ಮುಸ್ಲಿಂ ಸಮುದಾಯ ಆಕ್ರೋಶಕ್ಕೆ ಮಣಿದ ಕಾಂಗ್ರೆಸ್: ನಲಪಾಡ್ ಮಾತಿಗೆ ಖಡಕ್ ವಾರ್ನಿಂಗ್

ಬೆಂಗಳೂರು : ರಾಜ್ಯದಲ್ಲಿ ಬೈ ಎಲೆಕ್ಷನ್ ಅಬ್ಬರ ಜೋರಾಗಿದೆ. 2 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಘಟಾನುಘಟಿಗಳೇ ಪ್ರಚಾರಕ್ಕೆ ಇಳಿದಿದ್ದು, ಗೆಲುವಿನ ಪಣ ತೊಟ್ಟಿದ್ದಾರೆ. ದಾವಣಗೆರೆಯಲ್ಲಿ ಕೈ ಅಭ್ಯರ್ಥಿ ಸಮರ್ಥ್ ಶಾಮನೂರಿಗೆ ಮುಸ್ಲಿಂ ನಾಯಕರ ಬಂಡಾಯದ ಬಿಸಿ ತಟ್ಟದಂತೆ ನೋಡಿಕೊಳ್ಳಲು ಕಾಂಗ್ರೆಸ್ ಮುಸ್ಲಿಂ ನಾಯಕರು ದಾವಣಗೆರೆಗೆ ದೌಡಾಯಿಸಿದ್ದಾರೆ. ಜಿಲ್ಲೆಯಲ್ಲಿ ಮುಸ್ಲಿಂ ಪಕ್ಷೇತರ ಅಭ್ಯರ್ಥಿಗಳ ಮನವೊಲಿಕೆ ಮಾಡಲು ಬಂದಿದ್ದ ನಲಪಾಡ್, ಮುಸ್ಲಿಂ ನಾಯಕರ ಕೆಂಗಣ್ಣಿಗೆ ಗುರಿಯಾಗುವಂತಹ ಹೇಳಿಕೆ ನೀಡಿದ್ರು. ಈ ವಿಚಾರಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲ ಕೂಡ ಗರಂ ಆಗಿದ್ದು, […]
ಉದ್ಯಮಿ ಬಿ ಎಂ ಫಾರೂಕ್ ಅವರಿಗೆ ಗೌರವ ಡಾಕ್ಟರೇಟ್

ತುಳುನಾಡಿನ ಮಣ್ಣಿನ ಹೆಮ್ಮೆಯ ಪುತ್ರ, ರಾಜ್ಯ ಕಂಡ ಅತ್ಯುತ್ತಮ ಉದ್ಯಮಿ ಮತ್ತು ವಿಧಾನಪರಿಷತ್ ಸದಸ್ಯ ಬಿ. ಎಂ. ಫಾರೂಕ್ ಅವರಿಗೆ ಬೆಂಗಳೂರು ನಗರ ವಿವಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿದೆ. ಐದನೇ ಘಟಿಕೋತ್ಸವ ದಿನವಾದ ಇಂದು ರಾಜ್ಯಪಾಲ ತಾವರ ಚಂದ್ ಗೆಹ್ಲೋಟ್, ಡಾ. ಎಂ ಮೋಹನ್ ಆಳ್ವ ಜತೆ ಬಿಎಮ್ ಫಾರೂಕ್ ಅವರಿಗೂ ಗೌಡಾ ಪ್ರದಾನ ಮಾಡಿದರು. ಫಾರೂಕ್ ತಂದೆ ದಿವಂಗತ ಹಾಜಿ ಅಹಮದ್ ಬಾವಾ ಒಬ್ಬ ಯಶಸ್ವಿ ಉದ್ಯಮಿಯಾಗಿದ್ದರು ಮತ್ತು ತಾಯಿ ದಿವಂಗತ ಆಯಿಷಮ್ಮ ಕುಟುಂಬದ […]
ಸುನ್ನತ್ ಆದರೂ ಮಾಡಿಕೋ, ಮಾಂಸನಾದ್ರೂ ತಿನ್ನು; ಸಿಎಂ ಸಿದ್ದರಾಮಯ್ಯ ವಿರುದ್ಧ ನಾಲಿಗೆ ಹರಿಬಿಟ್ಟ ಪ್ರತಾಪ್ ಸಿಂಹ

ಬಾಗಲಕೋಟೆ: ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆ ಐಹೊಳೆ ಗ್ರಾಮದಲ್ಲಿ ಬಿಜೆಪಿ ಪ್ರಚಾರ ಸಭೆ ಮಾಡಲಾಗಿದೆ. ಈ ವೇಳೆ ಮಾತನಾಡಿದ ಬಿಜೆಪಿ ಮಾಜಿ ಸಂಸದ ಪ್ರತಾಪ್ ಸಿಂಹ, ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ಮಾಡಿದ್ದಾರೆ. ಸಿದ್ದರಾಮಯ್ಯ ಯುಗಾದಿ ಹಬ್ಬದಂದೂ ಮಾಂಸ ತಿಂತೀನಿ ಅಂತಾರೆ. ಸಿದ್ರಾಮಣ್ಣ ನೀನು ಮಾಂಸನಾದ್ರೂ ತಿನ್ನು, ಸುನ್ನತ್ ಆದರೂ ಮಾಡಿಕೋ, ಏನ್ಬೇಕಾದರೂ ಮಾಡು ಎಂದು ನಾಲಿಗೆ ಹರಿಬಿಟ್ಟಿದ್ದಾರೆ. ನೀನು ಯುಗಾದಿ, ದೀಪಾವಳಿ ಹಬ್ಬಕ್ಕೆ ಮಾಂಸ ತಿಂತೀನಿ ಅಂದರೆ 15% ಮುಸ್ಲಿಮರನ್ನು ಓಲೈಸಲು ಹಿಂದೂಗಳ […]
ಪ್ರಧಾನಿ ಮೋದಿ ಹತ್ಯೆ ಯತ್ನದ ಸಂಚಿನ ಮಾಸ್ಟರ್ ಮೈಂಡ್, ನಕ್ಸಲ್ ನಾಯಕ ಪ್ರಶಾಂತ್ ಬೋಸ್ ನಿಧನ!
ರಾಂಚಿ (ಜಾರ್ಖಂಡ್): ದೇಶದ ಅತಿದೊಡ್ಡ ನಕ್ಸಲ್ ನಾಯಕ ಹಾಗೂ ಮಾವೋವಾದಿ ಸಂಘಟನೆಯ ಎರಡನೇ ಪ್ರಮುಖ ಕಮಾಂಡರ್ ಆಗಿದ್ದ ಪ್ರಶಾಂತ್ ಬೋಸ್ ಅಲಿಯಾಸ್ ಕಿಶನ್ ದಾ ಇಂದು ನಿಧನರಾಗಿದ್ದಾರೆ. 80 ವರ್ಷದ ಬೋಸ್ ಕಳೆದ 4 ವರ್ಷದಿಂದ ಜಾರ್ಖಂಡ್ನ ಜೈಲಿನಲ್ಲಿದ್ದರು. ಅನಾರೋಗ್ಯದ ಹಿನ್ನೆಲೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾರೆ. ಕಳೆದ ವಾರವಷ್ಟೇ ಗೃಹ ಮಂತ್ರಿ ಅಮಿತ್ ಶಾ ಅವರು ಭಾರತ ದೇಶವನ್ನು ನಕ್ಸಲ್ ಮುಕ್ತ ದೇಶವೆಂದು ಘೋಷಿಸಿದ್ದರು. ಇದೀಗ ಪ್ರಶಾಂತ್ ಬೋಸ್ ಸಾವು […]
ಸೌದಿ, ಯುಎಇ ಸೇರಿ 5 ದೇಶಗಳ 8 ದೊಡ್ಡ ಸೇತುವೆಗಳ ಮೇಲೆ ಶೀಘ್ರವೇ ದಾಳಿ: ಇರಾನ್‌ನಿಂದ ಹಿಟ್ ಲಿಸ್ಟ್ ರಿಲೀಸ್

ಟೆಹ್ರಾನ್: ಅಮೆರಿಕ ತನ್ನ ಸೇತುವೆಯನ್ನು ಗುರಿಯಾಗಿಸಿ ದಾಳಿ ನಡೆಸಿದ್ದಕ್ಕೆ ಪ್ರತೀಕಾರವಾಗಿ ತಾನು ಮಧ್ಯಪ್ರಾಚ್ಯ ದೇಶಗಳಲ್ಲಿರುವ ಸೇತುವೆಗಳ ಮೇಲೆ ದಾಳಿ ನಡೆಸುವುದಾಗಿ ಇರಾನ್ ಎಚ್ಚರಿಕೆ ನೀಡಿದೆ. ಅಮೆರಿಕ ವಾಯುಪಡೆ ಇರಾನ್‌ನ ಅತ್ಯಂತ ಎತ್ತರದ ಮತ್ತು ಪ್ರಮುಖ ಬಿ1 (B1) ಹೆದ್ದಾರಿ ಸೇತುವೆಯನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿತ್ತು. ಇದಕ್ಕೆ ಸಿಟ್ಟಾಗಿರುವ ಇರಾನ್ ಈಗ ನೆರೆಯ ರಾಷ್ಟ್ರಗಳಾದ ಕುವೈತ್, ಯುಎಇ, ಸೌದಿ ಅರೇಬಿಯಾ ಮತ್ತು ಜೋರ್ಡಾನ್‌ನಲ್ಲಿರುವ ಎಂಟು ಪ್ರಮುಖ ಸೇತುವೆಗಳನ್ನು ಗುರಿಯಾಗಿಸಿಕೊಂಡು ಹಿಟ್ ಲಿಸ್ಟ್ ಬಿಡುಗಡೆ ಮಾಡಿದೆ. ಹಿಟ್ ಲಿಸ್ಟ್‌ನಲ್ಲಿರುವ ಸೇತುವೆಗಳು […]
ಮೋದಿ ಅಂದ್ರೆ ನಿಮಗೆ ಭಯ, ಸಮೋಸಾ ಬೆಲೆ ಇಳಿಸೋದಲ್ಲ ನಮ್ಮ ಕೆಲಸ: ರಾಘವ್ ಚಡ್ಡಾ ವಿರುದ್ಧ ಗುಡುಗಿದ AAP

ನವದೆಹಲಿ: ರಾಜ್ಯಸಭೆಯ ಎಎಪಿ ಉಪನಾಯಕ ಸ್ಥಾನದಿಂದ ರಾಘವ್ ಚಡ್ಡಾ ಅವರನ್ನು ಕೈಬಿಟ್ಟ ಬೆನ್ನಲ್ಲೇ, ಅವರು ಎಎಪಿ ವಿರುದ್ಧ ವಿಡಿಯೋ ಸಂದೇಶವೊಂದನ್ನು ಬಿಡುಗಡೆ ಮಾಡಿದ್ದರು. ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಆಮ್ ಆದ್ಮಿ ಪಕ್ಷ (ಎಎಪಿ), ರಾಘವ್ ಚಡ್ಡಾ ಅವರ ವಿರುದ್ಧ ವಾಗ್ದಾಳಿ ನಡೆಸಿದೆ. ಎಎಪಿ ರಾಷ್ಟ್ರೀಯ ಮಾಧ್ಯಮ ಮುಖ್ಯಸ್ಥ ಅನುರಾಗ್ ಧಾಂಡಾ, ರಾಘವ್ ಚಡ್ಡಾ ಅವರು ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡಲು ಹೆದರುತ್ತಿದ್ದಾರೆ ಎಂದು ನೇರ ಆರೋಪ ಮಾಡಿದ್ದಾರೆ. “ಕಳೆದ ಕೆಲವು ವರ್ಷಗಳಿಂದ ರಾಘವ್, ನೀವು […]
ನಾನು ಸಿಎಂ ಆದರೆ ಯೋಗಿ ಸ್ಟೈಲ್ ಆಡಳಿತ, ಮುಸ್ಲಿಂ ಸಮುದಾಯವನ್ನು ಅಲ್ಪಸಂಖ್ಯಾತ ಪಟ್ಟಿಯಿಂದ ಹೊರಹಾಕುತ್ತೇನೆ: ಯತ್ನಾಳ್

ವಿಜಯಪುರ: ದಾವಣಗೆರೆ-ಬಾಗಲಕೋಟೆ ಉಪಚುನಾವಣಾ ಕಣ ಕಾವೇರುತ್ತಿದೆ. ಈ ನಡುವೆ ಸಚಿವ ಎಂ.ಬಿ. ಪಾಟೀಲ್ ಮತ್ತು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ನಡುವೆ ವಾಕ್ಸಮರ ಮುಂದುವರಿದಿದೆ.’ಯತ್ನಾಳ್‌ಗೆ ಸ್ವಾಭಿಮಾನವಿದ್ದರೆ ಬಿಜೆಪಿಯನ್ನು ಸೋಲಿಸಲಿ’ ಎಂಬ ಸಚಿವರ ಸವಾಲಿಗೆ ಯತ್ನಾಳ್ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದರು. ಇಂದು ವಿಜಯಪುರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಯತ್ನಾಳ್ ಅವರು, ಬಿಜೆಪಿಯಲ್ಲಿನ ಬೆಳವಣಿಗೆಗಳ ಬಗ್ಗೆ ಮಾತನಾಡಿದರು. ನಾನು ಯಾರ ಮುಂದೆಯೂ ಹೋಗಿ ನನ್ನನ್ನು ಪಕ್ಷಕ್ಕೆ ಸೇರಿಸಿಕೊಳ್ಳಿ ಎಂದು ಬೇಡುವುದಿಲ್ಲ. ಹನುಮ ಜಯಂತಿಯ ಈ ಪವಿತ್ರ ದಿನದಂದು ಆಂಜನೇಯನ ಸಾಕ್ಷಿಯಾಗಿ […]
ಉಡುಪಿ: ಯುವಕನ ಅಪಹರಣ ಪ್ರಕರಣ, ಪ್ರಮುಖ ಆರೋಪಿಗಳ ಪತ್ತೆಗೆ 50,000 ಬಹುಮಾನ ಘೋಷಣೆ

ಉಡುಪಿ ಜಿಲ್ಲೆಯ ಸಾಸ್ತಾನದಲ್ಲಿ ನಾಲ್ಕು ತಿಂಗಳ ಹಿಂದೆ ನಡೆದಿದ್ದ ಯುವಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಹತ್ವದ ಕ್ರಮ ಕೈಗೊಂಡಿದ್ದು, ಕೋಕಾ (KCOCA) ಕಾಯ್ದೆಯಡಿ ಪ್ರಕರಣ ದಾಖಲಿಸಿ ಈಗಾಗಲೇ ಏಳು ಮಂದಿಯನ್ನು ಬಂಧಿಸಿದ್ದಾರೆ. ಇದೇ ಪ್ರಕರಣದ ಪ್ರಮುಖ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿರುವ ಹಿನ್ನೆಲೆಯಲ್ಲಿ ಅವರ ಪತ್ತೆಗೆ ತೀವ್ರ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಜೊತೆಗೆ ಇವರ ಪತ್ತೆಗೆ ₹50,000 ಬಹುಮಾನವನ್ನು ಸಹ ಘೋಷಿಸಲಾಗಿದೆ. ಈ ಪ್ರಕರಣದಲ್ಲಿ ಬಂಧಿತರಾದವರು ಸುರತ್ಕಲ್ ಕಾಟಿಪಳ್ಳದ ದೇವಿಪ್ರಸಾದ್ ಶೆಟ್ಟಿ (33), ಸುದೀಪ್ (22), ಮಿಥುನ್ […]
ತುಂಬೆ | ಭೀಕರ ಅಪಘಾತದಲ್ಲಿ 7 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

►ರಾತ್ರೋರಾತ್ರಿ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ಬಂಟ್ವಾಳ ಟ್ರಾಫಿಕ್ ಎಸ್‌ಐ ಆದರ್ಶ್, ಇಮ್ರಾನ್ ಮಾರಿಪಳ್ಳ, ಇಶಾಮ್ ಫರಂಗಿಪೇಟೆ ತುಂಬೆ: ಕಾರೊಂದು ರಸ್ತೆ ಡಿವೈಡರ್ ನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ತುಂಬೆ ಸಮೀಪ ನಡೆದಿದೆ. ಬುಧವಾರ ರಾತ್ರಿ ಸುಮಾರು 12:45 ಗಂಟೆಗೆ ಈ ಘಟನೆ ನಡೆದಿದ್ದು, ಅಪಘಾತದಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು ಉಡುಪಿ ಮೂಲದವರು ಎಂದು ತಿಳಿದುಬಂದಿದೆ. ರಾತ್ರೋರಾತ್ರಿ ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್‌ಐ ಆದರ್ಶ್, SKSSF […]
ಮಹಿಳೆ ಬಟ್ಟೆ ಹರಿದು ಮೃಗೀಯ ವರ್ತನೆ, ವಿವಾಹಿತೆ ಮೇಲೆ ಸಾರ್ವಜನಿಕವಾಗಿ ಸಾಮೂಹಿಕ ಅತ್ಯಾಚಾರ ಯತ್ನ!

ನಳಂದಾ: ಜಗತ್ತಿನ ಮುಂದೆ ಬಿಹಾರ ಮತ್ತೆ ಬೆತ್ತಲಾಗಿದ್ದು ಸಾರ್ವಜನಿಕವಾಗಿಯೇ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿರುವ ಭೀಕರ ಘಟನೆ ವರದಿಯಾಗಿದೆ. ಬಿಹಾರದ ನಳಂದಾ ಜಿಲ್ಲೆಯಲ್ಲಿ ಈ ಧಾರುಣ ಘಟನೆ ವರದಿಯಾಗಿದ್ದು, ನೂರ್ಸೇರಯ್ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಮೂವರು ದುಷ್ಕರ್ಮಿಗಳು ಸಾರ್ವಜನಿಕವಾಗಿಯೇ ವಿವಾಹಿತ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರಕ್ಕೆ ಯತ್ನಿಸಿರುವ ಧಾರುಣ ಘಟನೆ ವರದಿಯಾಗಿದೆ. ಸಾರ್ವಜನಿಕರು ಇದಕ್ಕೆ ವಿರೋಧ ವ್ಯಕ್ತಪಡಿಸಿ ಆಕೆಯನ್ನು ರಕ್ಷಿಸಲು ಯತ್ನಿಸಿದರೂ ಅದಕ್ಕೂ ಬಗ್ಗದ ದುಷ್ಕರ್ಮಿಗಳು ಅಲ್ಲಿಂದ ಆಕೆಯನ್ನು ಎಳೆದೊಯ್ಯಲು ಯತ್ನಿಸಿದ್ದಾರೆ. ಈ […]