ಮಂಗಳೂರು: ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ಗುರುತಿಸಿಕೊಂಡಿರುವ SKSSF ಹಿದಾಯತ್ ನಗರ
ಶಾಖೆಯ ನೂತನ ಅಧ್ಯಕ್ಷರಾಗಿ ಬಶೀರ್ ಎಂ.ಐ, ಪ್ರಧಾನ ಕಾರ್ಯದರ್ಶಿಯಾಗಿ ಅಲ್ತಾಫ್ ನುಜೂಮಿ, ಖಜಾಂಜಿಯಾಗಿ ರಿಜ್ವಾನ್ ರಿಜ್ಜು ಹಾಗೂ ವರಿಷ್ಠ ಕಾರ್ಯದರ್ಶಿಯಾಗಿ ಮಹಮ್ಮದ್ ನಾಸಿರ್ ಆಯ್ಕೆಯಾಗಿದ್ದಾರೆ.
ಅಬ್ದುಲ್ ರಹಮಾನ್, ಮನ್ಸೂರ್ ಚಿಕನ್, ರಿಯಾಝ್ ಮುರ ಉಪಾಧ್ಯಕ್ಷರಾಗಿ ಮತ್ತು ಶಿಹಾಬ್ ಇಬ್ರಾಹಿಂ, ಸೌನೀಜ್ ಹಾಗೂ ಕಲಂದರ್
ಜಾಯಿಂಟ್ ಸೆಕ್ರೆಟರಿಯಾಗಿ ಆಯ್ಕೆಯಾಗಿದ್ದಾರೆ.
ವಿವಿಧ ವಿಭಾಗಗಳ ಕಾರ್ಯದರ್ಶಿಗಳಾಗಿ ಇಬಾದ್ – ಅಕ್ಬರ್, ವಿಖಾಯ – ಮಹಮ್ಮದ್ ಬಶೀರ್, ಟ್ರೆಂಡ್ – ಮುಹಾಜ್ ಹಸನ್, ಸರ್ಗಾಲಯ – ಇರ್ಷಾದ್ ಬದುರು, ಕ್ಯಾಂಪಸ್ ವಿಂಗ್ – ಶಮೀರ್ ಶರೀಫ್, ತ್ವಲಬ ವಿಂಗ್ – ಸ್ವಾಬಹುದ್ದೀನ್ ಸಯ್ಯದ್ ಹಾಗೂ ಮೀಡಿಯಾ ವಿಂಗ್ – ನಿಜಾಮುದ್ದೀನ್ ಅವರನ್ನು ಆಯ್ಕೆ ಮಾಡಲಾಗಿದೆ.
ಕ್ಲಸ್ಟರ್ ಕೌನ್ಸಿಲರ್‌ಗಳಾಗಿ: ಮುಫ್ತಿ ರಫೀಕ್ ಹುದವಿ, ಅಬ್ದುಲ್ ಮಜೀದ್ ದಾರಿಮಿ, ಅಬೂಬಕ್ಕರ್ ಅಝರಿ, ಬದುರು ದಾರಿಮಿ, ಅಶ್ರಫ್ ಹಾಜಿ ಗುತ್ತು, ಸಿರಾಜುದ್ದೀನ್ ಬಿ.ಎಸ್., ಅಕ್ಬರ್ ಅಲಿ, ಅಬ್ದುಲ್ ನಾಸಿಫ್, ರಿಯಾಝ್ ಪರಂಗಿಪೇಟೆ, ಅಬೂಬಕ್ಕರ್ ಸಿದ್ದೀಕ್, ಅರ್ಷದ್, ಸಿದ್ದೀಕ್ ಹೋಟೆಲ್, ಕಲಂದರ್ ಹಾಗೂ ಶಾಫಿ ಅಬೂಬಕರ್ ಅವರನ್ನು ನೇಮಕ ಮಾಡಲಾಗಿದೆ.
ನೂತನ ಪದಾಧಿಕಾರಿಗಳು ಸಂಘಟನೆಯ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ನಿರೀಕ್ಷೆ ವ್ಯಕ್ತವಾಗಿದೆ.



