ವಿದ್ಯಾರ್ಥಿಗಳ ಸಂಖ್ಯೆ ಕುಸಿತ: ಮಂಗಳೂರಿನ ಈ ಎಲ್ಲ ಕಾಲೇಜುಗಳು ಕ್ಲೋಸ್

ಮಂಗಳೂರು: ಖಾಸಗಿ ಕಾಲೇಜುಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಸಿತ ಹಿನ್ನೆಲೆ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ 22 ಖಾಸಗಿ ಕಾಲೇಜುಗಳನ್ನು ಮುಚ್ಚಲು ಮಂಗಳೂರು ವಿಶ್ವವಿದ್ಯಾಲಯದ ಶೈಕ್ಷಣಿಕ ಮಂಡಳಿ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ನಿಗದಿತ ಸಂಖ್ಯೆಯಲ್ಲಿ ವಿದ್ಯಾರ್ಥಿಗಳ ಪ್ರವೇಶಾತಿ ಆಗದ ಕಾರಣ, ಮುಂದಿನ ಶೈಕ್ಷಣಿಕ ವರ್ಷದಿಂದ ಈ ಕಾಲೇಜುಗಳು ಬಂದ್ ಆಗಲಿವೆ. ಪ್ರಸಕ್ತ ವರ್ಷದಲ್ಲಿ ಪ್ರವೇಶಾತಿ ಪಡೆದಿರುವ ವಿದ್ಯಾರ್ಥಿಗಳಿಗೆ ಕೋರ್ಸ್ ಪೂರ್ಣಗೊಳಿಸಲು ಅವಕಾಶ ಇರಲಿದೆ. ಮುಚ್ಚಲಿರುವ ಕಾಲೇಜುಗಳು:ಆಬಾ ವುಮೆನ್ಸ್ ಪ್ರಥಮ ದರ್ಜೆ ಕಾಲೇಜು ಸುರತ್ಕಲ್ಅಂಜುಮನ್ ಪ್ರಥಮ ದರ್ಜೆ ಕಾಲೇಜು, […]
ಕ್ರೈಸ್ತ ಬಾಹುಳ್ಯದಲ್ಲಿ ಗೆದ್ದ ಬಿಜೆಪಿ: ವಾಸ್ತವ ಮರೆಮಾಚಿದ ಕಮಲ! ಆ ವಾರ್ಡ್‌ನ ಅಸಲಿಯತ್ತೇ ಬೇರೆ ಇದೆ!

ಐ.ಎಂ.ಕೆ. ಕಿನ್ನಿಗೋಳಿ ಕಿನ್ನಿಗೋಳಿ ಹಾಗೂ ಬಜಪೆ ಪಟ್ಟಣ ಪಂಚಾಯತ್ ಚುನಾವಣೆಯ ಫಲಿತಾಂಶ ಹೊರಬಿದ್ದಿದೆ. ಎರಡು ಕಡೆಗಳಲ್ಲೂ ಬಿಜೆಪಿ ಸ್ಪಷ್ಟ ಬಹುಮತ ಪಡೆದಿದೆ. ಕಿನ್ನಿಗೋಳಿ ಪಟ್ಟಣ ಪಂಚಾಯತ್‌ನ ವಾರ್ಡ್‌ವೊಂದರ ಕುರಿತಂತೆ ಬಿಜೆಪಿ ಭಾರೀ ಪೋಸ್ಟ್‌ಗಳನ್ನು ಹಾಕುತ್ತಿದ್ದು, ಶೇಕಡಾ 70-80 ರಷ್ಟು ಕ್ರೈಸ್ತ ಮತದಾರರಿರುವ ವಾರ್ಡ್‌ನಲ್ಲಿ ಬಿಜೆಪಿ ಜಯಭೇರಿ ಗಳಿಸಿದ್ದಾಗಿ ಬಿಂಬಿಸುತ್ತಿದೆ. ಫಲಿತಾಂಶದ ದಿನದವರೆಗೂ ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಸುಲಭವಾಗಿ ಗೆಲ್ಲುತ್ತದೆ ಅನ್ನೋ ಲೆಕ್ಕಚಾರ ಕೊನೆಯ ಕ್ಷಣದಲ್ಲಿ ಬದಲಾಗಿದೆ. ಅಂತಿಮವಾಗಿ, ಕಿನ್ನಿಗೋಳಿ ಗ್ರಾಮ ಪಂಚಾಯತ್ ಇರುವ ಸಮಯದಲ್ಲಿ ಒಂದು ಬಾರಿಯೂ […]
ದ್ವೇಷ ಭಾಷಣ ವಿಧೇಯಕಕ್ಕೆ ಅಂಕಿತ ಬೇಡ: ರಾಜ್ಯಪಾಲರಿಗೆ ಕೆ.ಎಸ್.ಈಶ್ವರಪ್ಪ ಮನವಿ

ವಿಜಯಪುರ: ಕರ್ನಾಟಕ ದ್ವೇಷ ಭಾಷಣ ಮತ್ತು ದ್ವೇಷ ಅಪರಾಧಗಳ (ಪ್ರತಿಬಂಧಕ) ವಿಧೇಯಕ-2025ಕ್ಕೆ ರಾಜ್ಯಪಾಲರು ಯಾವುದೇ ಕಾರಣಕ್ಕೂ ಅಂಕಿತ ಹಾಕಬಾರದು ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಮನವಿ ಮಾಡಿದರು. ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ವಿಧೇಯಕದ ಮೂಲಕ ರಾಜ್ಯ ಕಾಂಗ್ರೆಸ್ ಸರ್ಕಾರ ಅಘೋಷಿತ ತುರ್ತು ಪರಿಸ್ಥಿತಿ ಹೇರಲು ಹವಣಿಸುತ್ತಿದೆ ಎಂದು ಆರೋಪಿಸಿದರು. ಇಂದಿರಾ ಗಾಂಧಿ ತುರ್ತು ಪರಿಸ್ಥಿತಿ ಹೇರಿದ ಪರಿಣಾಮ ಅಂದು ದೇಶದಲ್ಲಿ ಕಾಂಗ್ರೆಸ್ ನೆಲಕಚ್ಚಿತು. ಈಗ ಹಿಂದೂ ನಾಯಕರನ್ನು ಹತ್ತಿಕ್ಕಲು ತಂದಿರುವ ಕರಾಳ ಶಾಸನದಿಂದ […]
ರಾಜ್ಯದಲ್ಲಿ 1 ಕೋಟಿ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಜನ ಶಾಸಕರಿದ್ದಾರೆ: ಮಹೇಶ್ವರಾನಂದ ಸ್ವಾಮೀಜಿ ಬೇಸರ

ಬಾಗಲಕೋಟೆ: ದೇಶದ ಮೂವತ್ತು ಕೋಟಿ ಮುಸ್ಲಿಮರನ್ನ ಬಿಟ್ಟು ಭವಿಷ್ಯದ ಭಾರತ ನಿರ್ಮಾಣ ಸಾಧ್ಯವಿಲ್ಲ. ರಾಜ್ಯದಲ್ಲಿ ಒಂದು ಕೋಟಿ ಜನ ಮುಸ್ಲಿಂ ಜನಸಂಖ್ಯೆ ಇದ್ದರೂ ಕೇವಲ 10 ಜನ ಶಾಸಕರಿದ್ದಾರೆ. ಮುಸಲ್ಮಾನರು ಚುನಾವಣೆಯಲ್ಲಿ ಸೋಲುವುದಿಲ್ಲ, ಅವರನ್ನು ಸೋಲಿಸಲಾಗುತ್ತೆ ಎಂದು ಬಾಗಲಕೋಟೆ ಜಿಲ್ಲೆಯ ಜಮಖಂಡಿಯಲ್ಲಿ ಮಹೇಶ್ವರಾನಂದ ಸ್ವಾಮೀಜಿ ಹೇಳಿದ್ದಾರೆ. ರಾಜ್ಯದಲ್ಲಿ ಲಿಂಗಾಯತರು ಕೇವಲ 66 ಲಕ್ಷ ಜನ ಇದ್ದಾರೆ. ಆದರೆ ಅವರ ಸಮುದಾಯದ 59 ಜನ ಶಾಸಕರಿದ್ದಾರೆ. 60 ಲಕ್ಷ ಜನಸಂಖ್ಯೆಯಿರುವ ಒಕ್ಕಲಿಗರ 46 ಜನ ಎಂಎಲ್ಎಗಳಿದ್ದಾರೆ. 15 ಲಕ್ಷ […]
ಸಚಿವ ಜಮೀರ್ ಅಹ್ಮದ್ ಆಪ್ತ ಕಾರ್ಯದರ್ಶಿ ಸರ್ಫರಾಜ್ ಖಾನ್ ಲೋಕಾಯುಕ್ತ ಶಾಕ್: 10 ಕಡೆ ದಾಳಿ

ಬೆಂಗಳೂರು: ಸಚಿವ ಜಮೀರ್ ಅಹ್ಮದ್ ಖಾನ್ ಆಪ್ತ ಕಾರ್ಯದರ್ಶಿ ಸರ್ದಾರ್ ಸರ್ಫರಾಜ್ ಖಾನ್ ನಿವಾಸ ಸೇರಿದಂತೆ ಹತ್ತು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಕ್ರಮ ಆಸ್ತಿ ಗಳಿಕೆ ಆರೋಪ ಸಂಬಂಧ ಈ ದಾಳಿ ನಡೆದಿದೆ. ಬೆಂಗಳೂರಿನ ಹಲಸೂರು ನಿವಾಸ, ಇತರ ಆರು ಮನೆಗಳು ಸೇರಿದಂತೆ ಒಟ್ಟು ಏಳು ಮನೆಗಳು, ಕೊಡಗಿನಲ್ಲಿರುವ ಎರಡು ಕಾಫಿ ಎಸ್ಟೇಟ್‌ಗಳು ಮತ್ತು ಹೆಚ್.ಡಿ.ಕೋಟೆಯಲ್ಲಿನ ಒಂದು ರೆಸಾರ್ಟ್ ಮೇಲೆ ಏಕಕಾಲಕ್ಕೆ ಲೋಕಾಯುಕ್ತ ಪೊಲೀಸರು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಸರ್ದಾರ್ ಸರ್ಫರಾಜ್ ಖಾನ್ […]
Mangalore: ಅಂತರ ಕಾಯ್ದುಕೊಳ್ಳಿ, EMI ಬಾಕಿ ಇದೆ; ಕಾರಿನ ಹಿಂಬದಿಯ ಬರಹ ವೈರಲ್

ಮಂಗಳೂರು: ಆಟೋ, ಬೈಕ್ ಸೇರಿದಂತೆ ಕಾರಿನ ಹಿಂಭಾಗದಲ್ಲಿ ಪ್ರೀತಿ ಪಾತ್ರದ ಹೆಸರು, ಕೆಲವರು ತಂದೆ ತಾಯಿಯ ಆಶೀರ್ವಾದ, ಕೈಕೊಟ್ಟ ಪ್ರೇಮಿಯ ನೆನಪಿನಲ್ಲಿ ಕೆಲ ಸಾಲುಗಳನ್ನು ಬರೆದಿರುವುದನ್ನು ನೋಡಿರುತ್ತಿರುತ್ತೀರಿ. ಇಂತಹ ಸಾಲುಗಳನ್ನು ನೋಡಿದಾಗ ತುಟಿಯಂಚಿನಲ್ಲಿ ಸದ್ದಿಲ್ಲದೇ ನಗು ಮೂಡುತ್ತದೆ. ಇದೀಗ ಇಂತಹದ್ದೇ ಕಾರಿನ ಹಿಂಭಾಗದಲ್ಲಿ ಬರೆದ ಸಾಲುಗಳು ನೆಟ್ಟಿಗರ ಗಮನ ಸೆಳೆಯುತ್ತಿದೆ. ಮಂಗಳೂರಿನ ಸರ್ಕ್ಯೂಟ್ ಹೌಸ್ ರಸ್ತೆಯಲ್ಲಿ ಚಲಿಸುತ್ತಿರುವ ಮಾರುತಿ ಸುಜುಕಿ ಆಲ್ಟೋ ಕಾರ್‌ನ ಹಿಂಭಾಗದಲ್ಲಿ ಬರೆದ ಸಾಲುಗಳು ಉಳಿದ ವಾಹನ ಸವಾರರಿಗೆ ಎಚ್ಚರಿಕೆ ನೀಡಿದ್ದಂತಿದೆ. ಈ ವಿಡಿಯೋ […]
ಹಾಜಿ ಸಯೀದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ 13 ಮನೆಗಳ ಹಸ್ತಾಂತರ, 10 ಮನೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮ

ಮುಲ್ಕಿ: ಹಾಜಿ ಕೆ.ಎಸ್. ಸಯೀದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡವರಿಗಾಗಿ ನಿರ್ಮಿಸಿರುವ ನೂತನ 13 ಮನೆಗಳ ಹಸ್ತಾಂತರ ಮತ್ತು ನೂತನ 10 ಮನೆಗಳಿಗೆ ಶಿಲಾನ್ಯಾಸ ಕಾರ್ಯಕ್ರಮವು ಹಾಜಿ ಕೆ.ಎಸ್. ಸಯೀದ್ ಕಾಂಪೌಂಡ್ ನಲ್ಲಿ ಮಂಗಳವಾರ ನಡೆಯಿತು. ಕರ್ನಿರೆ ಜುಮಾ ಮಸೀದಿಯ ಖತೀಬ್ ಉಮರುಲ್ ಫಾರೂಕ್ ಸಖಾಫಿ ಕಾರ್ತಕ್ರಮ ಉದ್ಘಾಟಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಹಾಜಿ ಕೆ.ಎಸ್. ಸಯೀದ್ ಕರ್ನಿರೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಶೇಖ್ ಅವರು, ತಂದೆಯವರಾದ ಸಯೀದ್ ಅವರ ಮನಸ್ಸು ಬಡವರಿಗಾಗಿ […]
ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಝಕರಿಯ ಜೋಕಟ್ಟೆ ಅವರಿಗೆ ಸನ್ಮಾನ, ಸೇವಾ ಚೆಕ್ ಹಸ್ತಾಂತರ

ಮಂಗಳೂರು: ಮರ್ಹೂಮ್ ಹಾಜಿ ಬಿ. ಶೇಕುಂಞಿ ಚಾರಿಟೇಬಲ್ ಟ್ರಸ್ಟ್ ಜೋಕಟ್ಟೆ ಹಾಗೂ ಝರಾ ಫ್ಯಾಮಿಲಿ ಟ್ರಸ್ಟ್ ಮಂಗಳೂರು ಇದರ ಸಹಯೋಗದಲ್ಲಿ 2025 ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಹಾಜಿ ಝಕರಿಯ ಜೋಕಟ್ಟೆ ಅವರಿಗೆ ಗೌರವ ಸನ್ಮಾನ, ಅಭಿನಂದನಾ ಸಮಾರಂಭ ಹಾಗೂ ಸೇವಾ ಚೆಕ್ ಹಸ್ತಾಂತರ ಕಾರ್ಯಕ್ರಮವು ಮಂಗಳವಾರ ಗಂಜಿಮಠದ ಝರಾ ಕನ್ವೆನ್ಶನ್ ಸೆಂಟರ್ ನಲ್ಲಿ ನಡೆಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿ ಮಾತನಾಡಿದ ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್. ವಿ., ವಿದೇಶದಲ್ಲಿ ಸ್ಥಳೀಯ ಯುವಕರಿಗೆ […]
ಬಜಪೆ ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಬಿಜೆಪಿಗೆ 11 ಸ್ಥಾನದ ಭರ್ಜರಿ ಗೆಲುವು, 4ಕ್ಕೆ ಕುಸಿದ ಕಾಂಗ್ರೆಸ್

SDPIಗೆ ಮೂರು ಸ್ಥಾನ, 3 ಕಡೆ ಅಲ್ಪ ಮತಗಳ ಸೋಲು, ಟಕ್ಕರ್ ಕೊಟ್ಟ ಸಿರಾಜ್ ಗೆಲುವು ಮಂಗಳೂರು: ಬಜಪೆ ಪಟ್ಟಣ ಪಂಚಾಯತ್ ಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದಿದೆ. ಒಟ್ಟು 19 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ 11, ಕಾಂಗ್ರೆಸ್ -4, ಎಸ್ ಡಿ ಪಿ ಐ -3, ಪಕ್ಷೇತರರು 1 ಸ್ಥಾನಗಳನ್ನು ಪಡೆದಿದ್ದಾರೆ. ಕಾಂಗ್ರೆಸ್ ಗೆ ಟಕ್ಕರ್ ಕೊಟ್ಟ ಸಿರಾಜ್ ಗೆಲುವು ಸಾಧಿಸಿದರೆ ಇನ್ನೊಂದೆಡೆ ಎಸ್ ಡಿಪಿಐಯಿಂದ ಸ್ಪರ್ಧಿಸಿದ ರಫೀಕ್ 1 ಮತಗಳ ಅಂತರದಲ್ಲಿ […]
ಅರಬ್ಬಿ ಸಮುದ್ರದ ಹೆಸರು ಬದಲಿಸಿ: ಬಿಜೆಪಿ ಶಾಸಕ

ಕಾರವಾರ: ಅರಬ್ಬಿ ಸಮುದ್ರ ವಿದೇಶದ ಹೆಸರು ಹೊಂದಿದ್ದು ಅದರ ಬದಲು ರತ್ನಾಕರ ಸಾಗರ ಎಂದು ಹೆಸರು ಬದಲಿಸಬೇಕು ಎಂದು ಬಿಜೆಪಿಯ ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹೇಳಿದರು. ಇಲ್ಲಿ ನಡೆದ ಕರಾವಳಿ ಉತ್ಸವದಲ್ಲಿ ಅವರು ಹೇಳಿದ್ದಾರೆ. ಹೆಸರು ಬದಲಿಸುವ ಬಗ್ಗೆ ಸರ್ಕಾರ ಚಿಂತಿಸಬೇಕು. ಅರಬ್ಬಿ ಸಮುದ್ರಕ್ಕೆ ಈ ಹಿಂದೆ ರತ್ನಾಕರ ಸಾಗರ ಎಂದೇ ಕರೆಯಲಾಗುತ್ತಿತ್ತು ಎಂದು ಅವರು ಪ್ರತಿಪಾದಿಸಿದರು. ‘ಸಂಸ್ಕೃತಿ ಅಭಿವ್ಯಕ್ತಿಗೆ ಕರಾವಳಿ ಉತ್ಸವ ವೇದಿಕೆಯಾಗಬೇಕು. ಬಡವರು ಹಿಂದುಳಿದವರು ತಮ್ಮ ಕಲಾಪ್ರತಿಭೆ ಪ್ರದರ್ಶಿಸಲು ಅವಕಾಶ ಹೆಚ್ಚಬೇಕು’ […]