ಬೆಳ್ತಂಗಡಿ: ಅಂಗಡಿಯಿಂದ ತಿಂಡಿ ತೆಗೆದುಕೊಂಡು ರಸ್ತೆ ದಾಟುತ್ತಿರುವ ಪುಟ್ಟ ಬಾಲಕನಿಗೆ ಕಾರು ಡಿಕ್ಕಿ ಹೊಡೆದು ಮೃತಪಟ್ಟಿರುವ ದಾರುಣ ಘಟನೆ ಇಂದು ಚಾರ್ಮಾಡಿಯಲ್ಲಿ ಸಂಭವಿಸಿದೆ.
ಚಾರ್ಮಾಡಿ ಗ್ರಾಮ ಪಂಚಾಯತ್ ಸದಸ್ಯ ಬೀಟಿಗೆ ನಿವಾಸಿ ಸಿದ್ದಿಕ್ ಯು.ಪಿ. ಎಂಬವರ ಪುತ್ರ 3 ವರ್ಷದ ಮಹಮ್ಮದ್ ಹಝೀರಿನ್ ಮೃತ ಬಾಲಕ ಎಂದು ತಿಳಿದು ಬಂದಿದೆ.
ಮೃತ ಬಾಲಕ ತನ್ನ ಮನೆಯ ಬಳಿಯ ಅಂಗಡಿಗೆ ತಿಂಡಿ ತರಲು ಹೋಗಿ, ಹಿಂದಿರುಗುವಾಗ ರಸ್ತೆ ದಾಟಲು ಪ್ರಯತ್ನಿಸುವ ವೇಳೆ ಕಾರು ಡಿಕ್ಕಿ ಹೊಡೆದಿದೆ.



