Flash News

ಕೆಲಸದ ವಿಚಾರವಾಗಿ ಜಗಳ: ಪತಿಯಿಂದಲೇ ಪತ್ನಿ ಕೊಲೆ

ಬೆಂಗಳೂರು: ಕೆಲಸದ ವಿಚಾರವಾಗಿ ಜಗಳವಾಗಿ ಪತಿಯೇ ಪತ್ನಿಯನ್ನು ಹತ್ಯೆಗೈದಿರುವ ಘಟನೆ ಸಂಪಿಗೆಹಳ್ಳಿ ಅಗ್ರಹಾರ ಲೇಔಟ್‌ನಲ್ಲಿ ನಡೆದಿದೆ. ಆಯೇಷಾ ಸಿದ್ದಿಕಿ ಕೊಲೆಯಾದ ಪತ್ನಿ. ಸೈಯದ್ ಜಬಿ (47) ಕೊಲೆ ಮಾಡಿದ ಪತಿ. ಆಯೇಷಾ 3 ತಿಂಗಳ ಹಿಂದೆ ಸೈಯದ್‌ನನ್ನು ಮದುವೆಯಾಗಿದ್ದಳು. ಈ ಹಿಂದೆ ಮದುವೆಯಾಗಿ ಮೊದಲ ಗಂಡ ಮೃತಪಟ್ಟ ಬಳಿಕ ಆಯೇಷಾಗೆ 2ನೇ ಮದುವೆಯಾಗಿತ್ತು. 2ನೇ ಪತಿಗೂ ಡಿವೋರ್ಸ್ ನೀಡಿ ಸೈಯದ್ ಜೊತೆ ಆಯೇಷಾ ವಿವಾಹವಾಗಿತ್ತು. ಆಯೆಷಾ ಮಸಾಜ್ ಪಾರ್ಲರ್, ಬ್ಯೂಟಿ ಪಾರ್ಲರ್‌ನಲ್ಲಿ ಕೆಲಸ ಮಾಡುತ್ತಿದ್ದಳು. ಈ ಕೆಲಸ […]

ಜಮೀರ್​ ಅಹ್ಮದ್ Upcoming DCM: ಚಾಮರಾಜಪೇಟೆಯ ಬೀದಿಬೀದಿಯಲ್ಲಿ ರಾರಾಜಿಸುತ್ತಿದೆ​​ ಪೋಸ್ಟರ್​

ಕರ್ನಾಟಕದ ಕಾಂಗ್ರೆಸ್ ಸರ್ಕಾರದಲ್ಲಿ ಈಗಾಗಲೇ ನಾಯಕತ್ವ ಬದಲಾವಣೆ ವಿಚಾರ ಭಾರೀ ಚರ್ಚೆಯಲ್ಲಿದೆ. ಮುಖ್ಯಮಂತ್ರಿ ಬದಲಾವಣೆ ಚರ್ಚೆಗಳು ತೀವ್ರಗೊಂಡಿರುವ ನಡುವೆ ಇದೀಗ ಮತ್ತಷ್ಟು ಪೋಸ್ಟರ್​ಗಳು ಭಾರೀ ಸದ್ದು ಮಾಡುತ್ತಿದೆ. ಸಚಿವ ಜಮೀರ್ ಅಹ್ಮದ್ ಖಾನ್ ಉಪಮುಖ್ಯಮಂತ್ರಿ (ಡಿಸಿಎಂ) ಮಾಡುವ ಕೂಗು ಜೋರಾಗಿದೆ. ಅವರ ಬೆಂಬಲಿಗರು ಚಾಮರಾಜಪೇಟೆ ಮತ್ತು ಜೆಜೆ ನಗರದಲ್ಲಿ “ಜಮೀರ್ ಅಹ್ಮದ್ ನೆಕ್ಸ್ಟ್ ಡಿಸಿಎಂ” ಎಂಬ ಬ್ಯಾನರ್‌ಗಳನ್ನು ಹಾಕಿದ್ದಾರೆ. ಹೊಸ ವರ್ಷದ ಶುಭಾಶಯ ತಿಳಿಸುವ ಪೋಸ್ಟರ್‌ಗಳಲ್ಲಿ ಜಮೀರ್ ಅಹ್ಮದ್​​ರನ್ನು ಡಿಸಿಎಂ ಎಂದು ಬಿಂಬಿಸಲಾಗಿದೆ. ಇದು ರಾಜ್ಯ ರಾಜಕಾರಣದಲ್ಲಿ […]

‘ಸಂಘ ಪರಿವಾರದ ಮುಸ್ಲಿಮ್ ವಿರೋಧಿ ರಾಜಕೀಯವನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರ ಕೂಡ ಮಾಡುತ್ತಿದೆ’: ಪಿಣರಾಯಿ ವಿಜಯನ್ ಕಿಡಿ

ಬೆಂಗಳೂರು: ಕರ್ನಾಟಕದ ರಾಜ್ಯ ಸರ್ಕಾರಕ್ಕೂ ಉತ್ತರ ಪ್ರದೇಶದ ಗಾಳಿ ಬಿಸಿದೆ. ಅಲ್ಲಿನ ಬುಲ್ಡೋಜರ್ ನೀತಿಯನ್ನು ಇಲ್ಲೂ ತರುವ ಕೆಲಸ ನಡೆಯುತ್ತಿದೆ ಎಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಾಂಗ್ರೆಸ್​​​ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಬೆಂಗಳೂರಿನ ಯಲಹಂಕದ ಕೋಗಿಲು ಗ್ರಾಮದ ಫಕೀರ್ ಕಾಲೋನಿ ಮತ್ತು ವಸೀಮ್ ಲೇಔಟ್‌ನಲ್ಲಿರುವ ಮುಸ್ಲಿಂ ವಸತಿಗಳನ್ನು ನೆಲಸಮ ಮಾಡಿರುವುದು ತುಂಬಾ ದುಃಖಕರ ವಿಚಾರ, ಅಲ್ಲಿ ಮುಸ್ಲಿಂ ಕುಟುಂಬಗಳು ಹಲವು ವರ್ಷಗಳಿಂದ ವಾಸಿಸುತ್ತಿದ್ದವು. ಇದೀಗ ಏಕಾಏಕಿ ಬಂದು ಮನೆಗಳನ್ನು ನೆಲಸಮ ಮಾಡಿದ್ರೆ ಅವರು ಎಲ್ಲಿಗೆ ಹೋಗಬೇಕು. […]

ಪುತ್ತೂರಿನ ವೈದ್ಯೆ ರಶ್ಮಾ ಎಂ. ಶೆಟ್ಟಿ ಮುಡಿಗೇರಿದ ಮಿಸೆಸ್ ಇಂಡಿಯಾ 2025 ಕಿರೀಟ

ಮಂಗಳೂರು : ಮುಲುಂಡ್‌ನ ಪ್ರಕೃತಿ ಚಿಕಿತ್ಸಕಿ ವೈದ್ಯೆ ಡಾ. ರಶ್ಮಾ ಮೋಹಿತ್ ಶೆಟ್ಟಿ ಅವರು ಡಿ. 18 ರಿಂದ ಡಿ 21 ವರಗೆ ನಡೆದ ಜೈಪುರದ ಜೈಬಾಗ್ ಪ್ಯಾಲೇಸ್‌ನಲ್ಲಿ ದೀಪಾಳಿ ಫಡ್ನಿಸ್ (ನ್ಯಾಷನಲ್ ಡೈರೆಕ್ಟರ್, ಮಿಸೆಸ್ ಇಂಡಿಯಾ) ಅವರ ಆಯೋಜನೆಯಲ್ಲಿ ನಡೆದ ಭವ್ಯ ಅಂತಿಮ ಸ್ಪರ್ಧೆಯಲ್ಲಿ ಮಿಸೆಸ್ ಇಂಡಿಯಾ – ಸೀಸನ್ 15 ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. ಮಿಸೆಸ್ ಇಂಡಿಯಾ ಭಾರತದಲ್ಲಿನ ಅತ್ಯಂತ ಪ್ರತಿಷ್ಠಿತ ಹಾಗೂ ದೀರ್ಘಕಾಲದಿಂದ ನಡೆದ ಸೌಂದರ್ಯ ಸ್ಪರ್ಧೆಗಳಲ್ಲಿ ಒಂದಾಗಿದೆ. ದೇಶದ ವಿವಿಧ ಭಾಗಗಳಿಂದ ಆಯ್ಕೆಯಾದ […]

ಮೈಸೂರು ಅರಮನೆ ಬಳಿ ಸ್ಫೋಟ ಪ್ರಕರಣ; ಸಾವಿನ ಸಂಖ್ಯೆ 3ಕ್ಕೆ ಏರಿಕೆ, ಮೃತ ಸಲೀಂ ಮೇಲೆ ಹೆಚ್ಚಾದ ಅನುಮಾನ

ಮೈಸೂರು ಅರಮನೆಯ ಜಯಮಾರ್ತಾಂಡ ದ್ವಾರದ ಬಳಿ ನಿನ್ನೆ (ಡಿ.25) ಕ್ರಿಸ್ಮಸ್ ಹಬ್ಬದ ದಿನ ಸಂಭವಿಸಿದ ಬಲೂನ್ ವ್ಯಾಪಾರಿಯ ಹೀಲಿಯಂ ಸಿಲಿಂಡರ್ ಸ್ಫೋಟದಲ್ಲಿ ಸಾವಿನ ಸಂಖ್ಯೆ ಮೂರಕ್ಕೇರಿದೆ. ಗಂಭೀರವಾಗಿ ಗಾಯಗೊಂಡಿದ್ದ ಮಂಜುಳಾ ಸಾವಿನ ಬೆನ್ನಲ್ಲೇ ಬೆಂಗಳೂರಿನ ನಿವಾಸಿ ಲಕ್ಷ್ಮಿ ಕೂಡ ಮೃತಪಟ್ಟಿದ್ದಾರೆ. ಚಿಕಿತ್ಸೆ ಪಲಕಾರಿಯಾಗಿ ಲಕ್ಷ್ಮಿ ಮೈಸೂರಿನ ಕೆಆರ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಮೂಲತಃ ಬೆಂಗಳೂರಿನ ನಿವಾಸಿಯಾಗಿರುವ ಲಕ್ಷ್ಮಿ ಕ್ರಿಸ್ಮಸ್ ಹಬ್ಬದ ಕಾರಣ ಕುಟುಂಬ ಸಮೇತ ಮೈಸೂರಿಗೆ ಪ್ರವಾಸಕ್ಕೆ ಬಂದಿದ್ದರು. ಈ ವೇಳೆ ಬಲೂನ್‌ಗೆ ಹೀಲಿಯಂ ತುಂಬಿಸುತ್ತಿದ್ದ ವೇಳೆ ವ್ಯಾಪಾರಿ […]

ಮಕ್ಕಾ ಮಸೀದಿಯ ಕಟ್ಟಡದಿಂದ ಜಿಗಿಯಲು ಯತ್ನಿಸಿದ ವ್ಯಕ್ತಿಯನ್ನು ರಕ್ಷಿಸಿದ ಭದ್ರತಾ ಸಿಬ್ಬಂದಿ

ಮಕ್ಕಾ: ವ್ಯಕ್ತಿಯೋರ್ವ ಮಸೀದಿಯ ಕಟ್ಟಡದ ಮೇಲಿನ ಮಹಡಿಯಿಂದ ಜಿಗಿಯಲು ಯತ್ನಿಸಿದ ವ್ಯಕ್ತಿಯನ್ನು ಭದ್ರತಾ ಸಿಬ್ಬಂದಿ ತನ್ನ ಜೀವದ ಹಂಗು ತೊರೆದು ರಕ್ಷಿಸಿದ ಘಟನೆ ವಿಶ್ವದ ಅತ್ಯಂತ ಪವಿತ್ರ ಕ್ಷೇತ್ರಗಳಲ್ಲಿ ಒಂದಾದ ಸೌದಿ ಅರೇಬಿಯಾದ ಮಕ್ಕಾ ಮಸೀದಿಯಲ್ಲಿ ಗುರುವಾರ (ಡಿ.25) ನಡೆದಿದೆ. ಅಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ಗುರುವಾರ ಮಧ್ಯಾಹ್ನ ಈ ಘಟನೆ ನಡೆದಿದ್ದು ವ್ಯಕ್ತಿಯೋರ್ವ ಮಸೀದಿ ಕಟ್ಟಡದ ಮೇಲಿನ ಮಹಡಿಯಿಂದ ಜಿಗಿಯಲು ಮುಂದಾಗಿದ್ದಾನೆ ಇದನ್ನು ಗಮನಿಸಿದ ಭದ್ರತಾ ಸಿಬ್ಬಂದಿ ಆತನ ನೆಲಕ್ಕೆ ಬೀಳುವುದನ್ನು ತಪ್ಪಿಸಲು ಮುಂದಾಗಿದ್ದಾರೆ ಈ […]

ಕಮ್ಯುನಿಸ್ಟ್, ಲೀಗ್ ಕೋಟೆಗೆ ನುಗ್ಗಿದ ಕೇಸರಿ: ತಿರುವನಂತಪುರಂ ಬಿಜೆಪಿಯ ಮೊದಲ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆ

ತಿರುವನಂತಪುರಂ: ಕೇರಳದ ಪುರಸಭೆ ಚುನಾವಣೆಯಲ್ಲಿ ಬಿಜೆಪಿ ಭರ್ಜರಿ ಜಯ ಗಳಿಸಿತ್ತು. ಇದೀಗ ತಿರುವನಂತಪುರದ ಬಿಜೆಪಿಯ ಮೊದಲ ಮೇಯರ್ ಆಗಿ ವಿ.ವಿ. ರಾಜೇಶ್ ಆಯ್ಕೆಯಾಗಿದ್ದಾರೆ. ಇವರು ತಿರುವನಂತಪುರದ ಸ್ಥಳೀಯ ನಾಯಕರಾಗಿದ್ದು, ಬಿಜೆಪಿಯ ಕಾರ್ಯಕರ್ತರು ಮತ್ತು ಸಾರ್ವಜನಿಕರಲ್ಲಿ ಚಿರಪರಿಚಿತರಾಗಿದ್ದಾರೆ. ಮೇಯರ್ ಆಗಿ ಆಯ್ಕೆಯಾದ ನಂತರ ಮಾತನಾಡಿದ ಅವರು, “ನಾವು ಒಟ್ಟಿಗೆ ಮುಂದುವರಿಯುತ್ತೇವೆ. ಎಲ್ಲರನ್ನೂ ಜೊತೆಗೆ ಕರೆದುಕೊಂಡು ಹೋಗುತ್ತೇವೆ. ಎಲ್ಲಾ 101 ವಾರ್ಡ್‌ಗಳಲ್ಲಿ ಅಭಿವೃದ್ಧಿಯನ್ನು ಜಾರಿಗೆ ತರಲಾಗುವುದು. ತಿರುವನಂತಪುರಂ ಅಭಿವೃದ್ಧಿ ಹೊಂದಿದ ನಗರವಾಗಿ ರೂಪಾಂತರಗೊಳ್ಳುತ್ತದೆ” ಎಂದು ಹೇಳಿದ್ದಾರೆ. ಬಿಜೆಪಿ ಕೇರಳದಲ್ಲಿ ತನ್ನ […]

ಬಾಂಗ್ಲಾದೇಶದಲ್ಲಿ ಹಿಂದೂ ಯುವಕನ ಹತ್ಯೆ: ನಟಿ ಜಾನ್ಹವಿ ಆಕ್ರೋಶ

ನೆರೆಯ ಬಾಂಗ್ಲಾದೇಶದಲ್ಲಿ ಹಿಂದು ಯುವಕ ದೀಪು ದಾಸ್ (Deepu Das) ಹತ್ಯೆ ಕುರಿತು ದೇಶದಾದ್ಯಂತ ಆಕ್ರೋಶ ವ್ಯಕ್ತವಾಗಿದೆ. ಇದೀಗ ಕೆಲವು ಸಿನಿಮಾ ನಟಿಯರು ಸಹ ದೀಪಿ ದಾಸ್ ಹತ್ಯೆ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ತೀವ್ರ ಆಕ್ರೋಶ ಹೊರಹಾಕಿದ್ದಾರೆ. ವಿಶೇಷವಾಗಿ ನಟಿ ಜಾನ್ಹವಿ ಕಪೂರ್, ದೀಪು ದಾಸ್ ಹತ್ಯೆಯ ಕುರಿತು ಪೋಸ್ಟ್ ಹಂಚಿಕೊಂಡಿದ್ದು, ಬಾಂಗ್ಲಾದೇಶದಲ್ಲಿ ಹಿಂದುಗಳ ಮೇಲೆ ನಡೆಯುತ್ತಿರುವ ಹಿಂಸಾಚಾರದ ಬಗ್ಗೆ ಮೌನ ವಹಿಸಿರುವುದನ್ನು ‘ಹಿಪಾಕ್ರಸಿ’ (ಬೂಟಾಟಿಕೆ) ಎಂದು ಕರೆದಿದ್ದಾರೆ. ಇನ್​​ಸ್ಟಾಗ್ರಾಂನಲ್ಲಿ ಈ ಬಗ್ಗೆ ಬರೆದುಕೊಂಡಿರುವ ನಟಿ ಜಾನ್ಹವಿ […]

ಕೇರಳ | 21 ವರ್ಷದ ದಿಯಾ ನೂತನ ಪಾಲಾ ಪುರಸಭೆಯ ಅಧ್ಯಕ್ಷೆ

ಕೊಟ್ಟಾಯಂ: ಪಾಲಾ ಪುರಸಭೆಯ ಅಧ್ಯಕ್ಷೆಯಾಗಿ ದಿಯಾ ಪುಲಿಕಾಕಂಡಮ್ ಅಧಿಕಾರ ವಹಿಸಿಕೊಂಡಿದ್ದಾರೆ. 21 ವರ್ಷದ ಈಕೆ ದೇಶದ ಅತ್ಯಂತ ಕಿರಿಯ ಪುರಸಭೆಯ ಅಧ್ಯಕ್ಷೆ. ಪುಲಿಕಾಕಂಡಮ್ ಕುಟುಂಬದ ಮೂವರು ಸದಸ್ಯರು ಪಾಲಾ ಪುರಸಭೆಯನ್ನು ಸ್ವತಂತ್ರ ಅಭ್ಯರ್ಥಿಗಳಾಗಿ ಗೆದ್ದಿದ್ದಾರೆ. ಒಂದು ವಾರಕ್ಕೂ ಹೆಚ್ಚು ಕಾಲ ನಡೆದ ಚರ್ಚೆಯ ನಂತರ, ಕುಟುಂಬವು ಯುಡಿಎಫ್ ಅನ್ನು ಬೆಂಬಲಿಸಲು ನಿರ್ಧರಿಸಿದೆ. ಚರ್ಚೆಯ ಸಮಯದಲ್ಲಿ ಕುಟುಂಬವು ಮಂಡಿಸಿದ ಅಂಶಗಳನ್ನು ಪುಲಿಕಾಕಂಡಮ್ ಕುಟುಂಬ ಒಪ್ಪಿಕೊಂಡ ನಂತರ ಯುಡಿಎಫ್ ಸಕಾರಾತ್ಮಕ ನಿರ್ಧಾರವನ್ನು ತೆಗೆದುಕೊಂಡಿತು. ಯಾ ಬಿನು ಪುಲಿಕಾಕಂಡಮ್ ಮೊದಲ ಅವಧಿಗೆ […]

ಮದುವೆಯಾಗು ಎಂದಿದ್ದಕ್ಕೆ ಕತ್ತು ಸೀಳಿ ಕೊಂದ ಪ್ರಿಯಕರ: ನರ್ಸ್​ ಮನೆಯಲ್ಲಿ ಹರಿದಿದ್ದು ರಕ್ತದೋಕುಳಿ!

ಬೆಂಗಳೂರು: ಬೆಂಗಳೂರಿನ ಕುಮಾರಸ್ವಾಮಿ ಲೇಔಟ್‌ನ ಮನೆಯೊಂದರಲ್ಲಿ ಒಂಟಿಯಾಗಿದ್ದ ಸ್ಟಾಫ್ ನರ್ಸ್ ಅನ್ನು ಭೀಕರವಾಗಿ ಹತ್ಯೆಗೈದ ಘಟನೆ ಡಿಸೆಂಬರ್ 24ರ ರಾತ್ರಿ ನಡೆದಿದೆ. ಆಕೆ ಬಾಡಿಗೆ ಮನೆಯಲ್ಲಿ ಒಂಟಿಯಾಗಿದ್ದ ಸಂದರ್ಭದಲ್ಲಿ ಮನೆಯೊಳಗೆ ಪ್ರವೇಶಿದ ಆಕೆಯ ಪ್ರಿಯಕರ, ಕತ್ತುಕುಯ್ದು ಆಕೆಯ ಹತ್ಯೆ ಮಾಡಿರುವುದು ತಿಳಿದುಬಂದಿದೆ. ಮಾಹಿತಿ ಸಿಕ್ಕ ಕೂಡಲೆ ಕುಮಾರಸ್ವಾಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದ್ದು, ಆರೋಪಿಯನ್ನು ಬಂಧಿಸಲಾಗಿದೆ. ಮದುವೆಯಾಗದೇ ಒಂಟಿಯಾಗಿದ್ದ ಸ್ಟಾಫ್ ನರ್ಸ್39 ವರ್ಷವಾದರೂ ಮದುವೆಯಾಗದೆ ಒಂಟಿಯಾಗಿದ್ದ ಮಮತಾ, ಜಯದೇವ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್ ಆಗಿ ಸೇವೆ […]