ಪುದು ಗ್ರಾಮ ಪಂಚಾಯತ್‌ನಲ್ಲಿ SIR ಕರಡು ಮತದಾರರ ಪಟ್ಟಿಯನ್ನು ಓದಿ ಹೇಳುವ ವಿಶೇಷ ಗ್ರಾಮ ಸಭೆ

ಫರಂಗಿಪೇಟೆ: ಬಂಟ್ವಾಳ ತಾಲೂಕು ಪುದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ದಿನಾಂಕ 07/09/2026 ರಂದು ಪೂರ್ವಾಹ್ನ 11:30 ಗಂಟೆಗೆ ಸರಿಯಾಗಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆಗೆ ಸಂಬಂಧಿಸಿದ ಕರಡು ಮತದಾರರ ಪಟ್ಟಿಯನ್ನು ಓದಿ ಹೇಳುವ ಮೂಲಕ ವಿಶೇಷ ಗ್ರಾಮ ಸಭೆಯನ್ನು ನಡೆಸಲಾಯಿತು. ಸದ್ರಿ ಸಭೆಯಲ್ಲಿ ಪಂಚಾಯತ್ ಅಧ್ಯಕ್ಷರಾದ ಶ್ರೀ ರಮ್ಲಾನ್ ಮಾರಿಪಳ್ಳ ಹಾಗೂ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯ ಡಾ.ಸ್ಮೃತಿ ಯು A E R O ರವರಾದ ಶ್ರೀ ನಿಸಾರ್ ಅಹ್ಮದ್ ಗ್ರಾಮ ಆಡಳಿತ ಅಧಿಕಾರಿಯವರಾದ ಶ್ರೀ […]
SIR ನೋಟಿಸ್ ಪಡೆದ ಅನಿವಾಸಿ ಭಾರತೀಯರಿಗೆ ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಸಚಿವ ಯು.ಟಿ.ಖಾದರ್ ಗೆ ಕರ್ನಾಟಕ ಎನ್ಆರ್ ಐ ಫೋರಂ ಮನವಿ

ಮಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ(ಎಸ್.ಐ. ಆರ್)ಗೆ ಸಂಬಂಧಿಸಿ ನೋಟಿಸ್ ಪಡೆದ ಕರ್ನಾಟಕದ ಅನಿವಾಸಿ ಭಾರತೀಯರು ಎದುರಿಸುತ್ತಿರುವ ಸಮಸ್ಯೆ ಪರಿಹರಿಸಲು ಮಧ್ಯಪ್ರವೇಶಿಸುವಂತೆ ಕೋರಿ ಕರ್ನಾಟಕ ಎನ್ಆರ್ ಐ ಫೋರಂ ಸೌದಿ ಅರೇಬಿಯಾವು ರಾಜ್ಯ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಚಿವ ಯು.ಟಿ.ಖಾದರ್ ಅವರನ್ನು ಒತ್ತಾಯಿಸಿದೆ. NRI ಫೋರಂ ಅಧ್ಯಕ್ಷರಾದ ಝಕರಿಯಾ ಜೋಕಟ್ಟೆ, ಶೇಖ್ ಕರ್ನಿರೆ ಮತ್ತು ಕಾರ್ಯಕಾರಿ ಸಮಿತಿಯ ನಿರ್ದೇಶನ ಮತ್ತು ಮಾರ್ಗದರ್ಶನದಡಿ ಸಚಿವ ಯು.ಟಿ.ಖಾದರ್ […]
ಹೈದರಾಬಾದ್‌ನಲ್ಲಿ ಟೇಕ್ವಾಂಡೋ ಪ್ರತಿಭೆಗಳ ಮಿಂಚಿನ ಸಾಧನೆ

“ಟೇಕ್ವಾಂಡೋದಲ್ಲಿ ಅದ್ಭುತ ಸಾಧನೆ: ಎರಡು ಚಿನ್ನ, ನಾಲ್ಕು ಬೆಳ್ಳಿ ಪದಕ” ಮಂಗಳೂರು: ಪಂಚಕ್ ಸಿಲಾಟ್ ಹಾಗೂ ಟೇಕ್ವಾಂಡೋ ಕ್ರೀಡೆಯಲ್ಲಿ ಉತ್ತಮ ಪ್ರದರ್ಶನ ನೀಡಿದ ಕ್ರೀಡಾಪಟುಗಳು ಒಟ್ಟು 6 ಪದಕಗಳನ್ನು ಗೆದ್ದು ಗಮನ ಸೆಳೆದಿದ್ದಾರೆ.🥇 ಆಯಿಷಾ ಜೋಹರಾ — ಚಿನ್ನದ ಪದಕ🥇 ಆಯಿಷಾ ಹೈಫಾ — ಚಿನ್ನದ ಪದಕ🥈 ಹುದ್ ಅಬ್ದುಲ್ ರಹಮಾನ್ ಅಲಿ — ಬೆಳ್ಳಿ ಪದಕ🥈 ನೌಶಾದ್ ಅಲ್ದ್ಕಾ — ಬೆಳ್ಳಿ ಪದಕ🥈 ಅಫೀಲ್ ಅಲ್ದ್ಕಾ — ಬೆಳ್ಳಿ ಪದಕ🥈 ಬಸೀರ್ ರಫಾನ್ — ಬೆಳ್ಳಿ […]
ಮಾರಿಪಳ್ಳ ಜುಮಾ ಮಸೀದಿಯಲ್ಲಿ ಸಂಭ್ರಮದ ಈದ್ ಮಿಲಾದ್ ಆಚರಣೆ

ಮಂಗಳೂರು: ಮಾರಿಪಳ್ಳ ಬದ್ರಿಯಾ ಜುಮಾ ಮಸೀದಿಯಲ್ಲಿ ಇಂದು ಸಂಭ್ರಮದ ಈದ್ ಮಿಲಾದ್ ಹಬ್ಬವನ್ನು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಣೆ ಮಾಡಲಾಯಿತು. ಪ್ರವಾದಿ ಮುಹಮ್ಮದ್(ಸ) ಜನ್ಮ ದಿನದ ಅಂಗವಾಗಿ ಇಂದು ಈದ್ ಮಿಲಾದ್ ಹಬ್ಬವನ್ನು ಊರಿನ ಮಕ್ಕಳು, ಹಿರಿಯರು ಸಂಭ್ರಮ, ಸಡಗರದಿಂದ ಆಚರಿಸಿದರು. ಬೆಳಗ್ಗೆ 8.30ಕ್ಕೆ ಧ್ವಜಾರೋಹಣದ ಮೂಲಕ ಮೆರವಣಿಗೆಗೆ ಚಾಲನೆ ನೀಡಲಾಯಿತು. ಧ್ವಜಾರೋಹಣವನ್ನು ಮಸೀದಿ ಉಪಾಧ್ಯಕ್ಷ ರಮ್ಲಾನ್ ಮಾರಿಪಳ್ಳ, ಖತೀಬಾರಾದ ಖಲಂದರ್ ಬಖವಿ, ಪ್ರಧಾನ ಕಾರ್ಯದರ್ಶಿಯಾದ ಅಬುಬಕ್ಕರ್ ಪಿ, skssf ಕಮಿಟಿ ಸದಸ್ಯರು ಮಸೀದಿ ಕಮಿಟಿ […]
ಬ್ಯಾರಿಸ್ ಸೆಂಟ್ರಲ್ ಕಮಿಟಿ ಬೆಂಗಳೂರು ನೂತನ ಅಧ್ಯಕ್ಷರಾಗಿ ಗಫೂರ್ ಕೆಂಟ್, ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೋಕೇಟ್ ಕಲಂದರ್ ಕೊಯಿಲ ಆಯ್ಕೆ

ಬೆಂಗಳೂರು: ಬೆಂಗಳೂರಿನಲ್ಲಿ ನೆಲೆಸಿರುವ ಕರಾವಳಿಯ ಭಾಗದ ಬ್ಯಾರಿ ಸಮುದಾಯದ ಯುವಕರೇ ಕಟ್ಟಿಕೊಂಡಿರುವ ಸಂಘಟನೆಯಾಗಿರುವ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ವಾರ್ಷಿಕ ಮಹಾಸಭೆಯು ಮೆಜೆಸ್ಟಿಕ್‌ನ ಗಾಂಧಿನಗರದ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ನಡೆಯಿತು. 2026-26ನೇ ಸಾಲಿಗೆ ನಡೆದ ಚುನಾವಣೆಯಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿಯ ನೂತನ ಅಧ್ಯಕ್ಷರಾಗಿ ಉದ್ಯಮಿ ಗಫೂರ್ ಕೆಂಟ್ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಅಡ್ವೊಕೇಟ್ ಕಲಂದರ್ ಕೊಯಿಲ ಆಯ್ಕೆಯಾಗಿದ್ದಾರೆ. ಕೋಶಾಧಿಕಾರಿಯಾಗಿ ರಿಫಾಯಿ ವಸಂತ ನಗರ, ಉಪಾಧ್ಯಕ್ಷರುಗಳಾಗಿ ನಾಸಿರ್ ಕೆಂಪಿ, ಇಕ್ಬಾಲ್ ಡಿಫೈನ್, ಸಲೀಂ ಸಿಎಂ, ಝಮೀರ್ ಉಳ್ಳಾಲ, ಶಂಶುದ್ದೀನ್ ಕುಕ್ಕಾಜೆಯಾಗಿ […]
ಮಹಿಳಾ ಪೊಲೀಸ್ ಅಧಿಕಾರಿಯ ಅರೆಬೆತ್ತಲೆ ವಿಡಿಯೋ ವೈರಲ್; ಬೆಚ್ಚಿಬಿದ್ದ ಪೊಲೀಸ್ ಇಲಾಖೆ

ಬೆಂಗಳೂರು: ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಜೈಲಿನಲ್ಲಿದ್ದ ಕೈದಿಗಳೊಂದಿಗೆ ವಿಡಿಯೋ ಕಾಲ್ ನಲ್ಲಿ ಅರೆಬೆತ್ತಲಾಗಿ ಕಾಣಿಸಿಕೊಂಡಿರುವ ವಿಡಿಯೋವೊಂದು ವೈರಲ್ ಆಗಿದ್ದು, ಇಡೀ ಪೊಲೀಸ್ ಇಲಾಖೆಯನ್ನೇ ಬೆಚ್ಚಿಬೀಳಿಸಿದೆ. ಸಮವಸ್ತ್ರದಲ್ಲಿದ್ದ ಮಹಿಳಾ ಅಧಿಕಾರಿಯೊಬ್ಬರು ವಾಟ್ಸಪ್ ವಿಡಿಯೋ ಕಾಲ್ನ ವಿಡಿಯೋ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿವೆ. ಅಲ್ಲದೇ ಪೊಲೀಸ್ ಇಲಾಖೆಯನ್ನೇ ಮುಜುಗರಕ್ಕೀಡು ಮಾಡಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಡಿಯೋದಲ್ಲಿರುವ ಮಹಿಳಾ ಪೊಲೀಸ್ ಅಧಿಕಾರಿ ದೂರು ದಾಖಲಿಸಿದ್ದಾರೆ. ವಿಡಿಯೋ ವೈರಲ್ ಮಾಡಿದ ಇಬ್ಬರ ವಿರುದ್ಧ ಮಹಿಳಾಧಿಕಾರಿ, ಬೆಂಗಳೂರಿನ […]
ಫರಂಗಿಪೇಟೆ: ತ್ಯಾಜ್ಯ ವಿಲೇವಾರಿ ಘಟಕ ಉದ್ಘಾಟನೆ

ಫರಂಗಿಪೇಟೆ: ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯ ತೇವು ಎಂಬಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಇಂದು ಉದ್ಘಾಟನೆಯಾಯಿತು. ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ ತ್ಯಾಜ್ಯ ವಿಲೇವಾರಿ ಘಟಕದ ಉದ್ಘಾಟನೆಯನ್ನು ನೇರವೇರಿಸಿದರು. ಬಳಿಕ ಮಾತನಾಡಿದ ರಮ್ಲಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಘಟಕ ಸ್ಥಾಪಿಸುವುದು ಹಲವು ದಿನದ ಬೇಡಿಕೆ ಯಾಗಿತ್ತು. ಫರಂಗಿಪೇಟೆ ಪಟ್ಟಣದಲ್ಲಿ ಜನಸಂಖ್ಯೆ ವೇಗವಾಗಿ ಹೆಚ್ಚುತ್ತಿರುವ ಹಿನ್ನೆಲೆ ತ್ಯಾಜ್ಯವನ್ನು ವೈಜ್ಞಾನಿಕವಾಗಿ ನಿರ್ವಹಿಸುವುದು ಅತ್ಯಂತ ಅಗತ್ಯವಾಗಿದೆ. ತ್ಯಾಜ್ಯವನ್ನು ಸರಿಯಾಗಿ ವಿಲೇವಾರಿ ಮಾಡುವುದರಿಂದ ಪರಿಸರ ಸಂರಕ್ಷಣೆಗೂ […]
ರಹಿಮಾನ್ ಕೊಲೆ ಪ್ರಕರಣ: ಕೋಕಾ ಕಾಯ್ದೆ ಅಡಿ ಆರೋಪ ಹೊತ್ತಿದ್ದ ಐವರಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು ಮಂಜೂರು

ಬಂಟ್ವಾಳ ಇರಾಕೋಡಿ ಯಲ್ಲಿ ನಡೆದಿದ್ದ ಕೊಳತ್ತಮಜಲು ಅಬ್ದುಲ್ ರೆಹಮಾನ್ ಕೊಲೆ ಪ್ರಕರಣದಲ್ಲಿ ‘ಕೋಕಾ – (KCOCA) ಅಡಿ ಆರೋಪ ಎದುರಿಸುತ್ತಿದ್ದ ಐವರು ಆರೋಪಿಗಳಿಗೆ ಹೈಕೋರ್ಟ್ ಷರತ್ತುಬದ್ಧ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಕುಸುಮಳ್ಳಿಯ ಪವನ್ ಮಾರುತಿ ಗಾಯಕವಾಡ್ (33), ಅನಂತ ನಾಗೋಜಿ ಸಾವಂತ್ (36), ಬೆಳಗಾವಿ ಹುಂಚನಟ್ಟಿಯ ಬಿಟ್ಟಪ್ಪ ನಾಗಪ್ಪ ತರಿಹಾಳ (45) ಹಾಗೂ ಶಿವಮೊಗ್ಗ ಜಿಲ್ಲೆ ಸಾಗರದ ನವೀನ್ ಕುಮಾರ್ ಎಂ. (29), ಸಾಗರದ ನಿವಾಸಿ, ಪ್ರಕರಣದ 20ನೇ ಆರೋಪಿ […]
ಫರಂಗಿಪೇಟೆ: ಪ್ರತಿಭಟನೆಯ ಎಚ್ಚರಿಕೆ, ರಸ್ತೆ ಗುಂಡಿಗೆ ಡಾಂಬರ್

ಉಮರ್ ಫಾರೂಕ್ ಫರಂಗಿಪೇಟೆ ನಿರ್ದೇಶನ ಮೇರೆಗೆ ರಮ್ಲಾನ್ ಮಾರಿಪಳ್ಳ, ಇಶಾಮ್ ಫರಂಗಿಪೇಟೆ ನೇತೃತ್ವದಲ್ಲಿ ರಾ.ಹೆ ಪ್ರಾಧಿಕಾರಕ್ಕೆ ಮನವಿ ಮಾಡಲಾಗಿತ್ತು ಫರಂಗಿಪೇಟೆ: ಫರಂಗಿಪೇಟೆ ಪಟ್ಟಣದಿಂದ ಹತ್ತನೇ ಮೈಲಿಕಲ್ಲು ಬಳಿ ರಸ್ತೆಯಲ್ಲಿ ಗುಂಡಿಗಳು ತುಂಬಿರುವುರಿಂದ ಅಪಾಯಕ್ಕೆ ಆಹ್ವಾನ ನೀಡುತ್ತಿತ್ತು. ಇದರ ಬಗ್ಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ನಿರ್ಲಕ್ಷ್ಯ ಮಾಡಿತ್ತು. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ಉಮರ್ ಫಾರೂಕ್ ಫರಂಗಿಪೇಟೆ ಅವರ ನಿರ್ದೇಶನ ಮೇರೆಗೆ ಪುದು ಗ್ರಾಮ ಪಂಚಾಯತ್ ಅಧ್ಯಕ್ಷ ರಮ್ಲಾನ್ ಮಾರಿಪಳ್ಳ, ಗ್ರಾಮ ಪಂಚಾಯತ್ ಸದಸ್ಯ ಇಶಾಮ್ ಫರಂಗಿಪೇಟೆ, ಪ್ರತಿಭಟನೆಯ […]
ಉತ್ತಮ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ ಪಾತ್ರ ಅತ್ಯಂತ ಮಹತ್ವ: ಉಮರ್ ಫಾರೂಕ್ ಫರಂಗಿಪೇಟೆ

ಪುದು ಶಾಲೆಯಲ್ಲಿ ಶಿಕ್ಷಕರಿಗೆ ಬೀಳ್ಕೋಡುಗೆ ಸಮಾರಂಭ ಫರಂಗಿಪೇಟೆ: ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ಮುಖ್ಯೋಪಾಧ್ಯಾಯಿನಿಯಾಗಿ ಕವಳಮುಡೂರು ಶಾಲೆಗೆ ಪದೋನ್ನತಿ ಹೊಂದಿದ ಅನುಸೂಯ ಹಾಗೂ ವಯೋವೃತ್ತಿ ಹೊಂದಿದ ಜೆಸಿಂತ ಡಿಸೋಜ ಅವರ ಬೀಳ್ಕೋಡುಗೆ ಸಮಾರಂಭ ದ.ಕ.ಜಿ.ಪಂ.ಮಾ.ಹಿ. ಪ್ರಾಥಮಿಕ ಶಾಲೆ ಪುದು ಫರಂಗಿಪೇಟೆಯಲ್ಲಿ ನೆರವೇರಿತು. ಈ ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಟುಡೇ ಫೌಂಡೇಶನ್ ಅಧ್ಯಕ್ಷ ಹಾಗೂ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಉಮರ್ ಫಾರೂಕ್ ಫರಂಗಿಪೇಟೆ, ಸದಸ್ಯರಾದ ಮಜೀದ್, ತುಂಬೆ ಕ್ಲಸ್ಟರ್‌ನ ಸಂಪನ್ಮೂಲ ವ್ಯಕ್ತಿಯಾದ ರಮೇಶ್ ಆಗಮಿಸಿದ್ದರು. ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ […]