Flash News

ಮಂಗಳೂರಿನಲ್ಲಿ ಒಂದೇ ದಿನ ಎರಡು ಪ್ರತ್ಯೇಕ ಅಪಘಾತ: 6 ಮಂದಿ ಸಾವು

ಮಂಗಳೂರು: ಮಂಗಳೂರು ಜಿಲ್ಲೆಯಲ್ಲಿ ನ. 15ರ ಮುಂಜಾನೆ ಸಂಭವಿಸಿದ ಎರಡು ಪ್ರತ್ಯೇಕ ಅಫಘಾತಗಳಲ್ಲಿ ಒಟ್ಟು ಆರು ಮಂದಿ ಮೃತರಾಗಿದ್ದಾರೆ. ಬೆಂಗಳೂರಿನಿಂದ ಉಡುಪಿಗೆ ಹೊರಟಿದ್ದ ಇನ್ನೋವಾ ಕಾರೊಂದು ಬಂಟ್ವಾಳದ ಬಿಸಿ ರಸ್ತೆಯ ಸರ್ಕಲ್ ನಲ್ಲಿ ಅಪಘಾತಕ್ಕೀಡಾಗಿ ಅದರಲ್ಲಿದ್ದ ಮೂವರು ಸಾವನ್ನಪ್ಪಿದ್ದರೆ, ಪಣಂಬೂರು ಸಿಗ್ನಲ್ ನಲ್ಲಿ ನಡೆದ ಮತ್ತೊಂದು ಅಪಘಾತದಲ್ಲಿ ಸಿಗ್ನಲ್ ನಲ್ಲಿ ನಿಂತಿದ್ದ ವಾಹನೆಗಳಿಗೆ ಟ್ಯಾಂಕರ್ ಡಿಕ್ಕಿ ಹೊಡೆದ ಪರಿಣಾಮ ಮೂವರು ದಾರುಣವಾಗಿ ಮೃತಪಟ್ಟಿದ್ದಾರೆ.

ಬಂಟ್ವಾಳದಲ್ಲಿ ನಡೆದ ಅಪಘಾತ
ಬೆಂಗಳೂರಿನಿಂದ ಉಡುಪಿಗೆ ಶ್ರೀಕೃಷ್ಣನ ದರ್ಶನಕ್ಕೆ ಹೊರಟಿದ್ದ ಇನ್ನೋವಾ ಕಾರು, ಮಂಗಳೂರಿನ ಬಂಟ್ವಾಳ ನಗರದ ಬಿ.ಸಿ. ರೋಡ್ ನಲ್ಲಿರುವ ಸರ್ಕಲ್ ಗೆ ಡಿಕ್ಕಿ ಹೊಡೆದ ಪರಿಣಾಮ ಬೆಂಗಳೂರಿನ ಪೀಣ್ಯ ನಿವಾಸಿಗಳಾದ ರವಿ (64), ರಮ್ಯಾ (23) ಮತ್ತು ನಂಜಮ್ಮ (75) ಎಂಬ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಓರ್ವ ಸ್ಥಳದಲ್ಲೇ ಮೃತಪಟ್ಟರೆ ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇವರಲ್ಲಿ ರಮ್ಯಾ ಅವರು ಬೆಂಗಳೂರಿನ ಪೊಲೀಸ್ ಅಧಿಕಾರಿಯೊಬ್ಬರ ಪತ್ನಿ ಎಂದು ತಿಳಿದುಬಂದಿದೆ. ಕಾರಿನಲ್ಲಿದ್ದ ಕೀರ್ತಿ, ಸುಶೀಲಾ, ಬಿಂದು ಮತ್ತು ಪ್ರಶಾಂತ್ ಅವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕ ಸುಬ್ರಹ್ಮಣ್ಯ ಮತ್ತು ಕಿರಣ್ ಎಂಬುವರು ಸಣ್ಣ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ.

ಈ ದುರ್ಘಟನೆ 2025ರ ನ. 15ರ ಮುಂಜಾನೆ ಸುಮಾರು 4.40ರ ಸುಮಾರಿಗೆ ನಡೆದಿದೆ. ಕಾರಿನಲ್ಲಿದ್ದ ಇತರ ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದು, ಚಾಲಕ ಸೇರಿದಂತೆ ಇಬ್ಬರು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ. ಅಪಘಾತಕ್ಕೆ ಅವೈಜ್ಞಾನಿಕವಾಗಿ ನಿರ್ಮಿಸಲಾದ ಸರ್ಕಲ್ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಈ ದುರ್ಘಟನೆ ನವೆಂಬರ್ 15, 2025 ರಂದು ಮುಂಜಾನೆ ಸುಮಾರು 4.40ರ ಸುಮಾರಿಗೆ ನಡೆದಿದೆ. ಬೆಂಗಳೂರಿನಿಂದ ಉಡುಪಿಗೆ ಶ್ರೀಕೃಷ್ಣ ಮಠಕ್ಕೆ ದೇವರ ದರ್ಶನಕ್ಕೆಂದು ಒಂಬತ್ತು ಮಂದಿ ಇನ್ನೋವಾ ಕಾರಿನಲ್ಲಿ ಹೊರಟಿದ್ದರು. ನೇತ್ರಾವತಿ ಸೇತುವೆ ದಾಟಿ ಬಿ.ಸಿ. ರೋಡ್‌ಗೆ ತಲುಪುವ ಮೊದಲೇ, ಹೆದ್ದಾರಿ ಮಧ್ಯೆ ಇದ್ದ ಸರ್ಕಲ್‌ಗೆ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ. ಒಬ್ಬರು ಸ್ಥಳದಲ್ಲೇ ಮೃತಪಟ್ಟರೆ, ಉಳಿದಿಬ್ಬರು ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಮಂಗಳೂರು ಹೊರವಲಯದ ಪಣಂಬೂರು ಜಂಕ್ಷನ್ ಬಳಿಯೂ ಮತ್ತೊಂದು ಭೀಕರ ಅಪಘಾತ ಸಂಭವಿಸಿದೆ. ಸಿಗ್ನಲ್‌ನಲ್ಲಿ ವಾಹನಗಳು ನಿಂತಿದ್ದ ವೇಳೆ, ವೇಗವಾಗಿ ಬಂದ ಟ್ಯಾಂಕರ್ ಹಿಂಬದಿಯಿಂದ ಡಿಕ್ಕಿ ಹೊಡೆದು ಅಪಘಾತಗಳ ಸರಮಾಲೆ ಉಂಟಾಗಿದೆ. ಮುಂಭಾಗದಲ್ಲಿ ಒಂದು ಟ್ಯಾಂಕರ್ ನಿಂತಿತ್ತು. ಅದರ ಹಿಂದೆಯೇ ಕಾರು ಮತ್ತು ಆಟೊರಿಕ್ಷಾ ನಿಂತಿದ್ದವು. ಹಿಂಬದಿಯಿಂದ ವೇಗವಾಗಿ ಬಂದ ಮತ್ತೊಂದು ಟ್ಯಾಂಕರ್ ಮೊದಲು ಆಟೊರಿಕ್ಷಾಗೆ ಡಿಕ್ಕಿಯಾಗಿ, ನಂತರ ಅದನ್ನು ಮುಂದೆ ನಿಂತಿದ್ದ ಕಾರಿನ ಮೇಲೆ ತಳ್ಳಿದೆ. ಬಳಿಕ ಕಾರು ಮತ್ತು ರಿಕ್ಷಾವನ್ನು ದಾಟಿ ಮುಂಭಾಗದ ಟ್ಯಾಂಕರ್‌ಗೆ ಢಿಕ್ಕಿ ಹೊಡೆದಿದೆ ಎಂದು ತಿಳಿದುಬಂದಿದೆ.

ಈ ಭೀಕರ ಘಟನೆಯಲ್ಲಿ ರಿಕ್ಷಾದಲ್ಲಿದ್ದ ಇಬ್ಬರು ಪ್ರಯಾಣಿಕರು ಹಾಗೂ ರಿಕ್ಷಾ ಚಾಲಕ ಸ್ಥಳದಲ್ಲೇ ಪ್ರಾಣ ಕಳೆದುಕೊಂಡಿದ್ದಾರೆ. ಮೃತದೇಹಗಳನ್ನು ನಗರದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಸಿಗ್ನಲ್‍ನಿಂದ ಸ್ವಲ್ಪ ಮುಂದೆ, ಪೆಟ್ರೋಲ್ ಬಂಕ್ ಎದುರುಗಡೆ ಇರುವ BDC ಕಟ್ಟಡದ ಮುಂಭಾಗ ಈ ಘಟನೆ ನಡೆದಿದೆ.