Flash News

Navaratri 2025 | ನವರಾತ್ರಿ: ಸಂಸ್ಕೃತಿಯ ಬೆಳಕು

ದುರ್ಗಾಪೂಜೆಯನ್ನಾಗಲೀ ಯಾರು ಬೇಕಾದರೂ ಆಚರಿಸಬಹುದು ಎಂದು ಪುರಾಣಗಳು ಸಾರುತ್ತವೆ. ಮಹಾಕಾಳೀ, ಮಹಾಲಕ್ಷ್ಮೀ ಮತ್ತು ಮಹಾಸರಸ್ವತೀ ಎಂಬ ಮೂರು ರೂಪಗಳಲ್ಲಿ ಆರಾಧಿಸಲ್ಪಡುವ ದೇವಿಯು ತ್ರಿಗುಣಗಳ (ಸಾತ್ವಿಕ, ರಾಜಸ ಮತ್ತು ತಾಮಸಿಕ) ಸಮನ್ವಯದ ಪ್ರತೀಕವಾಗಿದ್ದಾಳೆ.

ನವರಾತ್ರಿಯಲ್ಲಿ ಮಹಾನವಮಿಗೆ ಹೆಚ್ಚಿನ ಮಾನ್ಯತೆ ಇದ್ದು, ಆ ದಿನ ಹೆಣ್ಣುಮಕ್ಕಳನ್ನು ಪೂಜಿಸಿದರೆ ದೇವಿಯು ಅತ್ಯಂತ ಸಂತುಷ್ಟಳಾಗುತ್ತಾಳೆ ಎಂದು ಕಾಳಿಕಾಪುರಾಣ ಹೇಳುತ್ತದೆ. ಈ ಹಬ್ಬ ಶಕ್ತಿಸ್ವರೂಪಿಣಿಯರಾದ ಸ್ತ್ರೀಯರದೇ ಪರ್ವ. ನವರಾತ್ರಿಯು ಕ್ಷಾತ್ರಪರಂಪರೆಯನ್ನು (ಕ್ಷತ್ರಿಯ ಸಂಪ್ರದಾಯ) ಜಾಗೃತವಾಗಿಡುವುದರಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಹಿಂದೆ ರಾಜರು ಶಕ್ತಿಯನ್ನು ಆರಾಧಿಸಿ, ಆನಂತರ ಯುದ್ಧಕ್ಕೆ ಹೊರಡುತ್ತಿದ್ದರು. ಹಾಗೆಯೇ, ಜೀವನೋಪಾಯಕ್ಕೆ ಸಹಾಯ ಮಾಡುವ ರೈತನ ನೇಗಿಲು ಮತ್ತು ಬರಹಗಾರನ ಲೇಖನಿಯಂತಹ ಆಯುಧಗಳನ್ನೂ ಪೂಜಿಸಲಾಗುತ್ತದೆ.