ಕೊಯಮತ್ತೂರು: ʻಬ್ರಿಟಿಷರು ನಮ್ಮಿಂದ ಸಾಂಬಾರು ಪದಾರ್ಥಗಳು ಹಾಗೂ ಅತ್ಯಮೂಲ್ಯ ವಸ್ತುವಾದ ಕೊಹಿನೂರು ಡೈಮಂಡ್ ಲೂಟಿ ಮಾಡಿದ್ದೀರಾ ಅದನ್ನು ಎಂದು ಹಿಂದಿರುಗಿಸುವಿರುʼ ಎಂದು ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಬ್ರಿಟಿಷ್ ಟೂರಿಸ್ಟ್ಗಳ ಜೊತೆ ಕೇರಳದ ಸ್ಥಳೀಯ ಮಹಿಳೆಯರು ಕ್ಯಾತೆ ತೆಗೆದ ವಿಡಿಯೋ ವೈರಲ್ ಆಗಿದೆ.
ತನ್ನ ಸಂಗಾತಿಯೊಂದಿಗೆ ಏಷ್ಯಾದಾದ್ಯಂತ ಬ್ಯಾಕ್ಪ್ಯಾಕ್ ಪ್ರವಾಸದಲ್ಲಿರುವ ಬ್ರಿಟಿಷ್ ಪ್ರವಾಸಿ ಎಮ್ಮಾ ಎಂಬುವವರು, ಕೇರಳಕ್ಕೆ ತೆರಳಿದ್ದ ವೇಳೆ ತಮಗಾದ ಮುಜುಗರ ಪ್ರಕರಣವನ್ನು ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ. ಕೇರಳದ ಮಹಿಳೆಯರು ವಸಾಹತು ಶಾಹಿ ಸಮಯದಲ್ಲಾಗಿದ್ದ ಲೂಟಿ ಬಗ್ಗೆ ನೆನಪಿಸಿದರು ಬಗ್ಗೆ ಪೋಸ್ಟ್ನಲ್ಲಿ ತಿಳಿಸಿದ್ದಾರೆ.
ಇದು ವಿಚಿತ್ರ ಘಟನೆ ಈ ಹಿಂದೆ ಇಂತಹ ಅನುಭವ ನನಗೆಂದು ಆಗಿರಲಿಲ್ಲ. ಮಹಿಳೆಯರು ಕೇಳಿದ ಪ್ರಶ್ನೆಗೆ ಉತ್ತರಿಸಲು ಆಗಲಿಲ್ಲ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಎಮ್ಮಾ ಪೋಸ್ಟ್ಗೆ ನೆಟ್ಟಿಗರು ಕಾಮೆಂಟ್ ಮಾಡಿದ್ದು, ಮಹಿಳೆಯರು ಕೇಳಿದ್ದು ಸರಿ ಇದೆ ಎಂದು ಹೇಳಿದ್ದಾರೆ.
ʻಕೇರಳ ಮಹಿಳೆಯರು ನಮ್ಮ ಜೊತೆ ಮಾತನಾಡಿದ ಕ್ಷಣವು ಅತ್ಯಂತ ಮುಜುಗರಕ್ಕೆ ಈಡಾಗುವಂತೆ ಮಾಡಿತ್ತು. ಜೊತೆಗೆ ನಮ್ಮ ಕಣ್ಣು ತೆರೆಸುವಂತಿತ್ತು. ನಾವು ಕೇರಳದಲ್ಲಿ ನಿಂತಿದ್ದಾಗ, ಮಹಿಳೆಯೊಬ್ಬರು ನಾವು ಎಲ್ಲಿಂದ ಬಂದವರು ಎಂದು ಕೇಳಿದರು. ನಾವು ಇಂಗ್ಲೆಂಡ್ ಎಂದು ಹೇಳಿದ ತಕ್ಷಣ, ಬ್ರಿಟಿಷರು ಭಾರತವನ್ನು ಲೂಟಿ ಮಾಡಿದರು. ಆಭರಣಗಳು, ಮಸಾಲೆಗಳು, ಎಲ್ಲವನ್ನೂ ಕೊಂಡೊಯ್ದರು ಇದೆಲ್ಲ ಎಂದು ಹಿಂದಿರುಗಿಸುವಿರಿ ಎಂದು ಕೇಳಿದರು. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾವು ಪ್ರಯಾಣಿಸುವಾಗ ಅನುಭವಿಸಿದ ಅತ್ಯಂತ ಮುಜುಗರದ ಕ್ಷಣಗಳಲ್ಲಿ ಇದೂ ಒಂದುʼ ಎಂದು ಹೇಳಿಕೊಂಡಿದ್ದಾರೆ.



