Flash News

ಗಲ್ಫ್‌ ದೇಶದಲ್ಲಿರುವ ಭಾರತೀಯರಿಗೆ ನೋಟು ಬದಲಾವಣೆ ಸಂಕಷ್ಟ!

ದುಬೈ: ₹2,000 ನೋಟುಗಳ ಆಯಸ್ಸು ಇನ್ನೇನು ಕೆಲವೇ ತಿಂಗಳಲ್ಲಿ ಖತಂ ಆಗಲಿದೆ. 2000 ರೂ. ನೋಟು ಚಲಾವಣೆ ಸ್ಥಗಿತಗೊಳಿಸಿ, ವಾಪಸ್ ಪಡೆಯಲು ಬ್ಯಾಂಕ್‌ಗಳಿಗೆ ಆರ್‌ಬಿಐ ಆದೇಶ ನೀಡಿದೆ. ಈ ನಡುವೆ ವಿದೇಶದಲ್ಲಿ ನೆಲೆಸಿರುವ ಭಾರತ ಮೂಲದ ಪ್ರಜೆಗಳಿಗೆ ₹2,000 ನೋಟುಗಳೇ ಟೆನ್ಷನ್ ಕೊಡ್ತಿವೆ. ತವರು ಬಿಟ್ಟು ಬೇರೆ ದೇಶಕ್ಕೆ ಉದ್ಯೋಗಕ್ಕಾಗಿ ಹೋದವರು & ಪ್ರವಾಸಕ್ಕೆ ಹೋದವರು ಪರದಾಡುತ್ತಿದ್ದು, ಆ ಬಗ್ಗೆ ಮಾಹಿತಿ ಇಲ್ಲಿದೆ.

ಅಂದಹಾಗೆ ಭಾರತದಿಂದ ಸಾಕಷ್ಟು ಜನ ವಿವಿಧ ಕಾರಣಗಳಿಗೆ ಗಲ್ಫ್ ರಾಷ್ಟ್ರಗಳಿಗೆ ತೆರಳುತ್ತಾರೆ. ಆದರೆ ಹೀಗೆ ತೆರಳಿದ ಭಾರತೀಯ ಪ್ರಜೆಗಳಿಗೆ ₹2,000 ನೋಟುಗಳನ್ನ ವಿನಿಮಯ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಭಾರತ ಸರ್ಕಾರವು ₹2,000 ನೋಟುಗಳ ಬದಲಾವಣೆಗೆ ಅನುಸರಿಸುತ್ತಿರುವ ನಿಯಮದ ಬಗ್ಗೆ ಗಲ್ಫ್ ರಾಷ್ಟ್ರಗಳ ಬ್ಯಾಂಕ್‌ಗಳಿಗೆ ಯಾವುದೇ ಮಾಹಿತಿ ಇಲ್ಲ. ಇದೇ ಕಾರಣಕ್ಕೆ ಭಾರತೀಯರು ತಮ್ಮ ಬಳಿ ಇರುವ ₹2,000 ನೋಟನ್ನ ವಿನಿಮಯ ಮಾಡಿಕೊಳ್ಳಲು ಆಗುತ್ತಿಲ್ಲ. ದೇಶ ಬಿಟ್ಟು ಬೇರೆ ದೇಶಕ್ಕೆ ಹೋದವರು ಪರದಾಡುತ್ತಿದ್ದಾರೆ.

ಕಂತೆ ಕಂತೆ ನೋಟ್ ಇದ್ದರೂ ಪ್ರಯೋಜನ ಆಗ್ತಿಲ್ಲ! ಹೌದು, ಗಲ್ಫ್ ರಾಷ್ಟ್ರಗಳಿಗೆ ಪ್ರವಾಸಕ್ಕೆ ಅಂತಾ ಹೋದವರು ಈಗ ಅಲ್ಲಿನ ರೂಲ್ಸ್ ಕೇಳಿ ಸುಸ್ತಾಗಿದ್ದಾರೆ. ಗಲ್ಫ್ ದೇಶಗಳ ಬ್ಯಾಂಕ್‌ಗಳಲ್ಲಿ ಭಾರತದ ₹2,000 ನೋಟುಗಳನ್ನ ಪಡೆಯದಂತೆ ಆಡಳಿತ ಮಂಡಳಿ ಸೂಚನೆ ನೀಡಿದೆಯಂತೆ. ಇದೇ ಕಾರಣಕ್ಕೆ ಕಂತೆ ಕಂತೆ ನೋಟ್ ಇದ್ದರೂ ಪ್ರಯೋಜನ ಆಗುತ್ತಿಲ್ಲ. ಜೊತೆಗೆ ಹಣ ವಿನಿಮಯ ಮಾಡಿಕೊಳ್ಳೋದಕ್ಕೂ ಭಾರತ ಮೂಲದ ಪ್ರಜೆಗಳು ಪರದಾಡ್ತಿದ್ದಾರೆ ಅದ್ರಲ್ಲೂ ಪ್ರವಾಸಕ್ಕೆ ಅಂತಾ ಹೋದವರು ಮುಂದೆ ಏನು ಮಾಡ್ಬೇಕು ಅನ್ನೋದು ತೋಚದೆ ಕೂರುವಂತಾಗಿದೆ. ಯಾಕಂದ್ರೆ ಗಲ್ಫ್ ರಾಷ್ಟ್ರಗಳ ಬ್ಯಾಂಕ್ ಸಿಬ್ಬಂದಿ ಇವರ ಮನವಿಗೆ ಪ್ರತಿಕ್ರಿಯೆ ನೀಡುತ್ತಿಲ್ಲವಂತೆ. ಗಲ್ಫ್‌ಗೆ ಸೂಚನೆ ನೀಡುತ್ತಾ ಆರ್‌ಬಿಐ? ಒಟ್ನಲ್ಲಿ ₹2,000 ನೋಟುಗಳ ಬದಲಾವಣೆ ವಿಚಾರ ಭಾರತದಲ್ಲಿ ನೆಲೆಸಿದವರಿಗೆ ಮಾತ್ರವಲ್ಲ, ವಿದೇಶದಲ್ಲಿ ನೆಲೆಸಿದ ಭಾರತ ಮೂಲದ ಪ್ರಜೆಗಳಿಗೂ ಟೆನ್ಷನ್ ಕೊಡುತ್ತಿದೆ. ಅದರಲ್ಲೂ ಪ್ರವಾಸಕ್ಕಾಗಿ ಗಲ್ಫ್ ದೇಶಗಳಿಗೆ ಹೋದವರು ಅಲ್ಲಿ ಏನು ಮಾಡಬೇಕು, ಪರಿಸ್ಥಿತಿ ಹೇಗೆ ನಿಭಾಯಿಸಬೇಕು ಅಂತಾ ಪರದಾಡುತ್ತಿದ್ದಾರೆ. ಕೈಯಲ್ಲಿ ಕಂತೆ ಕಂತೆ ಕಾಸು ಇದ್ರೂ ಪ್ರಯೋಜನಕ್ಕೆ ಬರುತ್ತಿಲ್ಲ. ಹೀಗಾಗಿ ಗಲ್ಫ್ ದೇಶಗಳ ಬ್ಯಾಂಕ್‌ಗಳಿಗೆ ಭಾರತ ಸರ್ಕಾರ ಹಾಗೂ ಆರ್‌ಬಿಐ ಸೂಕ್ತವಾದ ಸೂಚನೆ ನೀಡಬೇಕು ಅಂತಾ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಳ್ಳುತ್ತಿದ್ದಾರೆ. ಸೂಚನೆ ಸಿಕ್ಕ ನಂತರವಾದ್ರೂ ಗಲ್ಫ್ ದೇಶದ ಬ್ಯಾಂಕ್‌ಗಳು ತಮ್ಮ ನಿಲುವು ಬದಲಿಸಬಹುದು.