ಮಂಗಳೂರು: ಪಿ.ಎ ಕಾಲೇಜಿನ ವಿದ್ಯಾರ್ಥಿ ಮೊಹಮ್ಮದ್ ಶಾಮೀಲ್ ದಿನಾಂಕ: 17-04-2018ರಂದು ನಾಪತ್ತೆಯಾಗಿದ್ದಾನೆ.
ದಿನಾಂಕ 18–04-2018 ರಂದು ಶ್ರೀ ಅಬ್ದುಲ್ ಶರೀಪ್ (58) ವರ್ಷ, ವಾಸ: ಪ್ರಾಂಶುಪಾಲರು ಪಿ.ಎ ಕಾಲೇಜು ನಡುಪದವು ಕೈರಂಗಳ ಗ್ರಾಮ ಉಳ್ಳಾಲ ತಾಲೂಕು ದಕ್ಷಿಣ ಕನ್ನಡ ಜಿಲ್ಲೆ ರವರು ನೀಡಿದ ದೂರಿನ ಸಾರಂಶವೇನೆಂದರೆ ಪಿರ್ಯಾದಿದಾರರು ಕಾರ್ಯನಿರ್ವಹಿಸುತ್ತಿರುವ ಪಿ,ಎ ಕಾಲೇಜಿನ ವಿದ್ಯಾರ್ಥಿಯಾದ ಮೊಹಮ್ಮದ್ ಶಾಮೀಲ್ ಪ್ರಾಯ 21 ವರ್ಷ ತಂದೆ: ಸಲೀಂ ಕೆ,ಎಮ್ ವಾಸ:16/37 ಬೈತುಲ್ ಆಯಿಶಾ ಪಚ್ಚಕಾಡ್ ಕಾಸರಗೋಡು ಪೊಸ್ಟ , ಎಂಬವರು ಸುಮಾರು 07 ವರ್ಷಗಳ ಹಿಂದೆ ಪಿ.ಎ ಕಾಲೇಜಿನ ವಿದ್ಯಾರ್ಥಿಯಾಗಿದ್ದು ದಿನಾಂಕ: 17-04-2018 ರಂದು ಸಮಯ: 11:34 ಗಂಟೆಗೆ ಕಾಲೇಜಿನ ಪಾರ್ಕಿಂಗ್ ಸ್ಥಳಕ್ಕೆ ಬಂದು ಕಾಲೇಜಿನ ಒಳಗೆ ಬರದೇ ಹಾಗೂ ಮನೆಗೂ ಹೋಗದೇ ಕಾಣೆಯಾಗಿದ್ದು. ಈ ವರೆಗೂ ಅವರ ಇರುವಿಕೆಯ ಬಗ್ಗೆ ತಿಳಿಯದೇ ಇದ್ದುದರಿಂದ ಅವರನ್ನು ಪತ್ತೆ ಮಾಡಿಕೊಡಬೇಕು ಎಂಬುದಾಗಿ ನೀಡಿದ ಲಿಖಿತ ಪಿರ್ಯಾದಿಯ ಸಾರಂಶವಾಗಿದ್ದು, ಈ ಬಗ್ಗೆ ಕೊಣಾಜೆ ಪೊಲೀಸ್ ಠಾಣಾ ಮೊ.ನಂ: 83/2018, ಕಲಂ: ಗಂಡಸು ಕಾಣೆ ಯಂತೆ ಪ್ರಕರಣ ದಾಖಲಾಗಿ ತನಿಖೆಯಲ್ಲಿರುತ್ತದೆ.
ಕಾಣೆಯಾದವರ ಚಹರೆಯ ವಿವರ
- ಹೆಸರು ಮೊಹಮ್ಮದ್ ಶಾಮೀಲ್ (21)
- ತಂದೆ ಸಲೀಂ ಕೆ.ಎಮ್
- ಪ್ರಾಯ 21 ವರ್ಷ
- ಎತ್ತರ 168 CM
- ಮೈಬಣ್ಣ ಗೋಧಿ ಮೈ ಬಣ್ಣ
- ಚಹರೆ ಸಾದರಣ ಶರೀರ, ಕೋಲು ಮುಖ
- ಧರಿಸಿದ್ದ ಬಟ್ಟೆ ಕಪ್ಪು ಕುರುಚಲು ಗಡ್ಡ ಮತ್ತು ಮೀಸೆ ಹಾಗೂ ಉದ್ದ ತಲೆ ಕೂದಲು
- ತಿಳಿದಿರುವ ಭಾಷೆ ಮಾಲಯಾಳಂ, ಇಂಗ್ಲೀಷ್, ಹಿಂದಿ
ಕಾಣೆಯಾದ ಮೊಹಮ್ಮದ್ ಶಾಮೀಲ್ ಪ್ರಾಯ: 21 ವರ್ಷ, ಎಂಬವರು ಪತ್ತೆಯಾದಲ್ಲಿ ಮಾನ್ಯ ಪೊಲೀಸ್ ಆಯುಕ್ತರ ಕಛೇರಿಯ ಮಂಗಳೂರು ನಗರ ನಿಯಂತ್ರಣ ಕೊಠಡಿಗೆ ದೂರವಾಣಿ ಸಂಖ್ಯೆ 0824-2220800 ಅಥವಾ ಕೊಣಾಜೆ ಪೊಲೀಸ್ ಠಾಣೆಯ 0824-2220536, 9091873198 ,9535247535 ನೇ ಸಂಖ್ಯೆಗೆ ಮಾಹಿತಿ ನೀಡಬೇಕಾಗಿ ಕೋರಿಕೆ.


