ಮಂಗಳೂರು: ಈದ್ ಹಬ್ಬದ ದಿನವೇ ಮಂಗಳೂರಿನಲ್ಲಿ ಯುವಕ ಆತ್ಮ*ಹತ್ಯೆ ಮಾಡಿಕೊಂಡ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರೋಚಕ ಟ್ವಿಸ್ಟ್ ಸಿಕ್ಕಿದ್ದು, ಯುವಕ ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಾಯಿ ವಿರುದ್ಧ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ.
ಮಂಗಳೂರಿನ ಮೂಡುಶೆಡ್ಡೆಯ ಎದುರುಪದವು ನಿವಾಸಿ 22 ವರ್ಷದ ಮೊಹಮ್ಮದ್ ಆಶಿಕ್ ಮಾರ್ಚ್ 21ರಂದು ಸಾವಿಗೆ ಶರಣಾಗಿದ್ದರು. ಈ ಪ್ರಕರಣ ಸಂಬಂಧ ತನಿಖೆ ನಡೆಸಿದ ಪೊಲೀಸರು ಯುವಕನ ಕುಟುಂಬದವರ ದೂರಿನ ಮೇರೆಗೆ ಆತ ಪ್ರೀತಿಸುತ್ತಿದ್ದ ಹುಡುಗಿ ಹಾಗೂ ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ.
ಪ್ರೀತಿಸಿದ ಯುವತಿಯಿಂದ ಅವಮಾನವಾಗಿ ಯುವಕ ಸಾವಿಗೆ ಶರಣಾಗಿದ್ದಾನೆ ಎಂದು ವರದಿಯಾಗಿದೆ. ಈ ಹಿನ್ನೆಲೆ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಯುವತಿ ಆಕೆಯ ತಾಯಿ ಸೇರಿದಂತೆ ಮೂವರ ವಿರುದ್ಧ ಮಂಗಳೂರಿನ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರಂಭದಲ್ಲಿ ಇದೊಂದು ಸಾಮಾನ್ಯ ಆತ್ಮಹತ್ಯೆ ಪ್ರಕರಣ ಎಂದು ಭಾವಿಸಲಾಗಿತ್ತು. ಆದ್ರೆ ಆಶಿಕ್ ಮೊಬೈಲ್ ಪರಿಶೀಲಿಸಿದಾಗ ಸಾವಿನ ಹಿಂದಿನ ಪ್ರೇಮ ಪ್ರಕರಣ ಬೆಳಕಿಗೆ ಬಂದಿದೆ. ಜೊತೆಗೆ ಸಾವಿಗೂ ಮೊದಲು ಯುವತಿ ಮಾನಸಿಕ ಕಿರುಕುಳ ನೀಡಿದ ವಿಚಾರ ಬೆಳಕಿಗೆ ಬಂದಿದೆ.
ನೀನು ನನಗೆ ಮೋಸ ಮಾಡುತ್ತಿದ್ದೀಯಾ ಎಂದು ತುಂಬಾ ನೊಂದುಕೊಂಡು ಆಶಿಕ್ ಮಾತನಾಡಿದ್ದರೆ, ಇದಕ್ಕೆ ಪ್ರತಿಯಾಗಿ ಸಮೀಮಾ ನೀನು ಎಲ್ಲಿಯಾದರೂ ಹೋಗಿ ಸಾಯಿ, ನಾನು ಮತ್ತು ನನ್ನ ಗೆಳೆಯರು ನಿನ್ನ ಮೃತದೇಹದ ಕೂದಲನ್ನು ತೆಗೆಯಲು ಬರುತ್ತೇವೆ ಎಂದು ಹೇಳಿರುವುದಲ್ಲದೆ, ನಾನು ಮಾಡುವುದು ಏನು ಎಂದು ನೀನು ನೋಡು, ನೀನು ನೋಡು ಖಾಲಿ ನೋಡು ಎಂದು ಅಶ್ಲೀಲ ಮತ್ತು ಹೇಳಲು ನಾಚಿಕೆಪಡುವಂತಹ ಭಾಷೆಯಲ್ಲಿ ನಿಂದಿಸಿದ್ದಾಳೆ. ಇದೇ ನೋವಿನಲ್ಲಿ ಆಶಿಕ್ ಸಾವಿಗೆ ಶರಣಾಗಿದ್ದು, ಇದಕ್ಕೆ ಆಕೆಯ ಪ್ರಚೋದನೆಯೇ ಕಾರಣ ಎಂದು ದೂರಿನಲ್ಲಿ ಮಹಮ್ಮದ್ ಹನೀಫ್ ತಿಳಿಸಿದ್ದಾರೆ.
ಮೊಹಮ್ಮದ್ ಆಶಿಕ್ ಕಾಲೇಜು ಓದುತ್ತಿರುವಾಗಲೇ ಸಹಪಾಠಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಮಂಗಳೂರಿನ ಉಳ್ಳಾಲ ಮೂಲದ ಆ ಯುವತಿ ಹಾಗೂ ಅಶಿಕ್ ಪ್ರೀತಿಸುತ್ತಿರುವ ವಿಚಾರದ ಬಗ್ಗೆ ಎರಡು ಕುಟುಂಬಕ್ಕೂ ಮಾಹಿತಿ ಇತ್ತು. ಆದರೆ ಕೆಲ ಸಮಯದಿಂದ ಆ ಯುವತಿ ಅಶಿಕ್‌ನಿಂದ ದೂರವಾಗಿದ್ದಳು ಎಂದು ಅಶಿಕ್ ಕುಟುಂಬದವರು ಆರೋಪಿಸಿದ್ದಾರೆ.


