ಪುದು ಶಾಲೆಯಲ್ಲಿ ಶಿಕ್ಷಕರಿಗೆ ಬೀಳ್ಕೋಡುಗೆ ಸಮಾರಂಭ
ಫರಂಗಿಪೇಟೆ: ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಮುಖ್ಯೋಪಾಧ್ಯಾಯಿನಿಯಾಗಿ ಕವಳಮುಡೂರು ಶಾಲೆಗೆ ಪದೋನ್ನತಿ ಹೊಂದಿದ ಅನುಸೂಯ ಹಾಗೂ ವಯೋವೃತ್ತಿ ಹೊಂದಿದ ಜೆಸಿಂತ ಡಿಸೋಜ ಅವರ ಬೀಳ್ಕೋಡುಗೆ ಸಮಾರಂಭ ದ.ಕ.ಜಿ.ಪಂ.ಮಾ.ಹಿ. ಪ್ರಾಥಮಿಕ ಶಾಲೆ ಪುದು ಫರಂಗಿಪೇಟೆಯಲ್ಲಿ ನೆರವೇರಿತು.
ಈ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಟುಡೇ ಫೌಂಡೇಶನ್ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಸದಸ್ಯರಾದ ಮಜೀದ್, ತುಂಬೆ ಕ್ಲಸ್ಟರ್ನ ಸಂಪನ್ಮೂಲ ವ್ಯಕ್ತಿಯಾದ ರಮೇಶ್ ಆಗಮಿಸಿದ್ದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವವಾದುದು. ಜೀವನದುದ್ದಕ್ಕೂ ನಿಷ್ಠೆಯಿಂದ ಬೋಧನೆ ಮಾಡಿ ಸಾವಿರಾರು ವಿದ್ಯಾರ್ಥಿಗಳಿಗೆ ಜ್ಞಾನಾರ್ಜನೆ ಮಾಡಿರುವ ಶಿಕ್ಷಕರು ಮಕ್ಕಳ ಬಾಳಿಗೆ ಬೆಳಕಾಗುತ್ತಾರೆ. ಶಿಕ್ಷಕಿಯ ಸೇವಾ ನಿವೃತ್ತಿ ಬದುಕು ಅತ್ಯಂತ ನೆಮ್ಮದಿಯಾಗಲಿ ಹಾಗೂ ಪದೋನ್ನತಿಗೊಂಡ ಶಿಕ್ಷಕಿಯ ಭವಿಷ್ಯ ಉತ್ತಮವಾಗಲಿ ಎಂದು ಆರೈಸಿದರು.
ಈ ಸಂದರ್ಭದಲ್ಲಿ ಎಸ್ಡಿಎಂಸಿ ಅಧ್ಯಕ್ಷ ರಮ್ಲಾನ್ ಕುಂಪನಮಜಲು, ಪುದು ಗ್ರಾಮ ಪಂಚಾಯತ್ ಸದಸ್ಯೆಯಾದ ಸಾರಮ್ಮ, ಉಪಾಧ್ಯಕ್ಷೇಯಾದ ನೌಶಿದಾ, ಎಸ್ಡಿಎಂಸಿ ಸದಸ್ಯರಾದ ಎಫ್, ಹೆಚ್ ಇಸ್ಮಾಯಿಲದ, ರಜಿಯಾ, ನಿವೃತ್ತಿಗೊಂಡಿರುವ ಮುಖ್ಯ ಶಿಕ್ಷಕಿ ಯಮುನಾ, ಟುಡೇ ಫೌಂಡೇಶನ್ ಸದಸ್ಯರಾದ ಮಜೀದ್, ಸಿಆರ್ಪಿಯವರಾದ ರಮೇಶ್ ವೇದಿಕೆಯಲ್ಲಿ ಹಾಜರಿದ್ದರು.
ಜ್ಯೋತಿ ಜಿ ಪಿಂಟೋ ಮತ್ತು ಐವಿ ಸಿಲ್ವಿಯಾ ಸಿಕ್ವೆರಾ ಮಮತಾ, ಅರ್ಪಿತಾ ಉಪಸ್ಥಿತರಿದ್ದರು.
ಮುಖ್ಯಶಿಕ್ಷಕಿ ಜಯಂತಿ ಸ್ವಾಗತಿಸಿದರು. ಸಹಶಿಕ್ಷಕಿ ಬೆನದಿಕ್ತಾ ಲಸ್ಟೋದೊ ವಂದಿಸಿದರು. ಶಿಕ್ಷಕಿ ಶಾಲೆಟ್ ಕ್ರಾಸ್ತಾರವರು ನಿರೂಪಣೆಗೈದರು.


