Flash News

ಪುತ್ತಿಲ ಪರಿವಾರ, ಬಿಜೆಪಿ ನಡುವಿನ ಸಮರ ಮತ್ತೆ ತಾರಕಕ್ಕೆ: 2028ರ ವಿಧಾನಸಭಾ ಚುನಾವಣೆಯಲ್ಲಿ ಅರುಣ್‌ ಪುತ್ತಿಲ ಪಕ್ಷೇತರ ಅಭ್ಯರ್ಥಿ..?

ಪುತ್ತೂರು: ಎರಡೂವರೆ ವರ್ಷದ ಹಿಂದೆ ಆರಂಭವಾಗಿದ್ದ ಪುತ್ತಿಲ ಪರಿವಾರ ಮತ್ತು ಬಿಜೆಪಿ ನಡುವಿನ ಶೀತಲ ಸಮರ ಮತ್ತೆ ತಾರಕಕ್ಕೇರಿದೆ! 2028ರ ವಿಧಾನಸಭಾ ಚುನಾವಣೆಯಲ್ಲಿ ಅರುಣ್‌ ಪುತ್ತಿಲ ಅವರು ಪಕ್ಷೇತರ ಅಭ್ಯರ್ಥಿ, ಅವರಿಗೆ ನಮ್ಮ ಬೆಂಬಲ ಎಂದು ಅವರ ಬೆಂಬಲಿಗರು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದು ಪುತ್ತಿಲ ಬೆಂಬಲಿಗರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಪರಸ್ಪರ ಆರೋಪ-ಪ್ರತ್ಯಾರೋಪದ ಸಮರ ಆರಂಭವಾಗಿದೆ. 2023ರ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್‌ ವಂಚಿತಗೊಂಡ ಪರಿಣಾಮ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದ ಅರುಣ್‌ ಪುತ್ತಿಲ 60 ಸಾವಿರಕ್ಕೂ […]

ಡಿಸೆಂಬರ್‌ 3ನೇ ವಾರದಲ್ಲಿ ಮಂಗಳೂರು- ಕಾಸರಗೋಡು ಹೆದ್ದಾರಿ ಬಂದ್‌

ಮಂಗಳೂರು: ಕರ್ನಾಟಕದ ಭಾಗವಾಗಿರುವ ಕಾಸರಗೋಡಿನಲ್ಲಿ ಮಲಯಾಳೀಕರಣದ ವ್ಯವಸ್ಥಿತ ಕಾರ್ಯತಂತ್ರ ನಡೆಯುತ್ತಿದೆ. ಇದರ ವಿರುದ್ಧ ಡಿಸೆಂಬರ್‌ 3ನೇ ವಾರದಲ್ಲಿ ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿ ಸತ್ಯಾಗ್ರಹ ನಡೆಸಲಾಗುವುದು ಎಂದು ಕನ್ನಡ ಚಳವಳಿ ವಾಟಾಳ್‌ ಪಕ್ಷದ ಅಧ್ಯಕ್ಷ ವಾಟಾಳ್‌ ನಾಗರಾಜ್‌ ತಿಳಿಸಿದ್ದಾರೆ. ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಡಿಸೆಂಬರ್‌ 2ನೇ ವಾರದಲ್ಲಿ ಬೆಂಗಳೂರಿನಲ್ಲಿ ಕಾಸರಗೋಡು ಸಮ್ಮೇಳನ ನಡೆಯಲಿದೆ. ಅಲ್ಲಿ ಸೂಕ್ತ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಬಳಿಕ 3ನೇ ವಾರದಲ್ಲಿ ಮಂಗಳೂರಿನಲ್ಲಿ ರಾಷ್ಟ್ರೀಯ ಹೆದ್ದಾರಿ ಬಂದ್‌ ನಡೆಸುವ ಮೂಲಕ ಸತ್ಯಾಗ್ರಹ ನಡೆಸಲಾಗುವುದು […]

ಟಿಪ್ಪು ವಂಶಸ್ಥೆ ನೂರ್‌ ಇನಾಯತ್‌ಗೆ ಫ್ರಾನ್ಸ್‌ ಗೌರವ: ಅಂಚೆ ಚೀಟಿ ಬಿಡುಗಡೆ

►ಈ ಗೌರವಕ್ಕೆ ಪಾತ್ರರಾದ ಭಾರತ ಮೂಲದ ಏಕೈಕ ಮಹಿಳೆ ಲಂಡನ್‌: ಫ್ರಾನ್ಸ್‌ ಸರ್ಕಾರವು ಟಿಪ್ಪು ಸುಲ್ತಾನ್‌ ವಂಶಸ್ಥೆ ನೂರ್‌ ಇನಾಯತ್‌ ಖಾನ್‌ ಅವರ ಅಂಚೆ ಚೀಟಿ ಬಿಡುಗಡೆ ಮಾಡುವ ಮೂಲಕ ಗೌರವ ಸಲ್ಲಿಸಿದೆ. ಈ ಗೌರವಕ್ಕೆ ಪಾತ್ರರಾದ ಭಾರತ ಮೂಲದ ಏಕೈಕ ಮಹಿಳೆಯಾಗಿದ್ದಾರೆ. ಫ್ರೆಂಚ್ ಅಂಚೆ ಸೇವೆ, ಲಾ ಪೋಸ್ಟೆಯು ನಾಜಿಗಳ ವಿರುದ್ಧ ಹೋರಾಡಿದವರ ಗೌರವಾರ್ಥ ಅಂಚೆ ಚೀಟಿಗಳನ್ನು ಬಿಡುಗಡೆ ಮಾಡಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟನ್‌ನ ವಿಶೇಷ ಕಾರ್ಯಾಚರಣೆ ವಿಭಾಗಕ್ಕೆ ರಹಸ್ಯ ಪ್ರತಿನಿಧಿಯಾಗಿ ಫ್ರಾನ್ಸ್‌ ಪರ […]

ಟ್ರಂಪ್ ಫ್ಯಾಸಿಸ್ಟ್ ಎಂಬ ಹೇಳಿಕೆಗೆ ಈಗಲೂ ಬದ್ಧ: ಮಮ್ದಾನಿ

ನ್ಯೂಯಾರ್ಕ್: ಟ್ರಂಪ್ ಫ್ಯಾಸಿಸ್ಟ್ ಎಂಬ ಬಗ್ಗೆ ತಾವು ಧೀರ್ಘಕಾಲದಿಂದ ಹೊಂದಿದ್ದ ನಿಲುವಿನಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದು ನ್ಯೂಯಾರ್ಕ್ ಮೇಯರ್ ಝೊಹ್ರಾನ್ ಮಮ್ದಾನಿ ರವಿವಾರ ಸ್ಪಷ್ಟಪಡಿಸಿದ್ದಾರೆ. ಶ್ವೇತಭವನದಲ್ಲಿ ಟ್ರಂಪ್ ಜತೆಗಿನ ಮೊದಲ ಸಭೆ ಅತ್ಯಂತ ಸೌಹಾರ್ದಯುತವಾಗಿ ನಡೆದ ಬೆನ್ನಲ್ಲೇ ಮಮ್ದಾನಿ ಈ ಹೇಳಿಕೆ ನೀಡಿದ್ದಾರೆ. “ಇದನ್ನು ನಾನು ಹಿಂದೆಯೂ ಹೇಳಿದ್ದೆ; ಇಂದೂ ಹೇಳುತ್ತಿದ್ದೇನೆ” ಎಂದು NBC ನ್ಯೂಸ್ ಜತೆ ಮಾತನಾಡಿದ ಮಮ್ದಾನಿ ಸ್ಪಷ್ಟಪಡಿಸಿದರು. ಅಮೆರಿಕದ ಅಧ್ಯಕ್ಷರು ಫ್ಯಾಸಿಸ್ಟ್ ಎಂಬ ತಮ್ಮ ನಿಲುವಿನಲ್ಲಿ ಏನಾದರೂ ಬದಲಾವಣೆಯಾಗಿದೆಯೇ ಎಂದು […]

ಕಾಸರಗೋಡು | ಸಂಗೀತ ಕಾರ್ಯಕ್ರಮದಲ್ಲಿ ಕಾಲ್ತುಳಿತದ ಸನ್ನಿವೇಶ: 30 ಮಂದಿಗೆ ಗಾಯ

ಕಾಸರಗೋಡು: ಭಾನುವಾರ ರಾತ್ರಿ ನಡೆದ ಮಲಯಾಳ ಗಾಯಕ ಹನಾನ್ ಶಾ ಅವರ ಸಂಗೀತ ಕಾರ್ಯಕ್ರಮದಲ್ಲಿ ಭಾರಿ ಜನ ಸೇರಿದ್ದರಿಂದ ಕಾಲ್ತುಳಿತದಂತಹ ಸನ್ನಿವೇಶ ನಿರ್ಮಾಣವಾಗಿ 30 ಮಂದಿ ಗಾಯಗೊಂಡಿದ್ದಾರೆ. ಹೊಸ ಬಸ್ ನಿಲ್ದಾಣದ ಸಮೀಪದ ನಡೆಯುತ್ತಿದ್ದ ಎಕ್ಸ್‌ಪೊ ಒಂದರ ಭಾಗವಾಗಿ ಹನಾನ್ ಅವರ ಕಾರ್ಯಕ್ರಮ ಇತ್ತು. ಘಟನೆ ಸಂಬಂಧ ಐವರು ಸಂಘಟಕರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕಾರ್ಯಕ್ರಮಕ್ಕೆ ಭಾರಿ ಸಂಖ್ಯೆಯಲ್ಲಿ ಜನರು ಆಗಮಿಸಿದ್ದು, ಅವ್ಯವಸ್ಥೆ ಉಂಟಾಗಿದೆ. ಸ್ಥಳಕ್ಕೆ ಆಗಮಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಾರ್ಯಕ್ರಮ ಸ್ಥಗಿತಗೊಳಿಸುವಂತೆ ಸೂಚಿಸಿದ್ದಾರೆ. […]

ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ: ಅಮಿತ್ ಶಾಗೆ ಮಾಹಿತಿ ಕೊಟ್ಟ ವಿಜಯೇಂದ್ರ

ನವದೆಹಲಿ: ರಾಜ್ಯ ಕಾಂಗ್ರೆಸ್‌ನಲ್ಲಿ ಕುರ್ಚಿ ಕಿತ್ತಾಟ ಜೋರಾಗಿ ನಡೆಯುತ್ತಿದ್ದಂತೆ ಇನ್ನೊಂದು ಕಡೆ ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್‌ ಶಾ ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಭೇಟಿಯಾಗಿ ರಾಜ್ಯ ರಾಜಕರಣದ ಬಗ್ಗೆ ಮಾಹಿತಿ ನೀಡಿದ್ದಾರೆ. ಬಿಹಾರ ಚುನಾವಣೆ ಎನ್‌ಡಿಎ ಮಿತ್ರ ಕೂಟ ಜಯಭೇರಿ ಭಾರಿಸಿದ್ದಕ್ಕೆ ಅಮಿತ್‌ ಶಾ ಅವರನ್ನು ಭೇಟಿ ಮಾಡಿ ಅಭಿನಂದಿಸಿದ್ದೇನೆ ಎಂದು ವಿಜಯೇಂದ್ರ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಪೋಸ್ಟ್‌ನಲ್ಲಿ ಏನಿದೆ?ರಾಷ್ಟ್ರ ರಾಜಕಾರಣಕ್ಕೆ ಸ್ಪಷ್ಟ ದಿಕ್ಸೂಚಿ ಎಂದು ವಿಶ್ಲೇಷಿಸಲಾಗಿದ್ದ ಬಿಹಾರ ಚುನಾವಣೆಯನ್ನು ಅತ್ಯಂತ […]

ದುಬೈ ರನ್’ನಲ್ಲಿ ಮಿಂಚಿದ ಬ್ಯಾರಿಗಳು; ಅತೀ ಉದ್ದನೆಯ ಯುಎಇ ಧ್ವಜದ ದ್ರಶ್ಯವನ್ನು ಹಂಚಿಕೊಂಡ ದುಬೈ ರಾಜಕುಮಾರ ಶೇಖ್ ಹಮ್ದಾನ್

‘ ದುಬೈ: ಆರೋಗ್ಯ, ಫಿಟ್‌ನೆಸ್ ಮತ್ತು ಮನರಂಜನೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ರವಿವಾರ ದುಬೈಯ ಶೇಖ್ ಝಾಯೆದ್ ರಸ್ತೆಯಲ್ಲಿ ನಡೆದ ಐತಿಹಾಸಿಕ ‘ದುಬೈ ರನ್–2025’ ಕಾರ್ಯಕ್ರಮದಲ್ಲಿ ಯುಎಇಯಲ್ಲಿ ನೆಲೆಸಿರುವ ಬ್ಯಾರಿ ಅನಿವಾಸಿ ಸಮುದಾಯವು ಅದ್ಭುತ ಹಾಜರಾತಿ ನೀಡಿ ಎಲ್ಲರ ಗಮನ ಸೆಳೆದಿದೆ. ಲಕ್ಷಾಂತರ ಮಂದಿ ಪಾಲ್ಗೊಂಡಿದ್ದ ಈ ಕಾರ್ಯಕ್ರಮದಲ್ಲಿ, ಯುಎಇ ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ & ಇಂಡಸ್ಟ್ರೀಸ್ (BCCI) ಅಧ್ಯಕ್ಷ ಹಿದಾಯತ್ ಅಡ್ಡೂರು ಅವರ ನೇತೃತ್ವದಲ್ಲಿ ಸಾವಿರಾರು ಬ್ಯಾರಿಗಳು ‘ದುಬೈ ಬ್ಯಾರೀಸ್’ ಎಂದು ಮುದ್ರಿತ ಟೀ–ಶರ್ಟ್‌ಗಳನ್ನು […]

ನಾನು ಯಾವಾಗಲೂ ಸಿಎಂ ರೇಸ್‌ನಲ್ಲಿ ಇರ್ತೀನಿ: ಪರಮೇಶ್ವರ್‌

ಬೆಂಗಳೂರು: ನಾನು ಕೆಪಿಸಿಸಿ ಅಧ್ಯಕ್ಷ ಆಗಿದ್ದಾಗಲೂ ಕಾಂಗ್ರೆಸ್‌ ಪಕ್ಷ ಅಧಿಕಾರಕ್ಕೆ ಬಂತು. ಆದ್ರೆ ಯಾವತ್ತೂ ನಾನೊಬ್ಬನೇ ಪಕ್ಷವನ್ನ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ ಗೃಹಸಚಿವ ಪರಮೇಶ್ವರ್‌ ಹೇಳಿದ್ದು, ಡಿಸಿಎಂ ಡಿಕೆ ಶಿವಕುಮಾರ್‌ ಅವರಿಗೆ ಪರೋಕ್ಷ ಟಾಂಗ್‌ ಕೊಟ್ಟರು. ನಾಯಕತ್ವ ಬದಲಾವಣೆ ವಿಚಾರ ಕುರಿತು ಬೆಂಗಳೂರಿನಲ್ಲಿ ಮಾತನಾಡಿದ ಅವರು, ನಾನು ಅಧ್ಯಕ್ಷನಾಗಿದ್ದಾಗಲೂ ಪಕ್ಷ ಅಧಿಕಾರಕ್ಕೆ ಬಂತು. ನಾನೊಬ್ಬನೇ ಅಧಿಕಾರಕ್ಕೆ ತಂದೆ ಅಂತ ಹೇಳಿಕೊಳ್ಳಲಿಲ್ಲ ಎಂದರು. ಇನ್ನೂ ನೀವೂ ಸಿಎಂ ರೇಸ್‌ನಲ್ಲಿದ್ದೀರಾ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿ, ನಾನು ಯಾವಾಗಲೂ […]

ಬೆಂಗಳೂರು ಎಟಿಎಂ ವ್ಯಾನ್ ದರೋಡೆ ಹಿಂದಿನ ಅಸಲಿ ಕಾರಣ ಬಹಿರಂಗ! ಇಡೀ ಪ್ರಕರಣದ ಸೂತ್ರದಾರ ಯಾರು ಗೊತ್ತಾ?

ಬೆಂಗಳೂರು: ಹಾಡಹಗಲೇ ನಡೆದಿದ್ದ ಬೆಂಗಳೂರು ಎಟಿಎಂ ವ್ಯಾನ್ ದರೋಡೆ ಪ್ರಕರಣದ ಹಿಂದಿನ ಅಸಲಿ ಕಾರಣ ಬಹಿರಂಗವಾಗಿದೆ. ಸಿಎಂಎಸ್ ಏಜೆನ್ಸಿ ವಾಹನವನ್ನು ಅಡಗಟ್ಟಿ ರೂ.7.11 ಕೋಟಿ ದರೋಡೆ ಮಾಡಿದ್ದ ಪ್ರಕರಣ ಮಹತ್ವದ ತಿರುವು ಪಡೆದಿದೆ. ಬಂಧಿತ ಆರೋಪಿಗಳ ಪೈಕಿ ರವಿ ಎಂಬಾತ ಇಡೀ ಪ್ರಕರಣದ ಸೂತ್ರದಾರ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಎಂಎಸ್ ಸಂಸ್ಥೆ ಮಾಜಿ ನೌಕರ ಕ್ಸೇವಿಯರ್, ಗೋವಿಂದಪುರ ಪೊಲೀಸ್ ಠಾಣಾ ಕಾನ್‌ಸ್ಟೆಬಲ್ ಅಣ್ಣಪ್ಪನಾಯ್ಕ್, ಹಾಲಿ ಸಿಎಂಎಸ್ ಸಂಸ್ಥೆ ಸಿಬ್ಬಂದಿ ಗೋಪಿ, ರವಿ, […]

ಕೇರಳ: ಮೇಕಪ್ ಮಾಡಿಸಿಕೊಳ್ಳಲು ಹೋಗುತ್ತಿದ್ದ ವಧುವಿಗೆ ಅಪಘಾತ; ಐಸಿಯುನಲ್ಲೇ ವಿವಾಹ

ಕೊಚ್ಚಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಧುವೊಬ್ಬರು ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿಯೇ ಮದುವೆಯಾದ ಅಪರೂಪದ ಘಟನೆಯೊಂದು ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಆಲಪ್ಪುಳ ನಿವಾಸಿ ಅವನಿ ಮತ್ತು ಥುಂಬೊಳಿಯ ವಿ.ಎಂ ಶರೊಣ್‌ ಅವರ ವಿವಾಹವು ಶುಕ್ರವಾರ ಮಧ್ಯಾಹ್ನ ನಿಗದಿಯಾಗಿತ್ತು. ಅದೇ ದಿನ ಬೆಳಿಗ್ಗೆ ‘ಮೇಕಪ್’ ಮಾಡಿಸಿಕೊಳ್ಳಲು ಹೋಗುತ್ತಿದ್ದ ವೇಳೆ ಅವನಿ ಅವರ ಕಾರು ಅಪಘಾತಕ್ಕೀಡಾಗಿದ್ದು, ಬೆನ್ನುಹುರಿಗೆ ಗಾಯವಾಗಿದ್ದರಿಂದ ಅವರಿಗೆ ವಿಪಿಎಸ್‌ ಲೇಕ್‌ಶೋರ್ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ಬಂದ ಶರೊಣ್‌ ಮತ್ತು ಅವನಿ ಕುಟುಂಬಸ್ಥರು, ಪೂರ್ವನಿಗದಿಯಂತೆ 12:15ರಿಂದ 12:30ರೊಳಗಿನ […]