Flash News

ಉಡುಪಿ: ಕ್ರಿಕೆಟಿಗ , ಸಂಘಟಕ ಸಮೀರ್ ಶರೀಫ್ ಅಲ್ಪಕಾಲದ ಅಸೌಖ್ಯದಿಂದ ನಿಧನ

ಕಟಪಾಡಿ: ಕ್ರಿಕೆಟಿಗ , ಸಂಘಟಕ ಉದ್ಯಾವರ ಪಾಂದೆ ನಿವಾಸಿ ಸಮೀರ್ ಶರೀಫ್ (43) ಸೋಮವಾರ ಬೆಳಿಗ್ಗೆ ಅಲ್ಪಕಾಲದ ಅಸೌಖ್ಯದಿಂದ ನಿಧನರಾದರು.

ಅದ್ಭುತ ಕ್ರಿಕೆಟಿಗ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಉದ್ಯಾವರ ಫ್ರೆಂಡ್ಸ್ ಸರ್ಕಲ್ ಇದರ ಸಕ್ರಿಯ ಸದಸ್ಯ, ಉದ್ಯಾವರ ಮೊಹಿಯುದ್ದೀನ್ ಜುಮ್ಮಾ ಮಸೀದಿ ಜಮಾತಿನ ಸದಸ್ಯ, ಸಮೀ‌ರ್ ಶರೀಫ್‌ ಪಾಂದೆ ದುಬೈಯಲ್ಲಿ ಉದ್ಯೋಗಿಯಾಗಿದ್ದು ದುಬೈ ಕನ್ನಡ ಸಂಘ, ಬ್ಯಾರಿ ಸಂಘಟನೆ ಸಾಹಿತಿ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಸಕ್ರಿಯ ಸದಸ್ಯರಾಗಿ ಸಮಾಜ ಸೇವಕರಾಗಿ ಗುರುತಿಸಿಕೊಂಡಿದ್ದರು.

ಮೃತರು ಪತ್ನಿ, ಪುತ್ರ, ಪುತ್ರಿಯನ್ನು ಅಗಲಿರುತ್ತಾರೆ.

ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಮಾಜಿ ಶಾಸಕ ವಿನಯ್ ಕುಮಾರ್ ಸೊರಕೆ ಸಹಿತ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ