Flash News

ವೋಟ್‌ಚೋರಿ ಬಗ್ಗೆ ಮಾತಾಡೋ ರಾಹುಲ್ ಗಾಂಧಿಯದ್ದು ಚೈಲ್ಡೀಶ್ ಹೇಳಿಕೆ: ನಿಖಿಲ್ ಕುಮಾರಸ್ವಾಮಿ

ಬೆಂಗಳೂರು: ವೋಟ್‌ಚೋರಿ ಬಗ್ಗೆ ಮಾತಾಡೋ ರಾಹುಲ್ ಗಾಂಧಿಯದ್ದು ಚೈಲ್ಡೀಶ್ ಹೇಳಿಕೆ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದರು.

ರಾಹುಲ್ ಗಾಂಧಿಯಿಂದ ಮತ್ತೆ ವೋಟ್‌ಚೋರಿ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ರಾಹುಲ್ ಗಾಂಧಿಯದ್ದು ಚೈಲ್ಡೀಶ್ ಹೇಳಿಕೆ. ರಾಹುಲ್ ಗಾಂಧಿ ಕರ್ನಾಟಕದಲ್ಲಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಂಡು ವೋಟ್‌ಚೋರಿ ಆಗಿದೆ ಅಂತ ಆರೋಪ ಮಾಡಿದ್ದರು. ಬಿ.ಆರ್ ಪಾಟೀಲ್ ಆಯ್ಕೆ ಮಾಡಿರುವ ಆಳಂದ ಕ್ಷೇತ್ರದ ಬಗ್ಗೆ ಮಾತಾಡಿದ್ದರು. ರಾಹುಲ್ ಗಾಂಧಿ ವೋಟ್‌ಚೋರಿ ಆಗಿ ನಮ್ಮವರು ಸೋತಿದ್ದಾರೆ. ಬೇರೆ ಯಾರೋ ಗೆದ್ದಿದ್ದಾರೆ ಅಂತ ಕ್ಷೇತ್ರ ಪಾಯಿಂಟ್ ಮಾಡಿ ಹೇಳ್ತಿಲ್ಲ. ರಾಹುಲ್ ಗಾಂಧಿ ಏನ್ ಮಾಡ್ತಾ ಇದ್ದಾರೆ ಎಂದು ಪ್ರಶ್ನೆ ಮಾಡಿದರು.

ಬಿಹಾರ ಚುನಾವಣೆಯಲ್ಲಿ ರಾಹುಲ್ ಗಾಂಧಿ ಆರ್‌ಜೆಡಿ ಜೊತೆ ಕೈ ಜೋಡಿಸಿದ್ದಾರೆ. ಬಿಹಾರದಲ್ಲಿ ಆರ್‌ಜೆಡಿ ಮುಗಿಸಲು ರಾಹುಲ್ ಗಾಂಧಿ ಒಬ್ಬರೇ ಸಾಕು. ಅವರ ಮಾತುಗಳು,ಅವರ ಚೈಲ್ಡೀಶ್, ಬಾಲಿಶವಾದ ಹೇಳಿಕೆಗಳು ಅವರಿಬ್ಬರೇ ಬಿಹಾರ ಚುನಾವಣೆಯಲ್ಲಿ ಆರ್‌ಜೆಡಿಯನ್ನು ತೀರಿಸುತ್ತಾರೆ ಎಂದರು.