಕ್ಬಾಲ್ ಡಿಫೈನ್, ಸಲೀಂ ಸಿಎಂ, ಝಮೀರ್ ಉಳ್ಳಾಲ, ಶಂಶುದ್ದೀನ್ ಕುಕ್ಕಾಜೆಯಾಗಿ ಚುನಾವಣೆಯಲ್ಲಿ ಆಯ್ಕೆಯಾದರು.

ಜೊತೆ‌ ಕಾರ್ಯದರ್ಶಿಗಳಾಗಿ ಹಾರಿಸ್ ಜಿ‌ಎಸ್‌ಕೆ, ಶಫೀಕ್ ಮಲ್ಲೇಶ್ವರ, ಶಿಹಾಬ್ ಕಾಟಿಪಳ್ಳ , ಅಯ್ಯೂಬ್ ಕೋರಮಂಗಲ , ಸವಾದ್ ಆರ್.ಟಿ ನಗರ ಆಯ್ಕೆ ಆದರು.

ಸಂಘಟನಾ ಕಾರ್ಯದರ್ಶಿಗಳಾಗಿ ಆಸಿಫ್ ಪಿ.ಕೆ,ರಹೀಮ್ ಚಿಕ್ಕಪೇಟೆ,ಹಾರಿಸ್ ಬೆಳ್ಮಾ, ಶಬೀರ್ ಪರ್ಫ್ಯೂಮ್, ಹಾರಿಸ್ ಬೆಂಗಾರ್, ರಫೀಕ್ ಮಠ , ಸಲೀಂ‌ ಮೂಡಿಗೆರೆ,ಯೂಸುಫ್ ಮಾರ್ಥಲ್ಲಿ ಆಯ್ಕೆಯಾದರು

ವಿವಿಧ ವಿಭಾಗಗಳ ಕಾರ್ಯದರ್ಶಿಗಳ ಆಯ್ಕೆ ಪ್ರಕ್ರಿಯೆಯಲ್ಲಿ-ಮಾಧ್ಯಮ ಕಾರ್ಯದರ್ಶಿಯಾಗಿ ನವಾಝ್ ಅಹ್ಮದ್, ಸೋಷಿಯಲ್ ಮೀಡಿಯಾ ಕಾರ್ಯದರ್ಶಿಯಾಗಿ ಬಶೀರ್ ಅಡ್ಯನಡ್ಕ, ಶಿಕ್ಷಣ ಕಾರ್ಯದರ್ಶಿಯಾಗಿ ಅಡ್ವೊಕೇಟ್ ರಾಶಿಫ್, ವೈದ್ಯಕೀಯ ವಿಭಾಗದ ಕಾರ್ಯದರ್ಶಿಯಾಗಿ ರಫೀಕ್ ಪಾನೇಲ, ಕ್ರೀಡಾ ವಿಭಾಗದ ಕಾರ್ಯದರ್ಶಿಯಾಗಿ ಬದ್ರುದ್ದೀನ್ ಇಂದಬೆಟ್ಟು, ಸಾರ್ವಜನಿಕ ಸಂಪರ್ಕ ಕಾರ್ಯದರ್ಶಿಯಾಗಿ ಅನ್ವರ್ ಎಂಪೈರ್, ಉದ್ಯಮ ವಿಭಾಗದ ಕಾರ್ಯದರ್ಶಿಯಾಗಿ ಮಾಝಿನ್ ಕಾವಲಕಟ್ಟೆ, ಕಾನೂನು ಕಾರ್ಯದರ್ಶಿಯಾಗಿ ಅಬ್ಬಾಸ್ ಸಿಪಿ, ಕಲ್ಚರಲ್ ಕಾರ್ಯದರ್ಶಿಯಾಗಿ ಉಬೈದ್, ಆಫೀಸ್ ಕಾರ್ಯದರ್ಶಿಯಾಗಿ ಇರ್ಷಾದ್ ವೇಣೂರು, ಹಾಗು ಲೆಕ್ಕ ಪರಿಶೋಧಕರಾಗಿ ಅಲ್ತಾಫ್ ಕಟ್ಟೆ, ಹುಸೈನ್ ಆತೂರು ಸರ್ವಾನುಮತದಿಂದ ಆಯ್ಕೆಯಾದರು.