Flash News

ಸುಜೀರು ಪ್ರೌಢ ಶಾಲೆಯಲ್ಲಿ ಮನೋಹರ ಶೆಟ್ಟಿ ಬೀಳ್ಕೊಡುಗೆ ಸಮಾರಂಭ

ಮಾರಿಪಳ್ಳ: ಸುಜೀರು ಪ್ರೌಢ ಶಾಲೆಯಲ್ಲಿ ವರ್ಗಾವಣೆಗೊಂಡಿರುವ ಮನೋಹರ ಶೆಟ್ಟಿ ‘ ದ್ವಿತೀಯ ದರ್ಜೆ ಸಹಾಯಕರವರ ಬೀಳ್ಕೊಡುಗೆ ಸಮಾರಂಭವು ಇಂದು ಜರುಗಿತು.

ಟುಡೆ ಫೌಂಡೇಶನ ಅಧ್ಯಕ್ಷರು ಹಾಗೂ ಶಾಲಾಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಕಾರ್ಯಾದ್ಯಕ್ಷರು, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉಮ್ಮರ್ ಫಾರೂಕ್ ಮಾತನಾಡಿ ಪ್ರಾಮಾಣಿಕ, ಕರ್ತವ್ಯನಿಷ್ಠೆ ಸರಳ ಸಜ್ಜನಿಕೆಗೆ ಪಾತ್ರರಾಗಿರುವ ಮನೋಹರ ಶೆಟ್ಟಿ ರವರು ಈ ಸಂಸ್ಥೆಯಲ್ಲಿ 16 ವರ್ಷ 6 ತಿಂಗಳು ಸೇವೆ ಸಲ್ಲಿಸಿ ಬೀಳ್ಕೊಂಡು ಸರಕಾರಿ ಪ್ರೌಢ ಶಾಲೆ ಪೊಳಲಿ ಇಲ್ಲಿಗೆ ವರ್ಗಾವಣೆಗೊಂಡಿರುತ್ತಾರೆ ತಮ್ಮ ಮುಂದಿನ ಜೀವನವು ಸುಖಕರವಾಗಿರಲಿ ಎಂದು ಹಾರೈಸಿದರು.

ಮುಖ್ಯ ಆತಿಥಿಗಳಾಗಿ ಆಗಮಿಸಿದ ಪುದು ಗ್ರಾಮ ಪಂಚಾಯತ್ ಅಧ್ಯಕ್ಷರಾದ ರಮ್ಲಾನ್ ಮಾರಿಪಳ್ಳ ಮನೋಹರ ಶೆಟ್ಟಿ ರವರ ಕೆಲಸ ಕಾರ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಮುಂದಿನ ಜೀವನವು ಸುಖಕರವಾಗಿರಲಿ ಎಂದು ಹಾರೈಸಿದರು,

ಶಾಲಾಭಿವೃದ್ಧಿ ಸಮಿತಿಯ ಸದಸ್ಯರಾದ, ನಾಝ್ಲೀನ್, ರಂಝೀನಾ, , ವಸಂತಿ ಉಪಸ್ಥಿತರಿದ್ದರು. ದ.ಕ.ಜಿ.ಪ ಹಿ ಪ್ರಾ ಶಾಲೆ ಸುಜೀರು ಇಲ್ಲಿಯ ಶಾಲಾಭಿವೃದ್ಧಿ ಸಮಿತಿಯ ಉಪಾಧ್ಯಕ್ಷರಾದ ಮಮಾಝ್ ಸಹಶಿಕ್ಷಕರು, ಮೌಲಾನಾ ಅಜಾದ್ ಪದವಿ ಪೂರ್ವ ಕಾಲೇಜಿನ ದ್ವಿತೀಯ ದರ್ಜೆ ಸಹಾಯಕರಾದ ಮಜೀದ್‌, ನಿವೃತ್ತ ಮುಖ್ಯಶಿಕ್ಷಕರಾದ ಶ್ರೀಮತಿ ಶಶಿಮಂಗಲಾ ವೈ, ವರ್ಗಾವಣೆಗೊಂಡ ಮತ್ತು ಸೇವಾ ನಿವೃತ್ತಗೊಂಡ ಶಿಕ್ಷಕರು ಉಪಸ್ಥಿತರಿದ್ದರು

ಜಯಪ್ರಕಾಶ್.ಕೆ.ಎಸಸ್ ಬಂಟ್ವಾಳ ತಾಲೂಕು ಸಹಶಿಕ್ಷಕ ಶಿಕ್ಷಕರ ಸಂಘದ ಖಜಾಂಚಿ, ಕೊಡ್ಕಣ್ಣು ಪ್ರೌಡ ಶಾಲೆಯ ಮುಖ್ಯಶಿಕ್ಷಕರಾದ ಶ್ರೀ ಭಾಸ್ಕರ್ ರಾವ್ ರವರು ಉಪಸ್ಥಿತರಿದ್ದರು ಸದರಿ ಶಾಲೆಯ ಶಿಕ್ಷಕರು ಅನುಭವವನ್ನು ಹಂಚಿಕೊಂಡರು ಅವರೊಂದಿಗಿನ ಒಡನಾಟದ

ಸನ್ಮಾನವನ್ನು ಸ್ವೀಕರಿಸಿ ಶ್ರೀ ಮನೋಹರ ಶೆಟ್ಟಿ ರವರು ತಮ ಮ ಅನುಭವವನ್ನು ಹಂಚಿಕೊಳ್ಳುತ್ತಾ ತಮ್ಮೊಂದಿಗೆ ಕರ್ತವ್ಯ ನಿರ್ವಹಿಸಿರುವ ಎಲ್ಲಾ ಶಿಕ್ಷಕರೊಂದಿಗಿನ ಒಡನಾಟವನ್ನು ಸ್ಮರಿಸಿಕೊಂಡರು.

ಶಾಲೆಯ ಮುಖ್ಯಶಿಕ್ಷಕರಾದ ಶ್ರಿ ಲೋಕಾನಾಯ್ಕ ಸವಾಗತ ಭಾಷಣ ಮಾಡಿದರು ಕಾರ್ಯಕ್ರಮದ ನಿರೂಪಣೆಯನ್ನು ಆತಿಥಿ ಶಿಕ್ಷಕಿ ರಂಜಿತಾ ನಿರ್ವಹಿಸಿದರು ಹಾಗೂ ಆತಿಥಿ ಶಿಕ್ಷಕಿ ಸುದೇಷ್ಣ ಧನ್ಯವಾದ ಸಲ್ಲಿಸಿದರು.