ಬೆಂಗಳೂರು: ದೇಶದ ನಂಬರ್ 1 ಟೆಕ್ ಕಂಪನಿ ಟಾಟಾ ಕನ್ಸಲ್ಟೆನ್ಸಿ ಸರ್ವಿಸ್ (ಟಿಸಿಎಸ್)ನಲ್ಲಿನ ಆ ಒಂದು ಬೆಳವಣಿಗೆ ದೇಶದ ಟೆಕ್ ವಲಯದಲ್ಲಿಯೇ ಒಂದು ದೊಡ್ಡ ಸಂಚಲನವನ್ನು ಸೃಷ್ಟಿಸಿದೆ.
ಮಹಾರಾಷ್ಟ್ರದ ನಾಸಿಕ್‌ನಲ್ಲಿನ ಟಿಸಿಎಸ್ ಕಂಪನಿಯ ಬಿಪಿಒ ಘಟಕದಲ್ಲಿ ನಡೆದಿದೆ ಎಂದು ಆರೋಪಿಸಲಾಗಿರುವ ಲೈಂಗಿಕ ಕಿರುಕುಳ, ಲವ್ ಜಿಹಾದ್, ಮತಾಂತರ ಹಾಗೂ ದನದ ಮಾಂಸ ತಿನ್ನಲು ಪ್ರೇರೇಪಿಸಿದ್ದಾರೆ ಎನ್ನಲಾದ ಘಟನೆ ವ್ಯಾಪಕ ಚರ್ಚೆಯನ್ನೇ ಹುಟ್ಟುಹಾಕಿದೆ.
ಏನಿದು ಘಟನೆ?
ನಾಸಿಕ್‌ನಲ್ಲಿನ ಟಿಸಿಎಸ್ ಕಂಪನಿಯ ಬಿಪಿಒ ಘಟಕದಲ್ಲಿನ ಒಂದು ನಿರ್ಧಿಷ್ಟ ಕೋಮಿಗೆ ಸೇರಿದ ಐದಾರು ಟೀಂ ಲೀಡ್‌ಗಳು ಮಹಿಳಾ ಸಹೋದ್ಯೋಗಿಗಳಿಗೆ ಟೀಂ ಔಟಿಂಗ್ ಹೆಸರಿನಲ್ಲಿ ಲೈಂಗಿಕ ಕಿರುಕುಳ ನೀಡಿದ್ದಾರೆ. ಹಾಗೂ ಔಟಿಂಗ್ ಹೋದಾಗ ಕೆಲವು ಮಹಿಳಾ ಸಹೋದ್ಯೋಗಿಗಳಿಗೆ ಈ ಟೀಂ ಲೀಡ್‌ಗಳು ದನದ ಮಾಂಸ ತಿನ್ನುವಂತೆ ಹಾಗೂ ಪ್ರೀತಿ–ಪ್ರೇಮದ ನಾಟಕ ಮಾಡಿ ವಂಚಿಸಿರುವುದಾಗಿ ಆರೋಪಿಸಲಾದ ಘಟನೆ ಇದು.
ಇತ್ತೀಚೆಗೆ ಈ ಬಗ್ಗೆ ಸಂತ್ರಸ್ತರು ನಾಸಿಕ್ ಘಟಕದ ಎಚ್‌ಆರ್ ವಿಭಾಗದ ನಿಧಾ ಖಾನ್ ಅವರಿಗೆ ಮೇಲ್ ಮೂಲಕ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ ಎಂದು ಆರೋಪಿಸಲಾಗಿದೆ.
ಅಲ್ಲದೇ ನಿಧಾ ಖಾನ್ ಅವರು ಇದನ್ನೆಲ್ಲ ವ್ಯವಸ್ಥಿತವಾಗಿ ಮಾಡುತ್ತಿದ್ದರು. ಒಂದು ಕೋಮಿಗೆ ಸೇರಿದರಿಗೆ ಭಡ್ತಿ ಹಾಗೂ ಟೀಂ ಲೀಡ್‌ಗಳನ್ನಾಗಿ ಮಾಡಲು ಕಾರಣ
ಸಂತ್ರಸ್ತರು ಈ ಪ್ರಕರಣವನ್ನು ಪೊಲೀಸ್ ಹಾಗೂ ಕೆಲ ಸಂಘಟನೆಗಳ ಕಿವಿಗೆ ಹಾಕಿದಾಗ ನಾಸಿಕ್ ಟಿಸಿಎಸ್ ಘಟಕದ ಈ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ.
ಪ್ರಕರಣ ಬೆಳಕಿಗೆ ಬಂದ ತಕ್ಷಣವೇ ಕೆಲ ಹಿಂದೂಪರ ಸಂಘಟನೆಗಳು ಕಚೇರಿಗೆ ತೆರಳಿ ಇದು ಲವ್ ಜಿಹಾದ್ ಎಂದು ಪ್ರತಿಭಟನೆ ನಡೆಸಿ ಕಿಡಿಕಾರಿದ್ದರು.
ಕೂಡಲೇ ಎಚ್ಚೆತ್ತ ಮಹಾರಾಷ್ಟ್ರ ಸರ್ಕಾರ ಪ್ರಕರಣದ ವಿಸ್ತ್ರತ ತನಿಖೆಗೆ ಎಸ್‌ಐಟಿ ರಚಿಸಿ ಆದೇಶಿಸಿದೆ. ಸದ್ಯ ಎಸ್‌ಐಟಿ ಪೊಲೀಸರು ನಾಸಿಕ್ ಟಿಸಿಎಸ್ ಉದ್ಯೋಗಿಗಳಾದ ಡ್ಯಾನಿಶ್ ಶೇಖ್, ತೌಸಿಫ್ ಅತ್ತರ್, ರಜಾ ಮೆಮನ್, ಶಾರುಖ್ ಖುರೇಷಿ, ಶಫಿ ಶೇಖ್, ಆಸಿಫ್ ಅಫ್ತಾಬ್ ಅನ್ಸಾರಿ ಮತ್ತು ಒಬ್ಬ ಮಹಿಳಾ ವ್ಯವಸ್ಥಾಪಕಿಯನ್ನು ಬಂಧಿಸಿದ್ದಾರೆ.
ಪ್ರಕರಣ ಬೆಳಕಿಗೆ ಬಂದ ಮೇಲೆ ಎಚ್‌ಆರ್ ನಿಧಾ ಖಾನ್ ತಲೆಮರೆಸಿಕೊಂಡಿದ್ದರು ಎನ್ನಲಾಗಿತ್ತು. ಆದರೆ, ಸದ್ಯ ಅವರನ್ನೂ ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ.
ಕಳವಳ
ಟಿಸಿಎಸ್ ಕಂಪನಿಯ ಎಂಟು ಮಹಿಳಾ ಉದ್ಯೋಗಿಗಳ ಮೇಲಿನ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಮತಾಂತರ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಬ್ಯಾಂಕ್ ಖಾತೆಗಳನ್ನು ವಿಶೇಷ ತನಿಖಾ ತಂಡ(ಎಸ್‌ಐಟಿ) ಪರಿಶೀಲಿಸುತ್ತಿದೆ.
ಇನ್ನು ಅಕ್ರಮ ಚಟುವಟಿಕೆಗಳಿಗಾಗಿ ಈ ಆರೋಪಿಗಳಿಗೆ ಹಣ ಪೂರೈಕೆಯಾಗುತ್ತಿದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಟಿಸಿಎಸ್ ಕಂಪನಿಯ ಅಧ್ಯಕ್ಷ ಎನ್ ಚಂದ್ರಶೇಖರನ್ ಅವರು ಯಾವುದೇ ಕಾರಣಕ್ಕೂ ಇಂಥಹ ಘಟನೆಗಳನ್ನು ಸಹಿಸುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಏತನ್ಮಧ್ಯೆ ಕಂಪನಿಯು, ತನ್ನ ಮುಖ್ಯ ಕಾರ್ಯನಿರ್ವಣಾ ಅಧಿಕಾರಿ (ಸಿಒಒ) ಆರತಿ ಸುಬ್ರಮಣಿಯನ್ ಅವರ ನೇತೃತ್ವದಲ್ಲಿ ಆಂತರಿಕ ತನಿಖಾ ಸಮಿತಿಯನ್ನು ರಚಿಸಿದೆ.
ಈ ಬೆಳವಣಿಗೆ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಟಿವಿ ಮೋಹನ್‌ದಾಸ್ ಪೈ ಸೇರಿದಂತೆ ಅನೇಕ ಉದ್ಯಮಿಗಳು ಇದು ಕಂಪನಿಯ POSH ಕಮೀಟಿಯ ಸಂಪೂರ್ಣ ವಿಫಲತೆ ಎಂದು ದೂರಿದ್ದಾರೆ.
ತಲೆಮರೆಸಿಕೊಂಡಿರುವ ನಿಧಾ ಖಾನ್ ಜಾಮೀನಿಗೆ ಅರ್ಜಿ
ದೇಶದ ನಂಬರ್ 1 ಟೆಕ್ ಕಂಪನಿ ಎನಿಸಿಕೊಂಡಿರುವ ಟಿಸಿಎಸ್ (ಟಾಟಾ ಕನ್ಸಲ್ಟೆನ್ಸಿ ಸರ್ವಿಸ್)ನ ನಾಸಿಕ್ ಘಟಕದಲ್ಲಿ ಬಲವಂತದ ಧಾರ್ಮಿಕ ಮತಾಂತರದ ಆರೋಪ ಎದುರಿಸುತ್ತಿರುವ ಎಚ್‌ಆರ್ ನಿಧಾ ಖಾನ್ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.
ತಾನು ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದೇನೆ ಎಂದು ಇಲ್ಲಿನ ಸ್ಥಳೀಯ ನ್ಯಾಯಾಲಯಕ್ಕೆ ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿಯೊಂದಿಗೆ ವೈದ್ಯಕೀಯ ಪತ್ರವನ್ನು ಸಲ್ಲಿಸಿದ್ದಾರೆ.
ತಲೆಮರೆಸಿಕೊಂಡಿರುವ ನಿಧಾ ಖಾನ್ ಮುಂಬೈನಲ್ಲಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ನಿಧಾ ಖಾನ್ ಅವರನ್ನು ವಶಕ್ಕೆ ಪಡೆಯಲು ಎಸ್‌ಐಟಿ ತಂಡ ಯತ್ನಿಸುತ್ತಿದ್ದು ಅವರ ವೈದ್ಯಕೀಯ ಹೇಳಿಕೆಗಳ ಬಗ್ಗೆ ಪರಿಶೀಲಿಸಲಾಗುತ್ತಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಇಲ್ಲಿನ ಕಚೇರಿಯಲ್ಲಿ ಲೈಂಗಿಕ ದೌರ್ಜನ್ಯ ಮತ್ತು ಬಲವಂತದ ಧಾರ್ಮಿಕ ಮತಾಂತರಕ್ಕೆ ಸಂಬಂಧಿಸಿದಂತೆ ಒಂಬತ್ತು ದೂರುಗಳನ್ನು ಎಸ್‌ಐಟಿ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಪೊಲೀಸರು ಮಹಿಳಾ ಎಚ್‌ಆರ್ ಸೇರಿ 7 ಉದ್ಯೋಗಿಗಳನ್ನು ಪೊಲೀಸರು ಬಂಧಿಸಿದ್ದಾರೆ.


