ರೈಲಿನ ಶೌಚಾಲಯದಲ್ಲಿ ನವಜಾತ ಶಿಶುವನ್ನು ಬಿಟ್ಟು ಹೋದ ಪಾಪಿಗಳು

ರೈಲಿನ ಶೌಚಾಲಯದಲ್ಲಿ ನವಜಾತ ಶಿಶುವೊಂದನ್ನು ಯಾರೋ ಬಿಟ್ಟು ಹೋದಂತಹ ಘಟನೆ ನಡೆದಿದೆ. ಒಂದು ಬಟ್ಟೆಯಲ್ಲಿ ಸುತ್ತಿ ಮಗುವನ್ನು ಬಿಡಲಾಗಿದ್ದು, ಮಗು ಶೌಚಾಲಯಕ್ಕೆ ಹೋದವರಿಗೆ ಮಗು ನಡುಗುತ್ತಾ ಅಳುತ್ತಿರುವ ದೃಶ್ಯ ಕಂಡು ಬಂದಿದೆ. ಕೂಡಲೇ ಅವರು ರೈಲ್ವೆ ಸಿಬ್ಬಂದಿಗೆ ಮಾಹಿತಿ ನೀಡಿದ್ದು, ಮಗುವನ್ನು ರಕ್ಷಣೆ ಮಾಡಲಾಗಿದ್ದು, ಮಗು ರೈಲಿನ ಟಾಯ್ಲೆಟ್‌ನಲ್ಲಿರುವ ದೃಶ್ಯ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಹರಿದ್ವಾರದಿಂದ ಪುರಿಗೆ ಹೊರಟಿದ್ದ ಉತ್ಕಲ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಶೌಚಾಲಯದಲ್ಲಿ ಈ ಘಟನೆ ನಡೆದಿದೆ. ಸಣ್ಣದೊಂದು ಟವೆಲ್‌ನಲ್ಲಿ ಮಗುವನ್ನು ಅರ್ಧ […]
ತೆಲಂಗಾಣ ಟೆಕ್ಕಿ ದಂಪತಿಯ ಜೀವವನ್ನೇ ತೆಗೆಯಿತು ಎಐ! ಆಗಿದ್ದೇನು ಗೊತ್ತಾ?

ಬೆಂಗಳೂರು: ಮಂಗಳವಾರ ಬೆಳಗ್ಗೆ ತೆಲಂಗಾಣ ಮೂಲದ ಟೆಕ್ಕಿ ದಂಪತಿ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿತ್ತು. ಪ್ರಾಥಮಿಕವಾಗಿ ಕೌಟುಂಬಿಕ ಕಲಹದ ಹಿನ್ನೆಲೆ ಗಂಡ-ಹೆಂಡತಿ ಇಬ್ಬರೂ ಈ ನಿರ್ಧಾರ ತೆಗೆದುಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿತ್ತು. ಆದರೆ ಟೆಕ್ಕಿ ಸಾವಿಗೆ ನಿಜವಾದ ಕಾರಣ ಈಗ ಬಯಲಾಗಿದೆ. ಕೃತಕ ಬುದ್ಧಿಮತ್ತೆ (AI) ಹೊಡೆತಕ್ಕೆ ಕೆಲಸ ಕಳೆದುಕೊಂಡಿದ್ದ ಭಾನು ಚಂದರ್ ರೆಡ್ಡಿ, ಖಿನ್ನತೆಯಿಂದ ನೇಣಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ. ತೆಲಂಗಾಣ ಮೂಲದ 32 ವರ್ಷದ ಭಾನು ಚಂದರ್ ರೆಡ್ಡಿ ಕುಂಟಾ ಮತ್ತು ಪತ್ನಿ ಬಿಬಿ ಶಾಜಿಯಾ ಸಿರಾಜ್ (31) […]
ಬೆಂಗಳೂರು ಅಪಾರ್ಟ್‌ಮೆಂಟ್‌ನಲ್ಲಿ ಪ್ರಾಣಬಿಟ್ಟ ಟೆಕ್ಕಿ ದಂಪತಿ: ಬಾನು ರೆಡ್ಡಿ-ಶಾಜಿಯಾ ಸಿರಾಜ್ ದಾರುಣ ಸಾವು!

ಬೆಂಗಳೂರು: ಐಟಿ ಸಿಟಿ ಬೆಂಗಳೂರಿನಲ್ಲಿ ಮತ್ತೊಂದು ಮನಕಲಕುವ ಘಟನೆ ನಡೆದಿದೆ. ವೃತ್ತಿಯಲ್ಲಿ ಸಾಫ್ಟ್‌ವೇರ್ ಇಂಜಿನಿಯರ್‌ಗಳಾಗಿದ್ದ (ಟೆಕ್ಕಿ) ದಂಪತಿ ನೇಣಿಗೆ ಶರಣಾಗಿರುವ ದಾರುಣ ಘಟನೆ ಬೆಂಗಳೂರಿನ ಕೊತ್ತನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ವರದಿಯಾಗಿದೆ. ಅಮೆರಿಕಾದಿಂದ ಹಿಂತಿರುಗಿದ್ದ ಪತಿ ಮೊದಲು ಆತ್ಮ*ಹತ್ಯೆ ಮಾಡಿಕೊಂಡರೆ, ಪತಿಯ ಮೃತದೇಹವನ್ನು ಕಂಡ ಪತ್ನಿ ಆಘಾತ ತಡೆಯಲಾಗದೆ ಅಪಾರ್ಟ್‌ಮೆಂಟ್‌ನ 17ನೇ ಮಹಡಿಯಿಂದ ಜಿಗಿದು ಪ್ರಾಣ ಬಿಟ್ಟಿದ್ದಾರೆ. ತೆಲಂಗಾಣ ಮೂಲದ ಬಾನು ಚಂದಿರ್ ರೆಡ್ಡಿ (ಬಾಬು ರೆಡ್ಡಿ) ಮತ್ತು ಶಾಜಿಯಾ ಭಾನು ಎಂಬುವವರೇ ಮೃತಪಟ್ಟ ದುರ್ದೈವಿಗಳು. ಇವರಿಬ್ಬರು […]
ರೌಡಿಶೀಟರ್ ಆರೀಫ್ ಹತ್ಯೆ ಪ್ರಕರಣ; 6 ಮಂದಿ ನೇರವಾಗಿ ಭಾಗಿಯಾದವರ ಗುರುತು ಪತ್ತೆ

ಮಂಗಳೂರು: ರಾಷ್ಟ್ರೀಯ ಹೆದ್ದಾರಿ 66ರ ತೊಕ್ಕೊಟ್ಟು ಫ್ಲೈ ಓವರ್ ನಲ್ಲಿ ಶುಕ್ರವಾರ ಮುಂಜಾನೆ ಮೀನಿನ ವ್ಯಾಪಾರಿ, ರೌಡಿ ಶೀಟರ್ ಕಿನ್ಯ ಅಜ್ಜಿನಡ್ಕ ನಿವಾಸಿ ಆರಿಫ್ (46) ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಮುಂದುವರಿದಿದೆ. ಪ್ರಕರಣದಲ್ಲಿ ನೇರವಾಗಿ ಭಾಗಿಯಾಗಿರುವ ಆರು ಮಂದಿ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸುಧೀರ್ ಕುಮಾರ್ ರೆಡ್ಡಿ ತಿಳಿಸಿದ್ದಾರೆ. ಪ್ರಕರಣದ ತನಿಖೆಯನ್ನು ಅಪರಾಧ ಪತ್ತೆ ದಳದ ಎಸಿಪಿಯವರಿಗೆ ವರ್ಗಾಯಿಸಲಾಗಿದ್ದು, ಆರೋಪಿಗಳು ಪದೇ ಪದೇ ಜಾಗ ಬದಲಾಯಿಸುತ್ತಿರುವುದೇ ಬಂಧನ ವಿಳಂಬಕ್ಕೆ ಕಾರಣವಾಗಿದೆ. ಪ್ರಕರಣದಲ್ಲಿ ಪರೋಕ್ಷವಾಗಿ […]
ಬಿರಿಯಾನಿಯಲ್ಲಿ ಕಬಾಬ್ ಇಲ್ಲ ಎಂದು ಆಕ್ರೋಶ; ಮುಸ್ಲಿಂ ಮದುವೆ ಮನೆಯಾಯ್ತು ರಣಾಂಗಣ

ಅಮ್ರೋಹಾ: ಮದುವೆಗೆಂದು ಮಾಡಿದ್ದ ಬಿರಿಯಾನಿಯಲ್ಲಿ ಚಿಕನ್ ಲೆಗ್‌ಪೀಸ್ ಕಡಿಮೆ ಆಯ್ತು ಎಂದು ಮದುವೆ ಮನೆಯೇ ರಣಾಂಗಣವಾದ ಘಟನೆ ಉತ್ತರ ಪ್ರದೇಶದ ಅಮ್ರೋಹಾದಲ್ಲಿ ನಡೆದಿದೆ. ಮದುವೆಗೆ ಬಂದ ಗಂಡಿನ ಕಡೆಯವರು ಪರಸ್ಪರ ಹೊಡೆದಾಡಿದ್ದಲ್ಲದೇ ಚೇರ್‌ಗಳನ್ನು ಪರಸ್ಪರರ ಮೇಲೆ ಎಸೆಯುವ ಮೂಲಕ ಆಕ್ರೋಶ ವ್ಯಕ್ತಪಡಿಸಿ ಮದುವೆ ಮನೆಯನ್ನು ರಣಾಂಗಣವಾಗಿಸಿದ್ದಾರೆ. ಮುಸ್ಲಿಂ ಸಮುದಾಯವೊಂದರ ಮದುವೆ ಸಮಾರಂಭದಲ್ಲಿ ಊಟದ ತಟ್ಟೆಗೆ ಬಿರಿಯಾನಿ ಬಡಿಸುವ ವಿಚಾರಕ್ಕೆ ಸಂಬಂಧಿಸಿದಂತೆ ನಡೆದ ಸಣ್ಣ ಜಗಳ ಹಿಂಸೆಗೆ ತಿರುಗಿದ್ದು, ಸಂತೋಷ ಸಂಭ್ರಮದ ಈ ಕಾರ್ಯಕ್ರಮವೂ ಕೆಲವೇ ಕ್ಷಣಗಳಲ್ಲಿ ಯುದ್ಧಭೂಮಿಯಾಗಿದೆ. […]
ರೌಡಿಶೀಟರ್ ಹತ್ಯೆ ಪ್ರಕರಣ; ಪ್ರಮುಖ ಆರೋಪಿ ಯಾರು? ಅರ್ಧದಾರಿಯಲ್ಲಿ ಕೈಕೊಟ್ಟ ಕಾರು, ರಿಕ್ಷಾ ಹತ್ತಿ ಆರೋಪಿಗಳು ಬೆಂಗಳೂರಿಗೆ ಪರಾರಿ!

ಉಳ್ಳಾಲ: ರೌಡಿಶೀಟರ್ ಆಗಿದ್ದ ಮೀನಿನ ವ್ಯಾಪಾರಿಯನ್ನು ತಲವಾರಿನಿಂದ ಬರ್ಬರವಾಗಿ ಕಡಿದು ಹತ್ಯೆ ನಡೆಸಿರುವ ಘಟನೆ ತೊಕ್ಕೊಟ್ಟು ರಾಷ್ಟ್ರೀಯ ಹೆದ್ದಾರಿಯ 66ರ ಫ್ಲೈಓವರ್ ನಲ್ಲಿ ಮಾರ್ಚ್ 27 ನಸುಕಿನ ಜಾವ ಸಂಭವಿಸಿದೆ. ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ, ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್ (42) ಹತ್ಯೆಯಾದವರು. ಶುಕ್ರವಾರ ನಸುಕಿನ 4.30 ರ ಸುಮಾರಿಗೆ ತನ್ನ ಬುಲೆಟ್ ಬೈಕಿನಲ್ಲಿ ಉಚ್ಚಿಲದಿಂದ ಮಂಗಳೂರು ಧಕ್ಕೆಗೆ ತೆರಳುತ್ತಿದ್ದ ಸಂದರ್ಭ ಫ್ಲೈಓವರ್ ಮೇಲೆ ಇನೋವಾ ಕಾರಿನಿಂದ ಹಿಂಬದಿಯಿಂದ ಡಿಕ್ಕಿ ಹೊಡೆದ ದುಷ್ಕರ್ಮಿಗಳ […]
ಇಸ್ರೇಲಿ ವಿಷಜಂತುಗಳ ಅಟ್ಟಹಾಸ; ಗಾಝಾದಲ್ಲಿ ಮಗುವಿಗೆ ಸಿಗರೇಟ್‌ನಿಂದ ಸುಟ್ಟು, ಮೊಳೆ ಚುಚ್ಚಿ ಚಿತ್ರಹಿಂಸೆ ಕೊಟ್ಟ ಇಸ್ರೇಲಿ ರಕ್ಷಸರು

ಗಾಝಾದ ಪ್ಯಾಲೆಸ್ತೀನಿಯನ್ ವ್ಯಕ್ತಿಯೊಬ್ಬರಿಂದ ಬಲವಂತವಾಗಿ ತಪ್ಪೊಪ್ಪಿಗೆ ಪಡೆಯಲು, ಅವರ 18 ತಿಂಗಳ ಮಗುವಿಗೆ ಇಸ್ರೇಲಿ ಸೈನಿಕರು ತೀವ್ರ ಚಿತ್ರಹಿಂಸೆ ಕೊಟ್ಟಿರುವ ಬಗ್ಗೆ ಅಂತಾರಾಷ್ಟ್ರೀಯ ಮಾಧ್ಯಮಗಳು ಸೋಮವಾರ (ಮಾ.23) ವರದಿ ಮಾಡಿವೆ. ಮಾರ್ಚ್ 21ರಂದು ಮಧ್ಯ ಗಾಝಾದ ಅಲ್-ಮಘಾಝಿ ನಿರಾಶ್ರಿತರ ಶಿಬಿರದ ಬಳಿ ಕರೀಮ್ ಅಬೂ ನಾಸರ್ ಎಂಬ ಮಗು, ತನ್ನ ತಂದೆ ಒಸಾಮಾ ಅಬೂ ನಾಸರ್ ಅವರೊಂದಿಗೆ ಇದ್ದಾಗ, ಇಸ್ರೇಲ್ ರಕ್ಷಣಾ ಪಡೆಗಳ (ಐಡಿಎಫ್) ಸಿಬ್ಬಂದಿ ಅವರ ಮೇಲೆ ಗುಂಡು ಹಾರಿಸಿದ್ದಾರೆ ಎಂದು ಅಲ್ ಜಝೀರಾ ವರದಿ […]
ಮತ್ತೆ ಲಾಕ್‌ಡೌನ್ ಹೇರುತ್ತಾ ಸರ್ಕಾರ?; ಕೇಂದ್ರದ ಸ್ಪಷ್ಟನೆ ಏನು ಗೊತ್ತಾ?

ನವದೆಹಲಿ: ಎಲ್‌ಪಿಜಿ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ದೇಶದಾದ್ಯಂತ ಲಾಕ್‌ಡೌನ್ ಜಾರಿಯಾಗಲಿದೆ ಎಂಬುದಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸುದ್ದಿಗಳು ಹರಿದಾಡುತ್ತಿವೆ. ಈ ಕುರಿತು, ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ಸಚಿವ ಹರ್ದೀಪ್ ಸಿಂಗ್ ಪುರಿ ಶುಕ್ರವಾರ ಸ್ಪಷ್ಟನೆ ನೀಡಿದ್ದಾರೆ. ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ಇಂಧನ ವ್ಯತ್ಯಯ ಕುರಿತ ಕಳವಳಗಳ ಬಗ್ಗೆ ಮಾಹಿತಿ ನೀಡಿದ್ದಾರೆ. ‘ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ ಎಂಬುದು ಶುದ್ಧ ಸುಳ್ಳು. ಅಂತಹ ಯಾವುದೇ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದೆ ಇಲ್ಲ ಎಂದು ಸ್ಪಷ್ಟಪಡಿಸುತ್ತೇನೆ’ ಎಂದಿದ್ದಾರೆ. ಸಚಿವರೂ ಆಗಿರುವ […]
Mangaluru | ರೌಡಿಶೀಟರ್ ಭೀಕರ ಹತ್ಯೆ: ಗ್ಯಾಂಗ್ವಾರ್ಗೆ ಹೋಯ್ತಾ ಜೀವ?

ಮಂಗಳೂರು: ನಗರದ ಹೊರವಲಯದ ತೊಕ್ಕೊಟ್ಟು ಫ್ಲೈಓವರ್‌ನಲ್ಲಿ ಶುಕ್ರವಾರ ನಸುಕಿನ ಜಾವ ರೌಡಿಶೀಟರ್‌ನೊಬ್ಬರನ್ನು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆಗೈದ ಘಟನೆ ನಡೆದಿದೆ. ಮೃತರನ್ನು ತಲಪಾಡಿ ಸಮೀಪದ ಮುಳ್ಳುಗುಡ್ಡೆ ನಿವಾಸಿ ಆರಿಫ್ ಅಲಿಯಾಸ್ ಟಾಬ್ಲೆಟ್ ಆರಿಫ್ (46) ಎಂದು ಗುರುತಿಸಲಾಗಿದೆ. ಕೊಲೆಗೆ ನೈಜ ಕಾರಣವೇನೆಂಬುದು ತಿಳಿಯಬೇಕಿದೆ. ಮಂಗಳೂರು ದಕ್ಷಿಣ ಪೊಲೀಸ್ ಠಾಣಾ ವ್ಯಾಪ್ತಿಗೆ ಸೇರಿದ ರೌಡಿಶೀಟರ್ ಆಗಿದ್ದ ಆರಿಫ್, ಮುಂಜಾನೆ ಸುಮಾರು 4 ಗಂಟೆ ವೇಳೆಗೆ ಬೈಕ್‌ನಲ್ಲಿ ಸಂಚರಿಸುತ್ತಿದ್ದ ವೇಳೆ ದುಷ್ಕರ್ಮಿಗಳ ಹಲ್ಲೆಗೊಳಗಾಗಿದ್ದಾನೆ. ಆರಿಫ್ ತೆರಳುತ್ತಿದ್ದ ಬೈಕ್‌ಗೆ ಹಿಂಬದಿಯಿಂದ ಕಾರು ಡಿಕ್ಕಿ […]
ಮಂಗಳೂರು | ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಬರ್ಬರ ಕೊಲೆ: ಬೈಕಿನಲ್ಲಿ ಧಕ್ಕೆಗೆ ತೆರಳುತ್ತಿದ್ದಾಗ ದುಷ್ಕರ್ಮಿಗಳ ದಾಳಿ

ಉಳ್ಳಾಲ: ರೌಡಿಶೀಟರ್ ಓರ್ವನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿರುವ ಘಟನೆ ತೊಕ್ಕೊಟ್ಟು ಫ್ಲೈ ಓವರ್ ಬಳಿ ಇಂದು ಬೆಳಿಗ್ಗೆ ನಡೆದಿದೆ. ಉಚ್ಚಿಲ ಮುಳ್ಳುಗುಡ್ಡೆ ನಿವಾಸಿ ಆರೀಫ್ ಹುಸೇನ್ (42) ಯಾನೆ ಟ್ಯಾಬ್ಲೆಟ್ ಆರೀಫ್ ಕೊಲೆಯಾದ ರೌಡಿಶೀಟರ್. ಮೃತ ಆರೀಫ್ ಮಂಗಳೂರಿನ ಬಂದರು ಪೊಲೀಸ್ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. ಆರೀಫ್ ಧಕ್ಕೆಯಲ್ಲಿ ಮೀನಿನ ವ್ಯಾಪಾರ ನಡೆಸುತ್ತಿದ್ದು ಇಂದು ಬೆಳಗ್ಗೆ ಬುಲೆಟ್ ಬೈಕಿನಲ್ಲಿ ಮಂಗಳೂರಿಗೆ ತೆರಳುತ್ತಿದ್ದ ವೇಳೆ ತೊಕ್ಕೊಟ್ಟು ಓವರ್ ಬ್ರಿಡ್ಜ್ ಮೇಲ್ ಸೇತುವೆಯಲ್ಲಿ ಆತನ ಮೇಲೆ ದುಷ್ಕರ್ಮಿಗಳು ದಾಳಿ […]