ತ್ರಿಪುರ: ಮಸೀದಿಯ ಮೈಕ್ನಿಂದ ಕೂಗಲಾದ ಘೋಷಣೆಯಿಂದ ಏಳು ಮಂದಿಯ ಜೀವ ಉಳಿದ ಮಾನವೀಯ ಘಟನೆ ತ್ರಿಪುರದಲ್ಲಿ ನಡೆದಿದೆ.
ಏಳು ಮಂದಿ ಇದ್ದ ಕಾರು ಅಸ್ಸಾಂ ತ್ರಿಪುರ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುತ್ತಿದ್ದಾಗ ರಸ್ತೆ ಬದಿಯ ನದಿಗೆ ಉರುಳಿ ಬಿದ್ದಿದೆ. ಡಿಸೆಂಬರ್ 1ರ ಬೆಳಿಗ್ಗೆ 4ಗಂಟೆ. ಶ್ರೀ ಭೂಮಿ ಜಿಲ್ಲೆಯ ನೀಲಾಂಬಜಾರ್ ಎಂಬಲ್ಲಿಯ ಬಹದ್ದೂರ್ ಪುರ ಜುಮಾ ಮಸೀದಿಯ ಪಕ್ಕ ಈ ಘಟನೆ ನಡೆದಿದೆ.
ಜುಮಾ ಮಸೀದಿಯ ಇಮಾಮ್ ಮತ್ತು ಮದರಸ ಟೀಚರ್ ಆಗಿರುವ ಮೌಲಾನ ಅಬ್ದುಲ್ ಬಾಸಿತ್ ಅವರಿಗೆ ಭಾರಿ ದೊಡ್ಡ ಶಬ್ದ ಕೇಳಿಸುತ್ತದೆ. ತಕ್ಷಣ ಅವರು ಜಾಗೃತರಾಗುತ್ತಾರೆ. ಕೊಳದಿಂದ ಕಾರನ್ನು ರಕ್ಷಿಸಲು ತನ್ನಿಂದ ಸಾಧ್ಯವಿಲ್ಲ ಎಂದು ಗೊತ್ತಾದ ಕೂಡಲೇ ಮಸೀದಿಯ ಮೈಕ್ ಬಳಸಿ ಸಾರ್ವಜನಿಕರಿಗೆ ಎಚ್ಚರಿಕೆ ಕೊಡುತ್ತಾರೆ ಮತ್ತು ನೆರವಾಗುವಂತೆ ಕೋರುತ್ತಾರೆ.
ಮಸೀದಿಯ ಮೈಕ್ನಿಂದ ತುರ್ತು ಕರೆ ಕೇಳಿಸಿದ್ದೇ ತಡ ಮಸೀದಿ ಅಕ್ಕಪಕ್ಕದ ಜನರು ತಕ್ಷಣ ಒಟ್ಟು ಸೇರಿದರು. ಕೊಳಕ್ಕೆ ಇಳಿದರು. ಕಾರಿನೊಳಗಿದ್ದ ಮತ್ತು ಮುಳುಗಿ ಸಾಯಬಹುದಾಗಿದ್ದ ಏಳು ಮಂದಿಯನ್ನು ರಕ್ಷಿಸಿ ದಡಕ್ಕೆ ತಂದರು ಈ ಮೂಲಕ ಬಾರಿ ಜೀವ ಹಾನಿಯನ್ನು ತಪ್ಪಿಸಿದರು.
ಮೌಲಾನ ಅವರ ಸಮಯ ಪ್ರಜ್ಞೆಯನ್ನು ಸ್ಥಳೀಯರು ಕೊಂಡಾಡಿದ್ದಾರೆ. ಅವರ ಒಂದು ಕರೆಯು ಸ್ಥಳೀಯ ಜನರನ್ನು ಒಟ್ಟಾಗಿಸಿದೆ ಮತ್ತು ತನ್ನ ಧರ್ಮೀಯರಲ್ಲದ ಏಳು ಮಂದಿಯನ್ನು ರಕ್ಷಿಸುವುದಕ್ಕೆ ಸ್ಥಳೀಯರಿಗೆ ನೆರವಾಗಿದೆ ಎಂದು ಕೊಂಡಾಡಲಾಗಿದೆ.



