Flash News

ತುಂಬೆ | ಭೀಕರ ಅಪಘಾತದಲ್ಲಿ 7 ಮಂದಿ ವಿದ್ಯಾರ್ಥಿಗಳಿಗೆ ಗಂಭೀರ ಗಾಯ

ರಾತ್ರೋರಾತ್ರಿ ವಿದ್ಯಾರ್ಥಿಗಳ ನೆರವಿಗೆ ಧಾವಿಸಿದ ಬಂಟ್ವಾಳ ಟ್ರಾಫಿಕ್ ಎಸ್‌ಐ ಆದರ್ಶ್, ಇಮ್ರಾನ್ ಮಾರಿಪಳ್ಳ, ಇಶಾಮ್ ಫರಂಗಿಪೇಟೆ

ತುಂಬೆ: ಕಾರೊಂದು ರಸ್ತೆ ಡಿವೈಡರ್ ನ ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ 7 ಮಂದಿ ವಿದ್ಯಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ತುಂಬೆ ಸಮೀಪ ನಡೆದಿದೆ.

ಬುಧವಾರ ರಾತ್ರಿ ಸುಮಾರು 12:45 ಗಂಟೆಗೆ ಈ ಘಟನೆ ನಡೆದಿದ್ದು, ಅಪಘಾತದಿಂದ ಗಂಭೀರ ಗಾಯಗೊಂಡ ವಿದ್ಯಾರ್ಥಿಗಳು ಉಡುಪಿ ಮೂಲದವರು ಎಂದು ತಿಳಿದುಬಂದಿದೆ.

ರಾತ್ರೋರಾತ್ರಿ ಘಟನಾ ಸ್ಥಳಕ್ಕೆ ಬಂಟ್ವಾಳ ಟ್ರಾಫಿಕ್ ಎಸ್‌ಐ ಆದರ್ಶ್, SKSSF ಮಂಗಳೂರು ವಲಯ ಸಂಚಾರಿ ಚೇರ್ ಮ್ಯಾನ್ ಇಮ್ರಾನ್ ಮಾರಿಪಳ್ಳ, ಪುದು ಗ್ರಾಮ ಪಂಚಾಯತ್ ಸದಸ್ಯ ಇಶಾಮ್ ಫರಂಗಿಪೇಟೆ ಧಾವಿಸಿ ವಿದ್ಯಾರ್ಥಿಗಳ ನೆರವಿಗೆ ಬಂದಿದ್ದಾರೆ. ಅಪಘಾತದ ಸುದ್ದಿ ತಿಳಿದ ತಕ್ಷಣ ಇಶಾಮ್ ಫರಂಗಿಪೇಟೆ ಅವರು ಇಮ್ರಾನ್ ಮಾರಿಪಳ್ಳ ಅವರಿಗೆ ಕರೆ ಮಾಡಿದ್ದಾರೆ. ಬಳಿಕ ಇಶಾಮ್ ಫರಂಗಿಪೇಟೆ, ಇಮ್ರಾನ್ ಮಾರಿಪಳ್ಳ ಅವರು ಬಂಟ್ವಾಳ ಟ್ರಾಫಿಕ್ ಎಸ್.ಐ ಆದರ್ಶ್ ಹಾಗೂ ಸ್ಥಳೀಯರ ಜೊತೆ ಸೇರಿ ವಿದ್ಯಾರ್ಥಿಗಳನ್ನು ತುಂಬೆಯ ಫಾದರ್ ಮುಲ್ಲರ್ ಹಾಸ್ಪಿಟಲ್ ಗೆ ದಾಖಲಿಸಿದ್ದಾರೆ. ತದನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ವಿದ್ಯಾರ್ಥಿಗಳ ಆರೋಗ್ಯ ಸ್ಥಿರವಾಗಿದ್ದು, ಇಮ್ರಾನ್ ಮಾರಿಪಳ್ಳ, ಇಶಾಮ್ ಫರಂಗಿಪೇಟೆ ಮನವೀಯ ಕಾರ್ಯ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.