ಕೇರಳ: ಮೇಕಪ್ ಮಾಡಿಸಿಕೊಳ್ಳಲು ಹೋಗುತ್ತಿದ್ದ ವಧುವಿಗೆ ಅಪಘಾತ; ಐಸಿಯುನಲ್ಲೇ ವಿವಾಹ

ಕೊಚ್ಚಿ: ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ ವಧುವೊಬ್ಬರು ಆಸ್ಪತ್ರೆಯ ತುರ್ತುನಿಗಾ ಘಟಕದಲ್ಲಿಯೇ ಮದುವೆಯಾದ ಅಪರೂಪದ ಘಟನೆಯೊಂದು ಕೇರಳದ ಕೊಚ್ಚಿಯಲ್ಲಿ ನಡೆದಿದೆ. ಆಲಪ್ಪುಳ ನಿವಾಸಿ ಅವನಿ ಮತ್ತು ಥುಂಬೊಳಿಯ ವಿ.ಎಂ ಶರೊಣ್ ಅವರ ವಿವಾಹವು ಶುಕ್ರವಾರ ಮಧ್ಯಾಹ್ನ ನಿಗದಿಯಾಗಿತ್ತು. ಅದೇ ದಿನ ಬೆಳಿಗ್ಗೆ ‘ಮೇಕಪ್’ ಮಾಡಿಸಿಕೊಳ್ಳಲು ಹೋಗುತ್ತಿದ್ದ ವೇಳೆ ಅವನಿ ಅವರ ಕಾರು ಅಪಘಾತಕ್ಕೀಡಾಗಿದ್ದು, ಬೆನ್ನುಹುರಿಗೆ ಗಾಯವಾಗಿದ್ದರಿಂದ ಅವರಿಗೆ ವಿಪಿಎಸ್ ಲೇಕ್‌ಶೋರ್ ಆಸ್ಪತ್ರೆಯಲ್ಲಿ ವಿಶೇಷ ಚಿಕಿತ್ಸೆ ನೀಡಲಾಗುತ್ತಿತ್ತು. ಆಸ್ಪತ್ರೆಗೆ ಬಂದ ಶರೊಣ್ ಮತ್ತು ಅವನಿ ಕುಟುಂಬಸ್ಥರು, ಪೂರ್ವನಿಗದಿಯಂತೆ 12:15ರಿಂದ 12:30ರೊಳಗಿನ […]
Hassan | ದೇವಸ್ಥಾನಕ್ಕೆ ಮುಸ್ಲಿಂ ಕುಟುಂಬದಿಂದ ನಾಮಫಲಕ ಕೊಡುಗೆ

ಹಾಸನ: ನಗರದ ವಲ್ಲಬಾಯಿ ರಸ್ತೆಯ ಶ್ರೀ ವಿಜಯಲಕ್ಷ್ಮಿ ಅಮ್ಮನವರ ಹಿಂದೂ ದೇವಸ್ಥಾನಕ್ಕೆ ಮುಸಲ್ಮಾನ ಬಾಂಧವರಾದ ಹಾಸನ ಮಹಾನಗರ ನಗರಪಾಲಿಕೆ ವ್ಯಾಪ್ತಿಯ ವಾರ್ಡ್ ಸಂಖ್ಯೆ:26ರ ಸದಸ್ಯೆ ಅಲ್ ಫಿಯಾ ಫೈಯಾಜ್ ಅವರು ತಮ್ಮ ವೈಯಕ್ತಿಕ ಕೊಡುಗೆಯಾಗಿ ದೇವಿಯ ಹೆಸರಿನ ಆಕರ್ಷಕ ವಿದ್ಯುತ್ ನಾಮ ಫಲಕ ಆಳವಡಿಸಿಕೊಟ್ಟು ಸೌಹಾರ್ಧತೆ ಮೆರೆದಿದ್ದಾರೆ. ಇದಕ್ಕೆ ದೇವಸ್ಥಾನದ ಆಡಳಿತ ಮಂಡಳಿಯವರು ಹಾಗು ಭಕ್ತಾದಿಗಳು ಈ ಮೂಲಕ ಧನ್ಯವಾದ ಅರ್ಪಿಸಿದ್ದಾರೆ.
ಮಸೀದಿ ಉತ್ಖನನ ವೇಳೆ ರಾಮ-ಸೀತಾ ವಿಗ್ರಹ ಪತ್ತೆ: ದೇವಾಲಯ ನಿರ್ಮಾಣಕ್ಕೆ ಹಿಂದೂಗಳ ಆಗ್ರಹ

ಮಧ್ಯಪ್ರದೇಶದ ಸಾಗರ್ ಎಂಬಲ್ಲಿ ಮಸೀದಿಯೊಂದರ ಉತ್ಖನನದ ವೇಳೆ ಸೀತಾ ಮತ್ತು ರಾಮನ ವಿಗ್ರಹಗಳು ಕಂಡುಬಂದಿವೆ. ಇದೀಗ ಈ ಸುದ್ದಿ ಎಲ್ಲ ಕಡೆ ವೈರಲ್ ಆಗಿದ್ದು, ಸ್ಥಳಕ್ಕೆ ಹಿಂದೂ ಸಮುದಾಯದ ಮುಖಂಡರು ಹಾಗೂ ಜನರುನ ಕೂಡ ಆಗಮಿಸಿದ್ದರು. ಸಾಗರ್‌ನ ಪಪ್ಪೆಟ್ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸಂಸ್ಕೃತ ಬಚಾವೊ ಮಂಚ್‌ನ ನಾಯಕ ಈ ಬಗ್ಗೆ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ಪ್ರದೇಶದಲ್ಲಿ ಒಂದು ಕಾಲದಲ್ಲಿ ದೇವಾಲಯವಿತ್ತು ಎಂಬುದು ಸಾಬೀತಾಗಿದೆ. ಈ ಸ್ಥಳದಲ್ಲಿ ಮತ್ತೆ ದೇವಾಲಯವನ್ನು ನಿರ್ಮಿಸಬೇಕು ಎಂಬುದು ಹಿಂದೂಗಳ ಬಯಕೆ […]
ಹಣದ ವಿಚಾರಕ್ಕೆ ಗಲಾಟೆ: ಲೈಂಗಿಕ ಕಾರ್ಯಕರ್ತೆಯನ್ನು ಕೊಂದು ಚೀಲದಲ್ಲಿ ಹಾಕಿ ಎಸೆದ!

ಕೊಚ್ಚಿ: ಮಹಿಳೆಯೊಬ್ಬರನ್ನು ಕೊಲೆ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿ ಮನೆಯ ಆವರಣ ಗೋಡೆ ಸಮೀಪ ಎಸೆದ ಘಟನೆ ಕೇರಳ ಕೊಚ್ಚಿ ಸಮೀಪದ ನಡೆದಿದೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ. ಪ್ರಕರಣ ಸಂಬಂಧ ಕೊಂತುರ್ತಿ ನಿವಾಸಿ ಜಾರ್ಜ್ ಕೆ.ಕೆ ಎಂಬಾತನನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ತಾನೇ ಕೃತ್ಯ ಎಸಗಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಲೈಂಗಿಕ ಕಾರ್ಯಕರ್ತೆಯಾಗಿರುವ ಆಕೆಯನ್ನು ತೇವರದಲ್ಲಿರುವ ಬಾಲಕಿಯ ಪ್ರೌಢ ಶಾಲೆಯ ಬಳಿಯಿಂದ ತನ್ನ ಮನೆಗೆ ಕರೆದುಕೊಂಡು ಬಂದಿದ್ದ. ಹಣಕಾಸಿನ ವಿಚಾರದಲ್ಲಿ ಇವರಿಬ್ಬರ ನಡುವೆ ವಾಗ್ವಾದ ನಡೆದಿದೆ. […]
ಭರತ್ ಕುಮ್ಡೇಲು ವಿರುದ್ಧ ಕೋಕ ಪ್ರಕರಣ: ಚಾರ್ಜ್ ಶೀಟ್ ವಿಸ್ತರಣೆ ಅರ್ಜಿ ವಜಾಗೊಳಿಸಿದ ಮೈಸೂರು ನ್ಯಾಯಾಲಯ!

ಮೈಸೂರು: ಅಶ್ರಫ್ ಕಲಾಯಿ, ಅಬ್ದುಲ್ ರೆಹಮಾನ್ ಕೊಲೆ ಆರೋಪಿ ಭರತ್ ಕುಮ್ಡೇಲು ವಿರುದ್ಧ ಕೋಕ ಪ್ರಕರಣದ ಚಾರ್ಜ್ ಶೀಟ್ ವಿಸ್ತರಣೆ ಅರ್ಜಿಯನ್ನು ಮೈಸೂರು ಜಿಲ್ಲಾ ಪ್ರಧಾನ ಸತ್ರ / ವಿಶೇಷ ( ಕೋಕ) ನ್ಯಾಯಾಲಯ ವಜಾ ಗೊಳಿಸಿದೆ. ಪ್ರಕರಣ ತನಗೆ ಸಂಬಂಧಿಸಿದ್ದಲ್ಲ ಎಂದು ಕಡತವನ್ನು ಮೈಸೂರು ವಿಶೇಷ ನ್ಯಾಯಾಲಯ ಹಿಂತಿರುಗಿಸಿದೆ. ದಕ್ಷಿಣ ಕನ್ನಡ ಜಿಲ್ಲಾ ಪ್ರಧಾನ ಸತ್ರ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸೂಚನೆ ನೀಡಿದೆ. ನ್ಯಾಯವಾದಿಗಳಾದ ಮಹೇಶ್ ಕಜೆ,ಪ್ರಸಾದ್ ಕುಮಾರ್ ಬಂಟ್ವಾಳ, ಸಿವಿ ಕೇಶವ ಮೂರ್ತಿ , […]
ಡಿಸೆಂಬರ್ 6 ರಂದು ಬಾಬರಿ ಮಸೀದಿಗೆ ಅಡಿಗಲ್ಲು: ಶಾಸಕ ಹುಮಾಯೂನ್ ಕಬೀರ್

ಕೋಲ್ಕತಾ:”ನಾವು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಗಲ್ಲು ಹಾಕುತ್ತೇವೆ” ಎಂದು ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಶಾಸಕ ಹುಮಾಯೂನ್ ಕಬೀರ್ ಹೇಳಿಕೆ ನೀಡಿದ್ದು ರಾಜಕೀಯ ಚರ್ಚೆಗೆ ಕಾರಣವಾಗಿದೆ. ಸುದ್ದಿ ಸಂಸ್ಥೆ ಎಎನ್ ಐನೊಂದಿಗೆ ಮಾತನಾಡಿದ ಹುಮಾಯೂನ್ ಕಬೀರ್ ”ನಾವು ಡಿಸೆಂಬರ್ 6 ರಂದು ಮುರ್ಷಿದಾಬಾದ್ ಜಿಲ್ಲೆಯ ಬೆಲ್ದಂಗಾದಲ್ಲಿ ಬಾಬರಿ ಮಸೀದಿಗೆ ಅಡಿಗಲ್ಲು ಹಾಕುತ್ತೇವೆ.ಅದು ಪೂರ್ಣಗೊಳ್ಳಲು ಮೂರು ವರ್ಷಗಳು ಬೇಕಾಗುತ್ತದೆ. ಸಮಾರಂಭದಲ್ಲಿ 2 ಲಕ್ಷ ಜನರು 400 ಮಂದಿ ಮುಸ್ಲಿಂ ನಾಯಕರು […]
ಅಧಿಕಾರವಿದ್ದಾಗ ಎಷ್ಟು ಜನ ಮನೆಗೆ ಬರುತ್ತಾರೆ ಎನ್ನುವುದು ಮುಖ್ಯವಲ್ಲ, ಬದಲಾಗಿ ಸಾಯುವಾಗ ಎಷ್ಟು ಜನರು ಬೆನ್ನು ಕೊಡುತ್ತಾರೆ ಎನ್ನವುದು ಮುಖ್ಯ: ಯುಟಿ ಖಾದರ್

ಸೌದಿ ಅರೇಬಿಯಾ: ಅಧಿಕಾರ ಶಾಶ್ವತವಲ್ಲ. ನಿನ್ನೆ ಬೇರೊಬ್ಬರೊಂದಿಗಿತ್ತು. ಇಂದು ಮತ್ತೊಬ್ಬರಲ್ಲಿದೆ. ಅದು ನಾಳೆ ಇನ್ನೊಬ್ಬರದ್ದಾಗಲಿದೆ. ನಮ್ಮೊಂದಿಗೆ ಅಧಿಕಾರವಿದ್ದಾಗ ಜನರು ನಮ್ಮ ಮನೆಗೆ ಬರುತ್ತಲೇ ಇರುತ್ತಾರೆ. ಆದರೆ ಅಧಿಕಾರದಲ್ಲಿರುವಾಗ ನಮ್ಮ ಬಳಿಗೆ ಎಷ್ಟು ಜನ ಬರುತ್ತಾರೆ ಎನ್ನುವುದು ಮುಖ್ಯವಲ್ಲ ಬದಲಾಗಿ ನಮ್ಮ ಅಂತ್ಯ ಸಂಸ್ಕಾರಕ್ಕೆ ಬಂದು ನಮಗೆ ಎಷ್ಟು ಜನರು ಬೆನ್ನು ಕೊಡುತ್ತಾರೆ, ಪ್ರಾರ್ಥನೆ ಮಾಡುತ್ತಾರೆ ಎನ್ನವುದೇ ಮುಖ್ಯ. ಆ ನಿಟ್ಟಿನಲ್ಲಿ ಪ್ರೀತಿಯಿಂದ, ಸೌಹಾರ್ದತೆಯಿಂದ ಜೀವನ ಸಾಗಿಸಿ ನಾವು ಜನತೆಯ ಹೃದಯದಲ್ಲಿ ಸ್ಥಾನ ಪಡೆಯಬೇಕು. ಆ ಮೂಲಕ ನಮ್ಮ […]
ಸಾಮಾಜಿಕ ಕಾರ್ಯಕರ್ತನ ಕೊಲೆ ಯತ್ನ; ನಟಿ, ಮಾಡೆಲ್ ಸವಿತಾಬಾಯಿ ಬಂಧನ

ಇತ್ತೀಚೆಗೆ ದಾವಣಗೆರೆಯಲ್ಲಿ ಸಾಮಾಜಿಕ ಕಾರ್ಯಕರ್ತ ಟಿ. ಅಜ್ಗರ್ ಮೇಲೆ ಕೊಲೆ ಯತ್ನ ನಡೆದಿತ್ತು. ಈ ವೇಳೆ ಗಾಯಗೊಂಡ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಘಟನೆ ನಡೆದ ಎರಡು ವಾರಗಳು ಕಳೆಯುತ್ತಿದೆ. ಈಗ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕಿ ಸವಿತಾಬಾಯಿ ಮಲ್ಲೇಶ್ ನಾಯ್ಕ ಬಂಧನ ಆಗಿದೆ. ಇವರು ಮಾಡೆಲ್ ಹಾಗೂ ನಟಿ ಕೂಡ ಆಗಿದ್ದರು. ಅವರ ಮೇಲೆ ಕೊಲೆಗೆ ಸಾಥ್ ನೀಡಿದ ಆರೋಪ ಇದೆ. ಸವಿತಾಬಾಯಿ ಕಾಂಗ್ರೆಸ್ ನಾಯಕಿ ಮಾತ್ರವಲ್ಲ, ಮಾಯಕೊಂಡ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ಆಗಿದ್ದರು. ಈ […]
ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷರಾಗಿ ಎಚ್.ಡಿ.ದೇವೇಗೌಡ, ರಾಜ್ಯಾಧ್ಯಕ್ಷರಾಗಿ ಎಚ್.ಡಿ.ಕುಮಾರಸ್ವಾಮಿ ಪುನರಾಯ್ಕೆ

ಬೆಂಗಳೂರು : ಜೆಡಿಎಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾಗಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾಗಿ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವಿರೋಧವಾಗಿ ಪುನರಾಯ್ಕೆ ಆಗಿದ್ದಾರೆ. ಶುಕ್ರವಾರ ಪಕ್ಷದ ಕಚೇರಿ ಜೆಪಿ ಭವನದಲ್ಲಿ ನಡೆದ ರಾಷ್ಟ್ರೀಯ ಮಂಡಳಿ ಸಭೆಯಲ್ಲಿ ಈ ಇಬ್ಬರು ನಾಯಕರ ಪುನರಾಯ್ಕೆ ಬಗ್ಗೆ ರಾಷ್ಟ್ರೀಯ ಪ್ರತಿನಿಧಿಗಳು ಒಮ್ಮತ ನಿರ್ಧಾರ ಕೈಗೊಂಡರು.ರಾಷ್ಟ್ರ ಮಟ್ಟದಲ್ಲಿ ಪಕ್ಷ ಸಂಘಟನೆಗೆ ವಿಫುಲ ಅವಕಾಶಗಳಿವೆ. ಅದೇ ರೀತಿಯಲ್ಲಿ ಕರ್ನಾಟಕದಲ್ಲಿ ಪಕ್ಷ ಸಂಘಟನೆಯನ್ನು ಬಲಿಷ್ಠವಾಗಿ ಮಾಡಬೇಕಿದೆ. ಈ ಹಿನ್ನೆಲೆಯಲ್ಲಿ ದೇವೇಗೌಡರು ಹಾಗೂ ಕುಮಾರಸ್ವಾಮಿ ನೇತೃತ್ವದಲ್ಲಿಯೇ ಪಕ್ಷವನ್ನು […]
Dubai | 24 ವರ್ಷಗಳ ಇತಿಹಾಸದಲ್ಲಿ 2ನೇ ದುರಂತ: ಒಂದು ʻತೇಜಸ್ʼಗೆ ತಗುಲುವ ವೆಚ್ಚ ಎಷ್ಟು?

ದುಬೈನ ಅಲ್ ಮುಕ್ತೌಮ್ ಏರ್‌ಪೋರ್ಟ್‌ನಲ್ಲಿ ನಡೆಯುತ್ತಿದ್ದ ʻದುಬೈ ಅಂತಾರಾಷ್ಟ್ರೀಯ ಏರ್ ಶೋʼನಲ್ಲಿ ಹಿಂದೂಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನಿರ್ಮಿತ ತೇಜಸ್ ಲಘು ಯುದ್ಧ ವಿಮಾನ ಪತನಗೊಂಡಿದೆ. ಈ ಬೆನ್ನಲ್ಲೇ ತೇಜಸ್ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತವಾಗಿದೆ, ಸೋಷಿಯಲ್ ಮೀಡಿಯಾದಲ್ಲೂ ಪರ ವಿರೋಧ ಚರ್ಚೆಗಳು ನಡೆಯುತ್ತಿವೆ. 2001ರಲ್ಲಿ ತೇಜಸ್ ಫೈಟರ್ ಜೆಟ್‍ನ (Tejas Fighter Jet) ಮೊದಲ ಪರೀಕ್ಷಾ ಹಾರಾಟದ ನಂತರ, 2016 ರಲ್ಲಿ ಭಾರತೀಯ ವಾಯುಪಡೆಗೆ ಸೇರಿಸಲಾಯಿತು. 2024ರ ಮಾರ್ಚ್ 12ರಂದು ಜೈಸಲ್ಮೇರ್‌ನ ವಿದ್ಯಾರ್ಥಿನಿಯರ ಹಾಸ್ಟೆಲ್ ಮೈದಾನದಲ್ಲಿ ತರಬೇತಿಯ […]