Flash News

ಕರ್ನಾಟಕ ರಾಜ್ಯ ಮಾನವ ಹಕ್ಕು ಪರಿಷತ್ ಯುವ ಉಪಾಧ್ಯಕ್ಷರಾಗಿ ಸಲೀತ್ ಎಕೆ ನೇಮಕ

ರಾಷ್ಟ್ರೀಯ ಅಪರಾಧ ನಿಗ್ರಹ ಮತ್ತು ಮಾನವ ಹಕ್ಕು ಇದರ ರಾಜ್ಯ ಉಪಾಧ್ಯಕ್ಷರಾಗಿ ಮುಹಮ್ಮದ್ ಸಲೀತ್ ಎ.ಕೆ ಆಯ್ಕೆಯಾಗಿದ್ದಾರೆ. ಡಾ. ಜಾನ್ ಸ್ಯಾಮುಯೆಲ್ ಅವರು ನೇಮಕ ಮಾಡಿ ಆದೇಶಿಸಿದ್ದಾರೆ.

ಸಲೀತ್ ಎ.ಕೆ ಅವರು ಪ್ರಸ್ತುತ ಬೆಂಗಳೂರಿನಲ್ಲಿ ಉದ್ಯಮಿಯಾಗಿದ್ದು, ಅನೇಕ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಯುವ ಕಾಂಗ್ರೆಸ್‌ನಲ್ಲಿ ಗುರುತಿಸಿಕೊಂಡಿರುವ ಅವರು, ಐಬಿ ವೆಲ್ಫೇರ್ ಅಸೋಸಿಯೇಷನ್‌ನ ಕಾರ್ಯಾಧ್ಯಕ್ಷರಾಗಿದ್ದು, ಬ್ಯಾರಿ ಸೆಂಟ್ರಲ್ ಕಮೀಟಿ ಬೆಂಗಳೂರು ಇದರ ಉಪಾಧ್ಯಕ್ಷರಾಗಿದ್ದಾರೆ. ಹಾಗೆಯೇ ಎಕೆ ಗ್ರೂಪ್‌ನ ಸ್ಥಾಪಕರಾಗಿದ್ದು, ಸರ್ವ ಕಾಲೇಜು ವಿದ್ಯಾರ್ಥಿ ಸಂಘದ ಪುತ್ತೂರು ತಾಲ್ಲೂಕು ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದಾರೆ.

ಇವರು ಉದ್ಯಮಿ ಅಬ್ದುಲ್ ರಝಾಕ್ ಅಮೈ ಕುಂಡಾಜೆ ಮತ್ತು ಸಫಿಯಾ ಅವರ ಪುತ್ರರಾಗಿದ್ದಾರೆ.