ಬೆಂಗಳೂರು: ಬಿಟ್‌ಕಾಯಿನ್ ಅಕ್ರಮ ವಹಿವಾಟು ಪ್ರಕರಣದ ಪ್ರಮುಖ ಆರೋಪಿ ಶ್ರೀಕೃಷ್ಣ ರಮೇಶ್ ಉರುಫ್ ಶ್ರೀಕಿ ಜತೆ ಹಣಕಾಸು ವಹಿವಾಟು ನಡೆಸಿರುವ ಕಾರಣಕ್ಕೆ ಕಾಂಗ್ರೆಸ್‌ನ ಯುವ ಮುಖಂಡ ಮಹಮದ್ ನಲಪಾಡ್ ಹ್ಯಾರಿಸ್ ಮನೆಯಲ್ಲಿ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶೋಧ ನಡೆಸಿದ್ದಾರೆ.
ಸೋಮವಾರ ಬೆಳಿಗ್ಗೆ 6.30ರ ವೇಳೆಗೆ ಇ.ಡಿ ಬೆಂಗಳೂರು ವಲಯದ 100ಕ್ಕೂ ಹೆಚ್ಚು ಸಿಬ್ಬಂದಿ ಶಾಸಕ ಮತ್ತು ನಲಪಾಡ್ ಅವರ ತಂದೆ ಎನ್.ಎ.ಹ್ಯಾರಿಸ್ ಅವರ ಶಾಂತಿನಗರದ ನಿವಾಸವೂ ಸೇರಿ ಒಟ್ಟು 17 ಕಡೆ ದಾಳಿ ನಡೆಸಿದ್ದಾರೆ.
ಬಿಟ್‌ಕಾಯಿನ್ ಪ್ರಕರಣ ಪತ್ತೆಯಾಗುವುದಕ್ಕೂ ಮೊದಲ ಆರು ವರ್ಷಗಳ ಅವಧಿಯಲ್ಲಿ ನಲಪಾಡ್ ಮತ್ತು ಶ್ರೀಕಿ ಮಧ್ಯೆ ನಿರಂತರ ಹಣಕಾಸು ವ್ಯವಹಾರ ನಡೆದಿದೆ. ಈ ಅವಧಿಯಲ್ಲಿ ಒಟ್ಟು ₹4.65 ಕೋಟಿ ಹಣ ಕೈಬದಲಾಗಿದೆ. ಬಿಟ್‌ಕಾಯಿನ್ ವಹಿವಾಟಗೂ ಇದಕ್ಕೂ ಸಂಬಂಧವಿದೆಯೇ ಅಥವಾ ಇದು ಬೇರೆ ಅಕ್ರಮ ವಹಿವಾಟೇ ಎಂಬುದನ್ನು ಪರಿಶೀಲಿಸಲಾಗುತ್ತಿದೆ ಎಂದು ಇ.ಡಿ ಮೂಲಗಳು ತಿಳಿಸಿವೆ.


