Flash News

ಅನಿವಾಸಿ ಕನ್ನಡಿಗರ ಪಾಲಿಗೆ ನಿರಾಶೆಯ ಬಜೆಟ್: ರಝಾಕ್ ಮಂಗಳೂರು (ದುಬೈ)

ದುಬೈ: ಅನಿವಾಸಿ ಕನ್ನಡಿಗರ ಪಾಲಿಗೆ ನಿರಾಶೆಯ ಬಜೆಟ್ ಎಂದು ರಝಾಕ್ ಮಂಗಳೂರು (ದುಬೈ) ಹೇಳಿದ್ದಾರೆ.

ಕರ್ನಾಟಕ ರಾಜ್ಯ ಸರಕಾರ ಮಂಡಿಸಿದ
2026-2027ನೇ ಸಾಲಿನ ಬಜೆಟ್‌ನಲ್ಲಿ ಅನಿವಾಸಿ ಕನ್ನಡಿಗರ ಪಾಲಿಗೆ ನಿರಾಶೆಯ ಬಜೆಟ್ ಆಗಿದೆ. ಅನಿವಾಸಿ ಕನ್ನಡಿಗರು ಸಿದ್ದರಾಮಯ್ಯ ಸರಕರಾದ ಮೇಲೆ ಇಟ್ಟಂತಹ ನಿರೀಕ್ಷೆ ಹುಸಿಯಾಗಿದೆ.


ಬೆಳಗಾವಿ ಅದಿವೇಶನದ ಸಮಯದಲ್ಲಿ ಅನೇಕ ದೇಶದ ಸುಮಾರು 40ಕ್ಕೂ ಅಧಿಕ ಕರ್ನಾಟಕದ ಉದ್ಯಮಿಗಳು ಸಿಎಂ ಮತ್ತು ಡಿಸಿಎಂ ಬೇಟಿಯಾಗಿ ಅನಿವಾಸಿ ಕನ್ನಡಿಗರ ಪರವಾದ ಅನೇಕ ಸಮಸ್ಯೆಗಳ ಬಗ್ಗೆ ಬೇಡಿಕೆಯಿಟ್ಟಿದ್ದರು.
ಆ ಸಮಯದಲ್ಲಿ ಇದಕ್ಕೆ ಪೂರಕವಾಗಿ
ಸಿಎಂ ಮತ್ತು ಡಿಸಿಎಂ ಮಾತನಾಡಿದರು.. ಈ ಸಾಲಿನ ಬಜೆಟ್‌ನಲ್ಲಿ ಯಾವುದೇ ರೀತಿಯ ಘೋಷಣಿ ಇಲ್ಲದಿರುವುದು
ಈ ಸರಕಾರ ಮಾಡಿದ ಅನ್ಯಾಯವಾಗಿದೆ..ಅನಿವಾಸಿಗಳು ದೇಶದ ಜೀವನಾಡಿಯಾಗಿದೆ.
ಅನಿವಾಸಿಗಳ ಜೀವನ ಅಭತ್ರೆಯಲ್ಲಿರುವಾಗ
ಸರಕಾರಗಳ ಮೌನ ನಿಜಕ್ಕೂ ಖೇದಕರ..
ಇತ್ತ ಎನ್ನಾರೈ ಸಚಿವಾಲಯವು ಇಲ್ಲ ಅತ್ತ ಎನ್ನಾರ್‌ಕೆ ಕಾರ್ಡ್ ಇಲ್ಲ.
ಸರಕಾರಗಳಿಂದ ಅನಿವಾಸಿಗಳಿಗೆ ತೀರ ಭರವಸೆ ಇಲ್ಲದಂತೆ ಆಗಿದೆ..
ಮುಂದಿನ ದಿನಗಳಲ್ಲಿ ಯಾವ ರೀತಿಯಲ್ಲಿ ಭರವಸೆ ಸಿಗುತ್ತದೆ ಎಂದು ಕಾದು ನೋಡಬೇಕಾಗಿದೆ ಎಂದು ಪತ್ರಿಕಾ‌ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.