Flash News

ಮಂಗಳೂರಿನಲ್ಲಿ SDPI ಬೃಹತ್ ಶಕ್ತಿಪ್ರದರ್ಶನ: ಯುವ ಘಟಕ “YOUNG DEMOCRATS” ಅಸ್ತಿತ್ವಕ್ಕೆ


ಎಸ್‌ಡಿಪಿಐ ರಾಷ್ಟ್ರೀಯ ಅಧ್ಯಕ್ಷರಾಗಿ ಎಂ.ಕೆ. ಫೈಝ್ ಪುನರಾಯ್ಕೆ

ಮಂಗಳೂರು: ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಕರ್ನಾಟಕ ರಾಜ್ಯ ಸಮಿತಿ ವತಿಯಿಂದ ಇಂದು ಆಯ್ಕೆಯಾದ ನೂತನ ರಾಷ್ಟ್ರೀಯ ನಾಯಕರಿಗೆ ಅಭಿನಂದನಾ ಕಾರ್ಯಕ್ರಮ ಇಂದು ಪುರಭವನದಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಮಂಗಳೂರು ನಗರದಲ್ಲಿ SDPI ರಣಕಹಳೆ ಮೊಳಗಿಸಿದೆ. ಮಂಗಳೂರಿನ ಅಂಬೇಡ್ಕರ್ ವೃತ್ತ (ಜ್ಯೋತಿ )ಯಿಂದ ಬೃಹತ್‌ ರ್‍ಯಾಲಿ ಸಾಗಿ ಬರುತ್ತಿದ್ದು, ರಾಜ್ಯದ ಮೂಲೆ ಮೂಲೆಯಿಂದ ಬಂದಿದ್ದ ಸಹಸ್ರಾರು ಕಾರ್ಯಕರ್ತರ ಸಮ್ಮುಖದಲ್ಲಿ ಎಸ್ ಡಿಪಿಐಯ ರಾಷ್ಟ್ರೀಯ ನಾಯಕರು ಹೆಜ್ಜೆ ಹಾಕಿದ್ದಾರೆ.

 ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾದ ಯುವ ಘಟಕ “YOUNG DEMOCRATS” ಚಾಲನೆ ನೀಡಲಾಗಿದೆ. ಎರಡು ದಿನಗಳ ಎಸ್‌ಡಿಪಿಐ 6ನೇ ರಾಷ್ಟ್ರೀಯ ಪ್ರತಿನಿಧಿ ಮಂಡಳಿ (ಎನ್‌ಆರ್‌ಸಿ ) ಸಭೆ ಈ ನಿರ್ಣಯ ತೆಗೆದುಕೊಳ್ಳಲಾಗಿದೆ. ಅಲ್ಲದೆ ಮುಂದಿನ ಮೂರು ವರ್ಷಕ್ಕೆ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರೀಯ ಅಧ್ಯಕ್ಷರಾಗಿ ಎಂಕೆ ಫೈಝಿ ಆಯ್ಕೆ ಮಾಡಲಾಗಿದೆ.

ಬಳಿಕ ಮಾತನಾಡಿದ ಎಸ್‌ಡಿಪಿಐ ರಾಷ್ಟ್ರೀಯ ಉಪಾಧ್ಯಕ್ಷ ಮುಹಮ್ಮದ್ ಶಫಿ, ಕೇಂದ್ರದ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರವು ದೇಶದಲ್ಲಿ ಜನತೆಗೆ ಅಗತ್ಯದ ಆಹಾರ , ವಸತಿಗೆ ಸಂಬಂಧಿಸಿದ ಯಾವ ಯೋಜನೆಯನ್ನು ಜಾರಿ ಮಾಡುತ್ತಿಲ್ಲ. ಹಿಂದೂ- ಮುಸ್ಲಿಮರ ಮಧ್ಯೆ ವೈಷಮ್ಯ ಬೆಳೆಸಲು ಷಡ್ಯಂತ್ರ ನಡೆಯುತ್ತಿದ್ದು, ಇದೊಂದು ಮಾನವ ವಿರೋಧಿ ಸರಕಾರವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದೇಶದ ಜನರಲ್ಲಿ ಭಯದ ವಾತಾವರಣವನ್ನು ಸೃಷ್ಟಿಸಿದ ಸಿಎಎ, ಎಸ್‌ಐಆರ್, ಬುಲ್ಡೋಜರ್, ಗುಂಪು ಹತ್ಯೆ ಇತ್ಯಾದಿಗಳು ಕೇವಲ ಅಲ್ಪಸಂಖ್ಯಾತ ಮುಸ್ಲಿಮರ ವಿರುದ್ಧದ ಸಮರ ಎಂದು ನಾವು ಭಾವಿಸಿದರೆ ಅದು ತಪ್ಪಾಗುತ್ತದೆ. ಇದರಿಂದ ಬುಡಕಟ್ಟು ಜನಾಂಗ, ಕೂಲಿ ಕಾರ್ಮಿಕರು, ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಂದರೆಗೊಳಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಕೇಂದ್ರ ಸರಕಾರವು ದೇಶದಲ್ಲಿ ಶ್ರೀಮಂತರಿಗೆ ಹೂಡಿಕೆ ಮಾಡಲು ಅನುಕೂಲ ಮಾಡಿಕೊಡುವ ಕಾರ್ಯಕ್ರಮ ಗಳನ್ನು ಅನುಷ್ಠಾನ ಮಾಡುತ್ತಿದೆ. ದೇಶದ ನೆಲ,ಜಲ, ಅರಣ್ಯವನ್ನು ಭಾರೀ ಪ್ರಮಾಣದಲ್ಲಿ ಶ್ರೀಮಂತ ಬಂಡವಾಳ ಶಾಹಿಗಳಿಗೆ ಮಾರಾಟ ಮಾಡಿದೆ. ಇದರಿಂದ ದೇಶವು ಮತ್ತೆ ಗುಲಾಮಗಿರಿಗೆ ತಳ್ಳಲ್ಪಡುವ ಅಪಾಯ ಕಂಡು ಬಂದಿದೆ. ಇಂತಹ ಸಂದರ್ಭದಲ್ಲಿ ದೇಶವನ್ನು ರಕ್ಷಿಸಬೇಕಾದುದು ದೇಶದ ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದು ನುಡಿದರು.

ಎಸ್ ಡಿಪಿಐ ರಾಜ್ಯಾಧ್ಯಕ್ಷ ಅಬ್ದುಲ್ ಮಜೀದ್ ಮಾತನಾಡಿ, ಯುವ ಜನತೆ ರಾಜಕೀಯದಿಂದ ದೂರ ಹೋಗುತ್ತಾರೆ. ಬೇರೆ ಬೇರೆ ದಿಕ್ಕಿಗೆ ಹೋಗುವಂತವನ್ನು ಸಕ್ರಿಯವಾಗಿ ರಾಜಕೀಯವಾಗಿ ಪ್ರಭುತ್ವ ನೀಡುವ ದೃಷ್ಟಿಯಿಂದ “YOUNG DEMOCRATS” ಅಸ್ತಿತ್ವಕ್ಕೆ ತರಲಾಗಿದೆ ಎಂದು ಹೇಳಿದ್ದಾರೆ.

ಮುಂಬರುವ ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಚುನಾವಣೆಯಲ್ಲಿ ಎಸ್‌ಡಿಪಿಐ ನಿರ್ಣಾಯಕ ಪಾತ್ರ ವಹಿಸಲಿದೆ. ಬಹುತೇಕ ವಾರ್ಡ್‌ಗಳಲ್ಲಿ ಸ್ಪರ್ಧಿಸಲಿದೆ. ಅಭ್ಯರ್ಥಿಗಳ ಆಯ್ಕೆಗೆ ತಯಾರಿ ನಡೆಸುತ್ತಿದೆ. ಮುಖ್ಯವಾಹಿನಿಯಲ್ಲಿರುವ ಎಲ್ಲ ಪಕ್ಷಗಳಿಗೂ ಸರಿಯಾದ ಸ್ಪರ್ಧೆ ನೀಡಲಿದೆ. ಸ್ಥಳೀಯವಾಗಿ ಜ್ವಲಂತ ಸಮಸ್ಯೆಗಳನ್ನು ಎತ್ತಿಕೊಂಡು ಜನರ ಬಳಿಗೆ ಎಸ್‌ಡಿಪಿಐ ತೆರಳಲಿದೆ ಎಂದರು. ಎಸ್‌ಐಆರ್ ಮಾಪಿಂಗ್ ಕರ್ನಾಟಕದಲ್ಲಿ ನಡೆಯುತ್ತಿದೆ. ರಾಷ್ಟ್ರೀಯ ಪ್ರತಿನಿಧಿ ಸಭೆಯಲ್ಲಿ ಮುಖ್ಯವಾಗಿ ಎಸ್‌ಐಆರ್‌ ನಲ್ಲಿರುವ ಸಮಸ್ಯೆಗಳ ಬಗ್ಗೆ ಚರ್ಚೆ ನಡೆದಿದೆ ಎಂದು ವಿವರಿಸಿದರು.

ದೇಶದಲ್ಲಿ ಎಸ್‌ಐಆರ್‌ನಿಂದ ಮುಸ್ಲಿಂರಿಗೆ ಮಾತ್ರ ತೊಂದರೆಯಾಗುತ್ತದೆ ಎಂಬ ಅಪಪ್ರಚಾರ ನಡೆಯುತ್ತಿದೆ. ಎಸ್‌ಐಆರ್‌ನಿಂದ ಬಡವರು, ವಲಸೆ ಕಾರ್ಮಿಕರು, ಮಹಿಳೆಯರಿಗೆ ತೊಂದರೆಯಾಗಲಿದೆ ಎಂದು ನುಡಿದರು.

ಎಸ್ ಡಿಪಿಐ ರಾಷ್ಟ್ರೀಯ ನಾಯಕ ಇಲ್ಯಾಸ್ ತುಂಬೆ ಮಾತನಾಡಿ, ಎಸ್‌ಡಿಪಿಐ ಒಂದು ರಾಜಕೀಯ ಪಕ್ಷ. ಇದನ್ನು ನಿಷೇಧ ಮಾಡುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ.

ಮುಂದಿನ GBA, ಗ್ರಾಮ, ಜಿಲ್ಲಾ ಪಂಚಾಯತ್, ತಾಲೂಕ್ ಪಂಚಾಯತ್ ಚುನಾವಣೆಯಲ್ಲಿ ಪಕ್ಷ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತೆ ಎಂದು ಹೇಳಿದ್ದಾರೆ.

ಒಟ್ಟು 45 ಮಂದಿಯ ಪಟ್ಟಿಯಲ್ಲಿ 16 ಪದಾಧಿಕಾರಿಗಳು ಮತ್ತು 29 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು ಇದ್ದಾರೆ. ವಿವರ ಇಂತಿವೆ.

ಎಂ.ಕೆ. ಫೈಝಿ (ಅಧ್ಯಕ್ಷರು), ಮುಹಮ್ಮದ್ ಶಫಿ, ಸೀತಾರಾಮ್ ಖಾಟಿಕ್, ಶೇಖ್ ಮುಹಮ್ಮದ್ (ದಿಲ್ಹಾನ್ ಬಾಖ್ವಿ), ಮುಹಮ್ಮದ್ ಅಶ್ರಫ್ (ಪ್ರಧಾನ ಕಾರ್ಯದರ್ಶಿ -ಆಡಳಿತ), ಮುಹಮ್ಮದ್ ರಿಯಾಝ್ (ಪ್ರಧಾನ ಕಾರ್ಯದರ್ಶಿ-ಸಂಘಟನೆ), ಮುಹಮ್ಮದ್ ಇಲಿಯಾಸ್ , ಅಬ್ದುಲ್ ಮಜೀದ್ ಪಿ ಮತ್ತು ಮೆಹರ್ ಅಫ್ರೋಝ್ ಯಾಸ್ಮಿನ್ (ಪ್ರಧಾನ ಕಾರ್ಯದರ್ಶಿ), ಅಲ್ಫೋನ್ಸ್ ಫ್ರಾಂಕೊ ,ತೈದುಲ್ ಉಲ್ ಇಸ್ಲಾಂ, ಸಅದೀಯಾ ಸಯೀದಾ, ಡಿ.ಎಸ್.ಬಿಂದ್ರಾ, ಅತಿಕಾ ಸಾಜಿದ್‌ಮತ್ತು ಯಾಮೊಯ್ದೀನ್ (ಕಾರ್ಯದರ್ಶಿ), ಜಿ. ಅಬ್ದುಲ್ ಸತ್ತಾರ್ (ಖಜಾಂಚಿ). 29 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರು.

ಅಬ್ದುಲ್ ಹನ್ನಾನ್, ಅಬ್ದುಲ್ ಲತೀಫ್ ಸಿ.ಪಿ, ಅಬ್ದುಲ್ ಮಜೀದ್ ಮೈಸೂರು, ಅಬ್ದುಲ್ ಮುಹೀದ್ ಹಾಶ್ಮಿ, ಅಜ್ಮಲ್ ಇಸ್ಮಾಯಿಲ್, ಅಶ್ಫಕು ಹುಸೈನ್, ಮುವಾಟ್ಟುಫುಝ ಅಶ್ರಫ್ ಮೌಲವಿ , ಹಾಫಿಝ್ ಅಥಾವುಲ್ಲಾ ಖಾನ್, ಅಝರ್ ತಾಂಬೋಳಿ, ಹಕೀಕ್ವುಲ್ ಇಸ್ಲಾಂ, ಅಡ್ವೊಕೇಟ್ ಎಚ್.ಖಾಲಿದಾ, ಡಿ.ಮೆಹಬೂಬ್ ಶರೀಫ್, ಮುಬಾರಕ್ ನೆಲ್ಲಾಹಿ, ಮುಹಮ್ಮದ್ ಹಂಝಾಲ ಶೇಖ್, ನಿಝಾಮುದ್ದೀನ್ ಖಾನ್, ರಶೀದ್ ಉಮಾರಿ ಎನ್.ಕೆ, ಡಿ.ರವಿ ಚಂದ್ರನ್, ರುನಾ ಲೈಲಾ, ನಿವೃತ್ತ ಐಎಎಸ್ ಅಧಿಕಾರಿ ಎಸ್.ಕೆ.ಬಿಸ್ವಾಸ್, ಸದಾಶಿವ ತ್ರಿಪಾಠಿ, ಸಾಹೀರ್ ಅಬ್ಬಾಸ್, ಡಾ.ಸರ್ವಾರ್ ಅಲಿ, ಶಾನ್‌ವಾಝ್ ಅಹ್ಮದ್ ಖಾದ್ರಿ, ಅಡ್ವೊಕೇಟ್ ಶರ್ಫುದ್ದೀನ್ ಅಹ್ಮದ್, ಶಿಬಾ ಮಿನಾಯಿ, ತುಳಸೀಧರನ್ ಪಲ್ಲೀಕಲ್, ಉವೇಶ್ ಅಬ್ದುಲ್ ರಶೀದ್ ಶೇಖ್, ಅಡ್ವೊಕೇಟ್ ವಿದ್ಯಾರಾಜ್ ಮಾಲವ್ಯ ಮತ್ತು ಯಾಸ್ಮೀನ್ ಇಸ್ಲಾಂ (ಕಾರ್ಯಕಾರಿ ಸಮಿತಿ ಸದಸ್ಯರು).