Flash News

Mangalore | ಖ್ಯಾತ ಉದ್ಯಮಿಗೆ ಕಾಂಗ್ರೆಸ್ ಮುಖಂಡನಿಂದ ಹನಿಟ್ರ್ಯಾಪ್; ಕೋಟಿ ಕೋಟಿ ವಸೂಲಿ

ಕಾಂಗ್ರೆಸ್ ಪಕ್ಷದಿಂದ ನಿಝಾಮ್ ನನ್ನು ಉಚ್ಛಾಟನೆ ಮಾಡಿ ಇಬ್ರಾಹಿಂ ನವಾಝ್ ಆದೇಶ

ಮಂಗಳೂರು: ಪ್ರಸಿದ್ಧ ಉದ್ಯಮಿಗೆ ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಇಬ್ರಾಹಿಂ ಹಾಗೂ ಜಿತೇಶ್ ಎಂಬುವವರು ಹನಿಟ್ರ್ಯಾಪ್ ಮಾಡಿದ ಆರೋಪ ಕೇಳಿ ಬಂದಿದ್ದು, ತನಿಖೆ ವೇಳೆ ಸ್ಪೋಟಕ ಮಾಹಿತಿ ಬಯಲಾಗಿದೆ. ಅಶ್ಲೀಲ ಫೋಟೋ-ವಿಡಿಯೋಗಳನ್ನ ಪತ್ನಿ ತೋರಿಸೋದಾಗಿ ಉದ್ಯಮಿ ಬ್ಲ್ಯಾಕ್​ ಮೇಲ್ ಮಾಡಿದ ಈ ಖತರ್ನಾಕ್​​ಗಳು. ಸೂಸೈಡ್​ ಕಥೆ ಕಟ್ಟಿ ಕೋಟಿ ಕೋಟಿ ದೋಚಿದ ವಿಚಾರ ತನಿಖೆಯಲ್ಲಿ ಬಯಲಾಗಿದೆ.

ಮಂಗಳೂರು ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನಿಝಾಮ್ ಹಾಗೂ ಜಿತೇಶ್ ಎಂಬುವವರಿಂದ ಭಾರೀ ಹನಿಟ್ರ್ಯಾಪ್ ನಡೆದಿರೋದು ಬೆಳಕಿಗೆ ಬಂದಿದೆ. 2024ರಲ್ಲೇ ಪ್ರಸಿದ್ಧ ಉದ್ಯಮಿಗೆ ಹನಿಟ್ರ್ಯಾಪ್ ಖೆಡ್ಡಾ ತೋಡಿದ್ದ ಜಿತೇಶ್, ಉದ್ಯಮಿಯ ಅಶ್ಲೀಲ ಫೋಟೋ, ವಿಡಿಯೋ ಇಟ್ಟುಕೊಂಡು ಬ್ಲ್ಯಾಕ್ ಮೇಲ್ ಆಟ ಶುರು ಮಾಡಿದ್ದನಂತೆ.

ಖ್ಯಾತ ಉದ್ಯಮಿಯ ಅಶ್ಲೀಲ ಫೋಟೋ, ವಿಡಿಯೋ ಇಟ್ಕೊಂಡು ಬ್ಲ್ಯಾಕ್ ಮೇಲ್ ಮಾಡ್ತಿದ್ದ ಕೈ ಮುಖಂಡರು, ಹಣ ಕೊಡದಿದ್ರೆ ಆತನ ಪತ್ನಿಗೆ ವಿಡಿಯೋ ತೋರಿಸೋದಾಗಿ ಬೆದರಿಕೆ ಹಾಕಿದ್ರಂತೆ. ಮೊದಲಿಗೆ ಜಿತೇಶ್​ 35 ಲಕ್ಷ ಹಣಕ್ಕೆ ಬೇಡಿಕೆ ಇಟ್ಟಿದ್ದ. ಮರ್ಯಾದೆಗೆ ಹೆದರಿ ಚೆಕ್ ಮೂಲಕ ಜಿತೇಶ್​ಗೆ ಉದ್ಯಮಿ ಹಣ ನೀಡಿದ್ದರಂತೆ.

ಮತ್ತೆ ಮತ್ತೆ ಹಣಕ್ಕೆ ಜಿತೇಶ್​ ಬೇಡಿಕೆ ಇಟ್ಟಾಗ ಯುವ ಕಾಂಗ್ರೆಸ್ ಮುಖಂಡ ನಿಝಾಮ್​ಗೆ ಉದ್ಯಮಿಯೇ ಮಾಹಿತಿ ನೀಡಿದ್ದರಂತೆ. ಆದ್ರೆ ಉದ್ಯಮಿಯ ಸಹಾಯಕ್ಕೆ ಬಾರದ ಕಾಂಗ್ರೆಸ್ ಮುಖಂಡ ನಿಝಾಮ್, ಜಿತೇಶ್ ಜೊತೆ ಸೇರಿ ಉದ್ಯಮಿಗೆ ಇನ್ನಷ್ಟು ಬ್ಲ್ಯಾಕ್​​ಮೇಲ್ ಮಾಡಿದ್ದಾನೆ. ಉದ್ಯಮಿಯಿಂದ ನಿಜಾಮ್​ ಮತ್ತೆ ಕೋಟಿ ಕೋಟಿ ಲೂಟಿ ಮಾಡಿದ್ದು, ಈವರೆಗೆ ಬರೋಬ್ಬರಿ 2 ಕೋಟಿ 77 ಲಕ್ಷ ದೋಚಿ ಭಾರೀ ಬ್ಲ್ಯಾಕ್ ಮೇಲ್ ಮಾಡಿದ್ದಾರೆ.

ಜಿತೇಶ್ ಆತ್ಮಹತ್ಯೆ ಕಥೆ ಕಟ್ಟಿ ಉದ್ಯಮಿ ಬಳಿ ನಿಝಾಮ್ ಇಬ್ರಾಹಿಂ ಕೋಟಿ ಕೋಟಿ ಲೂಟಿ ಮಾಡಿದ್ದಾರೆ. ಸದ್ಯ ಹನಿಟ್ರ್ಯಾಪ್ ಕೇಸ್​​ನಲ್ಲಿ ನಿಝಾಮ್ ಮತ್ತು ಜಿತೇಶ್ ಇಬ್ಬರನ್ನ ಪೊಲೀಸರು ಬಂಧಿಸಿದ್ದು, ತನಿಖೆ ವೇಳೆ ಉದ್ಯಮಿ ಬ್ಲ್ಯಾಕ್ ಮೇಲ್ ಎಳೆದ ರೋಚಕ ‘ಆತ್ಮಹತ್ಯೆ’ ಕಥೆ ಬಯಲಾಗಿದೆ.
ಜಿತೇಶ್ ಆತ್ಮಹತ್ಯೆ ಕಥೆ ಹಾಗೂ ಡೆತ್ ನೋಟ್ ಸ್ಟೋರಿ ನಂಬಿದ್ದ ಮಂಗಳೂರಿನ ಉದ್ಯಮಿ 2024 ರಿಂದ 2026ರವರೆಗೆ ಕೋಟ್ಯಾಂತರ ರೂಪಾಯಿ ಹಣ ಕೊಟ್ಟಿದ್ದಾನೆ. ಎರಡು ವರ್ಷಗಳಿಂ 2 ಕೋಟಿ 77 ಲಕ್ಷದಷ್ಟು ಹಣ ವಸೂಲಿ ಮಾಡಿದ್ದಾರೆ. ಆದ್ರೆ ಮಂಗಳೂರಿನಲ್ಲಿ 2026ರ ಜೂನ್ ನಲ್ಲಿ ಉದ್ಯಮಿಗೆ ಕಣ್ಣಿಗೆ ಜಿತೇಶ್ ಬಿದ್ದಿದ್ದಾನೆ. ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾದ ಜಿತೇಶ್ ಜೀವಂತ ಇರೋದು ನೋಡಿ ಉದ್ಯಮಿಯೇ ಶಾಕ್ ಆಗಿದ್ದಾನೆ.
ಬಳಿಕ ಉದ್ಯಮಿಯೇ ಈ ಸಂಬಂಧ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಉದ್ಯಮಿ ದೂರಿನ ಆಧಾರದಲ್ಲಿ ಜಿತೇಶ್ ಜಾಗೂ ನಿಝಾಮ್ ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ. ಮಂಗಳೂರು ಹಾಗೂ ರಾಜ್ಯದ ಹಲವು ನಾಯಕರ ಜೊತೆಗಿನ ನಿಝಾಮ್ ಫೋಟೋ ಇದೀಗ ವೈರಲ್ ಆಗ್ತಿದೆ.

ಕಾಂಗ್ರೆಸ್ ಪಕ್ಷದಿಂದ ನಿಝಾಮ್ ನನ್ನು ಉಚ್ಛಾಟನೆ ಮಾಡಿ ಇಬ್ರಾಹಿಂ ನವಾಝ್ ಆದೇಶ

ಉದ್ಯಮಿಯ ಹನಿಟ್ರ್ಯಾಪ್ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಝಾಮ್ ಅವರ ಮೇಲೆ ಸಮಾಜ ವಿರೋಧಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಆರೋಪ ಬಂದಿರುವುದು ಪಕ್ಷದ ಶಿಸ್ತು ಹಾಗೂ ಗೌರವಕ್ಕೆ ಧಕ್ಕೆ ಉಂಟುಮಾಡಿರುವುದು ಗಮನಕ್ಕೆ ಬಂದಿರುತ್ತದೆ. ಈ ಹಿನ್ನೆಲೆಯಲ್ಲಿ ಪಕ್ಷದ ಹಿತಾಸಕ್ತಿ ಮತ್ತು ಶಿಸ್ತು ಕಾಪಾಡುವ ದೃಷ್ಟಿಯಿಂದ ಅವರನ್ನು ಯುವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹುದ್ದೆಯಿಂದ ಹಾಗೂ ಯುವ ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ತಕ್ಷಣದಿಂದಲೇ ಉಚ್ಚಾಟನೆ ಮಾಡಿ ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಬ್ರಾಹಿಂ ನವಾಝ್ ಆದೇಶ ನೀಡಿದ್ದಾರೆ.