Flash News

‘ನಿಮ್ಮನ್ನು ಮರೆಯಬಹುದು, ಶಾರುಖ್​ನಲ್ಲ’; ವಿವೇಕ್ ಹೇಳಿಕೆಗೆ ಫ್ಯಾನ್ಸ್ ತಿರುಗೇಟು

ಮುಂಬೈ: ಮುಂದಿನ ಕೆಲವು ದಶಕಗಳಲ್ಲಿ ಶಾರುಖ್ ಖಾನ್ ಅವರ ಹೆಸರು ಅಳಿಸಿ ಹೋಗಬಹುದು. ರಾಜ್​ ಕಪೂರ್ ಅವರಂತಹ ಹೀರೋಗಳು ಯಾರು ಎಂಬುದೇ ತಿಳಿಯುವುದಿಲ್ಲ ಎಂದು ವಿವೇಕ್ ಓಬೆರಾಯ್ ಅಭಿಪ್ರಾಯ ಹೊರಹಾಕಿದ್ದಾರೆ.

‘1960ರ ಸಿನಿಮಾದ ಬಗ್ಗೆ ಕೇಳಿದರೆ ಇಂದು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಬಹುಶಃ 2050ರಲ್ಲಿ, ಜನರು ಶಾರುಖ್ ಖಾನ್ ಯಾರು ಎಂದು ಕೇಳಬಹುದು’ ಎಂದು ಅವರು ಹೇಳಿದ್ದಾರೆ.

ಇದನ್ನು ಅನೇಕರು ಒಪ್ಪಿಕೊಂಡಿದ್ದಾರೆ. ಇನ್ನೂ ಕೆಲವರು ಇದನ್ನು ಅಲ್ಲಗಳೆದಿದ್ದಾರೆ. ಇನ್ನು 100 ವರ್ಷಗಳು ಕಳೆದರೂ ಶಾರುಖ್ ಖಾನ್ ಹೆಸರು ಮನದಲ್ಲಿ ಇರುತ್ತದೆ ಎಂದು ಅನೇಕರು ಹೇಳಿದ್ದಾರೆ. 2023ರಲ್ಲಿ ಶಾರುಖ್ ಖಾನ್ ಅವರು ಬ್ಯಾಕ್ ಟು ಬ್ಯಾಕ್ ಹಿಟ್ ನೀಡಿದರು. ‘ಪಠಾಣ್’, ‘ಜವಾನ್’, ‘ಡಂಕಿ’ ರೀತಿಯ ಸಿನಿಮಾಗಳನ್ನು ಅವರು ಕೊಟ್ಟರು. ಈ ಮೂರು ಸಿನಿಮಾಗಳು ವಿಶ್ವಾದ್ಯಂತ 2600 ಕೋಟಿ ರೂಪಾಯಿ ಗಳಿಕೆ ಮಾಡಿವೆ. ಇನ್ನು ರಾಜ್ ಕಪೂರ್ ಹೆಸರು ಅನೇಕರಿಗೆ ಈಗಲೂ ತಿಳಿದಿದೆ ಎಂದು ಕೆಲವರು ಹೇಳಿದ್ದಾರೆ.

ಇನ್ನು, ವಿವೇಕ್ ಸಿನಿಮಾ ವಿಚಾರ ಹೇಳುವುದಾದರೆ ಅವರು ಚಿತ್ರರಂಗದಲ್ಲಿ ಅಷ್ಟಾಗಿ ಆ್ಯಕ್ಟೀವ್ ಆಗಿಲ್ಲ. ಅವರು ಅಲ್ಲೊಂದು ಇಲ್ಲೊಂದು ಸಿನಿಮಾ ಮಾಡುತ್ತಿದ್ದಾರೆ. ಅವರ ಜನಪ್ರಿಯತೆ ಮೊದಲಿನಷ್ಟು ಇಲ್ಲ. ಸಲ್ಮಾನ್ ಖಾನ್ ಅವರಿಗೆ ವೃತ್ತಿ ಜೀವನ ಹಾಳಾಯಿತು ಎಂಬುದು ಅನೇಕರ ನಂಬಿಕದೆ