ದಿನಾಂಕ 13/09/2026ರ ಆದಿತ್ಯವಾರ ರಾತ್ರಿ ಇಶಾ ನಮಾಝ್ ಬಳಿಕ ವಳಚ್ಚಿಲ್ ಪದವಿನ ಹೋಟೆಲ್ ಅತಿಥಿ ಯಲ್ಲಿ ನಡೆದ ವಾರ್ಷಿಕ ಕ್ಯಾಬಿನೆಟ್ ನಲ್ಲಿ 2026-28ರ ನೂತನ ಸಮಿತಿಯನ್ನು ರಚಿಸಲಾಯಿತು
ಕಾರ್ಯಕ್ರಮವನ್ನು ಸ್ಥಳೀಯ ಖತೀಬ್ ಉಸ್ತಾದರಾದ ಬಹು ಉಮರ್ ದಾರಿಮಿ ಉಸ್ತಾದರು ದುಆ ಮತ್ತು ಉದ್ಘಾಟನೆ ಯನ್ನು ಮಾಡಿದರು ವಲಯ ಸಮಿತಿಯ ಪ್ರ ಕಾರ್ಯದರ್ಶಿ ನಿಯಾಝ್ ಫೈಝಿ ಯವರು ಸಂಘಟನೆಯ ಬಗ್ಗೆ ವಿವರಿಸಿದರು ನಂತರ ನಡೆದ ನೂತನ ಸಮಿತಿ ಆಯ್ಕೆಯಲ್ಲಿ ಅಧ್ಯಕ್ಷ ರಾಗಿ ಮೊಹಮ್ಮದ್ ಫವಾಝ್ ವಳಚ್ಚಿಲ್ ಪದವು, ಪ್ರ. ಕಾರ್ಯದರ್ಶಿ ಯಾಗಿ ಫರ್ವೀಝ್ ನಿಜಾಮಿ, ಕೋಶಾಧಿಕಾರಿ ಯಾಗಿ ಅಬ್ದುಲ್ ಸಲಾಂ,ಸಂಘಟನಾ ಕಾರ್ಯದರ್ಶಿ ಯಾಗಿ ಅಫ್ವಾನ್,ಉಪಾಧ್ಯಕ್ಷರುಗಳಾಗಿ ಮೊಹಮ್ಮದ್ ಸಾದಿಕ್, ಫಾರೂಕ್ ಡಿ ಮತ್ತು ಅಬ್ದುಲ್ ರಹಿಮಾನ್ (ಉಂಜ), ಜೊತೆ ಕಾರ್ಯದರ್ಶಿಗಳಾಗಿ ಬಾತಿಷ್, ಸಲ್ಮಾನ್ ಹಾಗೂ ರಾಹಿಲ್ ಮತ್ತು ಕಾರ್ಯಕಾರಿಣಿ ಸಮಿತಿಯ ಸದಸ್ಯರು ಗಳಾಗಿ ಇಮ್ತಿಯಾಜ್, ನಝೀರ್ ವಳಚ್ಚಿಲ್,ದಾವೂದ್ ಐಫ್ಫಾ, ಜೈನುದ್ದೀನ್,ಅಬ್ದುಲ್ ಲತೀಫ್ ಹಾಗೂ ಕ್ಲಸ್ಟರ್ ಕೌನ್ಸಿಲರ್ ಆಗಿ ನಝೀರ್ ವಳಚ್ಚಿಲ್ ಮತ್ತು ಇಮ್ತಿಯಾಜ್ ರವರನ್ನು ಆಯ್ಕೆಮಾಡಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ದಾವೂದ್ ಐಫ್ಫಾ ರವರು ವಹಿಸಿದ್ದರು ಇಬ್ರಾಹಿಂ ಖಲೀಲ್ ಸ್ವಾಗತಿಸಿ ಕೊನೇಯದಾಗಿ ಪರ್ವೀಝ್ ನಿಜಾಮಿ ವಂದಿಸಿದರು



