ಮಂಗಳೂರು: ದೇರಳಕಟ್ಟೆಯಲ್ಲಿ ರಂಜಾನ್ ತಿಂಗಳಿನಲ್ಲಿ ಪ್ರತಿ ದಿನ 600 ಕ್ಕೂ ಮಿಕ್ಕ ಜನರಿಗೆ ಇಫ್ತಾರ್ ವ್ಯವಸ್ಥೆ ಮಾಡಲಾಗಿದೆ.
ದೇರಳಕಟ್ಟೆ ಬದ್ರಿಯಾ ಜುಮಾ ಮಸ್ಜಿದ್ ವತಿಯಿಂದ ಪ್ರತಿ ವರ್ಷವೂ ಇಫ್ತಾರ್ ಕೂಟ ಕಾರ್ಯಕ್ರಮ ನಡೆಸುತ್ತಾಬಂದಿದ್ದೇವೆ.
ಪ್ರತೀ ವರ್ಷವೂ ರಂಜಾನ್ ತಿಂಗಳಿನಲ್ಲಿ 600 ರಿಂದ 1000 ಜನರಿಗೆ ಇಫ್ತಾರ್ ವ್ಯವಸ್ಥೆ ಮಾಡುತ್ತಾ ಬಂದಿದ್ದೇವೆ. ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆಯಸಿಟಿ ಭಾಗದ ಮಸೀದಿಯಾದ ಕಾರಣ. ಆಸುಪಾಸಿನ ಅಂಗಡಿ ಮಾಲಕರು ರಿಕ್ಷಾ ಚಾಲಕರು ಕಾಲೇಜು ವಿದ್ಯಾರ್ಥಿಗಳು ಸಾರ್ವಜನಿಕರು ಎಲ್ಲರೂ ದೇರಳಕಟ್ಟೆ ಬದ್ರಿಯಾ ಮಸೀದಿಗೆ ಇಫ್ತಾರ್ ಕೂಟಕ್ಕೆ ಭಾಗವಹಿಸುವುದರಿಂದ. ಈ ವರ್ಷವೂ ಸುಸಜ್ಜಿತ ಇಫ್ತಾರ್ ಕೂಟಕ್ಕೆ ವ್ಯವಸ್ಥೆ ಮಾಡಲಾಗಿದೆ. ಅಸುಪಾಸಿನ ಸಾರ್ವಜನಿಕರು ಸದುಪಯೋಗ ಪಡೆಯಬೇಕಾಗಿ ಬದ್ರಿಯಾ ಜುಮಾ ಮಸ್ಜಿದ್ ಅಧ್ಯಕರು ಅಬ್ದುಲ್ ಆರ್ ಅಹ್ಮದ್ ಶೇಟ್ ರವರು ತಿಳಿಸಿದ್ದಾರೆ



