ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗ ಮೊಹಮ್ಮದ್ ಶಮಿ ಸದ್ಯ ಸಿಕ್ಕಾಪಟ್ಟೆ ಬ್ಯುಸಿ. ಆದ್ರೆ ಈಗ ಅವರಿಗೆ ಆಟದ ಜೊತೆ ಮತ್ತೊಂದು ಕೆಲಸ ಬಂದಿದೆ. ಕೋಲ್ಕತ್ತಾದ ಅಧಿಕಾರಿಗಳು ಶಮಿಗೆ ಅರ್ಜೆಂಟ್ ಆಗಿ ಎಸ್ಐಆರ್ ಪರಿಶೀಲನೆಗೆ ಹಾಜರಾಗುವಂತೆ ಹೇಳಿದ್ದಾರೆ. ವಿಚಾರಣೆಗೆ ಬರುವಂತೆ ಬುಲಾವ್ ಬಂದಿರೋದ್ರಿಂದ, ಫಾರಂ ತುಂಬುವಾಗ ಆದ ಸಣ್ಣ ಎಡವಟ್ಟು ಈಗ ಶಮಿಯನ್ನ ಆಫೀಸ್ ಮೆಟ್ಟಿಲು ಹತ್ತುವಂತೆ ಮಾಡಿದೆ. ಏನಪ್ಪಾ ಇದು ವಿಷ್ಯ ಅಂತೀರಾ? ಇಲ್ಲಿದೆ ಡೀಟೇಲ್ಸ್.
ಅಸಲಿಗೆ ಸೋಮವಾರಾನೇ ಜಾದವ್ಪುರದ ಶಾಲೆಯೊಂದರಲ್ಲಿ ಶಮಿ ಮತ್ತು ಅವರ ಸಹೋದರ ಮೊಹಮ್ಮದ್ ಕೈಫ್ ಇಬ್ರು ವಿಚಾರಣೆಗೆ ಬರ್ಬೇಕಿತ್ತು. ಆದ್ರೆ ಶಮಿ ಸದ್ಯ ರಾಜ್ಕೋಟ್ನಲ್ಲಿದ್ದಾರೆ. ಅಲ್ಲಿ ನಡೀತಿರೋ ವಿಜಯ್ ಹಜಾರೆ ಟ್ರೋಫಿಯಲ್ಲಿ ಬಂಗಾಳ ತಂಡದ ಪರವಾಗಿ ಆಡ್ತಿದ್ದಾರೆ. ಮೈದಾನದಲ್ಲಿ ಬೌಲಿಂಗ್ ಮಾಡ್ಕೊಂಡು ಬ್ಯುಸಿ ಇರೋದ್ರಿಂದ ಅವರಿಗೆ ಸೋಮವಾರ ಬರೋಕೆ ಸಾಧ್ಯ ಆಗಿಲ್ಲ ಅಂತ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಈಗ ಅರ್ಜೆಂಟ್ ಆಗಿ ಬರೋಕೆ ಆಗಲ್ಲ ಅಂತ ಹೇಳಿರೋ ಶಮಿ, ಬೇರೆ ದಿನಾಂಕ ಕೊಡಿ ಅಂತ ಚುನಾವಣಾ ಆಯೋಗದ ಬಳಿ ಮನವಿ ಮಾಡಿಕೊಂಡಿದ್ರು. ಅವರ ಕಷ್ಟ ಅರ್ಥ ಮಾಡ್ಕೊಂಡಿರೋ ಅಧಿಕಾರಿಗಳು ಓಕೆ ಅಂದಿದ್ದಾರೆ. ಈಗ ಜನವರಿ 9 ಮತ್ತು 11ರ ನಡುವೆ ಬಂದು ವಿಚಾರಣೆ ಮುಗಿಸಿಕೊಂಡು ಹೋಗಿ ಅಂತ ಹೊಸ ಟೈಮ್ ಕೊಟ್ಟಿದ್ದಾರೆ. ಸೋ, ಶಮಿ ಆಟ ಮುಗಿಸಿಕೊಂಡು ಕೋಲ್ಕತ್ತಾಗೆ ಹಾರೋದು ಪಕ್ಕಾ.
ಶಮಿ ಕೋಲ್ಕತ್ತಾ ಮುನ್ಸಿಪಲ್ ಕಾರ್ಪೊರೇಷನ್ನ ವಾರ್ಡ್ ನಂಬರ್ 93ರ ಮತದಾರರು. ಇದು ರಾಶ್ಬೆಹಾರಿ ಕ್ಷೇತ್ರದ ವ್ಯಾಪ್ತಿಗೆ ಬರುತ್ತೆ. ಅಸಲಿ ಸಮಸ್ಯೆ ಏನಪ್ಪಾ ಅಂದ್ರೆ, ಶಮಿ ಮತ್ತು ಅವರ ಸಹೋದರ ಎಣಿಕೆ ಫಾರಂ ತುಂಬುವಾಗ ಏನೋ ತಪ್ಪು ಮಾಡಿದ್ದಾರೆ. ಇದನ್ನ ಸರಿಪಡಿಸೋಕೆ ಮತ್ತು ವೆರಿಫೈ ಮಾಡೋಕೆ ಅಧಿಕಾರಿಗಳು ಅವರನ್ನ ಕರೆಸಿದ್ದಾರೆ ಅಂತ ಪಶ್ಚಿಮ ಬಂಗಾಳದ ಮುಖ್ಯ ಚುನಾವಣಾ ಅಧಿಕಾರಿ (CEO) ಕಚೇರಿಯವರು ಮಾಹಿತಿ ಕೊಟ್ಟಿದ್ದಾರೆ.
ಶಮಿ ಹುಟ್ಟಿದ್ದು ಉತ್ತರ ಪ್ರದೇಶದಲ್ಲಿ, ಆದರೆ ಅವರ ಕ್ರಿಕೆಟ್ ಬದುಕು ಕೋಲ್ಕತ್ತಾದಲ್ಲಿ ಅರಳಿತು. ಅವರು ಸಾಕಷ್ಟು ವರ್ಷಗಳಿಂದ ಇಲ್ಲೇ ಸೆಟಲ್ ಆಗಿದ್ದಾರೆ. ಚಿಕ್ಕ ವಯಸ್ಸಲ್ಲೇ ಕ್ರಿಕೆಟ್ ಕನಸು ಹೊತ್ತು ಈ ನಗರಕ್ಕೆ ಬಂದಿದ್ದರು. ಬಂಗಾಳದ ಮಾಜಿ ರಣಜಿ ಕ್ಯಾಪ್ಟನ್ ಸಂಬರನ್ ಬಂಡೋಪಾಧ್ಯಾಯ ಅವರ ತರಬೇತಿಯಲ್ಲಿ ಪಳಗಿದ ಶಮಿ, ರಾಜ್ಯದ ಅಂಡರ್-22 ಟೀಮ್ಗೆ ಆಯ್ಕೆಯಾಗಿ, ಇಂದು ಟೀಮ್ ಇಂಡಿಯಾದ ಸ್ಟಾರ್ ಆಗಿ ಮಿಂಚುತ್ತಿದ್ದಾರೆ. ಈಗ ಅದೇ ಕೋಲ್ಕತ್ತಾದ ವೋಟರ್ ಲಿಸ್ಟ್ ವಿಷಯಕ್ಕೆ ಸುದ್ದಿಯಲ್ಲಿದ್ದಾರೆ.



