ಚಿಕ್ಕಮಗಳೂರು: ಚಿರತೆ ದಾಳಿಯಿಂದ 5 ವರ್ಷದ ಸಾವನ್ನಪ್ಪಿರುವುದು ಕಡೂರು ತಾಲೂಕಿನ ನವಿಲೇಕಲ್ ಗುಡ್ಡದಲ್ಲಿ ನಡೆದಿದೆ.
ಚಿರತೆ ದಾಳಿಯಿಂದ ಸಾವನ್ನಪ್ಪಿದ ಬಾಲಕಿಯನ್ನು ಸಾನ್ವಿ (5) ಎಂದು ಗುರುತಿಸಲಾಗಿದೆ. ಮನೆಯ ಹಿಂದೆ ಕೊಟ್ಟಿಗೆಯಲ್ಲಿ ಮಗುವಿನ ಮೇಲೆ ಚಿರತೆ ದಾಳಿ ಮಾಡಿದೆ. ಈ ವೇಳೆ ಮಗು ಚೀರಾಟ ಕೇಳಿ ಪೋಷಕರು ಬಂದಿದ್ದಾರೆ. ಅವರ ಎದರುರಲ್ಲೇ ಚಿರತೆ ಮಗುವನ್ನು ಕಾಡಿಗೆ ಹೊತ್ತೊಯ್ದಿದೆ
ಸ್ಥಳಿಯರು ಹುಡುಕಾಡಿದಾಗ ಕಾಡಂಚಿನಲ್ಲಿ ಮಗುವಿನ ಮೃತದೇಹ ಪತ್ತೆಯಾಗಿದೆ. ಬೀರೂರು ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ


