Flash News

ಮಂಗಳೂರು ಜೈಲಿನಲ್ಲಿ ಭರತ್ ಕುಮ್ಡೇಲ್’ಗೆ ಅವಾಚ್ಯವಾಗಿ ನಿಂದನೆ: ಕೈದಿಗಳ ಮಧ್ಯೆ ಗದ್ದಲ..!

ಮಂಗಳೂರು: ಮಂಗಳೂರು ಜೈಲಿನಲ್ಲಿ ಕೈದಿಗಳ ಮಧ್ಯೆ ವಾಗ್ವಾದ- ಸಂಘರ್ಷ- ಗದ್ದಲ ನಡೆದಿದ್ದು, ಸಿಸಿಬಿ ಪೊಲೀಸರು ರಾತ್ರೋರಾತ್ರಿ ದಾಳಿ ನಡೆಸಿ ಎಲ್ಲವನ್ನು ಸರಿಪಡಿಸಿದ್ದಾರೆ.

ಸೋಮವಾರ ಸಂಜೆ ಕೋಕಾ ಆಕ್ಟಿನಡಿ ಬಂಧಿತನಾಗಿರುವ ಭರತ್ ಕುಮ್ಡೇಲ್ ಜೊತೆಗೆ ಮಾತನಾಡಲು ಸಂಬಂಧಿಕರು ಬಂದಿದ್ದರು. ಆತ ಮಾತನಾಡಲು ಹೊರಗಡೆ ಬಂದು ಹಿಂದೆ ತೆರಳುವ ಸಂದರ್ಭದಲ್ಲಿ ಎ ಬ್ಯಾರಕ್ ನಲ್ಲಿರುವ ಕೈದಿಗಳು ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿದೆ.

ಆನಂತರ, ಈ ವಿಷಯ ತಿಳಿದ ಬಿ ಬ್ಯಾರಕಿನ ಹಿಂದು ಕೈದಿಗಳು ರಂಪ ಮಾಡಿದ್ದು ಎರಡೂ ಕಡೆಯಿಂದ ಅವಾಚ್ಯ ನಿಂದನೆ, ಜೋರು ಗದ್ದಲ ಎಬ್ಬಿಸಿದ್ದಾರೆ. ವಿಷಯ ತಿಳಿದ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ರಾತ್ರಿ ವೇಳೆ ಸಿಸಿಬಿ ತಂಡದೊಂದಿಗೆ ಜೈಲಿಗೆ ಬಂದಿದ್ದು, ಗಲಾಟೆ ನಡೆಸಿದ ಎರಡೂ ಕಡೆಯವರಿಗೆ ಲಾಠಿ ರುಚಿ ನೀಡಿದ್ದಾರೆ.

ಘಟನೆ ಬಗ್ಗೆ ಜೈಲು ಸುಪರಿಡೆಂಟ್ ಶರಣಬಸಪ್ಪ ಬರ್ಕೆ ಠಾಣೆಗೆ ದೂರು ನೀಡಿದ್ದು ಎಫ್ಐಆರ್ ದಾಖಲಾಗಿದೆ. ಎ ಬ್ಯಾರಕಿನ ಮೊಯ್ದೀನ್ ಪರಾದ್, ಸರ್ಫರಾಜ್, ಮಹಮ್ಮದ್ ಅಲ್ತಾಫ್, ಇಮ್ತಿಯಾಜ್, ಅಬ್ದುಲ್ ನೌಶಾದ್, ಮಹಮ್ಮದ್ ಸಾಹಿಲ್, ಮಹಮ್ಮದ್ ಹನೀಫ್ ಮತ್ತು ಬಿ ಬ್ಯಾರಕಿನ ಲತೀಶ್ ಜೋಗಿ, ಮಂಜುನಾಥ್, ಮುರುಗನ್, ಸಚಿನ್ ತಲಪಾಡಿ, ತುಷಾರ್ ಅಮೀನ್, ಶಬರೀಶ್, ಗುರುರಾಜ್, ಸುಮಂತ್ ಎಂಬ ಕೈದಿಗಳ ಮೇಲೆ ಕೇಸು ದಾಖಲಾಗಿದೆ.