ಬೆಳಗಾವಿ: ವಿಧಾನ ಪರಿಷತ್ನಲ್ಲಿ ಬಿಕೆ ಹರಿಪ್ರಸಾದ್ ಆರ್ಎಸ್ಎಸ್ ಹಾಗೂ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ರು. ಪ್ರವೀಣ್ ಪೂಜಾರಿಯನ್ನು ಕೊಲೆ ಮಾಡಿದ್ದು ಹಿಂದೂ ಜಾಗರಣ ಸಮಿತಿಯವರು ಎಂದು ಆಕ್ರೋಶ ವ್ಯಕ್ತಪಡಿಸಿದರು.
ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ಮಸೂದೆ ಬಗ್ಗೆ ಸದನದಲ್ಲಿ ಬಿಕೆ ಹರಿಪ್ರಸಾದ್ ಭಾಷಣ ಮಾಡಿ, ”ಗಾಂಧಿಯನ್ನು ಕೊಲೆ ಮಾಡಿದವನನ್ನು ಇನ್ನೂ ಕೊಲೆಗಾರ ಅನ್ನಲ್ಲ”, ”ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದ್ವೇಷ ಭಾಷಣ ಮಾಡುವ ಬಿಜೆಪಿಯ ಗುರುವಿನ ಮೇಲೆ 13 ಕೇಸ್ ಇದೆ” ಪ್ರವೀಣ್ ಪೂಜಾರಿಯನ್ನು ಕೊಲೆ ಮಾಡಿದ್ದು ಹಿಂದೂ ಜಾಗರಣ ಸಮಿತಿಯವರು ‘ಸಂವಿಧಾನವನ್ನು ಗೋಲ್ವಾಲ್ಕರ್ ರಾಮಲೀಲಾ ಮೈದಾನದಲ್ಲಿ ಸುಟ್ಟರು” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ 2025ರ ಕುರಿತಂತೆ ವಿಧಾನ ಪರಿಷತ್ನಲ್ಲಿಂದು ಚರ್ಚೆ ನಡೆಯಿತು. ಈ ವೇಳೆ ವಿಪಕ್ಷಗಳ ಆರೋಪಗಳಿಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಸ್ಪಷ್ಟನೆ ಕೊಟ್ಟರು. ನನಗೆ ನಿಜವಾಗಿಯೂ ನಿರಾಸೆ ಮಾಡಿದ್ದೀರಿ. ಸುಪ್ರಿಂಕೋರ್ಟ್ ತೀರ್ಪು ಸ್ಪಷ್ಟವಾಗಿ ಹೇಳಿದೆ. ಆದರೆ ಸುಪ್ರೀಂ ತೀರ್ಪಿಗೆ ನೀವು ಬೆಲೆ ಕೊಡಲ್ಲ ಅಂದ್ರೆ ಹೇಗೆ…? ಇಟ್ ಈಸ್ ನಾಟ್ ಎ ಶೇಮ್ ಅಂತ ಪರಮೇಶ್ವರ್ ಪ್ರಶ್ನಿಸಿದ್ರು.
ಮುಂದುವರೆದ ಪರಮೇಶ್ವರ್, ನಿಮಗೆ ನಾಚಿಕೆಯಾಗಲ್ಲವೇ ಅಂತ ಖಾರವಾಗಿ ಪ್ರಶ್ನಿಸಿದ್ರು. ಪರಮೇಶ್ವರ್ ಮಾತಿಗೆ ಕೆರಳಿದ ವಿಪಕ್ಷಗಳು ಆಕ್ರೋಶ ವ್ಯಕ್ತಪಡಿಸಿದವು. ಮತ್ತೆ ಮಾತು ಮುಂದುವರೆಸಿದ ಪರಮೇಶ್ವರ್, ದೇಶದ ಕಾನೂನು ಇದೆ. ಯಾಕೆ ನೀವು ಮಾತನಾಡ್ತೀರಿ ಅಂತ ಪ್ರಶ್ನಿಸಿದ್ರು. ಈ ವೇಳೆ ಶೇಮ್ ಶೇಮ್ ನಾಚಿಕೆಯಾಗಬೇಕು ಅಂತ ಸಚಿವ ಭೈರತಿ ಸುರೇಶ್ ಮಧ್ಯೆ ಪ್ರವೇಶಿಸಿದ್ರು.
ಈ ವೇಳೆ ಆಡಳಿತ ಹಾಗೂ ವಿಪಕ್ಷಗಳ ನಡುವೆ ಗದ್ದಲ ಉಂಟಾಯ್ತು. ಎರಡೂ ಕಡೆ ಸದಸ್ಯರು ಪರಸ್ಪರ ಘೋಷಣೆ ಕೂಗಿದ್ರು. ಮತ್ತೆ ಮಧ್ಯೆ ಪ್ರವೇಶಿಸಿದ ಪರಮೇಶ್ವರ್, ಐದೂವರೆ ಘಂಟೆಯಿಂದ ನಾನು ತಾಳ್ಮೆಯಿಂದ ಕೇಳಿದ್ದೇನೆ. ನನಗೆ ಇನ್ಸಲ್ಟ್ ಮಾಡಬೇಡಿ ಎಂದ್ರು. ನಿಮಗೆ ಇಷ್ಟೊಂದು ಆತಂಕ ಯಾಕೆ ಅಂತ ವಿಪಕ್ಷ ಸದಸ್ಯರಿಗೆ ಪ್ರಶ್ನಿಸಿದ್ರು.



