ಉತ್ತರ ಪ್ರದೇಶ: ಮದುವೆ ಮನೆಯ ಊಟದಲ್ಲಿ ಚಿಕನ್ ಫ್ರೈ ಸರಿಯಾಗಿ ಸಿಗಲಿಲ್ಲ ಎಂಬ ಕಾರಣಕ್ಕೆ ಗಂಡಿನ ಕಡೆಯವರು ಜಗಳ ಶುರು ಮಾಡಿದ್ದು ಕೊನೆಗೆ ಕೋಳಿ ಜಗಳ ದೊಡ್ಡದಾಗಿ ಮದುವೆ ಮನೆ ಯುದ್ಧ ಭೂಮಿಯಾಗಿ ಮಾರ್ಪಟ್ಟ ವಿಚಿತ್ರ ಘಟನೆಯೊಂದು ಉತ್ತರ ಪ್ರದೇಶದ ಬಿಜ್ನೋರ್ ಜಿಲ್ಲೆಯಲ್ಲಿ ನಡೆದಿದ್ದು ಇದೀಗ ಇದಕ್ಕೆ ಸಂಬಂಧಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಅಂದಹಾಗೆ ಎರಡು ದಿನಗಳ ಹಿಂದೆ ಉತ್ತರಪ್ರದೇಶದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಮೊದಲಿಗೆ ಹೆಣ್ಣಿನ ಕಡೆಯವರು ಗಂಡಿನ ಕಡೆಯವರಿಗೆ ಸರಿಯಾದ ಪ್ರಮಾಣದಲ್ಲಿ ಕೋಳಿ ಖಾದ್ಯ ಬಡಿಸಲಿಲ್ಲ ಎಂದು ಆರೋಪಿಸಿದೆ. ಇದಕ್ಕೆ ಕೂಡಲೇ ಸ್ಪಂದಿಸಿದ ಹೆಣ್ಣಿನ ಕಡೆಯವರು ಗಂಡಿನ ಕಡೆಯವರಿಗೆ ಯಾವುದೇ ರೀತಿಯಲ್ಲಿ ತೊಂದರೆ ಆಗದಂತೆ ಹೆಚ್ಚಿನ ಪ್ರಮಾಣದಲ್ಲಿ ಚಿಕನ್ ಫ್ರೈ ಬಡಿಸಿದ್ದಾರೆ, ಆದರೆ ಇಷ್ಟಕ್ಕೆ ಸುಮ್ಮನಾಗದ ಗಂಡಿನ ಕಡೆಯವರು ಹೆಣ್ಣಿನ ಕಡೆಯವರು ಸರಿಯಾಗಿ ಬಡಿಸುತ್ತಿಲ್ಲ ಎಂಬ ಕರಣ ಹಿಡಿದು ಮತ್ತೆ ಜಗಳ ಶುರು ಮಾಡಿದ್ದಾರೆ.
ಒಂದು ಕಡೆ ಮದುವೆ ನಡೆಯುತ್ತಿದ್ದರೆ ಇನ್ನೊಂದೆಡೆ ಊಟದ ವ್ಯವಸ್ಥೆ ಮಾಡಲಾಗಿತ್ತು ಇತ್ತ ಗಂಡಿನ ಕಡೆಯವರು ಹೆಣ್ಣಿನ ಕಡೆಯವರನ್ನು ದೂರಲು ಶುರು ಮಾಡುತ್ತಿದ್ದಂತೆ ಸಿಟ್ಟಿಗೆದ್ದ ಹೆಣ್ಣಿನ ಕಡೆಯವರು ಮಾತಿಗೆ ಮಾತು ಬೆಳೆಸಿ ಪರಸ್ಪತ ಕೈ ಕೈ ಮಿಲಾಯಿಸಿಕೊಂಡಿದ್ದಾರೆ, ಈ ವೇಳೆ ಕೆಲವರು ಕೈಗೆ ಸಿಕ್ಕಿದ ಕುರ್ಚಿಗಳನ್ನು ಎತ್ತಿ ಬಿಸಾಡಿದರೆ ಇನ್ನು ಕೆಲವರು ಅಲ್ಲಿದ್ದ ಆಹಾರ ಪದಾರ್ತಗಳನ್ನು ಚೆಲ್ಲಿ ವಿಕೃತಿ ಮೆರೆದಿದ್ದಾರೆ. ಒಟ್ಟಾರೆಯಾಗಿ ಮದುವೆ ಮನೆ ರಣರಂಗವಾಗಿ ಮಾರ್ಪಾಡಾಗಿತ್ತು.
ಜಗಳ ಕೈ ಮೀರುತ್ತಿದ್ದಂತೆ ಪೊಲೀಸರಿಗೆ ಮಾಹಿತಿ ನೀಡಲಾಗಿದ್ದು ಕೂಡಲೇ ಸ್ಥಳಕ್ಕೆ ಬಂದ ಪೊಲೀಸರು ಎರಡೂ ಕಡೆಯವರನ್ನು ಸಮಾಧಾನಪಡಿಸಿ ಮದುವೆ ಕಾರ್ಯ ಮುಗಿಯುವವರೆಗೂ ಅಲ್ಲೇ ಇದ್ದು ಭದ್ರತೆ ಒದಗಿಸಿದರು.
बिजनौर में शादी में चिकन फ्राई को लेकर बारातियों में भिड़ंत! मैरिज हॉल में जमकर हुई मारपीट, कई लोग घायल pic.twitter.com/YZW1nx5irk
— news for you (@newsforyou36351) November 3, 2025



