ಹಾಸನ: ನಗರದ ವಲ್ಲಬಾಯಿ ರಸ್ತೆಯ ಶ್ರೀ ವಿಜಯಲಕ್ಷ್ಮಿ ಅಮ್ಮನವರ ಹಿಂದೂ ದೇವಸ್ಥಾನಕ್ಕೆ ಮುಸಲ್ಮಾನ ಬಾಂಧವರಾದ ಹಾಸನ ಮಹಾನಗರ ನಗರಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ:26ರ ಸದಸ್ಯೆ ಅಲ್ ಫಿಯಾ ಫೈಯಾಜ್ ಅವರು ತಮ್ಮ ವೈಯಕ್ತಿಕ ಕೊಡುಗೆಯಾಗಿ ದೇವಿಯ ಹೆಸರಿನ ಆಕರ್ಷಕ ವಿದ್ಯುತ್ ನಾಮ ಫಲಕ ಆಳವಡಿಸಿಕೊಟ್ಟು ಸೌಹಾರ್ಧತೆ ಮೆರೆದಿದ್ದಾರೆ.
ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗು ಭಕ್ತಾದಿಗಳು ಈ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.


