ಹರಿಯಾಣದಲ್ಲಿ 25 ಲಕ್ಷ ಮತಗಳ್ಳತನ, 8ರಲ್ಲಿ 1 ಮತದಾರರು ನಕಲಿ – ರಾಹುಲ್ ಗಾಂಧಿ ಹೈಡ್ರೋಜನ್ ಬಾಂಬ್

ನವದೆಹಲಿ: ಕರ್ನಾಟಕದ ಆಳಂದ, ಮಹಾದೇವಪುರದಂತೆ ಹರಿಯಾಣದಲ್ಲಿ ಕೂಡ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಇಂದು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಒಂದೇ ವ್ಯಕ್ತಿ ಹಲವು ಕಡೆ ಮತದಾನ ಮಾಡಿರುವ ನಿದರ್ಶನಗಳಿವೆ. ಅದರಲ್ಲೂ ಬ್ರೆಜಿಲ್ ಮಾಡೆಲ್ ಫೋಟೊ ಬಳಸಿ 10 ಬೂತ್ಗಳಲ್ಲಿ 22 ಹೆಸರಿನಲ್ಲಿ ಮತದಾನ ನಡೆದಿತ್ತು ಎಂದು ಹೇಳಿದ್ದಾರೆ. ಹರ್ಯಾಣದಲ್ಲ 25 ಲಕ್ಷ ಮತಗಳ್ಳತನವಾಗಿದೆ ಎಂದು ದೂರಿದ್ದಾರೆ. ಹಲವು ರಾಜ್ಯಗಳಲ್ಲಿ ಮತ ಕಳ್ಳತನದ ದೂರುಗಳು ನಮಗೆ ಬಂದಿವೆ, ಹರಿಯಾಣದ ಎಕ್ಸಿಟ್ ಪೋಲ್ನಲ್ಲಿ […]
ಧರ್ಮಸ್ಥಳ ಕೇಸ್‌ಗೆ ಮಹಿಳಾ ಆಯೋಗ ಮತ್ತೆ ಎಂಟ್ರಿ; ಎಸ್‌ಐಟಿ ವಿರುದ್ಧ ಅಸಮಾಧಾನ

ಬೆಂಗಳೂರು: ಧರ್ಮಸ್ಥಳ ಗ್ರಾಮದಲ್ಲಿ ನೂರಾರು ಶವಗಳನ್ನು ಹೂತಿಟ್ಟ ಪ್ರಕರಣಕ್ಕೆ ಈಗ ಮತ್ತೊಮ್ಮೆ ರಾಜ್ಯ ಮಹಿಳಾ ಆಯೋಗ ಎಂಟ್ರಿಯಾಗಿದೆ. ಎಸ್‌ಐಟಿ ತನಿಖಾ ವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಲ್ಲದೇ, ಮಹಿಳೆಯರ ಮೇಲಿನ ಅತ್ಯಾಚಾರ, ನಾಪತ್ತೆ ಕುರಿತು ತನಿಖೆ ನಡೆಸುವಂತೆ ಅಥವಾ ತನಿಖೆ ನಡೆಸಿದ್ದರೆ ಮಾಹಿತಿ ಹಂಚಿಕೊಳ್ಳುವಂತೆ ಪತ್ರದ ಮೂಲಕ ಮನವಿ ಮಾಡಿದೆ. ಮಹಿಳಾ ಆಯೋಗದ ಪತ್ರದಲ್ಲಿ ಏನಿದೆ?ಮಾಧ್ಯಮಗಳ ವರದಿಯನ್ನು ಗಮನಿಸಿದಾಗ ಎಸ್‌ಐಟಿ (SIT) ರಚನೆ ಆದಾಗಿನಿಂದ ಕೇವಲ ನ್ಯಾಯಾಲಯದ ಮುಂದೆ ಹೇಳಿಕೆ ನೀಡಿದ ʻಚಿನ್ನಯ್ಯʼ ಎಂಬ ವ್ಯಕ್ತಿಯ ಹೇಳಿಕೆಯನ್ನು ಆಧರಿಸಿ […]
‘ಕೋತಿಗಳ ಗುಂಪಲ್ಲಿ ಕುಳಿತರೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಗುರುತೇ ಸಿಗುವುದಿಲ್ಲ’: ಅಖಿಲೇಶ್ ‘ಮಂಕಿ’ ಪ್ರತ್ಯುತ್ತರ

ನವದೆಹಲಿ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ‘ಅಪ್ಪು, ಪಪ್ಪು ಮತ್ತು ತಪ್ಪು’ ಎಂಬ ಹೇಳಿಕೆಗೆ ಕಟುವಾಗಿ ಪ್ರತಿಕ್ರಿಯಿಸಿರುವ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್, ಆದಿತ್ಯನಾಥ್ ಅವರು ಕೋತಿಗಳ ಗುಂಪಿನ ನಡುವೆ ಕುಳಿತರೆ ಯಾರೂ ಅವರನ್ನು ಗುರುತಿಸುವುದಿಲ್ಲ ಎಂದು ಹೇಳಿದ್ದಾರೆ. ‘ಜನರ ಮನಸ್ಸನ್ನು ಪ್ರಮುಖ ವಿಷಯಗಳಿಂದ ಬೇರೆಡೆಗೆ ತಿರುಗಿಸಲು ಬಿಜೆಪಿ ಗಾಂಧೀಜಿಯವರ ಮೂರು ಕೋತಿಗಳನ್ನು ನೆನಪಿಸಿಕೊಳ್ಳುತ್ತಿದೆ. ಆದರೆ, ಸತ್ಯ ಏನೆಂದರೆ ಅವರನ್ನು (ಯೋಗಿ ಆದಿತ್ಯನಾಥ್) ಕೋತಿಗಳ ಗುಂಪಿನ ನಡುವೆ ಕೂರಿಸಿದರೆ, ನೀವು ಅಥವಾ ನಾನು […]
‘ಭಾರತೀಯ ಸೇನೆ ಸಹ ಮೇಲ್ಜಾತಿಯವರಿಂದ ನಿಯಂತ್ರಿಸಲ್ಪಡುತ್ತದೆ’: ರಾಹುಲ್ ಗಾಂಧಿ

ಔರಂಗಾಬಾದ್: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ‘ಭಾರತೀಯ ಸೇನೆ ಸಹ ಶೇ.10 ರಷ್ಟು ಜನರಿಂದ ನಿಯಂತ್ರಿಸಲ್ಪಡುತ್ತದೆ’ ಎಂದು ಹೇಳುವ ಮೂಲಕ ಹೊಸ ವಿವಾದವನ್ನು ಹುಟ್ಟುಹಾಕಿದ್ದಾರೆ ಬಿಹಾರದ ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಲೋಕಸಭೆ ಪ್ರತಿಪಕ್ಷದ ನಾಯಕ, ಮುಖ್ಯವಾಗಿ ಮೇಲ್ಜಾತಿಗಳಿಂದ ಬಂದವರು ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಪ್ರಾಬಲ್ಯ ಹೊಂದಿದ್ದಾರೆ. ಇದರಲ್ಲಿ ಸಶಸ್ತ್ರ ಪಡೆಗಳು ಸೇರಿವೆ ಎಂದು ಹೇಳಿದರು. “ದೇಶದ ಜನಸಂಖ್ಯೆಯ ಕೇವಲ ಶೇ. 10 ರಷ್ಟು ಮೇಲ್ಜಾತಿಯ ಜನರು, ಕಾರ್ಪೊರೇಟ್ ವಲಯ, ಅಧಿಕಾರಶಾಹಿ ಮತ್ತು ನ್ಯಾಯಾಂಗದಲ್ಲಿ […]
ಮಂಗಳೂರು: ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದ ವ್ಯಕ್ತಿಯನ್ನು ಸಿನಿಮೀಯ ರೀತಿಯಲ್ಲಿ ರಕ್ಷಿಸಿದ ಪೊಲೀಸರು

ಮಂಗಳೂರು: ಕೌಟುಂಬಿಕ ಕಲಹಕ್ಕೆ ಬೇಸತ್ತು 6 ವರ್ಷದ ಮಗಳೊಂದಿಗೆ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯನ್ನು ಮಂಗಳೂರು ಪೊಲೀಸ್ ಇಲಾಖೆ ಸಮಯಪ್ರಜ್ಞೆಯಿಂದ ರಕ್ಷಿಸಿದ ಘಟನೆ ಕಾವೂರು ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ನಡೆದಿದೆ. ಕೌಟುಂಬಿಕ ಕಲಹದ ಕಾರಣ ತನ್ನ ಆರು ವರ್ಷದ ಮಗಳೊಂದಿಗೆ ತಣ್ಣೀರುಬಾವಿ ಬೀಚ್ನಲ್ಲಿ ವೀಡಿಯೋ ಮಾಡಿದ್ದು, ವೈರಲ್ ವೀಡಿಯೋ ಮೂಲಕವೇ ಆತನನ್ನು ಪತ್ತೆ ಹಚ್ಚಿದ ಪೊಲೀಸರು, ಆತನನ್ನು ರಕ್ಷಿಸಿದ್ದಾರೆ. 7 ವರ್ಷಗಳ ಹಿಂದೆ ಬಜ್ಪೆ ಪ್ರದೇಶದ ಯುವತಿಯನ್ನು ರಾಜೇಶ್ ಪ್ರೀತಿಸಿ ಮದುವೆಯಾಗಿದ್ದರು. ಆದರೆ ದಂಪತಿ ನಡವೆ ಇತ್ತೀಚೆಗೆ ಜಗಳಗಳು […]
ಚಿಕ್ಕಬಳ್ಳಾಪುರ | 38ರ ಮಹಿಳೆಯ ಕಾಮದಾಟಕ್ಕೆ 19ರ ಯುವಕ ಬಲಿ

ಚಿಕ್ಕಬಳ್ಳಾಪುರ: ಮಹಿಳೆಯ ಕಾಟ ತಾಳಲಾರದೇ ಯುವಕ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಮೂಡಚಿಂತಲಹಳ್ಳಿ ಗ್ರಾಮದಲ್ಲಿ ನಡೆದಿದೆ. ನಿಕಿಲ್ ಕುಮಾರ್ (19) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಹಿಳೆಯ ಕಾಮದಾಟಕ್ಕೆ ಯುವಕ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ. ನಿಖಿಲ್ 38 ವರ್ಷದ ಮಹಿಳೆ ಶಾರದಾ ಎಂಬಾಕೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದ ಆರೋಪ ಕೇಳಿಬಂದಿದೆ. ಹಲವು ವರ್ಷಗಳ ಹಿಂದೆಯೇ ಗಂಡನಿಂದ ವಿಚ್ಛೇದನ ಪಡೆದಿದ್ದ ಶಾರದಾ ಇಬ್ಬರು ಮಕ್ಕಳೊಂದಿಗೆ ಮೂಡಚಿಂತಹಳ್ಳಿ ಗ್ರಾಮದಲ್ಲಿ ವಾಸವಿದ್ದಳು. ನಿಖಿಲ್ ಪೋಷಕರ ವಿರೋಧದ ನಡುವೆಯೂ […]
ನಾನು ಸ್ಪೀಕರ್ ಹುದ್ದೆಗೆ ಏರುವುದಕ್ಕೆ ಬ್ಯಾರಿ ಸಮುದಾಯ ಸೇರಿ ಎಲ್ಲ ವರ್ಗದ ಪ್ರೀತಿ ಕಾರಣ: ಯು.ಟಿ ಖಾದರ್

ಬೆಂಗಳೂರು: ದೂರದ ಕರಾವಳಿಯಿಂದ ಬೆಂಗಳೂರಿಗೆ ಉದ್ಯೋಗ ಮತ್ತು ವಿವಿಧ ಉದ್ದೇಶಗಳಿಗಾಗಿ ಬಂದು ನೆಲೆಸಿರುವ ಬ್ಯಾರಿ ಸಮುದಾಯದ ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಕೋನದಿಂದ ಬೆಂಗಳೂರಿನಲ್ಲಿ ಅತೀ ಶೀಘ್ರದಲ್ಲೇ ‘ಬ್ಯಾರಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ’ಯ ಪ್ರಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು. ಈ ಬಗ್ಗೆ ಬ್ಯಾರಿ ಸಮುದಾಯದ ಎಲ್ಲ ಮುಖಂಡರೊಂದಿಗೆ ಮಾತುಕತೆ ನಡೆಸಲಾಗಿದೆ ಎಂದು ವಿಧಾನಸಭೆಯ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು. ಮಂಗಳವಾರ ಸಂಜೆ 5ಕ್ಕೆ ಬೆಂಗಳೂರಿನ ಮೆಜೆಸ್ಟಿಕ್‌ನಲ್ಲಿರುವ ಹಿಂದೂಸ್ತಾನ್ ಕಾಂಪ್ಲೆಕ್ಲ್‌ನಲ್ಲಿ ಬ್ಯಾರಿಸ್ ಸೆಂಟ್ರಲ್ ಕಮಿಟಿ(ಬಿಸಿಸಿ)ಯ ನೂತನ ಕಚೇರಿಯನ್ನು ಉದ್ಘಾಟನೆ ಮಾಡಿ ಅವರು ಮಾತನಾಡಿದರು. […]
ಪ್ರಧಾನಿ ಮೋದಿ ಯುವಜನತೆಗೆ ರೀಲ್ಸ್ ನಶೆ ಏರಿಸುತ್ತಿದ್ದಾರೆ: ರಾಹುಲ್ ಗಾಂಧಿ

ಪಾಟ್ನಾ: ಪ್ರಧಾನಿ ಮೋದಿ ಅವರು ಯುವಜನತೆಗೆ ರೀಲ್ಸ್ ನಶೆ ಏರಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಯುವಕರು ರೀಲ್ಸ್ ಮಾಡಿಕೊಂಡು ಇರುವಂತೆ ಉತ್ತೇಜಿಸುತ್ತಿದ್ದಾರೆಂದು ಲೋಕಸಭಾ ವಿಪಕ್ಷ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ. ಔರಂಗಾಬಾದ್‌ನಲ್ಲಿ ನಡೆದ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಮೋದಿ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಸನವನ್ನು ಉತ್ತೇಜಿಸುತ್ತಿದ್ದಾರೆ ಎಂದು ಆರೋಪಿಸಿದರು. ಪ್ರಧಾನಿ ಮೋದಿ ನೀವು ರೀಲ್ಸ್ ಮಾಡುವ ಮೂಲಕ ಇನ್‌ಸ್ಟಾಗ್ರಾಮ್, ಫೇಸ್‌ಬುಕ್ ವ್ಯಸನಿಯಾಗಬೇಕೆಂದು ಬಯಸುತ್ತಾರೆ. ಇದು 21ನೇ ಶತಮಾನದ ಹೊಸ ‘ನಶಾ’. ಯುವಕರು ಶಿಕ್ಷಣ, ಆರೋಗ್ಯ ಮತ್ತು […]
ಸೀರಿಯಲ್ ನಟಿಗೆ ರೇಣುಕಾಸ್ವಾಮಿ ರೀತಿ ಲೈಂಗಿಕ ಕಿರುಕುಳ: ಖಾಸಗಿ ಕಂಪನಿ ಉದ್ಯೋಗಿಯ ಬಂಧನ

ಬೆಂಗಳೂರು: ಕಿರುತೆರೆ ನಟಿಯೊಬ್ಬರಿಗೆ ಅಶ್ಲೀಲ ಸಂದೇಶಗಳನ್ನು ಕಳಿಸುವ ಮೂಲಕ ಲೈಂಗಿಕ ಕಿರುಕುಳ ನೀಡುತ್ತಿದ್ದ ಆರೋಪಿಯನ್ನು ಅನ್ನಪೂರ್ಣೇಶ್ವರಿ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ಕನ್ನಡ ಹಾಗೂ ತೆಲುಗು ಧಾರಾವಾಹಿಗಳಲ್ಲಿ ನಟಿಸುತ್ತಿರುವ 41 ವರ್ಷದ ನಟಿಯೊಬ್ಬರು ನೀಡಿದ ದೂರಿನನ್ವಯ ನವೀನ್ ಎಂಬಾತನನ್ನು ಬಂಧಿಸಲಾಗಿದೆ. ಖಾಸಗಿ ಕಂಪನಿಯೊಂದರ ಡೆಲಿವರಿ ಮ್ಯಾನೇಜರ್ ಆಗಿರುವ ಆರೋಪಿ, ಸಾಮಾಜಿಕ ಜಾಲತಾಣದ ಮೂಲಕ ನಟಿಗೆ ನಿರಂತರವಾಗಿ ಅಶ್ಲೀಲ ಫೋಟೋ, ವಿಡಿಯೋಗಳನ್ನು ಕಳಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಕನ್ನಡ ಹಾಗೂ ತೆಲುಗು ಭಾಷೆಯ ಕಿರುತೆರೆ ನಟಿಗೆ ಮೂರು ತಿಂಗಳ […]
ಕಾಂಗ್ರೆಸ್ ಹಿರಿಯ ಶಾಸಕ ಹೆಚ್.ವೈ. ಮೇಟಿ ಇನ್ನಿಲ್ಲ

ಬಾಗಲಕೋಟೆ: ತೀವ್ರ ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕಾಂಗ್ರೆಸ್‌ನ ಹಿರಿಯ ಶಾಸಕ ಹಾಗೂ ಮಾಜಿ ಸಚಿವ ಹೆಚ್.ವೈ ಮೇಟಿ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಬಾಗಲಕೋಟೆ ಕಾಂಗ್ರೆಸ್ ಶಾಸಕರಾಗಿದ್ದ ಇವರು ಚಿಕಿತ್ಸೆ ಫಲಕಾರಿಯಾಗದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಇತ್ತೀಚೆಗಷ್ಟೇ ಹೆಚ್.ವೈ.ಮೇಟಿ ಅವರನ್ನ ಖಾಸಗಿ ಆಸ್ಪತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ H.Y.ಮೇಟಿ, ಜಿಲ್ಲೆಯ ತಿಮ್ಮಾಪುರದಲ್ಲಿ1946 ಅಕ್ಟೋಬರ್ 9ರಂದು ಜನಿಸಿದ್ದರು. ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಬಾಗಲಕೋಟೆ ಡಿಸಿಸಿ ಬ್ಯಾಂಕ್ […]