Flash News

ಮೂಡುಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್: ಮಹಿಳೆಯರನ್ನ ಮಂಚಕ್ಕೆ ಕರೆಯುವ ಖಾಕಿ ಕಾಮಕಾಂಡಕ್ಕೆ ಬಿತ್ತು ಬ್ರೇಕ್!

ಪೊಲೀಸ್ ಠಾಣೆಗೆ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ದೂರು ಕೊಡಲು ಬಂದ ಮಹಿಳೆಯರನ್ನು ಮಂಚಕ್ಕೆ ಕರೆಯುತ್ತಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮೂಡುಬಿದಿರೆ ಪೊಲೀಸ್ ಇನ್ಸ್‌ಪೆಕ್ಟರ್ ಸಂದೇಶ್ ಪಿ.ಜಿ. ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತರಾದ ಸುಧೀರ್ ಕುಮಾರ್ ರೆಡ್ಡಿ ಆದೇಶ ಹೊರಡಿಸಿದ್ದಾರೆ. ಇನ್ಸ್‌ಪೆಕ್ಟರ್ ಸಂದೇಶ್ ವಿರುದ್ಧ ಕೇಳಿಬಂದ ಲೈಂಗಿಕ ಕಿರುಕುಳ ಮತ್ತು ಭ್ರಷ್ಟಾಚಾರದ ಆರೋಪಗಳ ಬಗ್ಗೆ ಎಸಿಪಿ (ACP) ನೀಡಿದ ಪ್ರಾಥಮಿಕ ತನಿಖಾ ವರದಿಯ ಆಧಾರದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಸಾಮಾಜಿಕ […]

ಪಶ್ಚಿಮ ಬಂಗಾಳ ದೀದಿಗೆ ಕರ್ನಾಟಕ ಹೈಕೋರ್ಟ್‌ ರಿಲೀಫ್!

ಆನೇಕಲ್ ತಾಲೂಕಿನ ಜಿಗಣಿ ಹೋಬಳಿ ಹೆಬ್ಬಗೋಡಿ ಪೊಲೀಸ್ ವ್ಯಾಪ್ತಿಯಲ್ಲಿ, ಎಲ್ಲಾರೆಡ್ಡಿ ಅನ್ನುವವರ ಜಮೀನಿನಲ್ಲಿ ಅನಧಿಕೃತ ಮನೆಗಳನ್ನು ಜೆಸಿಬಿ ಮುಖಾಂತರ ತೆರವುಗೊಳಿಸುವ ಕಾರ್ಯಾಚರಣೆ ಸಂದರ್ಭದಲ್ಲಿ ಮಹಿಳೆಯೊಬ್ಬರು “ಜೈ ಬಾಂಗ್ಲಾ” ಘೋಷಣೆ ಕೂಗುವ ಮೂಲಕ ದೇಶದ್ರೋಹ ಎಸಗಿದ್ದಾರೆಂದು ಆರೋಪಿಸಲಾಗಿತ್ತು. ಈ ಸಂಬಂಧ ಹೆಬ್ಬಗೋಡಿ ಪೊಲೀಸರು 25 ವರ್ಷದ ಮಹಿಳೆಯ ಮೇಲೆ ಜೀವಪರ್ಯಂತ ಜೈಲು ಶಿಕ್ಷೆ ವಿಧಿಸಬಹುದಾದ ರಾಷ್ಟ್ರದ್ರೋಹ, ರಾಷ್ಟ್ರದ ಅಖಂಡತೆಗೆ ಧಕ್ಕೆ ಸೇರಿದಂತೆ ಬಿ.ಎನ್.ಎಸ್ (BNS) ಸೆಕ್ಷನ್ 152, 196, 197(1) ಮತ್ತು 353(1) ಅಡಿ ಪ್ರಕರಣ ದಾಖಲಿಸಿ, ಆಕೆಯನ್ನು […]

ಇರಾನ್‌ ಪ್ರತಿಕಾರದ ದಾಳಿ ದಿಗ್ಭ್ರಮೆಗೊಳಿಸಿದೆ: ಒಪ್ಪಿಕೊಂಡ ಡೊನಾಲ್ಡ್ ಟ್ರಂಪ್‌

ವಾಷಿಂಗ್ಟನ್‌: ‘ತನ್ನ ಮೇಲಿನ ದಾಳಿಗೆ ಇರಾನ್ ಈ ರೀತಿಯಾಗಿ ಪ್ರತಿಕ್ರಿಯಿಸಬಹುದು ಎಂದು ನಾವು ನಿರೀಕ್ಷಿಸಿರಲಿಲ್ಲ’ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್ ಒಪ್ಪಿಕೊಂಡಿದ್ದಾರೆ. ಸಂಘರ್ಷದ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್‌, ‘ಇದನ್ನು ಯಾರೂ ನಿರೀಕ್ಷಿಸಿರಲಿಲ್ಲ. ನಾವು ದಿಗ್ಭ್ರಮೆಗೊಂಡಿದ್ದೇವೆ. ಇರಾನ್‌ನ ಪ್ರತೀಕಾರದ ತೀವ್ರತೆಯು ನಮಗೆ ಅಚ್ಚರಿ ಮೂಡಿಸಿದೆ. ವಿಶೇಷವಾಗಿ ಕತಾರ್, ಸೌದಿ ಅರೇಬಿಯಾ, ಯುಎಇ, ಬಹ್ರೇನ್, ಕುವೈತ್ ಮೇಲೆ ಇರಾನ್‌ ದಾಳಿ ನಡೆಸುತ್ತದೆ ಎಂದು ನಿರೀಕ್ಷಿಸಿರಲಿಲ್ಲ’ ಎಂದು ಹೇಳಿದ್ದಾರೆ. ‘ತನ್ನ ನೆರೆಯ ರಾಷ್ಟ್ರಗಳ ಮೇಲೆ ಇರಾನ್‌ ದಾಳಿ ಮಾಡಬಾರದಿತ್ತು. […]

RSS, ರಾ ನಿಷೇಧಿಸಿ: ಅಮೆರಿಕ ಸಂಸ್ಥೆ ಶಿಫಾರಸು

ವಾಷಿಂಗ್ಟನ್‌: ಪ್ರಪಂಚಾದ್ಯಂತ ಧಾರ್ಮಿಕ ಸ್ವಾತಂತ್ರ್ಯವನ್ನು ಮೇಲ್ವಿಚಾರಣೆ ಮಾಡುವ ಅಮೆರಿಕದ ಸಂಸ್ಥೆಯೊಂದು ಆರ್‌ಎಸ್‌ಎಸ್‌ ಮತ್ತು ಭಾರತದ ಗುಪ್ತಚರ ಸಂಸ್ಥೆ ‘ರಾ’ (ರಿಸರ್ಚ್ ಆ್ಯಂಡ್ ಅನಾಲಿಸಿಸ್ ವಿಂಗ್‌) ಅನ್ನು ನಿಷೇಧಿಸುವಂತೆ ಅಮೆರಿಕ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಅಂತಾರಾಷ್ಟ್ರೀಯ ಧಾರ್ಮಿಕ ಸ್ವಾತಂತ್ರ್ಯದ ಅಮೆರಿಕ ಆಯೋಗ (ಯುಎಸ್‌ಸಿಐಆರ್‌ಎಫ್‌) ಸಂಸ್ಥೆಯು ತನ್ನ ವಾರ್ಷಿಕ ವರದಿಯಲ್ಲಿ ಈ ಸೂಚನೆ ನೀಡಿದ್ದು, ಭಾರತದಲ್ಲಿ ಧಾರ್ಮಿಕ ಸ್ವಾತಂತ್ರ್ಯವು ಕಳವಳಕಾರಿಯಾಗಿದೆ. ಅಲ್ಲದೇ ಭಾರತವು ಧಾರ್ಮಿಕ ಸ್ವಾತಂತ್ರ್ಯದಲ್ಲಿ ನಿರ್ದಿಷ್ಟವಾದ ಕಾಳಜಿ ಮಾತ್ರ ಹೊಂದಿದೆ ಎಂದು ಹೇಳಿದೆ. ಈ ವರದಿ ಪ್ರಕಾರ, ರಾಷ್ಟ್ರೀಯ […]

ಬೆಂಗಳೂರು | ಮಕ್ಕಳ ಎದುರೇ ಮೆಕಾನಿಕ್‌ ರಷೀದ್‌ ಹತ್ಯೆ: 7 ಮಂದಿ ಸೆರೆ

ಬೆಂಗಳೂರು: ಗ್ಯಾರೆಜ್‌ ಮೇಲ್ಛಾವಣಿಗೆ ಮೋಲ್ಡಿಂಗ್‌ ಹಾಕುವ ವಿಚಾರಕ್ಕೆ ಮಕ್ಕಳ ಎದುರೇ ಗ್ಯಾರೆಜ್‌ ಮೆಕಾನಿಕ್‌ನನ್ನು ಭೀಕರವಾಗಿ ಹತ್ಯೆಗೈದ ಪ್ರಕರಣದಲ್ಲಿ ಮೂವರು ಪ್ರಮುಖ ಆರೋಪಿಗಳು ಸೇರಿ ಏಳು ಮಂದಿಯನ್ನು ವಿಲ್ಸನ್‌ ಗಾರ್ಡನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ವಿಲ್ಸನ್‌ ಗಾರ್ಡನ್‌ನ ಬಡಾ ಮಖಾನ್‌ ನಿವಾಸಿ ಫರ್ವೀಜ್‌(36), ಸಮೀರ್‌(38) ಮತ್ತು ಅಫ್ರಿದಿ ಅಲಿಯಾಸ್‌ ಅಸ್ಗರ್‌ (39) ಹಾಗೂ ಇತರೆ ನಾಲ್ವರು ಆರೋಪಿಗಳ ಬಂಧಿಸಲಾಗಿದೆ. ಆರೋಪಿಗಳು ಮಾ.15ರಂದು ರಾತ್ರಿ 11 ಗಂಟೆ ಸುಮಾರಿಗೆ ಬಡಾ ಮಖಾನ್‌ ರಸ್ತೆಯಲ್ಲಿ ರಷೀದ್‌ ಪಾಷಾ (45) ಎಂಬಾತನ ಮೇಲೆ […]

ಇತರ ಸಮುದಾಯದಿಂದ ಅಲ್ಲ, ಮುಸ್ಲಿಮರಿಂದಲೇ ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿ ಅತಿಕ್ರಮಣ: ಸಚಿವ ಜಮೀರ್ ಅಹ್ಮದ್ ಖಾನ್

ಬೆಂಗಳೂರು: ರಾಜ್ಯ ವಕ್ಫ್ ಮತ್ತು ಅಲ್ಪಸಂಖ್ಯಾತ ಕಲ್ಯಾಣ ಸಚಿವ ಬಿ.ಝೆಡ್. ಜಮೀರ್ ಅಹ್ಮದ್ ಖಾನ್ ಸೋಮವಾರ ವಿಧಾನಸಭೆಯಲ್ಲಿ ಮಾತನಾಡಿ, ರಾಜ್ಯದಲ್ಲಿ 17,969 ಎಕರೆ ವಕ್ಫ್ ಆಸ್ತಿಯನ್ನು ಅತಿಕ್ರಮಣ ಮಾಡಲಾಗಿದೆ, ಈ ಪೈಕಿ ಹೆಚ್ಚಿನವರು ಮುಸ್ಲಿಮರೇ ಆಗಿದ್ದಾರೆ ಎಂದು ತಿಳಿಸಿದ್ದಾರೆ. ಪ್ರಶ್ನೋತ್ತರ ಅವಧಿಯಲ್ಲಿ ಅಫ್ಜಲ್‌ಪುರ ಕಾಂಗ್ರೆಸ್ ಶಾಸಕ ಎಂ.ವೈ. ಪಾಟೀಲ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, “ರಾಜ್ಯಾದ್ಯಂತ ಒಟ್ಟು 1,12,860 ಎಕರೆಗಳಷ್ಟು ವಕ್ಫ್ ಆಸ್ತಿ ಇದ್ದು, ಅದರಲ್ಲಿ ಕೇವಲ 20,054 ಎಕರೆಗಳು ನಮ್ಮ ಕೈಯಲ್ಲಿವೆ. 17,969 ಎಕರೆಗಳನ್ನು ಅತಿಕ್ರಮಣ […]

ಇರಾನ್ ದಾಳಿಯಲ್ಲಿ ಇಸ್ರೇಲ್ ಪಿಎಂ ನೇತನ್ಯಾಹು ಸಾವು? 6 ಬೆರಳಿನ ವಿಡಿಯೋದಿಂದ ಅನುಮಾನ

ಟೆಲ್ ಅವೀವ್: ಇರಾನ್ ಹಾಗೂ ಇಸ್ರೇಲ್ ನಡುವಿನ ಯುದ್ಧ ತೀವ್ರ ಸ್ಪರೂಪ ಪಡೆದುಕೊಂಡಿದೆ. ಇಸ್ರೇಲ್ ಜೊತೆ ಸೇರಿ ಅಮೆರಿಕ ಕೂಡ ದಾಳಿ ನಡೆಸುತ್ತಿದೆ. ಫೆಬ್ರವರಿ 28ರಂದು ನಡೆಸಿದ ಜಂಟಿ ದಾಳಿಯಲ್ಲಿ ಇರಾನ್ ಸರ್ವೋಚ್ಚ ನಾಯಕ ಆಯತೊಲ್ಲ ಅಲಿ ಖಮೇನಿ ಸೇರಿದಂತೆ ಇಡೀ ಕುಟುಂಬವೇ ಹತ್ಯೆಯಾಗಿತ್ತು. ಆದರೆ ಇರಾನ್ ಯಾವುದೇ ಶರಣಾಗತಿಗೆ ಒಪ್ಪಂದೆ ಪ್ರತಿ ದಾಳಿ ನಡೆಸುತ್ತಲೇ ಇದೆ. ಖಮೇನಿ ಹತ್ಯೆ ಬಳಿಕ ಇರಾನ್ ಪ್ರತೀಕಾರವಾಗಿ ನಡೆಸಿದ ದಾಳಿಯಲ್ಲಿ ಇಸ್ರೇಲ್ ಪ್ರಧಾನಿ ಬೆಂಬಮಿನ್ ನೇತನ್ಯಾಹು ಹತ್ಯೆಯಾಗಿದ್ದಾರಾ? ಈ ಅನುಮಾನಗಳು […]

ಅತ್ತಿಗೆ ಮೈದುನನ ಪ್ರೇಮದಾಟ, ಅಡ್ಡಿಯಾದ ಅಮ್ಮ ಹಮೀದಾ ಸೇರಿದಳು ಯಮನ ಪಾದ

ಎಂದಿನಂತೆ ಸ್ವಚ್ಛತಾ ಸಿಬ್ಬಂದಿ ತಮ್ಮ ಕೆಲ್ಸ ಶುರು ಮಾಡಿದ್ರು. ಒಂದು ಪ್ಲಾಸ್ಟಿಕ್ ಚೀಲದ ಗಂಟು ಅವರ ಕಣ್ಣಿಗೆ ಬಿದ್ದಿತ್ತು. ಕಸ ಇರ್ಬಹುದು ಅಂತ ಭಾವಿಸಿದ್ದವರು ಬಗ್ಗಿ ನೋಡ್ದಾಗ ಹೌಹಾರಿದ್ದರು. ಅದ್ರಲ್ಲಿದ್ದಿದ್ದು ಕಸವಲ್ಲ, ಹೆಣ. ತನಿಖೆ ವೇಳೆ ಪ್ರಕಣಕ್ಕೆ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಕ್ಕಿದೆ. ಹಾಡಹಗಲೆ ಹೆಣ ತುಂಬಿದ್ದ ಚೀಲವನ್ನು ಹೆಗಲ ಮೇಲೆ ಹೊತ್ತು ಹೋಗ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆ ಆಗಿದೆ. ಇನ್ನೇನು ಬೇಕು, ಹತ್ಯೆಗೈದವರು ಕಂಬಿ ಹಿಂದೆ ಸೇರಿದ್ದಾರೆ. ಘಟನೆ ನಡೆದಿರೋದು ಸೂರತ್ ನ ಅಮ್ರೋಲಿ ಪ್ರದೇಶದ […]

ದುಬೈನಲ್ಲಿ ಮತ್ತೆ ಸ್ಫೋಟದ ಸದ್ದು: ಬುರ್ಜ್ ಖಲೀಫಾ ಬಳಿ ದಟ್ಟ ಹೊಗೆ, ಆತಂಕದಲ್ಲಿ ಜನತೆ!

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್‌ನ (UAE) ಪ್ರಮುಖ ನಗರವಾದ ದುಬೈನಲ್ಲಿ ಶುಕ್ರವಾರ ಸ್ಫೋಟದ ಸದ್ದು ಕೇಳಿ ಬಂದಿದ್ದು, ನಗರದ ಕೇಂದ್ರ ಭಾಗದಲ್ಲಿ ದಟ್ಟ ಹೊಗೆ ಆವರಿಸಿದೆ. ವರದಿಯ ಪ್ರಕಾರ, ಪ್ರಸಿದ್ಧ ಬುರ್ಜ್ ಖಲೀಫಾ ಕಟ್ಟಡದ ಬಳಿ ಈ ಹೊಗೆ ಕಾಣಿಸಿಕೊಂಡಿದ್ದು, ಸ್ಥಳೀಯರಲ್ಲಿ ತೀವ್ರ ಆತಂಕ ಮೂಡಿಸಿದೆ. ಕಟ್ಟಡಗಳಿಗೆ ಹಾನಿ: ದುಬೈ ಇಂಟರ್ನ್ಯಾಷನಲ್ ಫೈನಾನ್ಶಿಯಲ್ ಸೆಂಟರ್ (DIFC) ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಸ್ಫೋಟದ ತೀವ್ರತೆಗೆ ಸಮೀಪದ ಕಟ್ಟಡಗಳು ಕಂಪಿಸಿವೆ. ಒಂದು ಕಟ್ಟಡದ ಮುಂಭಾಗದ ಭಾಗಕ್ಕೆ ಹಾನಿಯಾಗಿದೆ ಎಂದು ವರದಿಯಾಗಿದೆ. ಡ್ರೋನ್ […]

ಗ್ಯಾಸ್ ಸಿಲಿಂಡರ್ ಉಳಿಸಲು ಹಸಿ ತರಕಾರಿ, ಮೊಳಕೆ ಕಾಳು, ಹಣ್ಣುಗಳನ್ನು ತಿನ್ನಿ; ಜಗದ್ಗುರು ತೋಂಟದಾರ್ಯ ಸ್ವಾಮೀಜಿ ಸಲಹೆ !

ಗದಗ: ಜಾಗತಿಕ ಮಟ್ಟದಲ್ಲಿ ಉಂಟಾಗಿರುವ ಯುದ್ಧದ ಭೀತಿ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ತೀವ್ರ ಕೊರತೆಯ ಹಿನ್ನೆಲೆಯಲ್ಲಿ, ಗದಗದ ಜಗದ್ಗುರು ತೋಂಟದಾರ್ಯ ಮಠದ ಶ್ರೀ ಸಿದ್ಧರಾಮ ಸ್ವಾಮೀಜಿ ಅವರು ಭಕ್ತರಿಗೆ ಹಾಗೂ ಸಾರ್ವಜನಿಕರಿಗೆ ಅತ್ಯಂತ ವಿಶಿಷ್ಟ ಹಾಗೂ ಸಮಯೋಚಿತ ಸಲಹೆಗಳನ್ನು ನೀಡಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಉಳಿತಾಯಕ್ಕಾಗಿ ಜನರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು ಎಂದು ಶ್ರೀಗಳು ಮನವಿ ಮಾಡಿದ್ದಾರೆ. ಪೆಟ್ರೋಲ್, ಡೀಸೆಲ್ ಮತ್ತು ಗ್ಯಾಸ್ ಉಳಿತಾಯಕ್ಕಾಗಿ ಜನರು ತಮ್ಮ ಜೀವನಶೈಲಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಳ್ಳಬೇಕು […]