Flash News

ಅರಬ್ಬಿ ಸಮುದ್ರದ ಹೆಸರು ಬದಲಿಸಿ: ಬಿಜೆಪಿ ಶಾಸಕ

ಕಾರವಾರ: ಅರಬ್ಬಿ ಸಮುದ್ರ ವಿದೇಶದ ಹೆಸರು ಹೊಂದಿದ್ದು ಅದರ ಬದಲು ರತ್ನಾಕರ ಸಾಗರ ಎಂದು ಹೆಸರು ಬದಲಿಸಬೇಕು ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹೇಳಿದರು.

ಇಲ್ಲಿ ನಡೆದ ಕರಾವಳಿ ಉತ್ಸವದಲ್ಲಿ ಅವರು ಹೇಳಿದ್ದಾರೆ.

ಹೆಸರು ಬದಲಿಸುವ ಬಗ್ಗೆ ಸರ್ಕಾರ ಚಿಂತಿಸಬೇಕು. ಅರಬ್ಬಿ ಸಮುದ್ರಕ್ಕೆ ಈ ಹಿಂದೆ ರತ್ನಾಕರ ಸಾಗರ ಎಂದೇ ಕರೆಯಲಾಗುತ್ತಿತ್ತು ಎಂದು ಅವರು ಪ್ರತಿಪಾದಿಸಿದರು.

‘ಸಂಸ್ಕೃತಿ ಅಭಿವ್ಯಕ್ತಿಗೆ ಕರಾವಳಿ ಉತ್ಸವ ವೇದಿಕೆಯಾಗಬೇಕು. ಬಡವರು ಹಿಂದುಳಿದವರು ತಮ್ಮ ಕಲಾಪ್ರತಿಭೆ ಪ್ರದರ್ಶಿಸಲು ಅವಕಾಶ ಹೆಚ್ಚಬೇಕು’ ಎಂದರು.