Flash News

ಇರಾನ್ ಮೇಲೆ ಇಸ್ರೇಲ್ ದಾಳಿ ಬೆನ್ನಲ್ಲೆ ದುಬೈ, ಬಹರೈನ್, ಕುವೈತ್ ಸ್ಪೋಟ

ಬಹ್ರೇನ್ : ಇರಾನ್ ಮೇಲೆ ಅಮೆರಿಕ-ಇಸ್ರೇಲ್ ಜಂಟಿ ದಾಳಿ ಬೆನ್ನಲ್ಲೆ ಬಹ್ರೇನ್, ಕುವೈತ್, ಅಬುಧಾಬಿಯಲ್ಲಿ ಸ್ಫೋಟಗಳು ಸಂಭವಿರುವ ಬಗ್ಗೆ Aljazeera ವರದಿ ಮಾಡಿದೆ. ಬಹ್ರೇನ್‌ನ ಆಂತರಿಕ ಸಚಿವಾಲಯ ತುರ್ತು ಎಚ್ಚರಿಕೆಯನ್ನು ನೀಡಿದೆ. ನಾಗರಿಕರನ್ನು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಸೂಚನೆಯನ್ನು ನೀಡಿದೆ. ಬಹ್ರೇನ್‌ನ ಜುಫೈರ್ ಪ್ರದೇಶದಲ್ಲಿರುವ ಯುಎಸ್ ನೌಕಾಪಡೆ ನೆಲೆಯಿಂದ ಹೊಗೆ ಕಾಣಿಸಿಕೊಂಡಿದೆ ಎಂದು ರಾಯಿಟರ್ಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಯುಎಸ್ ನೌಕಾಪಡೆಯ 5ನೇ ಪ್ರಧಾನ ಕಚೇರಿಯನ್ನು ಕ್ಷಿಪಣಿ ದಾಳಿಗೆ ಗುರಿಪಡಿಸಲಾಗಿದೆ ಎಂದು ಬಹ್ರೇನ್ ದೃಢಪಡಿಸಿದೆ. ಯುನೈಟೆಡ್ […]

ಇರಾನ್ ಮೇಲೆ ಇಸ್ರೇಲ್ ದಾಳಿ: ರಾಷ್ಟ್ರಪತಿ ಭವನ ಧ್ವಂಸ, ಗುಪ್ತ ಸ್ಥಳಕ್ಕೆ ಖಮೇನಿ ಶಿಫ್ಟ್!

ನವದೆಹಲಿ: ಇರಾನ್‌ ಮೇಲೆ ಇಸ್ರೇಲ್‌ ಮುಂಜಾಗ್ರತಾ ದಾಳಿ ನಡೆಸಿದ ಬೆನ್ನಲ್ಲಿಯೇ ಅಮೆರಿಕ ಕೂಡ ಇರಾನ್‌ ಮೇಲೆ ದಾಳಿ ಆರಂಭಿಸಿದೆ. ಅಂತಾರಾಷ್ಟ್ರೀಯ ಮಾಧ್ಯಮಗಳ ವರದಿಯ ಪ್ರಕಾರ, ಇರಾನ್ ಅಧ್ಯಕ್ಷ ಮಸೌದ್ ಪೆಜೆಶ್ಕಿಯಾನ್ ಅವರ ನಿವಾಸದ ಮೇಲೆ ಭಾರೀ ಪ್ರಮಾಣದ ದಾಳಿ ನಡೆಸಲಾಗಿದೆ. ಇದರ ಜೊತೆಗೆ, ಹಲವಾರು ಮಂತ್ರಿಗಳ ಮನೆಗಳು ಮತ್ತು ಭದ್ರತಾ ಪಡೆಗಳ ನೆಲೆಗಳ ಮೇಲೂ ದಾಳಿ ನಡೆದಿದೆ. ಗುಪ್ತಚರ ಸಂಸ್ಥೆಯ ಕಚೇರಿಗಳ ಮೇಲೂ ದಾಳಿ ನಡೆದಿದೆ. ಇರಾನ್‌ನ 30 ಕ್ಕೂ ಹೆಚ್ಚು ಸ್ಥಳಗಳಲ್ಲಿ ಬಾಂಬ್‌ಸ್ಫೋಟದ ಸದ್ದು ಕೇಳಿಬಂದಿದ್ದುಮ […]

ಮಂಗಳೂರು | ಮಕ್ಕಳ ಕಳ್ಳರಿದ್ದಾರೆ ವದಂತಿ ನಂಬಿದ ಜನರಲ್ಲಿ ಆತಂಕ, ‘ಕಳ್ಳರ ಗ್ಯಾಂಗ್’ ಕತೆಸುಳ್ಳು: ಪೊಲೀಸರಿಂದ ಸ್ಪಷ್ಟನೆ

ಮಂಗಳೂರು: ನಗರದ ಕುಂಟಿಕಾನ ಬಳಿ ಮಕ್ಕಳ ಅಪಹರಣ ತಂಡದ ಬಗ್ಗೆ ಶುಕ್ರವಾರ ಬೆಳಿಗ್ಗೆ ವೈರಲ್ ಆದ ವದಂತಿ ಸಾರ್ವಜನಿಕರಲ್ಲಿ ವ್ಯಾಪಕ ಭೀತಿಯನ್ನುಂಟುಮಾಡಿತು. ಆದರೆ, ಕದ್ರಿ ಪೊಲೀಸರು ಸಮಗ್ರ ತನಿಖೆಯ ನಂತರ, ಈ ವರದಿಗಳು ಸಂಪೂರ್ಣವಾಗಿ ಆಧಾರರಹಿತ ಎಂದು ಸ್ಪಷ್ಟಪಡಿಸಿದ್ದಾರೆ. ವಾಟ್ಸ್‌ಆ್ಯಪ್‌ನಲ್ಲಿ ಹರಿದಾಡುವ ಸಂದೇಶಗಳು ಸಂಪೂರ್ಣ ಸುಳ್ಳಾಗಿವೆ. ಯಾರೂ ಗಾಬರಿಯಾಗಬೇಡಿ ಎಂದು ಎಲ್ಲಾ ರೀತಿಯ ವದಂತಿಗೆ ತೆರೆ ಎಳೆದಿದ್ದಾರೆ. ಗುರುವಾರ ಸಂಜೆ ಕುಂಟಿಕಾನದ ಬಳಿ ನಡೆದುಕೊಂಡು ಹೋಗುತ್ತಿದ್ದ ಬಾಲಕನೊಬ್ಬ ಅಲ್ಲಿದ್ದ ಆಟೋದಲ್ಲಿ ಮಕ್ಕಳು ಅಳುತ್ತಿರುವುದನ್ನು ಕೇಳಿಸಿಕೊಂಡಿದ್ದ ಸ್ನೇಹಿತನಿಗೆ ಮಕ್ಕಳ […]

‘ಗೋದ್ರಾ ಮೀಟ್ಸ್ ಗಾಝಾ’: ಇಸ್ರೇಲ್ ಭೇಟಿಯ ವೇಳೆ ನೆತನ್ಯಾಹು ತಬ್ಬಿಕೊಂಡ ಮೋದಿ ವಿರುದ್ಧ ನಟ ಕಿಶೋರ್ ಕುಮಾರ್ ಕಿಡಿ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಎರಡು ದಿನಗಳ ಇಸ್ರೇಲ್ ಭೇಟಿ ಮುಗಿಸಿ ವಾಪಸ್ಸಾಗಿದ್ದಾರೆ. ಫೆ.25ರಂದು ಬುಧವಾರದಂದು ಎರಡು ದಿನಗಳ ಇಸ್ರೇಲ್ ಭೇಟಿಗಾಗಿ ತೆರಳಿದ್ದ ಪ್ರಧಾನಿ ಮೋದಿಯವರನ್ನು ಟೆಲ್ಅವೀವ್ ನ ಬೆನ್ ಗ್ಯುರಿಯನ್ ವಿಮಾನ ನಿಲ್ದಾಣದಲ್ಲಿ ಬಂದಿಳಿದ ವೇಳೆ ಸ್ವಾಗತಿಸಿದ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಸ್ವಾಗತಿಸಿ ತಬ್ಬಿಕೊಂಡಿರುವ ಫೋಟೋ ವೈರಲ್ ಆಗಿದೆ. ಇಸ್ರೇಲ್ ಭೇಟಿಯ ವೇಳೆ ಮೋದಿಯವರು ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರನ್ನು ಪರಸ್ಪರ ತಬ್ಬಿಕೊಂಡಿರುವ ಫೋಟೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿರುವ ನಟ ಕಿಶೋರ್ ಕುಮಾರ್ ಅವರು […]

ಪುತ್ತೂರು: ಕಾಮಗಾರಿ ದೂಳಿನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟಿಸಿದ್ದಕ್ಕೆ ಪ್ರಾಂಶುಪಾಲೆಗೆ ಸಸ್ಪೆಂಡ್ ಶಿಕ್ಷೆ!

ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ಕೆಲವು ದಿನಗಳಿಂದ ವಿದ್ಯಾರ್ಥಿನಿಯರು ತರಗತಿಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುತ್ತಿದ್ದರು. ಕಾಲೇಜಿನ ಪಕ್ಕದಲ್ಲೇ ನಡೆಯುತ್ತಿರುವ ಸರ್ಕಾರಿ ಆಸ್ಪತ್ರೆಯ ನೂತನ ಕಟ್ಟಡ ಕಾಮಗಾರಿಯಿಂದಾಗಿ ತರಗತಿಯೊಳಗೆ ಅತಿಯಾದ ದೂಳು ತುಂಬಿಕೊಳ್ಳುತ್ತಿತ್ತು. ಇದರಿಂದ ಪಾಠ ಕೇಳಲು ಅಸಾಧ್ಯವಾಗುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ರಸ್ತೆ ಬಂದ್ ಮಾಡಿ ದಿಢೀರ್ ಪ್ರತಿಭಟನೆ ನಡೆಸಿದ್ದರು. ಪ್ರತಿಭಟನಾ ಸ್ಥಳಕ್ಕೆ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಭೇಟಿ ನೀಡಿದ್ದ ಸಂದರ್ಭದಲ್ಲಿ ಹೈಡ್ರಾಮಾ ನಡೆದಿತ್ತು. […]

ನಾನು ಹುಟ್ಟಿದ ದಿನವೇ ಇಸ್ರೇಲ್ ದೇಶ ಘೋಷಣೆಯಾಯಿತು: ಪ್ರಧಾನಿ ಮೋದಿ

ಜೆರುಸಲೇಂ: ‘ನಾನು ಹುಟ್ಟಿದ ದಿನವೇ ಇಸ್ರೇಲ್ ದೇಶ ಘೋಷಣೆಯಾಯಿತು’ ಎಂದು ನರೇಂದ್ರ ಮೋದಿ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಇಸ್ರೇಲ್‌ ಸಂಸತ್ತು ‘ಕನೆಸೆಟ್’ ಉದ್ದೇಶಿಸಿ ಮಾತನಾಡಿದ ಅವರು, ‘ಒಂಬತ್ತು ವರ್ಷಗಳ ಹಿಂದೆ ಇಸ್ರೇಲ್‌ಗೆ ಭೇಟಿ ನೀಡಿದ ಭಾರತದ ಮೊದಲ ಪ್ರಧಾನಿಯಾಗುವ ಅದೃಷ್ಟ ನನಗೆ ಸಿಕ್ಕಿತ್ತು. ನಾನು ಯಾವಾಗಲೂ ಆಕರ್ಷಿತನಾಗುತ್ತಿದ್ದ ಭೂಮಿಗೆ ಮತ್ತೆ ಬಂದಿರುವುದು ನನಗೆ ತುಂಬಾ ಸಂತೋಷವಾಗಿದೆ. ವಿಶೇಷವೆಂದರೆ, 1950ರ ಸೆಷ್ಟಂಬರ್‌ 17ರಂದು ಇಸ್ರೇಲ್ ದೇಶ ಘೋಷಿಸಲ್ಪಟ್ಟ ದಿನವೇ ನಾನು ಜನಿಸಿದ್ದು’ ಎಂದು ಅವರು ಹೇಳಿದ್ದಾರೆ. 2023ರ ಅಕ್ಟೋಬರ್‌ 7ರಂದು […]

ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್​​: ತಲೆಮರೆಸಿಕೊಂಡ ಸ್ವಯಂ ಘೋಷಿತ ದೇವಮಾನವ

ಯಾದಗಿರಿ: ಅಪ್ರಾಪ್ತ ಬಾಲಕಿಯ ಜೊತೆ ಅನುಚಿತವಾಗಿ ವರ್ತನೆ ಹಿನ್ನೆಲೆ ಶಹಾಪುರ ತಾಲೂಕಿನ ಮಹಲ್ ರೋಜಾ ಗ್ರಾಮದ ಯಮನೂರಪ್ಪ ಮುತ್ಯಾನ ಮಠದ ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಪೋಕ್ಸೋ ಕೇಸ್ ದಾಖಲಾಗಿದೆ. ಬಂಧನದ ಭೀತಿ ಹಿನ್ನೆಲೆ ಪ್ರಕರಣ ದಾಖಲಾಗುತ್ತಿದ್ದಂತೆ ಮುತ್ಯಾ ನಾಪತ್ತೆಯಾಗಿದ್ದು, ತಲೆಮರೆಸಿಕೊಂಡಿರುವ ಸುದ್ದಿ ಹರಿದಾಡಿವೆ. ಘಟನೆ ಬಗ್ಗೆ ಮಕ್ಕಳ ಹಕ್ಕುಗಳ ಆಯೋಗ ಕೂಡ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಕಾರಣ ಸ್ವಯಂ ಘೋಷಿತ ದೇವಮಾನವನಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ. ಮಲ್ಲಿಕಾರ್ಜುನ ಮುತ್ಯಾ ವಿರುದ್ಧ ಶಹಾಪುರ ತಾಲೂಕಿನ ಗೋಗಿ ಠಾಣೆಯಲ್ಲಿ ಪೋಕ್ಸೋ ಕೇಸ್ […]

ಪ್ರಧಾನಿ ಮೋದಿ ಮತ್ತೊಂದು ದಾಖಲೆ: Instagramನಲ್ಲಿ 100 ಮಿ. ಫಾಲೋವರ್ಸ್ ದಾಟಿದ ಮೊದಲ ವಿಶ್ವ ನಾಯಕ

ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಗುರುವಾರ ಐತಿಹಾಸಿಕ ಮೈಲುಗಲ್ಲು ಸಾಧಿಸಿದ್ದು, ಇನ್ಸ್ಟಾಗ್ರಾಂನಲ್ಲಿ 100 ಮಿಲಿಯನ್ ಅನುಯಾಯಿಗಳನ್ನು ಹೊಂದಿದ ವಿಶ್ವದ ಮೊದಲ ನಾಯಕ ಮತ್ತು ರಾಜಕಾರಣಿಯಾಗಿ ಹೊರಹೊಮ್ಮಿದ್ದಾರೆ. 2014ರಲ್ಲಿ ಇನ್‌ಸ್ಟಾಗ್ರಾಂ ಖಾತೆ ಸೇರಿದ್ದ ಪ್ರಧಾನಿ ಮೋದಿ ಅವರಿಗೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗಿಂತ ಎರಡು ಪಟ್ಟು ಹೆಚ್ಚು ಅನುಯಾಯಿಗಳಿದ್ದಾರೆ. ಮುಂದಿನ ಐದು ಪ್ರಮುಖ ಜಾಗತಿಕ ನಾಯಕರ ಒಟ್ಟು ಅನುಯಾಯಿಗಳ ಸಂಖ್ಯೆಯೂ ಮೋದಿ ಅವರ ವೈಯಕ್ತಿಕ ಅನುಯಾಯಿಗಳಿಗಿಂತ ಕಡಿಮೆಯಾಗಿದೆ. ಡೊನಾಲ್ಡ್ ಟ್ರಂಪ್ ಅವರಿಗೆ 43.2 ಮಿಲಿಯನ್ ಅನುಯಾಯಿಗಳಿದ್ದು, […]

 ಮಂಗಳೂರು | ರೈಲ್ವೇ ಟ್ರಾಕ್ ನಲ್ಲಿ ಕುಳಿತಿದ್ದ ವಿದ್ಯಾರ್ಥಿಗಳ ವಿಡಿಯೋ ತೆಗೆದು ಜಾಲತಾಣದಲ್ಲಿ ವೈರಲ್, ತಂದೆ- ಮಗ ಬಂಧನ

ಮಂಗಳೂರು: ನಗರದ ಅತ್ತಾವರ ಬಾಬುಗುಡ್ಡೆ ಎಂಬಲ್ಲಿ ರೈಲ್ವೇ ಟ್ರ್ಯಾಕ್ ಬಳಿ ಕುಳಿತುಕೊಂಡಿದ್ದ ಕಾಲೇಜು ವಿದ್ಯಾರ್ಥಿ- ವಿದ್ಯಾರ್ಥಿನಿಯ ವಿಡಿಯೋ ಮಾಡಿ, ಹುಡುಗನಿಗೆ ಹಲ್ಲೆಗೈದು ನೈತಿಕ ಪೊಲೀಸ್ ಗಿರಿ ನಡೆಸಿದ ಘಟನೆ ನಡೆದಿದ್ದು ಪಾಂಡೇಶ್ವರ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಪಾಂಡೇಶ್ವರ ಠಾಣೆ ವ್ಯಾಪ್ತಿಯ ಅತ್ತಾವರದ ನಿವಾಸಿಗಳಾದ ಸ್ಟೀವನ್ ಮೊಂತೇರೊ ಮತ್ತು ಆತನ ಮಗ ಅವಿಲ್ ಬಂಧಿತ ಆರೋಪಿಗಳು. ಫೆ.23ರಂದು ಅಪ್ರಾಪ್ತ ಕಾಲೇಜು ವಿದ್ಯಾರ್ಥಿಗಳು ರೈಲ್ವೇ ಟ್ರಾಕ್ ನಲ್ಲಿ ಕುಳಿತು ಮಾತನಾಡುತ್ತಿದ್ದಾಗ ಸ್ಟೀವನ್ ಮೊಬೈಲಿನಲ್ಲಿ ವಿಡಿಯೋ ಚಿತ್ರೀಕರಿಸಿದ್ದು ಅದನ್ನು ಫೇಸ್ಬುಕ್ ನಲ್ಲಿ […]

ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ಪುಂಡಾಟ ನಡೆಸಿದ 25 ಎಬಿವಿಪಿ ಕಾರ್ಯಕರ್ತರ ವಿರುದ್ಧ FIR

ಬೆಂಗಳೂರು: ಸರ್ಜಾಪುರ ಅಜೀಂ ಪ್ರೇಮ್ ಜಿ ಯೂನಿವರ್ಸಿಟಿಗೆ ನುಗ್ಗಿ ದಾಂಧಲೆ ಮಾಡಿದ ಆರೋಪದ ಮೇಲೆ 25 ಎಬಿವಿಪಿ ಕಾರ್ಯಕರ್ತರ ಮೇಲೆ ಸರ್ಜಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಮಂಗಳವಾರ ಸಂಜೆ ಸರ್ಜಾಪುರ ಅಜೀಂ ಪ್ರೇಮ್​ ಜಿ ಯೂನಿವರ್ಸಿಟಿ ಮುಂದೆ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ಹಮ್ಮಿಕೊಂಡಿದ್ದರು. ಕಾಶ್ಮೀರದ ಸೈನಿಕರನ್ನು ಅತ್ಯಾಚಾರಿಗಳು ಎಂದು ಬಿಂಬಿಸುವ ಚರ್ಚೆಯನ್ನು ಅಖಿಲ ಭಾರತೀಯ ವಿದ್ಯಾರ್ಥಿ ಸಂಘ (AISA) SPARK ವಿದ್ಯಾರ್ಥಿ ವೃಂದದಿಂದ ಆಯೋಜಿಸಿದ್ದನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಕೂಡಲೇ ಯೂನಿವರ್ಸಿಟಿಯ ಮಾನ್ಯತೆ ರದ್ದುಗೊಳಿಸಲು ಕೋರಿ […]