Flash News

ಫರಂಗಿಪೇಟೆ: ಪ್ರತಿಭಟನೆಯ ಎಚ್ಚರಿಕೆ, ರಸ್ತೆ ಗುಂಡಿಗೆ ಡಾಂಬರ್

ಉಮರ್ ಫಾರೂಕ್ ಫರಂಗಿಪೇಟೆ ನಿರ್ದೇಶನ ಮೇರೆಗೆ ರಮ್ಲಾನ್ ಮಾರಿಪಳ್ಳ, ಇಶಾಮ್ ಫರಂಗಿಪೇಟೆ ನೇತೃತ್ವದಲ್ಲಿ ರಾ.ಹೆ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿತ್ತು

ಫರಂಗಿಪೇಟೆ: ಫರಂಗಿಪೇಟೆ ಪಟ್ಟಣದಿಂದ ಹತ್ತನೇ ಮೈಲಿಕಲ್ಲು ಬಳಿ ರಸ್ತೆಯಲ್ಲಿ ಗುಂಡಿಗಳು ತುಂಬಿರುವುರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಇದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ಮಾಡಿತ್ತು.


ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉಮರ್ ಫಾರೂಕ್ ಫರಂಗಿಪೇಟೆ ಅವರ ನಿರ್ದೇಶನ ಮೇರೆಗೆ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾಮ ಪಂಚಾಯತ್ ಸದಸ್ಯ ಇಶಾಮ್ ಫರಂಗಿಪೇಟೆ, ಪ್ರತಿಭಟನೆಯ ಎಚ್ಚರಿಕೆಯನ್ನು ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನವೀನ್ ಅವರ ಸಹಕಾರ ಹಾಗೂ ಗುತ್ತಿದಾರರಿಂದ ರಸ್ತೆ ಗುಂಡಿಗೆ ಶಾಶ್ವತ ಮುಕ್ತಿ ನೀಡಲಾಗಿದೆ.


ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಸದಸ್ಯ ಮೊಹಮ್ಮದ್ ಮೋನು, ದ.ಕ ಯುವ ಕಾಂಗ್ರೆಸ್ ಉಪಾಧ್ಯಕ್ಷ ಬಶೀರ್ ಕಣ್ಣೂರು, ಕರಾವಳಿ ಆಟೋ ಪಾರ್ಕ್ ಅಧ್ಯಕ್ಷ ಶಾಹುಲ್ ಹಮೀದ್, ಬದುರುದ್ದೀನ್ ಕರ್ಮಾರ್, ಶಬೀರ್ ಮೋನು, ಫಾಯಾಝ್ ಕಾನ, ಬುಕಾರಿ ಕುಂಪನಮಜಲು, ಮುಬಾರಕ್ ಫರಂಗಿಪೇಟೆ, ಮುಗರೋಡಿ ಗುತ್ತಿಗೆದಾರರು ಉಪಸ್ಥಿತರಿದ್ದರು