Flash News

ಪುನೀತ್ ಕೆರೆಹಳ್ಳಿಯ ರೀಲ್ಸ್ ಹುಚ್ಚಾಟ: ಹೈಕೋರ್ಟ್ ಖಡಕ್ ಎಚ್ಚರಿಕೆ

ಬೆಂಗಳೂರು: ರೀಲ್ಸ್‌ ಮತ್ತು ಫೇಸ್‌ಬುಕ್‌ ಪೋಸ್ಟ್‌ಗಾಗಿ ಹಲ್ಲೆ ಮಾಡುವುದು ಅಥವಾ ಪೊಲೀಸರನ್ನು ನಿಂದಿಸುವುದು ಸರಿಯಲ್ಲ ಎಂದು ಹೋರಾಟಗಾರ ಪುನೀತ್‌ ಕೆರೆಹಳ್ಳಿಗೆ ಹೈಕೋರ್ಟ್‌ ಚಾಟಿ ಬೀಸಿದೆ. ಮಯನ್ಮಾರ್‌ ನಿರಾಶ್ರಿತನ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಬೆಂಗಳೂರಿನ ಚನ್ನಮ್ಮನ ಅಚ್ಚುಕಟ್ಟು ಠಾಣೆಯಲ್ಲಿ ದಾಖಲಾಗಿರುವ ಪ್ರಕರಣವನ್ನು ರದ್ದಪಡಿಸುವಂತೆ ಕೋರಿ ಪುನೀತ್‌ ಕೆರೆಹಳ್ಳಿ ಸಲ್ಲಿಸಿರುವ ಅರ್ಜಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಅರ್ಜಿದಾರರ ಪರ ವಕೀಲ ಪಿ.ಎನ್‌. ಮನಮೋಹನ್‌, ಪ್ರಕರಣ ದಾಖಲಿಸಿದ್ದ ಪೊಲೀಸರು ಪುನೀತ್‌ಗೆ ಜ.13ರಂದು ಅಂತಿಮ […]

ರೀಲ್ಸ್ ರಾಣಿಗೆ ಮೋಜಿನ ಬದುಕು ಕಟ್ಟಿಕೊಟ್ಟಿದ್ದ ಕಮಲಾಕರ್ ಭಟ್! ಆಡಿಯೋ ವೈರಲ್ ಬೆನ್ನಲ್ಲೇ ಪತಿ ಹೇಳಿದ್ದೇನು?

ಶಿವಮೊಗ್ಗ: ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರದಲ್ಲಿ ವಸಂತ್ ನಾಯ್ಕ್ ಕೊಲೆ ಪ್ರಕರಣ ರಾಜ್ಯಾದ್ಯಂತ ಸದ್ದು ಮಾಡುತ್ತಿದೆ. ಖ್ಯಾತ ಜ್ಯೋತಿಷಿ ಕಮಲಾಕರ್‌ ಭಟ್‌ ಮತ್ತು ಸುಚಿತ್ರಾ ಅನೈತಿಕ ಸಂಬಂಧ ಬಟಾಬಯಲಾಗಿದೆ.  ಸದ್ಯ ಸುಚಿತ್ರಾ ಮತ್ತು ಕಮಲಾಕರ್​​ ಭಟ್​​ ಗ್ಯಾಂಗ್ ಜೈಲು ಪಾಲಾಗಿದ್ದಾರೆ. ಆದರೆ ಜ್ಯೋತಿಷಿ ಕಮಲಾಕರ್‌ ಭಟ್‌‌ ಮತ್ತು ಸುಚಿತ್ರಾ ಮಾತನಾಡಿರುವ ಆಡಿಯೋ ವೈರಲ್‌ ಆಗಿದೆ. ಮಗಳು ಕೂಡ ತಾಯಿ ಸುಚಿತ್ರಾ ವಿರುದ್ಧ ಗಂಭೀರ ಆರೋಪ ಮಾಡಿದ್ದಾಳೆ. ಈ ಬೆನ್ನಲ್ಲೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಚಿತ್ರಾ ಪತಿ ಮಹೇಶ್ ಮತ್ತೊಂದು ಆರೋಪ ಮಾಡಿದ್ದಾರೆ. ಸಿದ್ದಾಪುರ ವಸಂತ್ ನಾಯ್ಕ್ ಕೊಲೆ ಪ್ರಕರಣದಲ್ಲಿ ಖ್ಯಾತ ಜ್ಯೋತಿಷಿ ಕಮಲಾಕರ್​ ಭಟ್​​ ಗ್ಯಾಂಗ್​​ ಅಂದರ್​ ಆಗಿದ್ದು, ಪ್ರಕರಣ ಸಂಬಂಧ ದಿನದಿಂದ ದಿನಕ್ಕೆ ಒಂದೊಂದು ವಿಚಾರಗಳು ಬಯಲಾಗುತ್ತಿವೆ. ಇದೀಗ ಘಟನೆ ವೇಳೆ ಗಾಯಗೊಂಡು ಶಿವಮೊಗ್ಗದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸುಚಿತ್ರಾ ಪತಿ ಮಹೇಶ್​​ ನಾಯ್ಕ್​​ ಮಾತನಾಡಿದ್ದು ಗಂಭೀರ ಆರೋಪ ಮಾಡಿದ್ದಾರೆ. ಕೊಲೆ ಮಾಡಲು ಬಂದಿದ್ದು ನನ್ನನ್ನಲ್ಲ, ಟಾರ್ಗೆಟ್ ನನ್ನ ಮಗಳು ಎಂದು ಹೇಳಿದ್ದಾರೆ. ಈ ಬಗ್ಗೆ ಶಿವಮೊಗ್ಗದ ಮೆಗ್ಗಾನ್​ ಆಸ್ಪತ್ರೆಯಲ್ಲಿ ಮಾತನಾಡಿರುವ ಮಹೇಶ್​​, […]

ವಿದೇಶದಲ್ಲಿ ತುಳುವನ ಕಮಾಲ್: ಭರ್ಜರಿ 49 ಕೋಟಿ ರೂ. ಲಾಟ್ರಿ ಗೆದ್ದ ಉಡುಪಿಯ ಯುವಕ!

ಉಡುಪಿ: ಓಮನ್​​​ನಲ್ಲಿ ಚಿಲ್ಲರೆ ವ್ಯಾಪಾರದ ಸೇಲ್ಸ್​​ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ಕರ್ನಾಟಕದ ಶಂತನು ಶೆಟ್ಟಿಗಾರ್‌ ಅಬುದಾಭಿಯಲ್ಲಿ ನಡೆದ ಬಿಗ್‌ ಟಿಕೆಟ್ ಡ್ರಾನಲ್ಲಿ 49 ಕೋಟಿ ( (20 ಮಿಲಿಯನ್‌ ದಿರಮ್‌ ) ರು. ಮೊತ್ತದ ಲಾಟರಿ ಗೆದ್ದಿದ್ದಾರೆ. ಉಡುಪಿಯ ಉದ್ಯಾವರ ಮೂಲದ 33 ವರ್ಷದ ಶಂತನು ಓಮನ್​​​ನಲ್ಲಿ ರಿಟೇಲ್‌ ವಲಯದ ಉದ್ಯೋಗದಲ್ಲಿದ್ದು, ಇದೇ ಜನವರಿ 20ರಂದು ಬಿಗ್‌ ಟಿಕೆಟ್‌ನಲ್ಲಿ 305810 ಸಂಖ್ಯೆ ಲಾಟರಿ ಖರೀದಿಸಿದ್ದರು. ಫೆ.3ರಂದು ಬಿಗ್‌ ಟಿಕೆಟ್ ಡ್ರಾ ಆಗಿದ್ದು, ಇದರಲ್ಲಿ ಶಂತನು ಅವರಿಗೆ ಅದೃಷ್ಟ ಖುಲಾಯಿಸಿದೆ. ಶಂತನು ತನ್ನ […]

ಕಾಂಗ್ರೆಸ್ ಮುಖಂಡ ಬೇರೊಬ್ಬರ ಹೆಂಡ್ತಿ ಜತೆ ಸಿಕ್ಕಿಬಿದ್ದು ಏಟು ತಿಂದ ಪ್ರಕರಣ: ಸ್ಫೋಟಕ ವಿಚಾರ ಬಿಚ್ಚಿಟ್ಟ ಮಹಿಳೆಯ ಗಂಡ!

ಚಿಕ್ಕಮಗಳೂರು: ಕಾಂಗ್ರೆಸ್ ಮುಖಂಡ ರಾಹುಲ್ ಷರೀಫ್ ರಾತ್ರಿ ವೇಳೆ ವಿವಾಹಿತ ‌ಮಹಿಳೆಯ ಜೊತೆ ಸಿಕ್ಕಿಬಿದ್ದು ಅಕ್ಕಪಕ್ಕದ ಮನೆಯವರಿಂದ ಏಟು ತಿಂದ ಘಟನೆ ಚಿಕ್ಕಮಗಳೂರು ನಗರದ ಗಾಂಧಿನಗರದಲ್ಲಿ ಬುಧವಾರ ನಡೆದಿತ್ತು. ‘ಹಿಂದೂ ಮಹಿಳೆಯ ಮನೆಯಲ್ಲಿ ನಿನಗೇನು ಕೆಲಸ’ ಎಂದು ಪ್ರಶ್ನಿಸಿ ಕೆಲ ಯುವಕರು ಕಾಂಗ್ರೆಸ್ ಮುಖಂಡನನ್ನು ಥಳಿಸಿದ್ದರು. ಆದರೆ, ರಾಹಿಲ್ ಸ್ನೇಹಿತ ಎಂದಿದ್ದ ಮಹಿಳೆ, ತನಗೆ ಆರೋಗ್ಯ ಸರಿಯಿಲ್ಲದ ಕಾರಣ ಔಷಧಿ ಕೊಡಲು ಮನೆಗೆ ಬಂದಿದ್ದರು ಎಂದಿದ್ದಳು. ಆದರೀಗ ಆಕೆಯ ಪತಿ ಸ್ಫೋಟಕ ವಿಚಾರ ಬಿಚ್ಚಿಟ್ಟಿದ್ದು, ಕಾಂಗ್ರೆಸ್ ಮುಖಂಡನ ವಿರುದ್ಧ ಗಂಭೀರ ಆರೋಪ […]

ಮುಸ್ಲಿಂ ಯುವತಿಯ ಜೊತೆ ಇದ್ದ ಕಾರಣಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ಆರೋಪ: SDPI ಕಾರ್ಯಕರ್ತರು ಸೇರಿ ಹಲವರ ವಿರುದ್ಧ ಪ್ರಕರಣ

ಕೊಪ್ಪಳ: ಮುಸ್ಲಿಂ ಯುವತಿಯ ಜೊತೆ ಇದ್ದ ಕಾರಣಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ ನಡೆಸಿರುವ ಆರೋಪ ಕೊಪ್ಪಳ ಜಿಲ್ಲೆಯ ಗಂಗಾವತಿ ಪಟ್ಟಣದಲ್ಲಿ ಕೇಳಿಬಂದಿದೆ. ಗಂಡನೊಂದಿಗೆ ಜಗಳವಾಡಿ ಮಕ್ಕಳ ಸಮೇತ ಮನೆ ಬಿಟ್ಟು ಹೋಗಿದ್ದ ಆಫಿಯಾಳನ್ನು ಮನವೋಲಿಸಿ ಕರೆತರಲು ಗಂಡ ಅಜ್ಮೀರ್ ನೀಡಿದ ಸೂಚನೆಯಂತೆ ವೆಂಕಟೇಶ ಗಂಗಾವತಿ ಬಸ್ ನಿಲ್ದಾಣಕ್ಕೆ ತೆರಳಿದ್ದನು ಎನ್ನಲಾಗಿದೆ. ಬಸ್ ನಿಲ್ದಾಣದಲ್ಲಿ ಬುರ್ಕಾ ಧರಿಸಿದ್ದ ಆಫಿಯಾ ಮತ್ತು ಆಕೆಯ 16 ವರ್ಷದ ಮಗಳ ಜೊತೆ ಮಾತನಾಡುತ್ತಿದ್ದ ವೆಂಕಟೇಶನನ್ನು ಕಂಡ ಕೆಲವು ಯುವಕರು, ಆತ ಮುಸ್ಲಿಂ […]

ಬಿಜೆಪಿ ಮುಖಂಡನ ಕೊಲೆ ಯತ್ನ ಪ್ರಕರಣ: 6 ಅಪರಾಧಿಗಳಿಗೆ ಶಿಕ್ಷೆ ಪ್ರಕಟ

ಶಿರಸಿ: 2019ರಲ್ಲಿ ಇಲ್ಲಿನ ಕಸ್ತೂರಬಾ ನಗರದಲ್ಲಿ ನಡೆದಿದ್ದ ಬಿಜೆಪಿ ಮುಖಂಡನ ಕೊಲೆ ಯತ್ನ ಹಾಗೂ ಓರ್ವನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರು ಮಂದಿ ಆರೋಪಿಗಳಿಗೆ ಶಿರಸಿಯ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 10 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ವಿಧಿಸಿ ಮಹತ್ವದ ತೀರ್ಪು ನೀಡಿದೆ. ಘಟನೆಯ ಹಿನ್ನೆಲೆ: ​2019ರ ಏಪ್ರಿಲ್ 23ರಂದು ರಾತ್ರಿ ಕಸ್ತೂರಬಾ ನಗರದ ಕರಿಗುಂಡಿ ರಸ್ತೆಯಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಂದಿನ ಅಧ್ಯಕ್ಷ ಅನೀಶ್ ತಹಶೀಲ್ದಾರ್ ಅವರನ್ನು ಹತ್ಯೆ ಮಾಡಲು ಸಂಚು […]

ಜಾತಕ ತೋರಿಸಲು ಬಂದ ಯುವತಿ ಮೇಲೆ ಅತ್ಯಾಚಾರ ಆರೋಪ: ಪರಿಹಾರ ನೀಡೋ ನೆಪದಲ್ಲಿ ಯಾಮಾರಿಸಿದ ಅರ್ಚಕ!

ಚಿಕ್ಕಮಗಳೂರು: ಜಾತಕದ ದೋಷ ಅಂತ ಯಾಮಾರಿಸೋ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿದೆ. ಪೂಜೆ-ಪುನಸ್ಕಾರ ಮಾಡಿದ್ರೆ ದೋಷ ಮಂಗಮಾಯವಾಗುತ್ತೆ ಅಂತ ರೈಲು ಬಿಡೋ ಸ್ವಾಮೀಜಿಗಳ ಬಳಿ ಹೋಗುವ ಮುನ್ನ ಈ ಸುದ್ದಿ ನೋಡಿ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದಲ್ಲಿ ಜಾತಕ ತೋರಿಸಲು ಹೋದ ಯುವತಿಯ ಮೇಲೆಯೇ ಅರ್ಚಕ ಅತ್ಯಾಚಾರವೆಸಗಿರೋ ಆರೋಪ ಕೇಳಿ ಬಂದಿದೆ. ಇದೀಗ ಪೊಲೀಸ್​ ಠಾಣೆ ಮೆಟ್ಟೆಲೇರಿರುವ ಯುವತಿ, ಅರ್ಚಕನ ವಿರುದ್ಧ ದೂರು ನೀಡಿದ್ದಾರೆ. ಪೊಲೀಸರಿಗೆ ಕೊಟ್ಟ ದೂರಿನ ಅನ್ವಯ, ಮದುವೆ ಸೆಟ್ ಆಗ್ತಿಲ್ಲ ಜಾತಕ […]

ಮೂರುವರೆ ವರ್ಷದ ಮಗುವಿನ ಮೇಲೆ ಅತ್ಯಾಚಾರ: ಅಪರಾಧಿಗೆ 35 ವರ್ಷ ಜೈಲು ಶಿಕ್ಷೆ ವಿಧಿಸಿದ ನ್ಯಾಯಾಧೀಶೆ ಶಹನಾಜ್ ಪರ್ವೀನ್

ಚಿತ್ತೋರ್‌ಗಢ(ರಾಜಸ್ಥಾನ): ಮೂರುವರೆ ವರ್ಷದ ಅಪ್ರಾಪ್ತೆಯನ್ನು ಅಪಹರಿಸಿ ಅತ್ಯಾಚಾರ ಮಾಡಿದ ಆರೋಪದಲ್ಲಿ ಬಂಧನದಲ್ಲಿದ್ದ ಬಾಲಾಪರಾಧಿಯ ಜೀವಾವಧಿ ಶಿಕ್ಷೆಯನ್ನು ಮಾರ್ಪಡಿಸಿ, 35 ವರ್ಷಗಳ ಜೈಲು ಶಿಕ್ಷೆ ವಿಧಿಸಿ ಪೋಕ್ಸೋ ವಿಶೇಷ ನ್ಯಾಯಾಲಯ ಆದೇಶಿಸಿದೆ. ಜತೆಗೆ, 1.40 ಲಕ್ಷ ರೂಪಾಯಿ ದಂಡವನ್ನೂ ವಿಧಿಸಿದೆ. ಅತ್ಯಾಚಾರ ಕೇಸಲ್ಲಿ ತನಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ಕಡಿತಗೊಳಿಸಲು ಕೋರಿ ಬಾಲಾಪರಾಧಿಯು ಹೈಕೋರ್ಟ್​ ಮೆಟ್ಟಿಲೇರಿದ್ದ. ಇದನ್ನು ಹೈಕೋರ್ಟ್​ ಬಾಲ ನ್ಯಾಯಮಂಡಳಿಗೆ ವರ್ಗಾಯಿಸಿತ್ತು. ಅಪರಾಧದ ತೀವ್ರತೆಯ ಹಿನ್ನೆಲೆಯಲ್ಲಿ ಮಂಡಳಿಯು ಪ್ರಕರಣವನ್ನು ಮತ್ತೆ ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಸುವಂತೆ ಸೂಚಿಸಿತ್ತು. […]

ಮಂಜೇಶ್ವರ ಡಬಲ್ ಮರ್ಡರ್’ಗೆ ಮೇಜರ್ ಟ್ವಿಸ್ಟ್: ಭೀಭತ್ಸ ಕೃತ್ಯಕ್ಕೆ ಕಾರಣ ಏನು ಗೊತ್ತಾ?

ಮಂಜೇಶ್ವರ: ಮಂಜೇಶ್ವರ ತೂಮಿನಾಡುವಿನ ಹಿಲ್ ಟಾಪ್ ನಲ್ಲಿ ಆಸ್ತಿ ವಿವಾದಕ್ಕೆ ಸಂಬಂಧಿಸಿ ನಡೆದ ಕುಟುಂಬ ಕಲಹದಲ್ಲಿ ಕೊಲೆಗೀಡಾದವರ ಸಂಖ್ಯೆ ಎರಡಕ್ಕೇರಿದೆ.ಈ ಘಟನೆಗೆ ಮೇಜರ್ ಟ್ವಿಸ್ಟ್ ಸಿಕ್ಕಿದ್ದು, ತಂದೆಯೇ ತನ್ನ ಪತ್ನಿ ಮೇಲಿನ ದ್ವೇಷದಿಂದ ವಿಚ್ಛೇದನ ಬಗ್ಗೆ ಮಾತುಕತೆಯಾಡಿದ್ದ ಮಗಳ ಕುತ್ತಿಗೆಯನ್ನು ಕಡಿದು ಹತ್ಯೆ ಮಾಡಿದ್ದಾನೆಂಬ ಮಾಹಿತಿ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ. ಸೋಮವಾರ ಸಂಜೆ 5 ಗಂಟೆ ವೇಳೆಗೆ ಮಂಜೇಶ್ವರ ಠಾಣೆ ವ್ಯಾಪ್ತಿಯ ತುಮ್ಮಿನಾಡಿನಲ್ಲಿ ಘಟನೆ ನಡೆದಿತ್ತು. ಇದೇ ವೇಳೆ, ದಾಳಿ ತಡೆಯಲು ಬಂದು ಕತ್ತಿಯೇಟಿಗೆ ಒಳಗಾಗಿದ್ದ ಪತ್ನಿಯ […]

ದಾವಣಗೆರೆ ಉಪಸಮರ: ಮುಸ್ಲಿಮರು ನಿರ್ಣಾಯಕವಾಗಿರುವ ಕ್ಷೇತ್ರಕ್ಕೆ ಓವೈಸಿ ಎಂಟ್ರಿ!

SDPI ಎಂಟ್ರಿ ಕೊಟ್ರೆ ಕಾಂಗ್ರೆಸ್ ಲೆಕ್ಕಾಚಾರ ಮತ್ತಷ್ಟು ಉಲ್ಟಾಪಲ್ಟಾ ಸಾಧ್ಯತೆ? ದಾವಣಗೆರೆ : ಕಾಂಗ್ರೆಸ್ಸಿನ ಹಿರಿಯ ನಾಯಕ, ದಾವಣಗೆರೆ ಧಣಿ ಮತ್ತು ಲಿಂಗಾಯತ ಸಮುದಾಯದ ಪ್ರಭಾವೀ ನಾಯಕರಾಗಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದ ನಂತರ, ಅವರು ಪ್ರತಿನಿಧಿಸುವ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಬಿಜೆಪಿ ಮತ್ತು ಕಾಂಗ್ರೆಸ್ ನಾಯಕರು, ಟಿಕೆಟ್’ಗಾಗಿ ಭಾರೀ ಲಾಬಿಯನ್ನು ಆರಂಭಿಸಿದ್ದಾರೆ. ಬಿಜೆಪಿಗಿಂತ ಕಾಂಗ್ರೆಸ್ಸಿಗೆ ಟಿಕೆಟ್ ಯಾರಿಗೆ ಫೈನಲ್ ಮಾಡಬೇಕು ಎನ್ನುವುದು ಸುಲಭ ತುತ್ತಾಗಿ ಉಳಿದಿಲ್ಲ. ಇದಕ್ಕೆ ಪ್ರಮುಖ ಕಾರಣ, ಕ್ಷೇತ್ರದಲ್ಲಿ ನಿರ್ಣಾಯಕರಾಗಿರುವ […]